- Home
- Technology
- Mobiles
- ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್ ವಿಡಿಯೋಗೆ ಇಲ್ಲಿದೆ ಟಾಪ್ 5 ಅತ್ಯುತ್ತಮ ಕ್ಯಾಮೆರಾ ಫೋನ್ ಲಿಸ್ಟ್
ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್ ವಿಡಿಯೋಗೆ ಇಲ್ಲಿದೆ ಟಾಪ್ 5 ಅತ್ಯುತ್ತಮ ಕ್ಯಾಮೆರಾ ಫೋನ್ ಲಿಸ್ಟ್
ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್ ಯೂಟ್ಯೂಬ್, ಸೋಶಿಯಲ್ ಮೀಡಿಯಾ ಮೂಲಕ ಆದಾಯ ಗಳಿಸುತ್ತಿದ್ದಾರೆ. ವಿಡಿಯೋ, ಫೋಟೋಗಳು ಮತ್ತಷ್ಟು ರಿಚ್ ಆಗಿ ಕಾಣಲು, ಹೆಚ್ಚು ರೀಚ್ ಗಳಿಸಲು ಇಲ್ಲಿದೆ ಅತ್ಯುತ್ತಮ ಕ್ಯಾಮೆರಾ ಫೋನ್.

ವಿಡಿಯೋ, ಫೋಟೋ ಕ್ವಾಲಿಟಿ ಮುಖ್ಯ
ಯೂಟ್ಯೂಬ್, ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ತಾಣಗಳ ಮೂಲಕ ಆದಾಯಗಳಿಸುವರ ಸಂಖ್ಯೆ ಹೆಚ್ಚಾಗುತ್ತಿದೆ.ಹಲವರು ಪ್ರಮುಖ ವೃತ್ತಿಯಾಗಿ ಸ್ವೀಕರಿಸಿ ಮುಂದುವರಿಯುತ್ತಿದ್ದಾರೆ. ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್ ನೀಡುವ ವಿಡಿಯೋ ಹಾಗೂ ಫೋಟೋ ಕ್ವಾಲಿಟಿ ಉತ್ತಮವಾಗಿದ್ದರೆ ಹೆಚ್ಚಿನ ರೀಚ್, ಲೈಕ್ಸ್, ಆದಾಯ ಬರುತ್ತೆ. ಹೀಗಾಗಿ ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್‌ಗಾಗಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಇಲ್ಲಿದೆ.
ಐಫೋನ್ 17 ಪ್ರೋ ಮ್ಯಾಕ್ಸ್
ಐಫೋನ್ 17 ಪ್ರೋ ಮ್ಯಾಕ್ಸ್ ಫೋನ್ 48MP (24mm, f/1.78); 48MP ಅಲ್ಟ್ರಾ ವೈಡ್ (13mm, f/2.2); 48MP ಟೆಲಿ ಫೋಟೋ (100mm, f/2.8); 18MP (f/1.9)
ಫ್ರಂಟ್ ವಿಡಿಯೋ: 4K/60fps, ರೇರ್ ವಿಡಿಯೋ 4K/120fps
ಬ್ರೈಟ್ ಆ್ಯಂಟಿ ರಿಫ್ಲೆಕ್ಷನ್ ಸ್ಕ್ರೀನ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಕಾರಣ ಕಂಟೆಂಟ್ ಕ್ರಿಯೇಟರ್ಸ್ ಅತ್ಯುತ್ತಮ ಕ್ವಾಲಿಟಿಯಲ್ಲಿ ವಿಡಿಯೋ ರೆಕಾರ್ಡ್ ಮಾತ್ರವಲ್ಲ, ಎಡಿಟಿಂಗ್ ಬಳಿಕವೂ ಕ್ವಾಲಿಟಿಯಲ್ಲಿ ವಿಡಿಯೋ ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ.
ಸ್ಯಾಮ್‌ಸಂಗ್ ಗ್ಯಾಲೆಕ್ಸಿ S25 ಅಲ್ಟ್ರಾ
ಐಫೋನ್‌ಗೆ ಸೆಡ್ಡು ಹೊಡೆದು ನಿಂತಿರುವ ಫೋನ್ ಸ್ಯಾಮ್‌ಸಂಗ್ S25 ಅಲ್ಟ್ರಾ ಫೋನ್ 200MP; 50MP ಅಲ್ಟ್ರಾ ವೈಡ್, 10MP ಟೆಲಿಫೋಟೋ (3x ಝೂಮ್), 50MP ಟೆಲಿಫೋಟೋ (5x ಝೂಮ್)ಫ್ರಂಟ್ ವಿಡಿಯೋ: 4K/60fps ಹಾಗೂ ರೇರ್ ವಿಡಿಯೋ : 8K/30fps ಹೊಂದಿದೆ. 4K 60fps LOG ಕ್ಯಾಪ್ಚರ್ ಹಾಗೂ ವರ್ಸಟೈಲ್ ಕ್ಯಾಮೆರಾ ಸಿಸ್ಟಮ್‌ನಿಂದ ಅದ್ಭುತ ಕ್ವಾಲಿಟಿಯಲ್ಲಿ ವಿಡಿಯೋ ಸೆರೆಯಾಗಲಿದೆ.
ಒಪ್ಪೋ ಫೈಂಡ್ X9 ಪ್ರೊ
ಒಪ್ಪೋ ಕಂಟೆಂಟ್ ಕ್ರಿಯೇಟರ್ಸ್, ವ್ಲಾಗರ್ಸ್ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಕ್ಯಾಮೆರಾ ಫೋನ್ ನೀಡಿದೆ. ಒಪ್ಪೋ ಫೈಂಡ್ X9 ಪ್ರೊ ಫೋನ್ 50MP; 50MP ಅಲ್ಟ್ರಾ ವೈಡ್; 200MP ಟೆಲಿಫೋಟೋ (x3); 50MP ಫ್ರಂಟ್ ವಿಡಿಯೋ: 4k, 60fps ಹಾಗೂ ರೇರ್ ವಿಡಿಯೋ : 4k, 120fps. ಒಪ್ಪೋ ಫೈಂಡ್ X9 ಪ್ರೊದಲ್ಲಿರುವ ಎಲ್ಲಾ ಕ್ಯಾಮೆರಾ ಲೆನ್ಸ್ ಉತ್ತಮ ಕ್ವಾಲಿಟಿ ದೃಶ್ಯ ನೀಡಲಿದೆ. ಬ್ಯಾಟರಿ ಕೂಡ ಸುದೀರ್ಘ ಬಾಳಿಕೆ ಬರಲಿದೆ. ಫೋಟೋ, ವಿಡಿಯೋಗಳನ್ನು ಸುಲಭವಾಗಿ ಶೇರ್ ಮಾಡಲು ಸಾಧ್ಯವಿದೆ.
ಗೂಗಲ್ ಪಿಕ್ಸೆಲ್ 10 ಪ್ರೋ ಹಾಗೂ ಪ್ರೋ XL
ಗೂಗಲ್ ಪಿಕ್ಸೆಲ್ 10 ಪ್ರೋ ಹಾಗೂ ಪ್ರೋ XL ಫೋನ್ 50MP; 48MP ಅಲ್ಟ್ರಾ ವೈಡ್; 48MP ಟೆಲಿಫೋಟೋ (5x ಒಪ್ಟಿಕಲ್ ಝೂಮ್) 42MP ಫ್ರಂಟ್ ವಿಡಿಯೋ: 4K/60fps ಹಾಗೂ ರೇರ್ ವಿಡಿಯೋ : 8K/30fps ಹೊಂದಿದೆ. ಸೂಪರ್ ಆಕ್ಟುವಾ ಸ್ಕ್ರೀನ್ ಹೊಂದಿದೆ. ಜೊತೆಗೆ ಅತ್ಯುತ್ತಮ ಕ್ವಾಲಿಟಿ ವಿಡಿಯೋ ರೆಕಾರ್ಡ್ ಸೌಲಭ್ಯ ಹಾಗೂ ಪ್ರೀಮಿಯಂ ಡಿಸೈನ್ ಹೊಂದಿದ್ದು,ಸುಲಭವಾಗಿ ಹ್ಯಾಂಡಲ್ ಮಾಡಬಹುದು
ಶಓಮಿ 15T ಪ್ರೋ
ಬಜೆಟ್‌ನಲ್ಲಿ ಅತ್ಯುತ್ತಮ ಕ್ವಾಲಿಟಿ ವಿಡಿಯೋ ಪ್ರೊಡ್ಯುಸ್ ಮಾಡಲು ಬಯಸುತ್ತಿದ್ದರೆ ಶಓಮಿ 15T ಪ್ರೋ ಬಳಸಬಹುದು. 50MP (23mm, f/1.62); 12MP ಅಲ್ಟ್ರಾ ವೈಡ್ (15mm, f/2.2); 50MP ಟೆಲಿಫೋಟೋ (115mm, f/3.0); 32MP ಫ್ರಂಟ್ (f/2.2) ಫ್ರಂಟ್ ವಿಡಿಯೋ: 4k, 30fps ಹಾಗೂ ರೇಡ್ ವಿಡಿಯೋ : 8k, 30fps. ಈ ಫೋನ್ ಮತ್ತೊಂದು ವಿಶೇಷತೆ ಎಂದರೆ 8ಕೆ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಅತ್ಯುತ್ತಮ ಪರ್ಫಾಮೆನ್ಸ್ , ಪ್ರೀಮಿಯಂ ಡಿಸೈನ್ ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

