- Home
- Technology
- Mobiles
- ಬಿಡುಗಡೆಗೂ ಮೊದಲೇ ಐಫೋನ್ 18ಗೆ ನಡುಕ, ಬರುತ್ತಿದೆ 200MP ಕ್ಯಾಮೆರಾ ಸ್ಯಾಮ್‌ಸಂಗ್ ಗ್ಯಾಲಕ್ಸಿ S27 ಅಲ್ಟ್ರಾ
ಬಿಡುಗಡೆಗೂ ಮೊದಲೇ ಐಫೋನ್ 18ಗೆ ನಡುಕ, ಬರುತ್ತಿದೆ 200MP ಕ್ಯಾಮೆರಾ ಸ್ಯಾಮ್‌ಸಂಗ್ ಗ್ಯಾಲಕ್ಸಿ S27 ಅಲ್ಟ್ರಾ
ಸೆಪ್ಟೆಂಬರ್‌ನಲ್ಲಿ ಐಫೋನ್ 18 ಬಿಡುಗಡೆಯಾಗುತ್ತಿದೆ. ಇದೀಗ ಈ ಫೋನ್‌ಗೆ ಪ್ರತಿಸ್ಪರ್ಧಿಯಾಗಿ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್27 ಅಲ್ಟ್ರಾ ಫೋನ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಇದರ ಬೆಲೆ ಸೇರಿದಂತೆ ಸಂಪೂರ್ಣ ಡಿಟೇಲ್ ಇಲ್ಲಿದೆ.

ಐಫೋನ್ ಸದ್ದಡಗಿಸಲು ಬರುತ್ತಿದೆ ಸ್ಯಾಮ್‌ಸಂಗ್ S27 ಅಲ್ಟ್ರಾ
ಭಾರತದಲ್ಲಿ ಐಫೋನ್ ತನ್ನ ಬ್ರ್ಯಾಂಡ್ ಹಾಗೂ ಕ್ವಾಲಿಟಿ ಉಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಐಫೋನ್‌ಗೆ ಸ್ಯಾಮ್‌ಸಂಗ್ ತೀವ್ರ ಪೈಪೋಟಿ ನೀಡುತ್ತಿದೆ. ಈ ಪೈಕಿ ಗ್ಯಾಲಕ್ಸಿ ಎಸ್25 ಹಾಗೂ ಸೀರಿಸ್ ಭಾರಿ ಸ್ಪರ್ಧೆ ಒಡ್ಡುತ್ತಿದೆ. ಇದೀಗ ಐಫೋನ್ 18 ಸೀರಿಸ್ ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಡುಗಡೆಗೂ ಮೊದಲೇ ಐಫೋನ್‌ಗೆ ನಡುಕು ಶುರುವಾಗಿದೆ. ಕಾರಣ ಸ್ಯಾಮ್‌ಸಂಗ್ S27 ಅಲ್ಟ್ರಾ ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ.
S27 ಅಲ್ಟ್ರಾ ಫೋನ್ ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S27 ಅಲ್ಟ್ರಾ ಫೋನ್ ಬರೋಬ್ಬರಿ 200ಎಂಪಿ ಶೂಟರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್(OIS), 50MP ಟೆಲಿಫೋಟೋ ಶೂಟರ್ ಲೆನ್ಸ್, 50MP ಅಲ್ಟ್ರಾ ವೈಡ್ ಆ್ಯಂಗಲ್ ಶೂಟರ್ ಹಾಗೂ 10MP ಟೆಲಿಫೋಟೋ ಕ್ಯಾಮೆರಾ ಫೀಚರ್ ನೀಡಲಾಗಿದೆ. ಇನ್ನು ಸೆಲ್ಫಿ ವಿಡಿಯೋ ಕಾಲ್‌ಗಳಿಗೆ 12MP ಫ್ರಂಟ್ ಸೆನ್ಸಾರ್ ಹೊಂದಿದೆ. ಈ ಮೂಲಕ ಅದ್ಭುತ ಕ್ವಾಲಿಟಿಯ ವಿಡಿಯೋ ಹಾಗೂ ಫೋಟೋ ಸೆರೆ ಹಿಡಿಯಲು ಸಾಧ್ಯವಿದೆ.
ಸ್ಯಾಮ್‌ಸಂಗ್ S27 ಅಲ್ಟ್ರಾ ಸ್ಪೆಸಿಫಿಕೇಶನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S27 ಅಲ್ಟ್ರಾ ಫೋನ್ 6.9 ಇಂಚಿನ AMOLED 2X ಡಿಸ್‌ಪ್ಲೇ ಹೊಂದಿದೆ. ಇದರ ರೀಫ್ರೆಶ್ ರೇಟ್ 120Hz. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈ್ ಜೆನ್ ಪ್ರೊಸೆಸರ್ ನೀಡಲಾಗಿದೆ. ಫೋನ್ 7.9mm ದಪ್ಪವಿದೆ. ಹೀಗಾಗಿ ಸ್ಲೀಕ್ ಡಿಸೈನ್ ಜೊತೆಗೆ ಅತ್ಯಂತ ಆಕರ್ಷಕ ಫೋನ್ ಇದಾಗಿದೆ.
7000mAh ಬ್ಯಾಟರಿ
65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಪ್ರಮುಖವಾಗಿ 7000mAh ಬ್ಯಾಟರಿ ನೀಡಲಾಗಿದೆ. ಇದರಿಂದ ಬ್ಯಾಟರಿ ಖಾಲಿಯಾಗುತ್ತೆ ಅನ್ನೋ ಆತಂಕವೇ ಇಲ್ಲ. ಸರಾಗವಾಗಿ ಬಳಕೆ ಮಾಡಲು ಸಾಧ್ಯವಿದೆ. ಐಫೋನ್ 18 ಫೀಚರ್ಸ್‌ಗಳೆಲ್ಲವೂ ಈ ಫೋನ್‌ನಲ್ಲಿ ಇದೆ. ಜೊತೆಗೆ ಎಐ ಸಪೋರ್ಟ್ ಕೂಡ ಇಲ್ಲಿದೆ.
ಬೆಲೆ ಹಾಗೂ ಬಿಡುಗಡೆ ದಿನಾಂಕ
ಸ್ಯಾಮ್‌ಸಂಗ್ S27 ಅಲ್ಟ್ರಾ ಫೋನ್ 12GB RAM, 256GB ಸ್ಟೋರೇಜ್ ಹಾಗೂ ಅದಕ್ಕಿಂತ ಹೆಚ್ಚಿನ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಬೆಲೆ 1,41,999 ರೂಪಾಯಿಯಿಂದ 1,46,99 ರೂಪಾಯಿ ಎಂದು ಅಂದಾಡಿಸಲಾಗಿದೆ. ಇನ್ನು ಫೆಬ್ರವರಿ 2027ರಲ್ಲಿ ಹೊಸ ಅಲ್ಟ್ರಾ ಫೋನ್ ಬಿಡುಗಡೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

