- Home
- Technology
- Mobiles
- ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿಗೆ ಸೆಡ್ಡು ಹೊಡೆದ ರೆಡ್‌ಮಿ, ಕಡಿಮೆ ಬೆಲೆ ನೋಟ್ 17 , 17 ಪ್ರೋ ಲಾಂಚ್
ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿಗೆ ಸೆಡ್ಡು ಹೊಡೆದ ರೆಡ್‌ಮಿ, ಕಡಿಮೆ ಬೆಲೆ ನೋಟ್ 17 , 17 ಪ್ರೋ ಲಾಂಚ್
ಐಫೋನ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗೆ ಸೆಡ್ಡು ಹೊಡೆಯಬಲ್ಲ, ಬಹುತೇಕ ಫೀಚರ್ ಒಳಗೊಂಡಿರುವ ರೆಡ್‌ಮಿ ನೋಟ್ 17 ಫೋನ್ ಬಿಡುಗಡೆಯಾಗಿದೆ. 8 000mAh ಬ್ಯಾಟರಿ, 50ಎಂಪಿ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆ ಈ ಫೋನ್‌ನಲ್ಲಿದೆ.

ರೆಡ್‌ಮಿ ನೋಟ್ ಸೀರಿಸ್ ಲಾಂಚ್
ಭಾರತದಲ್ಲಿ ಫೋನ್ ಮಾರುಕಟ್ಟೆ ಪೈಪೋಟಿ ತೀವ್ರಗೊಂಡಿದೆ. ಆ್ಯಪಲ್ ಇದೀಗ ಐಫೋನ್ 18 ಲಾಂಚ್ ಮಾಡಲು ರೆಡಿಯಾದ್ರೆ ಸ್ಯಾಮ್ಸಂಗ್ ಝೆಡ್ ಫೋಲ್ಡೆಬಲ್ ಫೋನ್ ಲಾಂಚ್‌ಗೆ ಸಜ್ಜಾಗುತ್ತಿದೆ. ಇದರ ನಡುವೆ ಕೈಗೆಟುಕುವ ದರದಲ್ಲಿ ರೆಡ್‌ಮಿ ಇದೀಗ ನೋಟ್ 17 ಸೀರಿಸ್ ಲಾಂಚ್ ಮಾಡಿದೆ. ದಿಗ್ಗಜ ಫೋನ್‌ಗಳಿಗೆ ಸೆಡ್ಡು ಹೊಡೆಯಬಲ್ಲ ಫೀಚರ್ಸ್ ನೀಡಲಾಗಿದ್ದು, ಭಾರಿ ಸದ್ದು ಮಾಡುತ್ತಿದೆ.
8 000mAh ಬ್ಯಾಟರಿ ಸೇರಿ ಹಲವು ವಿಶೇಷತೆ
ರೆಡ್‌ಮಿ ನೋಟ್ 17 ಸಿರೀಸ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೋಟ್ 17 ಬರೋಬ್ಬರಿ 8,000mAh ಬ್ಯಾಟರಿನೀಡಲಾಗಿದೆ. 17 ಪ್ರೋ ಫೋನ್‌ನಲ್ಲಿ 9,000mA ಬ್ಯಾಟರಿ ನೀಡಲಾಗಿದೆ. ಇದರಿಂದ ಅತೀ ಹೆಚ್ಚು ಫೋನ್ ಬಳಕೆ ಮಾಡಿದರೂ ಚಾರ್ಜ್ ಖಾಲಿಯಾಗುತ್ತೆ, ಚಾರ್ಜ್ ಮಾಡಬೇಕು ಅನ್ನೋ ಚಿಂತೆ ಇಲ್ಲ. ಸುದೀರ್ಘ ಬ್ಯಾಟರಿ ಬಾಳಿಕೆ ಬರಲಿದೆ. ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.
50 ಎಂಪಿ ಕ್ಯಾಮೆರಾ, ಅದ್ಭುತ ಫೋಟೋ, ವಿಡಿಯೋ
ಐಫೋನ್, ಸ್ಯಾಮ್‌ಸಂಗ್ ಸೇರಿದಂತೆ ದುಬಾರಿ ಫೋನ್‌ಗಳಲ್ಲಿರುವಂತೆ 50ಎಂಪಿ ಕ್ಯಾಮೆರಾ ನೀಡಲಾಗಿದೆ. ರೆಡ್‌ಮಿ ನೋಟ್ 17 ಹಾಗೂ ನೋಟ್ 17 ಪ್ರೋ ಎರಡು ಫೋನ್ ಕ್ಯಾಮೆರಾದಲ್ಲೂ ಹಲವರಿಗೆ ಸೆಡ್ಡು ಹೊಡೆದಿದೆ. ಧೂಳು ಹಾಗೂ ನೀರನಿಂದ ರಕ್ಷಣೆ ಪಡೆಯಲು IP65 ರೇಟಿಂಗ್ ಪ್ರೊಟೆಕ್ಷನ್ ನೀಡಲಾಗಿದೆ.
ರೆಡ್‌ಮಿ ನೋಟ್ 17 ಹಾಗೂ 17 ಪ್ರೋ ಬೆಲೆ
ಇದು ಬಜೆಟ್ ಫ್ರೆಂಡ್ಲಿ ಫೋನ್. ದುಬಾರಿ ಬೆಲೆಯ ಫೀಚರ್ಸ್ ಈ ಫೋನ್‌ನಲ್ಲಿದೆ. ರೆಡ್‌ಮಿ ನೋಟ್ 17 ಬೆಲೆ 18,500 ರೂಪಾಯಿ (6GB RAM + 128GB ವೇರಿಯಂಟ್) ಹಾಗೂ ರೆಡ್‌ಮಿ ನೋಟ್ 17 ಪ್ರೋ ಬೆಲೆ 22,700 ರೂಪಾಯಿ (8GB RAM + 128GB ವೇರಿಯಂಟ್) ಸದ್ಯ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಫೋನ್ ಈ ತಿಂಗಳ ಕೊನೆಯ ವಾರ ಅಥವಾ ಆಗಸ್ಟ್ ಆರಂಭದಲ್ಲೇ ಭಾರತಕ್ಕೆ ಪ್ರವೇಶಿಸಲಿದೆ.
ಸುರಕ್ಷತಾ ಫೋನ್
ಪ್ರೋ ಫೋನ್‌ನಲ್ಲಿ ಕ್ವಾಲ್ಕಾಮ್‌ನ ಅತ್ಯಾಧುನಿಕ ಸ್ನಾಪ್‌ಡ್ರಾಗನ್ 6s Gen 4 ಚಿಪ್‌ಸೆಟ್ ನೀಡಲಾಗಿದೆ. ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ನೀಡಲಿದೆ. ಅತ್ಯುನ್ನತ IP69K ರೇಟಿಂಗ್ ಹೊಂದಿದೆ. 2 ಮೀಟರ್ ಆಳದ ನೀರಿನಲ್ಲಿ ಸತತ 72 ಗಂಟೆಗಳ ಕಾಲ ಇಟ್ಟರೂ ಫೋನ್ ಸುರಕ್ಷಿತವಾಗಿರಲಿದೆ ಎಂದು ಕಂಪನಿ ಹೇಳಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
