- Home
- Technology
- Mobiles
- ಬಡವರಿಗಾಗಿ ಬಂತು ಹೊಸ ಒನ್‌ಪ್ಲಸ್ ಎನ್-6 ದೈತ್ಯ ಬ್ಯಾಟರಿ ಮೊಬೈಲ್; ಕಡಿಮೆ ಬೆಲೆಗೆ ಹೈ ಫೀಚರ್ಸ್ ಫೋನ್ ಇಲ್ಲಿದೆ ನೋಡಿ!
ಬಡವರಿಗಾಗಿ ಬಂತು ಹೊಸ ಒನ್‌ಪ್ಲಸ್ ಎನ್-6 ದೈತ್ಯ ಬ್ಯಾಟರಿ ಮೊಬೈಲ್; ಕಡಿಮೆ ಬೆಲೆಗೆ ಹೈ ಫೀಚರ್ಸ್ ಫೋನ್ ಇಲ್ಲಿದೆ ನೋಡಿ!
ಒನ್‌ಪ್ಲಸ್ ತನ್ನ ಹೊಚ್ಚಹೊಸ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ N6' ಅನ್ನು ಭಾರತದಲ್ಲಿ ಪರಿಚಯಿಸಿದೆ. ಈ ಫೋನ್ 8,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ, ಮೀಡಿಯಾಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಚಿಪ್‌ಸೆಟ್ ಮತ್ತು 50MP ಕ್ಯಾಮೆರಾ ಹೊಂದಿದ್ದು, ಜುಲೈ 4 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್, ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚಹೊಸ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ N6' ಅನ್ನು ಪರಿಚಯಿಸಿದೆ. ಕಂಪನಿಯ ಹೊಸ 'N' ಸರಣಿಯ ಮೊದಲ ಫೋನ್ ಇದಾಗಿದ್ದು, ದೊಡ್ಡ ಬ್ಯಾಟರಿ ಮತ್ತು ಹೊಸ ಮೀಡಿಯಾಟೆಕ್ ಪ್ರೊಸೆಸರ್‌ನೊಂದಿಗೆ ಗ್ರಾಹಕರ ಗಮನ ಸೆಳೆಯುತ್ತಿದೆ. 8,000mAh ಸಾಮರ್ಥ್ಯದ ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹಾಗೂ ಮೀಡಿಯಾಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಚಿಪ್‌ಸೆಟ್ ಈ ಫೋನಿನ ಪ್ರಮುಖ ಹೈಲೈಟ್ಸ್.
ಈ ಫೋನ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 4GB RAM ಮತ್ತು 128GB ಸ್ಟೋರೇಜ್ ಮಾದರಿಗೆ ₹22,999 ಹಾಗೂ 6GB RAM ಮತ್ತು 128GB ಸ್ಟೋರೇಜ್ ಮಾದರಿಗೆ ₹24,999 ಬೆಲೆ ನಿಗದಿಪಡಿಸಲಾಗಿದೆ. ಪ್ರೈಮ್ ಡೇ ಆಫರ್‌ನ ಭಾಗವಾಗಿ ಕಂಪನಿ ₹1,000 ವಿಶೇಷ ರಿಯಾಯಿತಿ ನೀಡುತ್ತಿದೆ.
ಇದರ ಜೊತೆಗೆ, ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ₹2,000 ತ್ವರಿತ ಡಿಸ್ಕೌಂಟ್ ಸಿಗಲಿದೆ. ಆರು ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಆಯ್ಕೆಯೂ ಇದೆ. ಜುಲೈ 4 ರಿಂದ ಅಮೆಜಾನ್‌ನಲ್ಲಿ ಈ ಫೋನಿನ ಮಾರಾಟ ಶುರುವಾಗಲಿದೆ. ಫ್ರೆಶ್ ಮಿಂಟ್ ಮತ್ತು ಮಿಡ್‌ನೈಟ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಫೋನ್ ಗ್ರಾಹಕರಿಗೆ ಸಿಗಲಿದೆ.
ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ಆಕ್ಸಿಜನ್‌ಓಎಸ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಪ್ರಮುಖ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
ಫೋನ್ 6.75-ಇಂಚಿನ ಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 1,200 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP65 ರೇಟಿಂಗ್ ಹಾಗೂ ಹೆಚ್ಚಿನ ಬಾಳಿಕೆಗಾಗಿ MIL-STD-810H ಮಿಲಿಟರಿ ಗ್ರೇಡ್ ಪ್ರಮಾಣೀಕರಣವನ್ನೂ ಈ ಫೋನ್ ಪಡೆದಿದೆ.
ಈ ಸ್ಮಾರ್ಟ್‌ಫೋನ್‌ಗೆ ಮೀಡಿಯಾಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಆಕ್ಟಾ-ಕೋರ್ ಪ್ರೊಸೆಸರ್ ಶಕ್ತಿ ತುಂಬಲಿದೆ. AnTuTu ಬೆಂಚ್‌ಮಾರ್ಕ್‌ನಲ್ಲಿ ಈ ಫೋನ್ 6.15 ಲಕ್ಷಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ. ಫೋನ್ ಹೆಚ್ಚು ಬಿಸಿಯಾಗುವುದನ್ನು ತಡೆಯಲು, ಕಂಪನಿಯು 5,300 ಚದರ ಮಿಲಿಮೀಟರ್ ವಿಸ್ತೀರ್ಣದ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಇದರಲ್ಲಿ ನೀಡಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, f/1.8 ಅಪರ್ಚರ್ ಹೊಂದಿರುವ 50 ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಇದರಲ್ಲಿ 1080p ರೆಸಲ್ಯೂಶನ್‌ನಲ್ಲಿ ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳವರೆಗೆ ವಿಡಿಯೋ ರೆಕಾರ್ಡ್ ಮಾಡಬಹುದು.
ಡ್ಯುಯಲ್-ವ್ಯೂ ವಿಡಿಯೋ ಮೋಡ್ ಕೂಡ ಇದರಲ್ಲಿದೆ. 8,000mAh ಬ್ಯಾಟರಿ ಹೊಂದಿರುವ ಈ ಫೋನ್, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 6.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಮೂರು ದಿನಗಳವರೆಗೆ ಫೋನ್ ಬಳಸಬಹುದು ಮತ್ತು 1,600 ಚಾರ್ಜಿಂಗ್ ಸೈಕಲ್‌ಗಳ ನಂತರವೂ ಬ್ಯಾಟರಿಯು ತನ್ನ 80% ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

