ಭರ್ಜರಿ ಆಫರ್ ಜೊತೆ ಒನ್‌ಪ್ಲಸ್ 15 ಫೋನ್ ಬಿಡುಗಡೆ, ಎಐ ಕ್ಯಾಮೆರಾ ಸೇರಿ ಹಲವು ವಿಶೇಷತೆ
ಭರ್ಜರಿ ಆಫರ್ ಜೊತೆ ಒನ್‌ಪ್ಲಸ್ 15 ಫೋನ್ ಬಿಡುಗಡೆ, ಎಐ ಕ್ಯಾಮೆರಾ ಸೇರಿ ಹಲವು ವಿಶೇಷತೆ ಹೊಂದಿದೆ. ಶುಕ್ಲ ರಹಿತ ಕೇವಲ 4000 ರೂಪಾಯಿ ಇಎಂಐ, ಇನ್‌ಸ್ಟಾಂಟ್ ಆಫರ್, ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ರಿಯಾತಿಗಳು ಲಭ್ಯವಿದೆ.

ಒನ್ ಪ್ಲಸ್ 15 ಮ್ಯಾಜಿಕ್
ಒನ್ ಪ್ಲಸ್ 15 ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎಐ ಕ್ಯಾಮೆರಾ, ಐಕಾನಿಕ್ ವಿನ್ಯಾಸ, ಎಐ ತಂತ್ರಜ್ಞಾನ, ಟ್ರಿಪಲ್-ಚಿಪ್ ಫೀಚರ್ ಜೊತೆಗೆ ಆಕರ್ಷಕ ಆಫರ್‌ಗಳ ಜೊತೆಗೆ ಒನ್‌ಪ್ಲಸ್ 15 ಬಿಡುಗಡೆಯಾಗಿದೆ. ಕೋರ್ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಜೆನ್ 5 ಮೊಬೈಲ್ ಪ್ಲಾಟ್ಫಾರ್ಮ್ ಇದಾಗಿದೆ. SoC ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಾಗಿ ಮೊಬೈಲ್ ಮೂಲಕ ಗೇಮಿಂಗ್‌ನಿಂದ ಹಿಡಿದು ಏಕಕಾಲಕಲ್ಲೆ ಹಲವು ಟ್ಯಾಬ್ ಮೂಲಕ ಕೆಲಸವನ್ನು ಮಾಡಬಹದು. ಉತ್ತಮ ಪರ್ಫಾಮೆನ್ಸ್ ಹೊಂದಿರುವ ಫೋನ್ ಇದಾಗಿದೆ. ಅತ್ಯದ್ಭುತ ಗೇಮಿಂಗ್ ಅನುಭವಕ್ಕಾಗಿ ಅತ್ಯಾಧುನಿಕ ಸಿಪಿಯು ಮತ್ತು ಜಿಪಿಯು ದಕ್ಷತೆಯನ್ನು ಒದಗಿಸುತ್ತದೆ. ಅಲ್ಟ್ರಾ-ಸ್ಮೂತ್ ವಿಶುಯಲ್ಸ್ ಮತ್ತು ಸಾಟಿರಹಿತ ಕ್ರಿಯಾತ್ಮತೆಗಾಗಿ ಉದ್ಯಮದಲ್ಲೇ ಮೊದಲ 3200Hz ಇನಸ್ಟಂಟ್ ಟಚ್ ಸ್ಯಾಂಪ್ಲಿಂಗ್ ಸಕ್ರಿಯಗೊಳಿಸುತ್ತದೆ. ಈ ಮೂರನ್ನೂ ಒಂದು ಸ್ವತಂತ್ರ ವೈ-ಫೈ ಚಿಪ್ ನಲ್ಲಿ ಸೇರಿಸುವ ಮೂಲಕ ಯಾವುದೇ ದಟ್ಟಣೆ ಇರುವ ಕಡೆ ಕೂಡ ಇದು ಕಾರ್ಯನಿರ್ವಹಿಸುತ್ತದೆ.
ಹೊಸ ಒನ್‌ಪ್ಲಸ್ 15 ಫೋನ್ ಆಫರ್
● ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಒನ್ ಪ್ಲಸ್ 15 ಖರೀದಿಸಿದಾಗ ರೂ. 4000ವರೆಗಿನ ಇನಸ್ಟಂಟ್ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು (ಪೂರ್ಣ ಸ್ವೈಪ್ ಪಾವತಿಗಳ ಮೇಲೆ ರೂ. 3500 ಮತ್ತು ಅರ್ಹ ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಸ್ ಜೊತೆಗಿನ ಇಎಂಐ ಮೇಲೆ ರೂ. 4000 ರಿಯಾಯಿತಿ ಪಡೆಯಬಹುದು)
● ಒನ್ ಪ್ಲಸ್ ಪ್ರಸ್ತುತ ಬಳಕೆದಾರರು ಅಪ್ಗ್ರೇಡ್ ಮಾಡಿಕೊಳ್ಳಲು ಹೆಚ್ಚುವರಿ ಇಂಸೆಂಟಿವ್ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ತನ್ನ ಪ್ರಾಮಾಣಿಕ ಬಳಕೆದಾರರಿಗೆ ನವೆಂಬರ್ 13ರಿಂದ ಆರಂಭವಾಗಿ ಮೊದಲ ಮಾರಾಟ ತಿಂಗಳ ಕೊನೆಯವರೆಗೆ ರೂ. 4000 ವರೆಗಿನ ವಿಶೇಷ ಟ್ರೇಡ್-ಇನ್ ಕ್ರೆಡಿಟ್ ಸಹ ಕೊಡುತ್ತಿದೆ. (ಆಯ್ದ ಒನ್ ಪ್ಲಸ್ ಸಾಧನಗಳ ವಿನಿಮಯದ ಮೇಲೆ ರೂ. 4,000 ಮತ್ತು ಇತರ ಬ್ರ್ಯಾಂಡ್ ಸಾಧನಗಳ ವಿನಿಮಯದ ಮೇಲೆ ರೂ. 2000ಗಳ ಕಡಿತವನ್ನು ಪಡೆಯಬಹುದು)
● ಗ್ರಾಹಕರು ಪ್ರಮುಖ ಕ್ರೆಡಿಟ್ ಕಾರ್ಡುಗಳ ಮೇಲೆ 6 ತಿಂಗಳುಗಳವರೆಗಿನ ಶುಲ್ಕ-ರಹಿತ ಇಎಂಐ ಮೂಲಕ ಸಹ ಇದನ್ನು ಖರೀದಿಸಬಹುದು.
● ಪ್ರಮುಖ ಸ್ಟೋರ್ ಗಳಿಂದ ಖರೀದಿ ಮಾಡುವ ಗ್ರಾಹಕರು ಇನ್-ಸ್ಟೋರ್ ಕನ್ಸೂಮರ್ ಫೈನಾನ್ಸ್ ನೊಂದಿಗೆ ರೂ. 4,056 ಪ್ರತಿ ತಿಂಗಳ ಇಎಂಐ ದರದಲ್ಲಿ ಒನ್ ಪ್ಲಸ್ 15 ಪಡೆಯಬಹುದು.
*ಬ್ಯಾಂಕ್ ಕೊಡುಗೆಗಳನ್ನು ಯಾವುದೇ ವಿನಿಮಯ/ಅಪ್ಗ್ರೇಡ್ ಕೊಡುಗೆಯೊಂದಿಗೆ ಸೇರಿಸಲಾಗುವುದಿಲ್ಲ
ಇತರೆ ಕೊಡುಗೆಗಳು:
● ಖರೀದಿಸಿ ಒನ್ ಪ್ಲಸ್ 15 ಮತ್ತು ಪಡೆಯಿರಿ ರೂ. 2,299 ಮೌಲ್ಯದ ಒಂದು ಒನ್ ಪ್ಲಸ್ ನಾರ್ಡ್ ಬಡ್ಸ್ 3*(ಕ್ರೊಮ್ಯಾಟಿಕ್ ಬ್ಲೂ) ಉಚಿತ .
● ಒನ್ ಪ್ಲಸ್ 15ನ ಎಲ್ಲಾ ಬಳಕೆದಾರರಿಗೆ 180-ದಿನ ಫೋನ್ ಮರುಬದಲಿ ಪ್ಲಾನ್ ಜೊತೆಗೆ ಲೈಫ್ ಟೈಮ್ ಡಿಸ್ಪ್ಲೇ ವಾರಂಟಿ
● ಒನ್ ಪ್ಲಸ್ 15 ಖರೀದಿಸುವ ಹೊಸ ಜಿಯೋ ಪೋಸ್ಟ್ ಪೇಯ್ಡ್ ಗ್ರಾಹಕರು ಆಯ್ದ ಪೋಸ್ಟ್ ಪೇಯ್ಡ್ ಪ್ಲಾನ್ಸ್ ಮೇಲೆ ರೂ. 2,250ವರೆಗೆ (15 ತಿಂಗಳಿಗೆ ರೂ. 150 ರಿಯಾಯಿತಿ) ಉಳಿತಾಯ ಮಾಡಬಹುದು.
● ಪೇಟಿಎಂ ಫ್ಲೈಟ್ಸ್ ನಿಂದ ರೂ. 2000 ಮೌಲ್ಯದ ವೌಚರ್ಸ್ ಪಡೆಯಿರಿ: ಗ್ರಾಹಕರು ಈಗ ದೇಶೀ ವಿಮಾನ ಪ್ರಯಾಣಗಳ ಮೇಲೆ ರೂ. 1000 ಮತ್ತು ಅಂತಾರಾಷ್ಟ್ರೀಯ ವಿಮಾನ ಬುಕಿಂಗ್ ಗಳ ಮೇಲೆ ರೂ. 2000 ಸಂಪೂರ್ಣ ರಿಯಾಯಿತಿಯನ್ನು ಪಡೆಯಬಹುದು**
ಒನ್ ಪ್ಲಸ್ 15 ದರ ಮತ್ತು ಲಭ್ಯತೆ
ರೂ. 72,999ರಿಂದ ಆರಂಭವಾಗುವ ಒನ್ ಪ್ಲಸ್ 15 ಮಾರಾಟಕ್ಕೆ ಮುಕ್ತವಾಗಿದೆ. ಇದು 12+256GB ಮತ್ತು 16+512GB ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒನ್‌ಪ್ಲಸ್ 15 ಲಭ್ಯವಿದೆ. 12+256GB ಫೋನ್ ಬೆಲೆ 72,999 ರೂಪಾಯಿ ಹಾಗೂ 16+512GB ಫೋನ್ ಬೆಲೆ 79,999 ರೂಪಾಯಿ
ಹೊಸ ಜನರೇಶನ್ ವಿಡಿಯೋಗ್ರಫಿ
ಮುಂದಿನ ಪೀಳಿಗೆಯ ಇಮೇಜಿಂಗ್: ಅಲ್ಟ್ರಾ-ಕ್ಲಾರಿಟಿ ಫೋಟೋಗ್ರಫಿ ಮತ್ತು ವೃತ್ತಿಪರ ವಿಡಿಯೋಗ್ರಫಿ, ಒನ್ ಪ್ಲಸ್ 15 ನಲ್ಲಿ, ಬಹುಮುಖ ಟ್ರಿಪಲ್ 50MP ಕ್ಯಾಮೆರಾ ಶ್ರೇಣಿಯೊಂದಿಗೆ ಕಾರ್ಯನಿರ್ವಹಿಸುವ ಪ್ರಗತಿಪರ ಸ್ವಯಂ-ಅಭಿವೃದ್ಧಿಪಡಿಸಿದ ಡೀಟೈಲ್‌ಮ್ಯಾಕ್ಸ್ ಎಂಜಿನ್ ಜೊತೆಗೆ ಇದರ ಇಮೇಜಿಂಗ್ ಉತ್ತಮವಾಗಿದೆ..
ಈ ಹಾರ್ಡ್‌ವೇರ್‌ನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿರುವ 50MP ಮುಖ್ಯ ಕ್ಯಾಮೆರಾ, ವಿಸ್ತಾರವಾದ ದೃಶ್ಯಗಳು ಮತ್ತು ಕ್ಲೋಸ್-ಅಪ್ ಮ್ಯಾಕ್ರೋಗಳಿಗಾಗಿ ಆಟೋಫೋಕಸ್ ಹೊಂದಿರುವ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 3.5x ಆಪ್ಟಿಕಲ್ ಜೂಮ್ ಮತ್ತು 7x ಉತ್ತಮ-ಗುಣಮಟ್ಟದ ನಷ್ಟವಿಲ್ಲದ ಜೂಮ್ ನೀಡುವ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಸೇರಿವೆ. ಡಿಟೈಲ್‌ಮ್ಯಾಕ್ಸ್ ಎಂಜಿನ್ ಬುದ್ಧಿವಂತ ಕಂಪ್ಯೂಟೇಶನಲ್ ಛಾಯಾಗ್ರಹಣ ಮೂಲಕ ಈ ಸೆಟಪ್ ಅನ್ನು ವರ್ಧಿಸುತ್ತದೆ. ಇದು ಹಗಲು ಹೊತ್ತಿನಲ್ಲಿ ಸಂಕೀರ್ಣ ವಿವರಗಳನ್ನು ಸೆರೆಹಿಡಿಯಲು ಅಲ್ಟ್ರಾ ಕ್ಲಿಯರ್ 26MP ಮೋಡ್, ತೀಕ್ಷ್ಣವಾದ ಆಕ್ಷನ್ ಶಾಟ್‌ಗಳಿಗಾಗಿ ಕ್ಲಿಯರ್ ಬರ್ಸ್ಟ್ ಮತ್ತು ಕ್ಲೀನರ್ ಕಡಿಮೆ-ಬೆಳಕಿನ ಛಾಯಾಗ್ರಹಣಕ್ಕಾಗಿ ಕ್ಲಿಯರ್ ನೈಟ್ ಎಂಜಿನ್ ಅನ್ನು ಸಹ ಒಳಗೊಂಡಿದೆ.
ಹೊಸ ಜನರೇಶನ್ ವಿಡಿಯೋಗ್ರಫಿ
ಉತ್ತಮ ಗುಣಮಟ್ಟ
ಒನ್ ಪ್ಲಸ್ 15 ಉದ್ಯಮದಲ್ಲಿಯೇ ಅತ್ಯಂತ ಸಂಪೂರ್ಣ ರಕ್ಷಣೆ ವ್ಯವಸ್ಥೆಯುಳ್ಳ ಸಮಗ್ರ IP66, IP68, IP69, and IP69K ಪ್ರಮಾಣೀಕರಣಗಳ ಮೂಲಕ ಅತ್ಯುತ್ತಮ ಬಾಳಿಕೆಯಲ್ಲಿ ಹೊಸ ಮಾನದಂಡವನ್ನು ರಚಿಸುತ್ತದೆ. ಈ ವಿಸ್ತೃತ ರೇಟಿಂಗ್ ವ್ಯವಸ್ಥೆಯು ಧೂಳು, 30 ನಿಮಿಷಗಳವರೆಗೆ 2 ಮೀಟರ್ ವರೆಗಿನ ನೀರಿನ ಆಳ, ಮತ್ತು 80°C ವರೆಗಿನ ನೀರಿನ ಜೆಟ್ ವರೆಗಿನ ಅತ್ಯಧಿಕ ತಾಪಮಾನ, ಅತ್ಯಧಿಕ ಒತ್ತಡದ ವಿರುದ್ಧ ಅಸಾಧಾರಣ ನಿರೋಧಕತೆಯನ್ನು ನೀಡುತ್ತದೆ. ಇವೆಲ್ಲವೂ ಒನ್ ಪ್ಲಸ್ 15 ಅನ್ನು ಅತ್ಯಂತ ಸುಸ್ಥಿರ ಫ್ಲ್ಯಾಗ್‌ಶಿಪ್ ಸ್ಮಾರ್ಟ್ ಫೋನ್ ಮಾಡಿವೆ.
ಉತ್ತಮ ಗುಣಮಟ್ಟ
ಉತ್ತಮ ಬ್ಯಾಟರಿ ಸಾಮರ್ಥ್ಯ
ಈ ಅಸಾಧಾರಣ ಕಾರ್ಯಕ್ಷಮತೆಯನ್ನು ಆಧಾರವಾಗಿಟ್ಟುಕೊಂಡು 7300mAh ಸಿಲಿಕಾನ್ ನ್ಯಾನೊಸ್ಟ್ಯಾಕ್ ಬ್ಯಾಟರಿಯನ್ನು ಈ ನವೀನ ತಂತ್ರಜ್ಞಾ ಹೊಂದಿದೆ. ಇದರೊಂದಿಗೆ ಒನ್ ಪ್ಲಸ್ 15, 7300 mAh ಬ್ಯಾಟರಿಯೊಂದಿಗೆ 15% ಸಿಲಿಕಾನ್ ಅಂಶವನ್ನು ನೀಡುವ ಮೊದಲ ಫ್ಲ್ಯಾಗ್‌ಶಿಪ್ ಸ್ಮಾರ್ಟ್ ಫೋನ್ ಆಗಿದೆ. ಇದು ಬಲಾಢ್ಯತೆ ಮತ್ತು ವಿಶ್ವಾಸಾರ್ಹತೆ ಎರಡಕ್ಕೂ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಇದು 4 ವರ್ಷಗಳ ನಂತರವೂ 80% ಕ್ಕಿಂತ ಹೆಚ್ಚು ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ ಮತ್ತು -20°C ನಲ್ಲಿಯೂ ಸಹ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ. 120W SUPERVOOC ಚಾರ್ಜಿಂಗ್‌ನೊಂದಿಗೆ, ಇದು ಸುಮಾರು 39 ನಿಮಿಷಗಳಲ್ಲಿ ಪೂರ್ಣ ಚಾರ್ಜಿಂಗ್ ಅನ್ನು ಮರುಸ್ಥಾಪಿಸುತ್ತದೆ ಮತ್ತು 50W AIRVOOC ವೈರ್‌ಲೆಸ್ ಬೆಂಬಲದೊಂದಿಗೆ, ಒನ್ ಪ್ಲಸ್ 15 ಯಾವುದೇ ಅಡಚಣೆಯಿಲ್ಲದೆ ದಿನವಿಡೀ ಗರಿಷ್ಠ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.

