ಹೊಸ ಬಟ್ಟೆ ಧರಿಸುವ ಮೊದಲು ತೊಳೆಯಬೇಕೇ, ಬೇಡವೋ? ಎನ್ನುವ ಗೊಂದಲಕ್ಕೆ ಇಲ್ಲಿದೆ ನೋಡಿ ಉತ್ತರ
Washing new clothes: ನೀವು ಖರೀದಿಸಿದ ಹೊಸ ಬಟ್ಟೆಗಳು ಎಷ್ಟು 'ಫ್ರೆಶ್' ಆಗಿವೆ ಎಂದು ನೀವು ಭಾವಿಸುತ್ತೀರೋ, ಅಸಲಿಗೆ ಅವು ಅಷ್ಟು ಶುಚಿಯಾಗಿರುವುದಿಲ್ಲ! ಆಕರ್ಷಕವಾಗಿ ಕಾಣುವ ಆ ಬಣ್ಣ ಮತ್ತು ಮಡಿಕೆಗಳ ಹಿಂದೆ ನಾವು ಊಹಿಸಲೂ ಸಾಧ್ಯವಾಗದ ಕರಾಳ ಸತ್ಯವೊಂದು ಅಡಗಿದೆ.

ಧರಿಸುವ ಮೊದಲು ಏಕೆ ತೊಳೆಯಬೇಕು?
ನಾವೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತೇವೆ ಹೊರತೂ ಅವುಗಳನ್ನು ತಂದ ತಕ್ಷಣ ತೊಳೆಯುವ ಬಗ್ಗೆ ಹೆಚ್ಚಾಗಿ ಯೋಚಿಸುವುದೇ ಇಲ್ಲ. ಆದರೆ ಅದೇ ಹೊಸ ಉಡುಪು ನಿಮ್ಮ ಕೈ ಸೇರುವ ಮೊದಲು ಅನೇಕ ಹಂತಗಳನ್ನು ದಾಟಿ ಬಂದಿರುತ್ತದೆ ಎಂಬ ವಿಷಯ ಗೊತ್ತೇ?. ಆರೋಗ್ಯ ಮತ್ತು ಚರ್ಮದ ಸುರಕ್ಷತೆಯ ದೃಷ್ಟಿಯಿಂದ ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಏಕೆ ತೊಳೆಯಬೇಕು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.
ದೂರದ ಪ್ರಯಾಣ ಮತ್ತು ಧೂಳು
ಬಟ್ಟೆಗಳು ಕಾರ್ಖಾನೆಯಿಂದ ನಿಮ್ಮ ಕೈ ಸೇರುವ ಮೊದಲು ಗೋದಾಮು, ಹಡಗು ಮತ್ತು ಅಂಗಡಿಗಳ ಮೂಲಕ ದೀರ್ಘ ಪ್ರಯಾಣ ಮಾಡಿರುತ್ತವೆ. ಈ ಸಮಯದಲ್ಲಿ ಅವುಗಳಲ್ಲಿ ಧೂಳು, ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತವೆ.
ಹಲವರ ಸಂಪರ್ಕ
ನೀವು ಅಂಗಡಿಯಲ್ಲಿ ಬಟ್ಟೆ ಖರೀದಿಸುವಾಗ, ನಿಮಗಿಂತ ಮೊದಲು ಅನೇಕರು ಆ ಬಟ್ಟೆಯನ್ನು ಧರಿಸಿ ನೋಡಿರಬಹುದು. ಇದರಿಂದ ಇತರರ ಚರ್ಮದ ಸಂಪರ್ಕ ಅಥವಾ ಬೆವರಿನ ಅಂಶ ಬಟ್ಟೆಯಲ್ಲಿ ಇರುವ ಸಾಧ್ಯತೆಯಿದೆ.
ರಾಸಾಯನಿಕಗಳ ಬಳಕೆ
ಬಟ್ಟೆಯ ಬಣ್ಣ ಮತ್ತು ವಿನ್ಯಾಸ ಕೆಡದಂತೆ ನೋಡಿಕೊಳ್ಳಲು ತಯಾರಿಕೆಯ ವೇಳೆ ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ತೊಳೆಯದೆ ಧರಿಸಿದರೆ ಚರ್ಮದ ಮೇಲೆ ಕೆಂಪು ದದ್ದುಗಳು ಅಥವಾ ತುರಿಕೆ ಉಂಟಾಗಬಹುದು.
ಚರ್ಮದ ಸುರಕ್ಷತೆ
ಒಳ ಉಡುಪುಗಳು ಮತ್ತು ಜಿಮ್ ಬಟ್ಟೆಗಳು ನೇರವಾಗಿ ಚರ್ಮಕ್ಕೆ ಅಂಟಿಕೊಂಡಿರುವುದರಿಂದ, ಅವುಗಳನ್ನು ಮೊದಲು ತೊಳೆಯುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.
ಮಕ್ಕಳ ಚರ್ಮದ ಕಾಳಜಿ
ಮಗುವಿನ ಚರ್ಮವು ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹೊಸ ಬಟ್ಟೆಯಲ್ಲಿರುವ ರಾಸಾಯನಿಕಗಳು ಮಗುವಿನ ಚರ್ಮದ ಮೇಲೆ ಸುಲಭವಾಗಿ ಕಿರಿಕಿರಿ ಉಂಟುಮಾಡಬಲ್ಲವು.
ನೈರ್ಮಲ್ಯದ ಅಭ್ಯಾಸ
ಹೊಸ ಬಟ್ಟೆಗಳನ್ನು ಒಮ್ಮೆ ತೊಳೆಯುವುದು ಕೇವಲ ಸ್ವಚ್ಛತೆಗಾಗಿ ಮಾತ್ರವಲ್ಲ, ಇದೊಂದು ಸುಲಭವಾದ ಚರ್ಮದ ಆರೈಕೆಯ ಅಭ್ಯಾಸವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.