- Home
- Life
- ತಿಂಗಳು ಬಾಡಿಗೆಗೆ ಇಷ್ಟು ಹಣ ಹೋಯ್ತು ಅಂತ ಕೊರಗ್ತಿದ್ದೀರಾ! ಹಾಗಿದ್ರೆ ನೀವು ದೊಡ್ಡ ಮಿಸ್ಟೇಕ್ ಮಾಡ್ತಿದ್ದೀರಿ
ತಿಂಗಳು ಬಾಡಿಗೆಗೆ ಇಷ್ಟು ಹಣ ಹೋಯ್ತು ಅಂತ ಕೊರಗ್ತಿದ್ದೀರಾ! ಹಾಗಿದ್ರೆ ನೀವು ದೊಡ್ಡ ಮಿಸ್ಟೇಕ್ ಮಾಡ್ತಿದ್ದೀರಿ
Bengaluru rent: ಬೆಂಗಳೂರಿನಲ್ಲಿ ಅಥವಾ ಸಿಟಿಯಲ್ಲಿ ವಾಸ ಮಾಡುವಾಗ ಬಾಡಿಗೆ ಕೊಡಬೇಕು, ಊಟ ತಿಂಡಿಗೆ ಹಣ ಕೊಡಬೇಕು ಎಂದೆಲ್ಲ ಯೋಚನೆ ಮಾಡ್ತೀವಿ. ಆದರೆ ಇದು ಹೊರೆ ಅಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೇಳಿದ್ದಾರೆ.

ಸಿಟಿಯಲ್ಲಿ ಹಣ ಖರ್ಚು
ಇಂದು ಬೆಂಗಳೂರಿನಲ್ಲಿ ಇರುವಾಗ ಬಾಡಿಗೆ, ಊಟ ತಿಂಡಿ ಖರ್ಚು ಎಂದೆಲ್ಲ ಒಂದಿಷ್ಟು ಹಣ ವ್ಯಯ ಆಗುವುದು ಎಂದೆಲ್ಲ ಭಾವಿಸಲಾಗುತ್ತದೆ. ಆದರೆ ಆ ರೀತಿ ಆಗೋದಿಲ್ಲ ಎಂದು ಬೆಂಗಳೂರಿನ ಮಹಿಳೆ ಹೇಳಿದ್ದಾರೆ.
ಇದೆಲ್ಲ ಖರ್ಚು ಅಲ್ಲ
ಬಾಡಿಗೆ, ದಿನಸಿ ವಸ್ತುಗಳ ಮೇಲೆ ಖರ್ಚು ಆಗುವುದು, ಅದನ್ನು ಖರ್ಚು ಎಂದು ಭಾವಿಸಬೇಡಿ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಉಪಾಸನಾ ಡೋಗ್ರಾ ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ. ಇಷ್ಟು ಹಣ ಖಾಲಿ ಮಾಡಿ, ಅದರಲ್ಲಿ ಪ್ರತಿಯೊಂದು ಖರ್ಚನ್ನೂ ಕಳೆದುಹೋದ ಹಣ ಎಂದು ಪರಿಗಣಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಇಂತಹ ಖರ್ಚುಗಳನ್ನು ನಮ್ಮ ಆರೋಗ್ಯ ಸುರಕ್ಷತೆ, ಯೋಗಕ್ಷೇಮವನ್ನು ಬೆಂಬಲಿಸುವ ಹಣ ಎಂದು ನೋಡಿ ಎಂದಿದ್ದಾರೆ.
ಖರ್ಚಾಗಿದ್ದೆಲ್ಲ ನಷ್ಟ ಅನ್ಕೋಬೇಡಿ!
"ನಮ್ಮ ಖರ್ಚುಗಳನ್ನು ಕಳೆದುಹೋದ ಹಣ, ಖಾಲಿಯಾದ ಹಣ ಎಂದು ಹೇಳೋದನ್ನು ನಿಲ್ಲಿಸಿ. ಅದರ ಬದಲಿಗೆ ನಮ್ಮನ್ನು ನೋಡಿಕೊಳ್ಳುತ್ತಿರುವ ಹಣ ಎಂದು ಹೇಳಿ. ಮಧ್ಯಮ ವರ್ಗದವರಿಗೆ ಹಣದ ಜೊತೆಗಿನ ಸಂಬಂಧ ಯಾವಾಗಲೂ ಸಂಕೀರ್ಣ ಆಗಿರುತ್ತದೆ. 'ಹಣ ಉಳಿಸಿ, ಅತಿಯಾಗಿ ಖರ್ಚು ಮಾಡಬೇಡಿ' ಎಂದು ಕೇಳುತ್ತಲೇ ಬೆಳೆದಿದ್ದೇವೆ. ಹೀಗಾಗಿ ಪ್ರತಿಯೊಂದು ಖರ್ಚು ನಷ್ಟದಂತೆ ಎಂದೆನಿಸುತ್ತದೆ” ಎಂದಿದ್ದಾರೆ.
ಮನೆ, ಊಟ ತಿಂಡಿ ಎಲ್ಲ ಒಳ್ಳೆಯದೇ ಅಲ್ವಾ?
ಪ್ರತಿ ತಿಂಗಳು ನಾನು ಬಾಡಿಗೆ ಕೊಡುವಾಗ, '₹20,000 ದೊಡ್ಡ ಹಣ' ಎಂದೇ ಅನಿಸುವುದು. ಆಮೇಲೆ ಲೆಕ್ಕ ಹಾಕಿ ನೋಡಿದರೆ ದಿನಕ್ಕೆ ಸುಮಾರು ₹650 ಆಗುತ್ತದೆ. ಹೊರಗಡೆ ಕೆಲಸ ಮಾಡಿ ಮನೆಗೆ ಬಂದಾಗ ಸುರಕ್ಷಿತ ಅನಿಸುವ ಜಾಗ ಅದು. ಆಮೇಲೆ ಊಟ ತಿಂಗಳಿಗಾಗಿ 6000 ರೂಪಾಯಿ ಕೊಡೋದು ತಪ್ಪೇನು? ಊಟದಲ್ಲಿ ನನ್ನ ದೇಹಕ್ಕೆ ಅಗತ್ಯವಿರುವ ಆಹಾರ, ಪೋಷಕಾಂಶಗಳು ಸಿಗುತ್ತಿವೆ ಎಂದು ಲೆಕ್ಕ ಹಾಕಿದಾಗ 200 ರೂಪಾಯಿ ಆಗುವುದು. 'ನನ್ನ ಹಣ ಎಲ್ಲಿಗೆ ಹೋಗುತ್ತಿದೆ?' ಎಂದು ಕೇಳುವುದು ಮಾತ್ರವಲ್ಲ. 'ನನ್ನ ಹಣ ನನಗಾಗಿ ಏನು ಮಾಡುತ್ತಿದೆ?' ಎಂದು ಕೇಳಬೇಕಿದೆ.
ವೀಕ್ಷಕರು ಏನಂದ್ರು?
- ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೈನಂದಿನ ವೆಚ್ಚಗಳನ್ನು ನೋಡಲು ಇದು ಒಂದು ಹೊಸ, ಉತ್ತಮ ದೃಷ್ಟಿಕೋನವಾಗಿದೆ ಎಂದಿದ್ದಾರೆ.
- ಖರ್ಚುಗಳನ್ನು ನೋಡಲು ಇದು ಸುಂದರವಾದ ಮಾರ್ಗ
- ನನಗೆ ಇಂದು ಇದನ್ನು ಕೇಳುವ ಅಗತ್ಯವಿತ್ತು, ಏಕೆಂದರೆ ಬಾಡಿಗೆ ಯಾವಾಗಲೂ ಒಂದು ಹೊರೆಯಾಗಿ ಅನಿಸುತ್ತದೆ
- ಇದು ತುಂಬಾ ಅರ್ಥಪೂರ್ಣವಾಗಿದೆ, ಹಣವನ್ನು ನಮ್ಮನ್ನು ಬೆಂಬಲಿಸುವ ಶಕ್ತಿಯಾಗಿಯೂ ನೋಡಬೇಕು
- ಖರ್ಚು ಮಾಡುವ ವಿಷಯದಲ್ಲಿ ಮಧ್ಯಮ ವರ್ಗದವರಲ್ಲಿ ಇರುವ ಅಪರಾಧ ಪ್ರಜ್ಞೆ ನಿಜಕ್ಕೂ ವಾಸ್ತವ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

