ಕನ್ನಡ ಕಿರುತೆರೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಹೊಸ ರೀಲ್ಸ್ ನಲ್ಲಿ ಏನಿದೆ ಗೊತ್ತಾ?
tv-talk Jul 01 2026
Author: Pavna Das Image Credits:Instagram
Kannada
ಬೀಚ್ ಗರ್ಲ್ ನಮ್ರತಾ
ನಮ್ರತಾ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಮಾಲ್ಡೀವ್ಸ್ ಬೀಚ್ ವಿಡಿಯೋ ಶೇರ್ ಮಾಡಿದ್ದು, ಅದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸುಂದರ ಬಿಜಿಎಂ ಹಾಕಿದ್ದಾರೆ.
Image credits: Instagram
Kannada
ಸಮುದ್ರ ಪಕ್ಕದಲ್ಲಿ ಮನೆ
ಸಪ್ತಸಾಗರದಾಚೆ ಸಿನಿಮಾದಲ್ಲಿ ಪ್ರಿಯಾ ಮತ್ತು ಮನು ಸಂಭಾಷಣೆಯ ಇಲ್ಲೇ ಮನೆ ಮಾಡಿಕೊಳ್ಳೋಣ ಸಮುದ್ರ ಪಕ್ಕದಲ್ಲಿ ಎನ್ನುವ ಸುಂದರ ಸಾಲುಗಳನ್ನು ನಟಿ ಹಾಕಿದ್ದಾರೆ.
Image credits: Instagram
Kannada
ನಮ್ರತಾಗೂ ಸಮುದ್ರ ಪಕ್ಕ ಮನೆ ತೆಗೆಯುವ ಆಸೆ ಇದೆಯೆ?
ಆ ಅಲೆಗಳ ಸದ್ದು, ಎಷ್ಟು ಚೆನ್ನಾಗಿತ್ತು ಗೊತ್ತಾ ಮನು, ಕೇಳ್ತಾ ಇದ್ರೆ ಎಷ್ಟು ಖುಷಿಯಾಗುತ್ತೆ ಅಂದ್ರೆ ಸದಾ ಹಾಡಬೇಕು ಅನ್ಸುತ್ತೆ. ನಿನ್ನ ಜೊತೆ ಇದ್ದಾಗಲೂ ಹಾಗೆ ಅನಿಸುತ್ತೆ ಎನ್ನುವ ಬಿಜಿಎಂ ಹಾಕಿದ್ದಾರೆ.
Image credits: Instagram
Kannada
ಕಾರ್ತಿಕ್ ಜೊತೆ ಮನೆ ಮಾಡ್ತೀರಾ?
ಅಭಿಮಾನಿಗಳು ನಟಿ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದು, ಕಾರ್ತಿಕ್ ಜೊತೆ ಮನೆ ಮಾಡುತ್ತೀರಾ ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದಾರೆ.
Image credits: Instagram
Kannada
ಎಲ್ಲಿದ್ದಾರೆ ನಮ್ರತಾ?
ನಮ್ರತಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಇವರು ‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸಿದ್ದರು. ಆದರೆ ತಿಂಗಳಿಂದ ಧಾರಾವಾಹಿಯಲ್ಲಿ ನಟಿ ಕಾಣಿಸುತ್ತಿಲ್ಲ.
Image credits: Instagram
Kannada
ವೀಕ್ಷಕರಿಗೆ ಬೇಸರ
ನಮ್ರತಾರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿ, ಕೊನೆಗೆ ಅವರ ಪಾತ್ರವನ್ನೇ ಸೈಡ್ ಲೈನ್ ಮಾಡಿರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಒಳ್ಳೆ ಅವಕಾಶ ಸಿಗಲಿ ಎಂದು ಹಾರೈಸಿದ್ದರು.
Image credits: Instagram
Kannada
ಹೊಸ ಸೀರಿಯಲ್ ಮೂಲಕ ಎಂಟ್ರಿ
ನಮ್ರತಾ ಗೌಡ ‘ಕರ್ಣ’ ಧಾರಾವಾಹಿಯಿಂದ ಹೊರನಡೆದರೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರನ್ನು ಹೊಸ ಧಾರಾವಾಹಿಯಲ್ಲಿ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.