MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ದೀರ್ಘ ಪ್ರಯಾಣ ಮಾಡುವಾಗ ಸಾರಿಗೆ ಬಸ್ಸಿನ ಸೀಟುಗಳಿಂದ ಬರುವ ದುರ್ನಾತ ತಪ್ಪಿಸುವುದು ಹೇಗೆ?

ದೀರ್ಘ ಪ್ರಯಾಣ ಮಾಡುವಾಗ ಸಾರಿಗೆ ಬಸ್ಸಿನ ಸೀಟುಗಳಿಂದ ಬರುವ ದುರ್ನಾತ ತಪ್ಪಿಸುವುದು ಹೇಗೆ?

How to get smell out of vehicle seats? ದೀರ್ಘ ಪ್ರಯಾಣದ ವೇಳೆ ಸಾರಿಗೆ ಬಸ್‌ಗಳ ಸೀಟುಗಳೇಕೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ? ಕಾರಣಗಳೇನು? ಇದರಿಂದ ಪ್ರಯಾಣಿಕರಿಗಾಗುವ ಅಲರ್ಜಿಗಳೇನು? ದುರ್ನಾತ ಹೇಗೆ ತಡೆಗಟ್ಟಬಹುದು?

2 Min read
Author : Ravi Janekal
| Updated : Jul 26 2026, 10:52 AM IST
Share this Photo Gallery
  • FB
  • TW
  • Linkdin
  • Whatsapp
14
ದೀರ್ಘ ಪ್ರಯಾಣ ಮಾಡುವಾಗ ಸಾರಿಗೆ ಬಸ್ಸಿನ ಸೀಟುಗಳೇಕೆ ಕೆಟ್ಟ ವಾಸನೆ?
Image Credit : Asianet News

ದೀರ್ಘ ಪ್ರಯಾಣ ಮಾಡುವಾಗ ಸಾರಿಗೆ ಬಸ್ಸಿನ ಸೀಟುಗಳೇಕೆ ಕೆಟ್ಟ ವಾಸನೆ?

ಪ್ರತಿದಿನ ವಿವಿಧ ಕೆಲಸ ಕಾರ್ಯಗಳಿಗಾಗಿ ಬೇರೊಂದು ಸ್ಥಳಕ್ಕೆ ಹೋಗಲು ಅಥವಾ ಪ್ರವಾಸಕ್ಕೆ ಹೋಗಲು ಲಕ್ಷಾಂತರ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲೇ ಪ್ರಯಾಣಿಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಮಿಕರು ಮಹಾನಗರ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬರ್ತಾರೆ. ಬೆಂಗಳೂರಿಗೆ ಬಂದ ಬಳಿಕ ಮೆಜೆಸ್ಟಿಕ್‌ನಿಂದ ಕೆಲಸ ಮಾಡುವ ಏರಿಯಾಗಳಿಗೆ ತೆರಳಲು ಬಿಎಂಟಿಎಸ್ ಬಸ್ ಹತ್ತುತ್ತಾರೆ. ದಿನನಿತ್ಯ ಲಕ್ಷಾಂತರ ಸಂಚರಿಸುವ ಬಸ್ಸಿನ ಸೀಟುಗಳು ಯಾಕಿಷ್ಟು ದುರ್ನಾತ? ಇದಕ್ಕೆ ಕಾರಣಗಳೇನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
How to get smell out of vehicle seats?
Image Credit : Asianet News

How to get smell out of vehicle seats?

ಸಾರಿಗೆ ಬಸ್‌ಗಳಲ್ಲಿ ನೀವು ದೀರ್ಘ ಪ್ರಯಾಣ ಮಾಡಿದ್ದರೆ ನಿಮಗೆ ಇದು ಅನುಭವಕ್ಕೆ ಬಂದಿರುತ್ತದೆ. ನೀವು ಸ್ವಚ್ಛವಾಗಿಯೇ ಇರುತ್ತೀರಿ, ಶುಭ್ರ ಬಟ್ಟೆಯೇ ಧರಿಸಿರುತ್ತೀರಿ. ಆದರೆ ಕೆಎಸ್‌ಆರ್‌ಟಿಸಿ ಬಸ್ಸಿನ ಸೀಟಿನಲ್ಲಿ ದೀರ್ಘಕಾಲ ಕುಳಿತರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಇದೊಂದು ರೀತಿ ಮುಜುಗರದ ಸನ್ನಿವೇಶ ಪ್ರತಿಯೊಬ್ಬರು ಎದುರಿಸಿರುತ್ತಾರೆ. ಈ ಕಾರಣಕ್ಕೆ ಕೆಲವರು ಸಾರಿಗೆ ಬಸ್ ಹತ್ತಲು ಹಿಂದೇಟು ಹಾಕುವುದುಂಟು. 

ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್, ಫ್ಯಾಬ್ರಿಕ್ ಸೀಟುಗಳಿರುವ ಬಸ್‌ಗಳಲ್ಲಿ ಈ ಸಮಸ್ಯೆ ವಿಪರೀತ.  ದೀರ್ಘಕಾಲ ಕುಳಿತು ಮುಂದೆಲ್ಲ ವಿರಾಮಕ್ಕೆ ಇಳಿದಾಗ ದುರ್ನಾತ, ಅದು ಇತರರಿಗೆ ನಿಮ್ಮಿಂದಲೇ ಎಂಬುದು ಮುಜುಗರಕ್ಕೆ ಕಾರಣವಾಗುತ್ತದೆ. ದುರ್ನಾತ ಬರಲು ಕಾರಣವೆಂದರೆ ದೀರ್ಘ ಕಾಲ ಸೀಟಿನಲ್ಲಿ ಕುಳಿತುಕೊಳ್ಳುವುದರಿಂದ ಬೆವರು, ದೇಹದಿಂದ ಉದುರುವ ಚರ್ಮದ ಕಣಗಳು, ಧೂಳು, ತೇವಾಂಶ ಎಲ್ಲ ಒಟ್ಟು ಸೇರಿ ದುರ್ವಾಸನೆ ಬರಲಾರಂಭಿಸುತ್ತೆ. ಅದರಲ್ಲೂ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಯಂಥ ಸಾರ್ವಜನಿಕ ಬಸ್ ಸೀಟುಗಳು ಸ್ವಚ್ಛಗೊಳಿಸುವುದೇ ಅಪರೂಪ. ಹೀಗಾಗಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವ ಬಸ್‌ಗಳಲ್ಲಿ ತಾಸು ಕುಳಿತರೂ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಇದರಿಂದ ಅಲರ್ಜಿ ತುರಿಕೆ, ಚರ್ಮದ ಸಮಸ್ಯೆ ಉಂಟಾಗುತ್ತೆ ಎಂದು ಹಲವು ಅಧ್ಯಯನಗಳೇ ಬಹಿರಂಗ ಪಡಿಸಿವೆ.

Related Articles

Related image1
ದುಬಾರಿ ಡಿಯೋಡ್ರೆಂಟ್​ಬೇಕಿಲ್ಲ, ಕಂಕುಳು ದುರ್ನಾತ ತೊಲಗಿಸಲು ತೆಂಗಿನ ಎಣ್ಣೆಗೆ ಇದನ್ನು ಬೆರೆಸಿ ಹಚ್ಚಿದರೆ ಸಾಕು!
Related image2
ಕಾರವಾರ-ಹಳಗಾ ಸಾರಿಗೆ ಬಸ್ ಉಳಗಾ ವರೆಗೆ ವಿಸ್ತರಿಸಲು ಆಗ್ರಹ: ಡಿಪೋ ಮ್ಯಾನೇಜರ್‌ಗೆ ಮನವಿ
34
ಬಸ್ಸಿನಲ್ಲೇ ಊಟ, ಮದ್ಯಪಾನ, ವಾಂತಿ..!
Image Credit : Asianet News

ಬಸ್ಸಿನಲ್ಲೇ ಊಟ, ಮದ್ಯಪಾನ, ವಾಂತಿ..!

ದೂರ ಪ್ರಯಾಣಿಸುವ ನೂರಾರು ಜನ ಒಂದೇ ಸೀಟನ್ನು ಬಳಸುತ್ತಾರೆ. ಬೆವರು, ದೇಹದ ಎಣ್ಣೆ, ಧೂಳು ಮತ್ತು ತೇವಾಂಶ ಫ್ಯಾಬ್ರಿಕ್ ಸೀಟಿಗೆ ಅಂಟಿಕೊಂಡಿರುತ್ತದೆ. ಮೇಲ್ನೋಟಕ್ಕೆ ಸೀಟು ಸ್ವಚ್ಛವಾಗಿ ಕಂಡರೂ ಕುಳಿತ ಒಂದು ತಾಸಿನಲ್ಲೇ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಬೆಂಗಳೂರಿನಿಂದ ಉತ್ತರ ಕರ್ನಾಟಕದ ಭಾಗಕ್ಕೆ ಪ್ರಯಾಣಿಸುವ ಬಸ್‌ಗಳಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಬಸ್‌ಗಳಲ್ಲೇ ಕುಳಿತು ಊಟ ಮಾಡ್ತಾರೆ, ಕುಡಿದು ಮಲಗುತ್ತಾರೆ. ದೀರ್ಘ ಪ್ರಯಾಣದ ಪರಿಣಾಮ ಕಿಟಕಿಯಲ್ಲಿ ವಾಂತಿ ಮಾಡಿಕೊಳ್ತಾರೆ. ಇದೆಲ್ಲ ಒಂದು ದಿನದ ಕತೆಯಲ್ಲ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವಾಗ ಇವೆಲ್ಲ ನಡೆಯುತ್ತಲೇ ಇರುವುದರಿಂದ ಮತ್ತು ಬಸ್‌ ಸ್ವಚ್ಛಗೊಳಿಸದೇ ಇರುವುದರಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ.

44
ಪರಿಹಾರ ಏನು?
Image Credit : Asianet News

ಪರಿಹಾರ ಏನು?

ತಜ್ಞರ ಪ್ರಕಾರ, ಫ್ಯಾಬ್ರಿಕ್ ಸೀಟುಗಳನ್ನು ಕೇವಲ ಒರೆಸುವುದಕ್ಕಿಂತ ನಿಯಮಿತವಾಗಿ ಡೀಪ್ ಕ್ಲೀನಿಂಗ್ ಮಾಡುವುದು.

  • ಬಿಸಿ ಹಬೆಯ (Steam) ಮೂಲಕ ಶುಚಿಗೊಳಿಸುವುದು,
  • ಧೂಳು ಹೀರಿಕೊಳ್ಳುವ ಮಷಿನ್ ಬಳಸಿ ಸ್ವಚ್ಛಗೊಳಿಸುವುದು,
  • ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ನಿಯಮ ರೂಪಿಸುವುದು.

ಸಾರ್ವಜನಿಕ ಸಾರಿಗೆಗೆ ಇದೇಕೆ ಮುಖ್ಯ?

ಪ್ರತಿದಿನ ಲಕ್ಷಾಂತರ ಜನ ಬಳಸುವ ರಾಜ್ಯ ಸಾರಿಗೆ ಬಸ್‌ಗಳಲ್ಲಿ ನಿಯಮಿತವಾಗಿ ಡೀಪ್ ಕ್ಲೀನಿಂಗ್, ಫ್ಯಾಬ್ರಿಕ್ ಸೀಟುಗಳ ಸ್ವಚ್ಛತೆ, ದುರ್ವಾಸನೆ ನಿಯಂತ್ರಣಕ್ಕೆ ವಿಶೇಷ ಗಮನ ನೀಡಿದರೆ ಪ್ರಯಾಣಿಕರ ಅನುಭವ ಉತ್ತಮವಾಗುವುದರ ಜೊತೆಗೆ ಅಲರ್ಜಿ ಸಮಸ್ಯೆಗಳನ್ನೂ ಕಡಿಮೆ ಮಾಡಲು ನೆರವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜೀವನಶೈಲಿ
ಪ್ರವಾಸ

Latest Videos
Recommended Stories
Recommended image1
Akki Rotti Recipe: ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಮಾಡಿ ಕರವಸ್ತ್ರದಷ್ಟೇ ತೆಳ್ಳಗಿರುವ ಮೃದುವಾದ ಅಕ್ಕಿ ರೊಟ್ಟಿ
Recommended image2
ವರ್ಷಕ್ಕೆ ₹15 ಕೋಟಿ, ದಿನಕ್ಕೆ 1,000 ಆರ್ಡರ್‌.. ಬೆಂಗಳೂರಿನಲ್ಲಿ ₹75 ಕೋಟಿ ಮೌಲ್ಯದ Thekua ಬ್ರ್ಯಾಂಡ್ ಬೆಳೆಸಿದ ಅಮ್ಮ-ಮಗ
Recommended image3
2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್
Related Stories
Recommended image1
ದುಬಾರಿ ಡಿಯೋಡ್ರೆಂಟ್​ಬೇಕಿಲ್ಲ, ಕಂಕುಳು ದುರ್ನಾತ ತೊಲಗಿಸಲು ತೆಂಗಿನ ಎಣ್ಣೆಗೆ ಇದನ್ನು ಬೆರೆಸಿ ಹಚ್ಚಿದರೆ ಸಾಕು!
Recommended image2
ಕಾರವಾರ-ಹಳಗಾ ಸಾರಿಗೆ ಬಸ್ ಉಳಗಾ ವರೆಗೆ ವಿಸ್ತರಿಸಲು ಆಗ್ರಹ: ಡಿಪೋ ಮ್ಯಾನೇಜರ್‌ಗೆ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved