ಮಗುವಿನಂತೆ ಗಾಢ ನಿದ್ದೆ ಮಾಡಲು 10-3-2-1-0 ನಿಯಮ ಫಾಲೋ ಮಾಡಿದ್ರೆ ಸಾಕು!
ಕೆಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ರಾತ್ರಿ ನಿದ್ದೆ ಬರುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. 10-3-2-1-0 ಸೂತ್ರ ಪಾಲಿಸಿದರೆ ಗಾಢ ನಿದ್ದೆ ಮಾಡಬಹುದು ಎನ್ನುತ್ತಾರೆ ತಜ್ಞರು.
Better Sleep: ಇತ್ತೀಚಿನ ದಿನಗಳಲ್ಲಿ ಕೆಲವರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ದಿನವಿಡೀ ಕೆಲಸ ಮಾಡಿದ್ರೂ ನಿದ್ದೆ ಬರಲ್ಲ ಎಂದು ಹೇಳಿಕೊಳ್ಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೆಲವರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ದಿನವಿಡೀ ಕೆಲಸ ಮಾಡಿದ್ರೂ ನಿದ್ದೆ ಬರಲ್ಲ ಎಂದು ಹೇಳಿಕೊಳ್ಳುತ್ತಾರೆ.
ಮೊಬೈಲ್ ನೋಡುತ್ತಲೇ ರಾತ್ರಿ 2 ಗಂಟೆಯವರೆಗೆ ಎಚ್ಚರವಿರುತ್ತಾರೆ. ನಂತರದ ಸಮಯದಲ್ಲಿ ನಿದ್ದೆ ಬಂದರೂ ಬೆಳಗ್ಗೆ ಬೇಗ ಏಳಲೇಬೇಕಾದ ಅನಿವಾರ್ಯತೆ ಇರುತ್ತದೆ. ಹೀಗೆ ಕಡಿಮೆ ಸಮಯ ನಿದ್ದೆ ಮಾಡಿ, ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ಹಾಸಿಗೆ ಮೇಲೆ ಒರಗಿದ ಕೂಡಲೇ ಗಾಢ ನಿದ್ದೆ ಬರಬೇಕು ಅಂದ್ರೆ ನೀವು 10-3-2-1-0 ಸೂತ್ರ ಅನುಸರಿಸಬೇಕು. ಕಣ್ತುಂಬ ನಿದ್ದೆ ಮಾಡೋದರಿಂದ ಆರೋಗ್ಯಕರವಾಗಿಯೂ ಇರಬಹುದು. ಹಾಗಾದ್ರೆ ಏನು ಈ ಸೂತ್ರ ಅಂತ ನೋಡೋಣ ಬನ್ನಿ.
Sleeping
10 ಅಂದ್ರೆ ಏನು?
ನೀವು ರಾತ್ರಿ 9 ಗಂಟೆಗೆ ನಿದ್ದೆ ಮಾಡುವ ಸಮಯವಾಗಿದ್ರೆ, 10 ಗಂಟೆ ಮುಂಚೆ ಯಾವುದೇ ಕೆಫಿನ್ ಆಹಾರ ಸೇವಿಸಬಾರದು. ಟೀ, ಕಾಫಿ ಸೇರಿದಂತೆ ಕೆಫಿನ್ ಪದಾರ್ಥಗಳಿಂದ ದೂರವಿರಬೇಕು. ಕೆಫಿನ್ ಸೇವನೆ ಪ್ರಮಾಣ ಅತಿ ಕಡಿಮೆಯಾಗಿರಬೇಕು.
sleeping
3 ಅಂದ್ರೆ ಏನು?
ನಿದ್ದೆ ಮಾಡುವ 3 ಗಂಟೆ ಮೊದಲೇ ಆಹಾರ ಸೇವಿಸಬೇಕು. ಆಹಾರ ಸೇವಿಸಿದ ಮರುಕ್ಷಣವೇ ಮಲಗಿದ್ರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಹಾಗಾಗಿ ರಾತ್ರಿ ನಿದ್ದೆಯಲ್ಲಿ ಅಸಮತೋಲನವುಂಟಾಗುತ್ತದೆ.
2 ಅಂದ್ರೆ ಏನು?
ನಿದ್ದೆಗೂ 2 ಗಂಟೆ ಮೊದಲು ಹೆಚ್ಚು ದೇಹ ದಂಡಿಸಬಾರದು. ರಾತ್ರಿ ನಿದ್ದೆಗೂ ಮುನ್ನ ಲಘು ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ನಿದ್ದೆ ಮಾಡುವ ಮೊದಲು ದೇಹ ವಿಶ್ರಾಂತ ಸ್ಥಿತಿಯಲ್ಲಿರಬೇಕು.
1 ಅಂದ್ರೆ ಏನು?
ನಿದ್ದೆ ಮಾಡುವ 1 ಗಂಟೆಗೂ ಮೊದಲೇ ಮೊಬೈಲ್ ನಿಂದ ದೂರ ಇರಬೇಕು. ಇದರಿಂದ ಮಲಗಿದ ಕೂಡಲೇ ಮಗುನಂತೆ ನಿದ್ದೆ ಮಾಡಬಹುದು
0 ಅಂದ್ರೆ ಏನು?
ಹಾಸಿಗೆ ಮೇಲೆ ಮಲುಗುತ್ತಿದ್ದಂತೆ ಯಾವುದೇ ಚಿಂತೆ ಮಾಡದೇ ನಿದ್ದೆ ಮಾಡಬೇಕು. ಅಂದ್ರೆ ಮಲಗಿದ್ರೂ ಯಾವುದೇ ಕೆಲಸದತ್ತ ಯೋಚನೆ ಮಾಡಬಾರದು.
ಈ 10-3-2-1-0 ಸೂತ್ರ ಅನುಸರಿಸಿದ್ರೆ ಗಾಢ ನಿದ್ದೆಯನ್ನು ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. (Disclaimer:ಈ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವುದಿಲ್ಲ)