ಬಿರಿಯಾನಿ ಎಲೆಯನ್ನು ಸಾಕ್ಸ್‌ನಲ್ಲಿ ಇಟ್ಕೊಂಡು ಮಲಗಿದ್ರೆ ಏನಾಗುತ್ತೆ? ಮ್ಯಾಜಿಕ್ ರಹಸ್ಯ ರಿವೀಲ್
Bay Leaf: ಬಿರಿಯಾನಿ ಎಲೆಯನ್ನ ಆಹಾರ ಪದಾರ್ಥಕ್ಕೆ ರುಚಿಗಾಗ ಮತ್ತು ಸುವಾಸನೆಗಾಗಿ ಬಳಸೋದು ನಮ್ಮೆಲ್ಲರಿಗೂ ಗೊತ್ತು. ಆದರೆ ಇದು ನೋವು ಮತ್ತು ನಿದ್ರಾಹೀನತೆಯನ್ನು ನಿವಾರಣೆ ಮಾಡುತ್ತದೆ ಎಂಬ ಚರ್ಚೆ ನಡೀತಿದೆ. ನಿಮ್ಮ ಸಾಕ್ಸ್‌ಗಳಲ್ಲಿ ಈ ಎಲೆಯನ್ನ ಇಟ್ಕೊಂಡು ಮಲಗಿದ್ರೆ ಆಗುವ ಮ್ಯಾಜಿಕ್ ಏನು?

ಬಿರಿಯಾನಿ ಎಲೆ ಮಾಡುತ್ತೆ ಮ್ಯಾಜಿಕ್
ಬಿರಿಯಾನಿ ಎಲೆಯನ್ನ ಸಾಕ್ಸ್‌ನಲ್ಲಿ ಇಟ್ಟು ಮಲಗೋದ್ರಿಂದ ಮ್ಯಾಜಿಕ್ ನಡೆದುಬಿಡುತ್ತಾ? ಹೀಗೊಂದು ಪ್ರಶ್ನೆ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದೆ. ಆದರೆ ಬಿರಿಯಾನಿ ಎಲೆಯನ್ನ ಸಾಕ್ಸ್‌ನಲ್ಲಿ ಇಟ್ಕೊಂಡು ಮಲಗಿದ್ರೆ ಏನಾಗುತ್ತದೆ? ಏನು ಆಗಲ್ಲ ಅನ್ನೋದಕ್ಕೆ ಯಾವುದೇ ವೈಜ್ಞಾನಿ ಪುರಾವೆಗಳಿಲ್ಲ. ಆದರೆ..
ರೋಗ ನಿರೋಧಕ ಗುಣಗಳು
ಬಿರಿಯಾನಿ ಎಲೆಯು ಉರಿಯೂತ ನಿವಾರಿಸುತ್ತದೆ. ಆರೊಮ್ಯಾಟಿಕ್ ಎಣ್ಣೆಗಳು ಪಾದಗಳಲ್ಲಿನ ಬೆವರು ಗ್ರಂಥಿಗಳ ಮೂಲಕ ದೊಡ್ಡ ಪರಿಹಾರ ಸಿಗಲಿದೆ ಎಂದು ಹೇಳಾಗತ್ತಿದೆ. ಆದರೆ ಬಿರಿಯಾನಿ ಎಲೆಯಲ್ಲಿರುವ ರೋಗ ನಿರೋಧಕ ಗುಣಗಳು ಏನೇನು ಎಂದು ನೋಡೋದಾದರೆ.. ಉತ್ತಮ ನಿದ್ರೆ ಮತ್ತು ಮಾನಸಿಕ ಶಾಂತಿ, ನೋವು ನಿವಾರಣೆ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನ ಹೊಂದಿದೆ.
ಏನೆಲ್ಲ ಪ್ರಯೋಜನ?
- ನಮ್ಮ ಪಾದಗಳಲ್ಲಿ ಒತ್ತಡದ ಬಿಂದುಗಳು ಇರುತ್ತವೆ
- ಎಲೆಗಳಲ್ಲಿರುವ ಯುಜೆನಾಲ್ ಕಾಲಿನ ಆಯಾಸಕ್ಕೆ ಮದ್ದು
- ಇದು ನೂವು ಮತ್ತ ಉರಿಯುತವನ್ನು ಕಡಿಮೆ ಮಾಡುತ್ತದೆ
- ಬಿರಿಯಾನಿ ಎಲೆಗಳು ನೈಸರ್ಗಿಕ ಆರೊಮ್ಯಾಟಿಕ್ ಎಣ್ಣೆ ಹೊಂದಿದೆ
- ಅವುಗಳಿಂದ ಹೊರಹೊಮ್ಮುವ ಸುವಾಸನೆಯು ಮೆದುಳಿಗೆ ನೆಮ್ಮದಿ
- ಇದು ಬೇಗ ನಿದ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ
- ಆಂಟಿಮೈಕ್ರೊಬಿಯಲ್ ಪಾದಗಳಲ್ಲಿನ ಬ್ಯಾಕ್ಟೀರಿಯಾವನ್ನು ಓಡಿಸುತ್ತದೆ
ವಿಜ್ಞಾನ ಏನು ಹೇಳ್ತದೆ?
ಬಿರಿಯಾನಿ ಎಲೆಯನ್ನ ಪಾದಗಳಲ್ಲಿ ಇಟ್ಟು ಮಲಗಿ ಎಂದು ಜನ ಸಲಹೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ವೈಜ್ಞಾನಿಕವಾಗಿ ಯಾವುದೇ ಸಲಹೆ ಇಲ್ಲ. ಚರ್ಮದ ಮೂಲಕ ದೇಹವನ್ನು ಹೊಕ್ಕಿ ನಮ್ಮ ನೋವುಗಳನ್ನ ನಿವಾರಣೆ ಮಾಡುತ್ತದೆ ಅನ್ನೋದಕ್ಕೆ ಯಾವುದೇ ಸ್ಪಷ್ಟ ಅಧ್ಯಯನಗಳು ಇಲ್ಲ. ಆದರೆ ಬಿರಿಯಾನಿ ಎಲೆ ಸುವಾಸನೆಯನ್ನು ಪಸರಿಸುತ್ತದೆ. ಇದು ಮನಸ್ಸಿಗೆ ನೆಮ್ಮದಿಯನ್ನ ನೀಡುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನಗಳು ಇಲ್ಲ.
ಎಚ್ಚರಿಕೆ
ಬಿರಿಯಾನಿ ಎಲೆಗಳು ಯಾವತ್ತಿಗೂ ಹಾನಿಕಾರಕ ಅಲ್ಲ. ಆದರೆ ಅದನ್ನು ಬಳಸುವಾಗ ಎಚ್ಚರದಿಂದ ಇರಬೇಕು. ಕೆಲವರ ಚರ್ಮಗಳು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಅಲರ್ಜಿ ಸಮಸ್ಯೆ ಉಂಟಾಗಲೂ ಬಹುದು. ನಿದ್ರಾಹೀನತೆ, ನೋವು ಇಂತಹ ಸಮಸ್ಯೆಗಳಿಗೆ ಆದಷ್ಟು ವೈದ್ಯರನ್ನ ಸಂಪರ್ಕಿಸೋದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

