- Home
- Life
- ಸೆಲೆಬ್ರಿಟಿಗಳ ಕಲರ್ ಕಾಂಬಿನೇಷನ್ ಗುಟ್ಟು ರಿವೀಲ್: ಡ್ರೆಸ್ ಬಣ್ಣಕ್ಕೆ ತಕ್ಕಂತೆ ಈ ಕಲರ್ಗಳ ಅಕ್ಸಸರೀಸ್ ಧರಿಸಿ ನೋಡಿ
ಸೆಲೆಬ್ರಿಟಿಗಳ ಕಲರ್ ಕಾಂಬಿನೇಷನ್ ಗುಟ್ಟು ರಿವೀಲ್: ಡ್ರೆಸ್ ಬಣ್ಣಕ್ಕೆ ತಕ್ಕಂತೆ ಈ ಕಲರ್ಗಳ ಅಕ್ಸಸರೀಸ್ ಧರಿಸಿ ನೋಡಿ
ಸ್ಟೈಲಿಷ್ ಆಗಿ ಕಾಣಲು ಬಟ್ಟೆಯ ಬಣ್ಣಕ್ಕೆ ಹೊಂದುವ ಅಕ್ಸಸರೀಸ್ ಧರಿಸುವುದು ಮುಖ್ಯ. ಒಂದೇ ಬಣ್ಣದ ಬದಲು, ಕಾಂಟ್ರಾಸ್ಟ್ ಬಣ್ಣದ ಅಕ್ಸಸರೀಸ್ ನಿಮ್ಮ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಯಾವ ಬಣ್ಣದ ಡ್ರೆಸ್‌ಗೆ ಯಾವ ಬಣ್ಣದ ಅಕ್ಸಸರೀಸ್ ಸರಿಹೊಂದುತ್ತದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಯಾವ ಬಣ್ಣದ ಬಟ್ಟೆ ಯಾವ ರೀತಿ ಮ್ಯಾಚಿಂಗ್?
ಫ್ಯಾಷನ್ ಲೋಕದಲ್ಲಿ ತಿಳಿದಷ್ಟೂ ಕಡಿಮೆಯೇ. ಸ್ಟೈಲಿಷ್ ಆಗಿ ಕಾಣಿಸಬೇಕು ಎಂದರೆ ಉತ್ತಮ ಮೇಕಪ್, ಅದರ ಜೊತೆಗೆ ದುಬಾರಿ ಬೆಲೆ ಬಾಳುವ ಅಕ್ಸಸರೀಸ್ ಇದ್ದರೆ ಸಾಲದು. ಅಲ್ಲಿ ಮ್ಯಾಚಿಂಗ್ ಕೂಡ ಮ್ಯಾಟರ್ ಆಗುತ್ತದೆ. ಯಾವ ಬಣ್ಣದ ಬಟ್ಟೆಗೆ ಯಾವ ಬಣ್ಣದ ಸ್ಯಾಂಡಲ್, ಕಿವಿಯೋಲೆ, ಅಗತ್ಯ ಬಿದ್ದರೆ ಬಳೆ, ನೆಕ್ಪೀಸ್, ಬ್ಯಾಗ್... ಹೀಗೆ ಎಲ್ಲವೂ ಮ್ಯಾಚಿಂಗ್ ಇರಬೇಕು. ಬಟ್ಟೆಯ ಬಣ್ಣದ್ದೇ ಅಕ್ಸಸರೀಸ್ ಸುಂದರವಾಗಿ ಕಾಣುತ್ತದೆ ಎಂದುಕೊಂಡರೆ ಅದು ತಪ್ಪು. ಅದಕ್ಕೆ ತದ್ವಿರುದ್ಧವಾಗಿರುವ ಅಕ್ಸಸರೀಸ್ ಇದ್ದರೆ ನಿಮ್ ಲುಕ್ ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ. ಹಾಗಿದ್ದರೆ ಯಾವ ಬಣ್ಣದ ಡ್ರೆಸ್‌ಗೆ ಯಾವ ರೀತಿಯ ಅಕ್ಸಸರೀಸ್ ಇರಬೇಕು ಎನ್ನುವ ಬಗ್ಗೆ ಇಲ್ಲಿ ಫುಲ್ ಡಿಟೇಲ್ಸ್ ಕೊಡಲಾಗಿದೆ ನೋಡಿ.
ಲೈಟ್ ನೀಲಿ ಬಣ್ಣ
ಲೈಟ್ ನೀಲಿ ಬಣ್ಣದ ಬಟ್ಟೆ ಧರಿಸಿದರೆ, ಅದಕ್ಕೆ ನೀಲಿ ಬಣ್ಣದ ಅಕ್ಸಸರೀಸ್ ಓಕೆ. ಆದರೆ, ಪರ್ಫೆಕ್ಟ್ ಮ್ಯಾಚ್ ಬೇಕು ಎಂದರೆ ಡಾರ್ಕ್ ನೀಲಿ ಬಣ್ಣದ ಅಕ್ಸಸರೀಸ್ ಧರಿಸಿ ನಿಮ್ಮ ಲುಕ್ ನೋಡಿಕೊಳ್ಳಿ.
ಡಾರ್ಕ್ ಗ್ರೀನ್ ಬಣ್ಣ
ಡಾರ್ಕ್ ಗ್ರೀನ್ ಬಣ್ಣದ ಡ್ರೆಸ್ ಅಥವಾ ಸ್ಯಾರೀ ಧರಿಸಿದ್ದರೆ, ಅದೇ ಬಣ್ಣದ ಅಥವಾ ಪೀಚ್ ಬಣ್ಣದ ಅಕ್ಸಸರೀಸ್ ಚೆನ್ನಾಗಿ ಕಾಣುತ್ತದೆಯಾದರೂ, ಹಸಿರಿಗೆ ಬಂಗಾರದ ಬಣ್ಣದ ಅಕ್ಸಸರೀಸ್ ತುಂಬಾ ಚೆನ್ನಾಗಿ ಕಾಣಿಸುತ್ತದೆ.
ಪೀಚ್ ಕಲರ್
ಪೀಚ್ ಕಲರ್ ಡ್ರೆಸ್ ಇದ್ದರೆ, ಅದೇ ಬಣ್ಣದ ಅಕ್ಸಸರೀಸ್ ಓಕೆ. ಆದರೆ ಇದಕ್ಕಿಂತಲೂ ಸುಂದರವಾಗಿ ಕಾಣಿಸುವುದು ಬ್ರೌನ್ ಕಲರ್,
ಕಪ್ಪು ಬಣ್ಣದ ಡ್ರೆಸ್
ಕಪ್ಪು ಬಣ್ಣದ ಡ್ರೆಸ್ ಹಾಕಿದರೆ ಅದಕ್ಕೆ ಕಪ್ಪು ಬಣ್ಣದ ಬ್ಯಾಗ್, ಕಿವಿಯೋಲೆ, ಸ್ಯಾಂಡಲ್ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಆದರೆ ಪರ್ಫೆಕ್ಟ್ ಮ್ಯಾಚ್ ಬೇಕು ಎಂದು ಕಪ್ಪು ಬಣ್ಣಕ್ಕೆ ಮೆರೂನ್ ಕಲರ್ ಮ್ಯಾಚ್ ಮಾಡಿ ನೋಡಿ. ರಾಯಲ್ ಲುಕ್ ನಿಮ್ಮದಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

