How to Keep Snakes Away From Home: ಮನೆಯಲ್ಲಿ ಮಾಡೋ ಈ 5 ತಪ್ಪುಗಳಿಂದ ಹಾವುಗಳು ಓಡೋಡಿ ಬರ್ತವೆ
Signs of snakes in house Vastu: ಬಿಸಿಲು ಕೇವಲ ಮನುಷ್ಯರನ್ನಷ್ಟೇ ಅಲ್ಲ, ಮೂಕ ಪ್ರಾಣಿಗಳನ್ನೂ ಕಂಗಾಲಾಗಿಸುತ್ತಿದೆ. ಇದರಿಂದಾಗಿ ವಿಷಪೂರಿತ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಆದರೆ ಕೆಲವು ಮನೆಗಳಿಗೆ ಮಾತ್ರ ಹಾವುಗಳು ಏಕೆ ಬರುತ್ತವೆ? ತಜ್ಞರು ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ..
ವಿಷ ಜೀವಿಗಳ ಸಂಚಾರ ಹೆಚ್ಚು
ಬಿಸಿಲು ಹೆಚ್ಚಾದಂತೆ ಭೂಮಿಯ ಶಾಖವನ್ನು ತಡೆದುಕೊಳ್ಳಲಾರದೆ ವಿಷಪೂರಿತ ಜೀವಿಗಳು ಹೊರಬರುತ್ತಿವೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಮನೆಗಳ ಸುತ್ತಮುತ್ತ, ಕೆಲವೊಮ್ಮೆ ನೇರವಾಗಿ ಮನೆಗೆ ಹಾವುಗಳು ನುಗ್ಗುತ್ತಿರುವ ಘಟನೆಗಳು ಜನರನ್ನು ಆತಂಕಕ್ಕೀಡುಮಾಡುತ್ತಿವೆ. ಆದರೆ, ಹಾವುಗಳು ಮನೆಗೆ ಬರಲು ಕೇವಲ ನೈಸರ್ಗಿಕ ಕಾರಣಗಳಷ್ಟೇ ಅಲ್ಲದೆ, ನಾವು ಮಾಡುವ ಕೆಲವು ತಪ್ಪುಗಳು ಮತ್ತು ಅಶುಚಿತ್ವವೂ ಪ್ರಮುಖ ಕಾರಣಗಳೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಿ ನಕಾರಾತ್ಮಕ ಶಕ್ತಿಯು ಸಂಗ್ರಹವಾಗುತ್ತದೆಯೋ ಅಲ್ಲಿ ಇಂತಹ ವಿಷ ಜೀವಿಗಳ ಸಂಚಾರ ಹೆಚ್ಚಾಗಿರುತ್ತದೆ.

ವೇಸ್ಟ್ ಎಲ್ಲೆಂದರಲ್ಲಿ ಇಡಬೇಡಿ
ವಾಸ್ತು ಶಾಸ್ತ್ರದಲ್ಲಿ ಕೊಳೆ ಮತ್ತು ಕಸವನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಹಳೆಯ ಸಾಮಾನುಗಳು, ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು, ಒಡೆದ ವಸ್ತುಗಳು ಸಂಗ್ರಹವಾದರೆ ಅಲ್ಲಿ ಇಲಿಗಳು ತಮ್ಮ ವಾಸಸ್ಥಾನವನ್ನು ಮಾಡಿಕೊಳ್ಳುತ್ತವೆ. ಹಾವುಗಳಿಗೆ ಇಲಿಗಳು ಪ್ರಮುಖ ಆಹಾರ. ಇಲಿಗಳ ವಾಸನೆಯನ್ನು ಪತ್ತೆಹಚ್ಚುತ್ತಾ ಹಾವುಗಳು ಬಹಳ ಸುಲಭವಾಗಿ ನಿಮ್ಮ ಕೋಣೆಗಳಿಗೆ ಪ್ರವೇಶಿಸುತ್ತವೆ. ಆದ್ದರಿಂದ, ಸ್ಟೋರ್ ರೂಮ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಪ್ರಾಥಮಿಕ ಸೂತ್ರವಾಗಿದೆ.
ಜೇಡರ ಬಲೆಗಳು ತುಂಬಿರುವ ಮೂಲೆಗಳು
ಅನೇಕರು ಮನೆಯಲ್ಲಿನ ಜೇಡರ ಬಲೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ವಾಸ್ತು ಪ್ರಕಾರ, ಜೇಡರ ಬಲೆಗಳು ನಕಾರಾತ್ಮಕ ಶಕ್ತಿಯ ಕೇಂದ್ರಗಳಾಗಿವೆ. ಇವು ಮನೆಯಲ್ಲಿ ಇರುವುದರಿಂದ ಕುಟುಂಬ ಸದಸ್ಯರ ನಡುವೆ ಗೊಂದಲ ಮತ್ತು ಮಾನಸಿಕ ಶಾಂತಿ ಇಲ್ಲದಂತಾಗುತ್ತದೆ. ಹಾವುಗಳು ಯಾವಾಗಲೂ ಕತ್ತಲಾದ, ಯಾರೂ ಓಡಾಡದ ಸಂಕೀರ್ಣ ಪ್ರದೇಶಗಳಲ್ಲಿ ಅಡಗಿಕೊಳ್ಳಲು ಇಷ್ಟಪಡುತ್ತವೆ. ಜೇಡರ ಬಲೆಗಳು ತುಂಬಿರುವ ಮೂಲೆಗಳು ಹಾವುಗಳಿಗೆ ಸುರಕ್ಷಿತ ವಾಸಸ್ಥಾನಗಳಾಗಿ ಬದಲಾಗುತ್ತವೆ.
ತೇವಾಂಶವಿರುವ ಕತ್ತಲೆ ಮೂಲೆ
ವಾಸ್ತು ಪುರುಷನ ಸಿದ್ಧಾಂತದ ಪ್ರಕಾರ ಮನೆಗೆ 'ಈಶಾನ್ಯ'ವು ಶಿರಸ್ಸಿನಂತೆ (ತಲೆ). ಈ ದಿಕ್ಕು ಯಾವಾಗಲೂ ಪವಿತ್ರವಾಗಿ, ಖಾಲಿಯಾಗಿ ಮತ್ತು ಬೆಳಕಿನಿಂದ ಕೂಡಿರಬೇಕು. ಈಶಾನ್ಯ ಮೂಲೆಯಲ್ಲಿ ತೇವಾಂಶ ಹೆಚ್ಚಾಗಿರುವುದು, ಕಸ ಹಾಕುವುದು ಅಥವಾ ಅಲ್ಲಿ ಕತ್ತಲಾಗಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ತಂಪನ್ನು ಹುಡುಕುವ ಹಾವುಗಳು ಇಂತಹ ತೇವಾಂಶವಿರುವ ಕತ್ತಲೆ ಮೂಲೆಗಳನ್ನು ತಮ್ಮ ನಿವಾಸವಾಗಿ ಮಾಡಿಕೊಳ್ಳುತ್ತವೆ.
ಮನೆಯ ಆವರಣದಲ್ಲಿ ಇರಬಾರದ ಮರಗಳು
ವಾಸ್ತು ಪ್ರಕಾರ ಮನೆಗೆ ತೀರಾ ಸಮೀಪದಲ್ಲಿ ಹುಣಸೆ ಮರ ಅಥವಾ ಹತ್ತಿ ಗಿಡ ಇರುವುದು ಅಶುಭ. ಈ ಮರಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂಬುದು ಹಿರಿಯರ ನಂಬಿಕೆ. ಅಲ್ಲದೆ ಹುಣಸೆ ಮರದ ದಟ್ಟವಾದ ಕೊಂಬೆಗಳು ಮತ್ತು ಹತ್ತಿ ಗಿಡಗಳ ಸುತ್ತಮುತ್ತಲಿನ ಪರಿಸರ ಹಾವುಗಳಿಗೆ ಅಡಗಿಕೊಳ್ಳಲು ಅನುಕೂಲಕರ ವಾತಾವರಣವನ್ನು ಕಲ್ಪಿಸುತ್ತವೆ. ಮನೆಯ ಸುತ್ತಮುತ್ತ ಕಳೆ ಗಿಡಗಳು ಮತ್ತು ಪೊದೆಗಳು ಬೆಳೆಯದಂತೆ ಜಾಗರೂಕರಾಗಿರಬೇಕು.
ಬ್ರಹ್ಮಸ್ಥಾನದಲ್ಲಿ ಭಾರವಾದ ವಸ್ತುಗಳು
ಮನೆಯ ಮಧ್ಯಭಾಗವನ್ನು ಬ್ರಹ್ಮಸ್ಥಾನ ಎನ್ನಲಾಗುತ್ತದೆ. ಇದು ಆಕಾಶ ತತ್ವಕ್ಕೆ ಸಂಬಂಧಿಸಿದೆ. ಇಲ್ಲಿ ಗಾಳಿ ಮತ್ತು ಬೆಳಕು ಧಾರಾಳವಾಗಿ ಇರಬೇಕು. ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಭಾರವಾದ ಅಲಂಕಾರಿಕ ವಸ್ತುಗಳು ಅಥವಾ ತೂಕದ ಸಾಮಾನುಗಳನ್ನು ಇರಿಸಿದರೆ ಶಕ್ತಿಯ ಹರಿವು ನಿಂತುಹೋಗುತ್ತದೆ. ಇದು ಮನೆಯಲ್ಲಿ ಒಂದು ರೀತಿಯ ಭಾರ ಮತ್ತು ಶಾಖವನ್ನು ಸೃಷ್ಟಿಸುತ್ತದೆ. ಇಂತಹ ಸ್ಥಬ್ದ ಶಕ್ತಿ ಇರುವ ಕಡೆಗೆ ವಿಷಕಾರಿ ಜೀವಿಗಳು ಆಕರ್ಷಿತವಾಗುವ ಸಾಧ್ಯತೆ ಇದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಹಾವುಗಳು ಹತ್ತಿರ ಬರದಂತೆ ಏನು ಮಾಡಬೇಕು?
ಸದೃಢ ಸರ್ಪಗಂಧ - ತುಳಸಿ: ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಅಥವಾ ಆವರಣದಲ್ಲಿ ಸರ್ಪಗಂಧ ಗಿಡವನ್ನು ನೆಡಿರಿ. ಈ ಗಿಡದ ವಾಸನೆಗೆ ಹಾವುಗಳು ಹತ್ತಿರ ಬರುವುದಿಲ್ಲ ಎಂದು ನಂಬಲಾಗಿದೆ. ಹಾಗೆಯೇ ತುಳಸಿ ಗಿಡವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ವಿಷಕಾರಿ ಅನಿಲಗಳನ್ನು ತಡೆಯುತ್ತದೆ.
(Disclaimer: ಇಲ್ಲಿ ನೀಡಲಾದ ಮಾಹಿತಿಯು ವಾಸ್ತು ಶಾಸ್ತ್ರ, ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೀಡಲಾಗಿದೆ. ಈ ಮಾಹಿತಿ ಖಚಿತವಾಗಿ ಸತ್ಯ ಅಥವಾ ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಮಾಹಿತಿ ಎಂದು ಭಾವಿಸಬೇಡಿ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಿತ ತಜ್ಞರನ್ನು ಸಂಪರ್ಕಿಸುವುದು ಉತ್ತಮ.)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

