ಭಾರತದ ಟಾಪ್ 10 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ; ಮುಂಬೈ ನಂ.1, ಬೆಂಗಳೂರಿಗೆ ಎಷ್ಟನೇ ಸ್ಥಾನ?
ಹುರೂನ್ ಇಂಡಿಯಾ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಮತ್ತು ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ.ದೆಹಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿಗೆ ಎಷ್ಟನೇ ಸ್ಥಾನ?
ಹುರೂನ್ ಇಂಡಿಯಾ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಮತ್ತು ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ವರದಿ ಅನ್ವಯ, ಸದ್ಯ ಭಾರತದಲ್ಲಿ 259 ಶತಕೋಟ್ಯಧೀಶರಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತಿ ಮೂರು ವಾರಕ್ಕೆ ಇಬ್ಬರಂತೆ ಹೊಸಬರು ಶತಕೋಟ್ಯಧೀಶರಾಗಿದ್ದಾರೆ.
ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ. ಭಾರತದ ಅತೀ ಶ್ರೀಮಂತ ವ್ಯಕ್ತಿ, 8.08 ಲಕ್ಷ ಕೋಟಿ ರೂ. ಆಸ್ತಿಯ ಮಾಲೀಕ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಇಲ್ಲೇ ವಾಸಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಕೇಶ್ ಅಂಬಾನಿ ಆಸ್ತಿ ಶೇ.2.2ರಷ್ಟು ಏರಿಕೆಯಾಗಿದೆ
ದೆಹಲಿ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಅತೀ ಶ್ರೀಮಂತ ವ್ಯಕ್ತಿಗಳ ಲಿಸ್ಟ್‌ನಲ್ಲಿ ಶಿವ ನಾಡಾರ್ ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿಯಲ್ಲಿ ಅತೀ ಹೆಚ್ಚು ಕೋಟ್ಯಾಧೀಶರು ಇರೋ ಕಾರಣ ಇದು ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ.
ಬೆಂಗಳೂರು, ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ನಗರದಲ್ಲಿರುವ ದೈತ್ಯ ಟೆಕ್ ಕಂಪೆನಿಗಳು ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿವೆ.
ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪೈಕಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿನ ಸಣ್ಣ ಬಿಸಿನೆಸ್‌ಗಳು ಹಲವು ರಾಜ್ಯಗಳಲ್ಲಿ ವಿಸ್ತರಿಸಿದೆ. 67 ಕೋಟ್ಯಾಧೀಶರನ್ನು ಹೊಂದಿರುವ ಚೆನ್ನೈ ಸಿಟಿ ಐದನೇ ಸ್ಥಾನದಲ್ಲಿದೆ. ಮಹಿಳಾ ಉದ್ಯಮಿ ರಾಧಾ ವೆಂಬು, ಚೆನ್ನೈನಲ್ಲಿ ಅತೀ ಶ್ರೀಮಂತ ಉದ್ಯಮಿಯಾಗಿದ್ದಾರೆ.
55 ಕೋಟ್ಯಾಧೀಶರನ್ನು ಹೊಂದಿರುವ ಅಹಮದಾಬಾದ್ ಅತ್ಯಂತ ಹೆಚ್ಚು ಶತಕೋಟ್ಯಧೀಶರು ಇರುವ ನಗರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಈ ನಗರದಲ್ಲಿದ್ದಾರೆ. ಕೋಲ್ಕತ್ತಾ ಏಳನೇ ಸ್ಥಾನದಲ್ಲಿದೆ.
39 ಕೋಟ್ಯಾಧೀಶರನ್ನು ಹೊಂದಿರುವ ಪುಣೆ ಲಿಸ್ಟ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ. ಸೀರಂ ಇನ್ಸಿಟ್ಯೂಟ್‌ನ ಸೈರಸ್ ಎಸ್ ಪೂನಾವಾಲಾ ಪುಣೆ ನಗರದವರಾಗಿದ್ದಾರೆ. ಭಾರತದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಸೂರತ್ ಹಾಗೂ ಗುರಂಗಾವ್ ಸತತವಾಗಿ ಒಂಭತ್ತು ಹಾಗೂ ಹತ್ತನೇ ಸ್ಥಾನದಲ್ಲಿದೆ.