MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಫರ್ನಿಚರ್ ಚನ್ನಾಗಿರಬೇಕಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ, ಫಳ ಫಳ ಹೊಳೆಯುತ್ತೆ ನೋಡಿ

ಫರ್ನಿಚರ್ ಚನ್ನಾಗಿರಬೇಕಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ, ಫಳ ಫಳ ಹೊಳೆಯುತ್ತೆ ನೋಡಿ

Termite Removal Tips : ದುಬಾರಿ ಪೀಠೋಪಕರಣ ಖರೀದಿ ಮಾಡಿರ್ತೇವೆ. ಗೆದ್ದಲುಗಳು ಮೂಕ ಕೊಲೆಗಾರನಾಗಿ ತಮ್ಮ ಕೆಲ್ಸ ಶುರು ಮಾಡುತ್ವೆ. ಕೆಲವೇ ದಿನಗಳಲ್ಲಿ ನಿಮ್ಮ ಮನೆ ಸುಂದರ ಖುರ್ಚಿ, ಬೆಡ್ ಹಾಳಾಗುತ್ತೆ. ಈ ಗೆದ್ದಲು ಮನೆಗೆ ಬರ್ಬಾರದು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ. 

2 Min read
Author : Roopa Hegde
Published : May 18 2026, 02:59 PM IST
Share this Photo Gallery
  • FB
  • TW
  • Linkdin
  • Whatsapp
16
ಗೆದ್ದಲಿಗೆ ಮನೆ ಮದ್ದು
Image Credit : Asianet News

ಗೆದ್ದಲಿಗೆ ಮನೆ ಮದ್ದು

ಅಡುಗೆಮನೆಯಲ್ಲಿರುವ ಬಿಳಿ ವಿನೆಗರನ್ನು ನೀವು ಗೆದ್ದಲಿಗೆ ಬಳಕೆ ಮಾಡ್ಬಹುದು. ನೀವು ಎರಡು ನಿಂಬೆಹಣ್ಣನ್ನು ಕತ್ತರಿಸಿ ರಸ ತೆಗೆದುಕೊಳ್ಳಿ. ಅದಕ್ಕೆ ಒಂದು ಕಪ್ ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿ. ಗೆದ್ದಲು ಹುಳು ಕಾಣಿಸಿಕೊಳ್ಳುವ ಜಾಗದಲ್ಲಿ ಇಲ್ಲ ಅವು ಮಣ್ಣು ಬಿಡುವ ಜಾಗದಲ್ಲಿ ಇದನ್ನು ಸಿಂಪಡಿಸಿ. ಇದ್ರಲ್ಲಿರುವ ಆಮ್ಲೀಯ ಗುಣ ಗೆದ್ದಲು ಹುಳುವನ್ನು ಓಡಿಸುತ್ತದೆ. ವಿನೆಗರ್ ಮತ್ತು ನಿಂಬೆ ಮಿಶ್ರಣವು ಗೆದ್ದಲುಗಳನ್ನು ತೊಡೆದುಹಾಕಲು ಜನಪ್ರಿಯ ಮನೆಮದ್ದು. ನಿಯಮಿತ ಬಳಕೆ ಅತ್ಯಗತ್ಯ.

Add Asianetnews Kannada as a Preferred SourcegooglePreferred
26
 ಬೋರಿಕ್ ಆಮ್ಲ
Image Credit : Asianet News

ಬೋರಿಕ್ ಆಮ್ಲ

ಬೋರಿಕ್ ಆಮ್ಲ ಗೆದ್ದಲು ಹುಳು ಕೊಲ್ಲಲು ಅತ್ಯುತ್ತಮ ಮತ್ತು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಿಂದ ಬೋರಿಕ್ ಆಮ್ಲದ ಪುಡಿಯನ್ನು ಖರೀದಿಸಿ. ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ದಪ್ಪ ದ್ರಾವಣ ತಯಾರಿಸಿ. ಈ ದ್ರಾವಣವನ್ನು ಗೆದ್ದಲು ಬಾಧಿತ ಪ್ರದೇಶದ ಮೇಲೆ ಸಿಂಪಡಿಸಿ ಅಥವಾ ಬ್ರಷ್ ಮಾಡಿ. ಬೋರಿಕ್ ಆಮ್ಲ ಗೆದ್ದಲುಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಆದ್ರೆ ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಹಾನಿಯಾಗ್ಬಹುದು. ಹಾಗಾಗಿ ಅದನ್ನು ಎಚ್ಚರಿಕೆಯಿಂದ ಬಳಸಬೇಕು.

Related Articles

Related image1
ಮನೆಗೆ ಹೋಟೆಲ್‌ಗಿಂತಲೂ ಹೆಚ್ಚು ಐಷಾರಾಮಿ ಲುಕ್ ! PVC ಬದಲು ಇವುಗಳನ್ನೇ ಟ್ರೈ ಮಾಡಿ
Related image2
Creative Mannequin Planter ಹಳೆ ಡಮ್ಮಿಯಿಂದ ಮಾಡಿ ಗಾರ್ಡನ್‌ಗೆ ಹೊಸ ಲುಕ್ ಕೊಡುವ ಪ್ಲಾಂಟರ್!
36
 ಉಪ್ಪು ಮತ್ತು ಬಿಸಿ ನೀರು ಬಳಸಿ
Image Credit : Asianet News

ಉಪ್ಪು ಮತ್ತು ಬಿಸಿ ನೀರು ಬಳಸಿ

ಇದು ಅಗ್ಗದ ಮತ್ತು ಸುಲಭವಾದ ಪರಿಹಾರವಾಗಿದೆ. ಬಿಸಿ ನೀರಿಗೆ ಉಪ್ಪನ್ನು ಹಾಕಿ ಅದು ಸಂಪೂರ್ಣ ಕರಗುವವರೆಗೆ ಮಿಕ್ಸ್ ಮಾಡಿ. ನಂತ್ರ ಈ ಮಿಶ್ರಣವನ್ನು ಗೆದ್ದಲು ರಂಧ್ರಗಳಿಗೆ ಚುಚ್ಚಲು ಸಿರಿಂಜ್ ಅಥವಾ ಸ್ಪ್ರೇಗೆ ಹಾಕಿ, ಗೆದ್ದಲು ಕಾಣಿಸಿಕೊಳ್ಳುವ ಜಾಗಕ್ಕೆ ಹಾಕಿ.

46
ಬೇವಿನ ಎಣ್ಣೆ
Image Credit : Asianet News

ಬೇವಿನ ಎಣ್ಣೆ

ಬೇವಿನ ಎಣ್ಣೆ ಕೀಟಗಳನ್ನು ಓಡಿಸುವ ಸಾಮರ್ಥ್ಯ ಹೊಂದಿದೆ. ಗೆದ್ದಲು ಕಾಣಿಸಿಕೊಳ್ಳುವ ಜಾಗಕ್ಕೆ ಶುದ್ಧ ಬೇವಿನ ಎಣ್ಣೆಯನ್ನು ಸ್ಪ್ರೇ ಮಾಡಿ. ಇದ್ರಿಂದ ಗೆದ್ದಲುಗಳು ಓಡಿಹೋಗುತ್ತವೆ. ಬೇವಿನ ಎಣ್ಣೆ ಸಂಪೂರ್ಣ ಸುರಕ್ಷಿತ. ಇವು ಫರ್ನಿಚರ್ ಗೆ ಹಾನಿ ಮಾಡೋದಿಲ್ಲ. ನೀವು ಹತ್ತಿಯ ಸಹಾಯದಿಂದ ಕೂಡ ಬೇವಿನ ಎಣ್ಣೆಯನ್ನು ಹಚ್ಚಬಹುದು.

56
 ಈ ಬಗ್ಗೆ ಗಮನ ಇರಲಿ
Image Credit : Asianet News

ಈ ಬಗ್ಗೆ ಗಮನ ಇರಲಿ

ಆರಂಭದಲ್ಲಿ ಅಲ್ಪಸ್ವಲ್ಪ ಗೆದ್ದಲು ಕಾಣಿಸಿಕೊಂಡಾಗ ಈ ಮನೆ ಮದ್ದು ಪರಿಣಾಮಕಾರಿ. ಆದ್ರೆ ಅತಿಯಾದ ಗೆದ್ದಲು ದಾಳಿಯಿದ್ದಾಗ ನೀವು ತಜ್ಞರ ಸಲಹೆ ಪಡೆಯುವುದು ಸೂಕ್ತ. ಮನೆಯ ತೇವಾಂಶ, ಮರದ ವಸ್ತುಗಳು ಮತ್ತು ಕಳಪೆ ಗಾಳಿ ಗೆದ್ದಲು ಬಾಧೆಗೆ ಮುಖ್ಯ ಕಾರಣಗಳಾಗಿವೆ. ಒದ್ದೆಯಾದ ಪ್ರದೇಶಗಳಲ್ಲಿ ಗೆದ್ದಲುಗಳು ಬೆಳೆಯುತ್ತವೆ.

66
ಹೀಗೆ ರಕ್ಷಣೆ ಮಾಡಿ
Image Credit : Asianet News

ಹೀಗೆ ರಕ್ಷಣೆ ಮಾಡಿ

ಮರದ ಪೀಠೋಪಕರಣಗಳನ್ನು ಒಣಗಿಸಿ ಮತ್ತು ಸ್ವಚ್ಛವಾಗಿಡಿ. ನಿಯಮಿತವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ ಮತ್ತು ತೇವಾಂಶದಿಂದ ರಕ್ಷಿಸಿ. ಇದು ಗೆದ್ದಲು ಬಾಧೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ

Latest Videos
Recommended Stories
Recommended image1
ಥಿನ್ ಬಾರ್ಡರ್‌ನ ಸೀರೆ ಡಿಸೈನ್‌; ನಿಮ್ಮದಾಗುತ್ತೆ ನಟಿಯರ ಸೂಪರ್ ಸ್ಟೈಲಿಶ್ ಲುಕ್
Recommended image2
Creative Mannequin Planter ಹಳೆ ಡಮ್ಮಿಯಿಂದ ಮಾಡಿ ಗಾರ್ಡನ್‌ಗೆ ಹೊಸ ಲುಕ್ ಕೊಡುವ ಪ್ಲಾಂಟರ್!
Recommended image3
Davanagere: RSI ಮೋಸ ಆರೋಪಕ್ಕೆ ಟ್ಚಿಸ್ಟ್, ಖಾಕಿ ಜೊತೆಯೇ ಯುವತಿಯ ರಂಗಿನಾಟ! ಪೊಲೀಸರೇ ಇವಳ ಟಾರ್ಗೆಟ್?
Related Stories
Recommended image1
ಮನೆಗೆ ಹೋಟೆಲ್‌ಗಿಂತಲೂ ಹೆಚ್ಚು ಐಷಾರಾಮಿ ಲುಕ್ ! PVC ಬದಲು ಇವುಗಳನ್ನೇ ಟ್ರೈ ಮಾಡಿ
Recommended image2
Creative Mannequin Planter ಹಳೆ ಡಮ್ಮಿಯಿಂದ ಮಾಡಿ ಗಾರ್ಡನ್‌ಗೆ ಹೊಸ ಲುಕ್ ಕೊಡುವ ಪ್ಲಾಂಟರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved