ಸ್ಮೃತಿ ಮಂಧಾನಾರನ್ನು ವರಿಸಲಿರುವ ಪಲಾಶ್ ಮುಚ್ಚಲ್ ಒಟ್ಟು ಆಸ್ತಿ ಎಷ್ಟು?
Palash Muchhal net worth: ಪಲಾಶ್ ಮುಚ್ಚಲ್ ಏನು ಮಾಡುತ್ತಾರೆ ಮತ್ತು ಅವರ ನಿವ್ವಳ ಮೌಲ್ಯ ಎಷ್ಟು ಎಂದು ತಿಳಿಯಲು ಎಲ್ಲರಿಗೂ ಕುತೂಹಲವಿದೆ. ಹಾಗಾಗಿ ಇಂದು ಪಲಾಶ್ ಮುಚ್ಚಲ್ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ.

ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸ್ಟಾರ್ ಕ್ರಿಕೆಟರ್
ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ಅವರನ್ನು ಚಲನಚಿತ್ರ ನಿರ್ಮಾಪಕ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ವರಿಸಲಿದ್ದಾರೆ. ಸ್ಮೃತಿ ಮಂಧಾನಾ- ಪಲಾಶ್ ಮುಚ್ಚಲ್ ಅವರ ವಿವಾಹಪೂರ್ವ ಸಮಾರಂಭಗಳ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದು, ಈ ಜೋಡಿ ಇಂದು (ನವೆಂಬರ್ 23) ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.
ಪಲಾಶ್ ಮುಚ್ಚಲ್ ಹಿನ್ನೆಲೆಯೇನು?
ಈ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನ ಅವರ ಪತಿ ಪಲಾಶ್ ಮುಚ್ಚಲ್ ಏನು ಮಾಡುತ್ತಾರೆ ಮತ್ತು ಅವರ ನಿವ್ವಳ ಮೌಲ್ಯ ಎಷ್ಟು ಎಂದು ತಿಳಿಯಲು ಎಲ್ಲರಿಗೂ ಕುತೂಹಲವಿದೆ. ಹಾಗಾಗಿ ಇಂದು ಪಲಾಶ್ ಮುಚ್ಚಲ್ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ.
ಬಾಲಿವುಡ್‌ನ ಪ್ರಸಿದ್ಧ ಗಾಯಕಿ
ಪಲಾಶ್ ಮುಚ್ಚಲ್ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು. ಇವರು ಸಂಗೀತ ಕುಟುಂಬದಿಂದ ಬಂದವರು. ಇವರ ಸಹೋದರಿ ಪಾಲಕ್ ಮುಚ್ಚಲ್ ಬಾಲಿವುಡ್‌ನ ಪ್ರಸಿದ್ಧ ಗಾಯಕಿ. "ಪ್ರೇಮ್ ರತನ್ ಧನ್ ಪಾಯೋ" ನಂತಹ ಹಾಡುಗಳನ್ನು ಹಾಡಿದ್ದಾರೆ.
ವೃತ್ತಿಜೀವನ ಪ್ರಾರಂಭ
ಇನ್ನು ಪಲಾಶ್ ಬಗ್ಗೆ ಹೇಳುವುದಾದರೆ ಇವರು 2014 ರಲ್ಲಿ "ಧಿಷ್ಕಿಯೋನ್" ಚಿತ್ರದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ನಂತರ 'ಭೂತ್ನಾಥ್ ರಿಟರ್ನ್ಸ್’, 'ಪಾರ್ಟಿ ತೋ ಬಂತಿ ಹೈ' ಮತ್ತು 'ತು ಹಿ ಹೈ ಆಶಿಕಿ' ನಂತಹ ಸೂಪರ್‌ಹಿಟ್ ಹಾಡುಗಳಿಗೆ ಸಂಗೀತ ಸಂಯೋಜಿಸಿದರು.
ಚಲನಚಿತ್ರಗಳಿಗೆ ನಿರ್ದೇಶನ
ಪಲಾಶ್ ಸಂಗೀತದಲ್ಲಿ ಮಾತ್ರವಲ್ಲದೆ, ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. "ಖೇಲೆ ಹಮ್ ಜೀ ಜಾನ್ ಸೇ" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಹಲವಾರು ಮ್ಯುಸಿಕ್ ವಿಡಿಯೋ ಮತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಪಲಾಶ್ ಮುಚ್ಛಲ್ ನಿವ್ವಳ ಮೌಲ್ಯ
ಸಿಯಾಸತ್ ಡೈಲಿ.ಕಾಮ್ ವರದಿಗಳ ಪ್ರಕಾರ, ಪಲಾಶ್ ಮುಚ್ಚಲ್ ಅವರ ನಿವ್ವಳ ಮೌಲ್ಯ ಸುಮಾರು 20 ರಿಂದ 41 ಕೋಟಿ ರೂ. ಸಂಗೀತ ಸಂಯೋಜನೆಯ ಜೊತೆಗೆ ಇವರು ಸಿನಿಮಾ ಪ್ರಾಜೆಕ್ಟ್ಸ್ ಮತ್ತು ಲೈವ್ ಕಾರ್ಯಕ್ರಮಗಳಿಂದಲೂ ಹಣ ಗಳಿಸುತ್ತಾರೆ.
50 ರಿಂದ 75 ಕೋಟಿ ರೂ.
ಸ್ಮೃತಿ ಮಂಧಾನ- ಪಲಾಶ್ ಮುಚ್ಚಲ್ ಪ್ರೇಮಕಥೆಯ ಬಗ್ಗೆ ಹೇಳುವುದಾದರೆ ಇಬ್ಬರೂ 2019 ರಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಮದುವೆ ಆಗಲಿದ್ದಾರೆ. ಪಲಾಶ್ ಮತ್ತು ಸ್ಮೃತಿ ಮಂಧಾನ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 50 ರಿಂದ 75 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

