MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Clothes ironing tips: ಐರನ್ ಬಾಕ್ಸ್, ಕರೆಂಟ್ ಇಲ್ಲದೆಯೂ ಬಟ್ಟೆಯ ಸುಕ್ಕು ತೆಗೆಯಲು ಚಿಕ್ಕ ಟವಲ್ ಸಾಕು

Clothes ironing tips: ಐರನ್ ಬಾಕ್ಸ್, ಕರೆಂಟ್ ಇಲ್ಲದೆಯೂ ಬಟ್ಟೆಯ ಸುಕ್ಕು ತೆಗೆಯಲು ಚಿಕ್ಕ ಟವಲ್ ಸಾಕು

Clothes ironing tips: ಕೇವಲ ಐದು ನಿಮಿಷದಲ್ಲಿ ಬಟ್ಟೆಯ ಸುಕ್ಕುಗಳನ್ನು ಮ್ಯಾಜಿಕ್‌ನಂತೆ ಮಾಯ ಮಾಡಿ, ಹೊಸದರಂತೆ ಫ್ರೆಶ್ ಆಗಿ ಕಾಣುವಂತೆ ಮಾಡುವ ಕೆಲವು ಸರಳ ಹಾಗೂ ಸ್ಮಾರ್ಟ್ ಎಮರ್ಜೆನ್ಸಿ ಟ್ರಿಕ್ಸ್ ಇಲ್ಲಿದೆ ನೋಡಿ.

2 Min read
Author : Ashwini HR
Published : Jul 03 2026, 09:36 PM IST
Share this Photo Gallery
  • FB
  • TW
  • Linkdin
  • Whatsapp
16
ಇದಕ್ಕೂ ಉಂಟು ಮನೆಮದ್ದು
Image Credit : AI Image

ಇದಕ್ಕೂ ಉಂಟು ಮನೆಮದ್ದು

ಇದಕ್ಕೂ ಉಂಟು ಮನೆಮದ್ದು
ಇಂಪಾರ್ಟ್‌ಟೆಂಟ್ ಮೀಟಿಂಗ್, ಆಫೀಸ್ ಅಥವಾ ಯಾವುದಾದರೂ ಸಮಾರಂಭಕ್ಕೆ ಹೊರಡುವ ಗಡಿಬಿಡಿಯಲ್ಲಿ ನಮಗೆ ಇಷ್ಟವಾದ ಬಟ್ಟೆ ಸುಕ್ಕಾಗಿರುವುದನ್ನು (Wrinkles) ನೋಡಿದಾಗ ಎಂಥವರಿಗೂ ಗಾಬರಿಯಾಗುತ್ತದೆ. ಆ ಸಮಯದಲ್ಲಿ ಮನೆಯಲ್ಲಿ ಐರನ್ ಬಾಕ್ಸ್ ಲಭ್ಯವಿಲ್ಲದಿದ್ದರೆ ಅಥವಾ ಕರೆಂಟ್ ಹೋದರೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ. ಆದರೆ ಚಿಂತಿಸಬೇಡಿ, ಯಾವುದೇ ಇಸ್ತ್ರಿ ಪೆಟ್ಟಿಗೆಯ ಅವಶ್ಯಕತೆಯಿಲ್ಲದೆ ಕೇವಲ ಐದು ನಿಮಿಷಗಳಲ್ಲಿ ಬಟ್ಟೆಯ ಸುಕ್ಕುಗಳನ್ನು ಹೋಗಲಾಡಿಸಿ ಬಟ್ಟೆಯನ್ನು ಫ್ರೆಶ್ ಆಗಿರಿಸುವ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಟ್ಟೆ ಸುಕ್ಕಾಗಲು ಕಾರಣವೇನು?
Image Credit : Asianet News

ಬಟ್ಟೆ ಸುಕ್ಕಾಗಲು ಕಾರಣವೇನು?

ಬಟ್ಟೆ ಸುಕ್ಕಾಗಲು ಕಾರಣವೇನು?
ಬಟ್ಟೆಗಳನ್ನು ಅಲ್ಮೇರಾದಲ್ಲಿ ದೀರ್ಘಕಾಲ ಒಂದರ ಮೇಲೊಂದು ಇಟ್ಟಾಗ, ಪ್ರಯಾಣದ ಸಮಯದಲ್ಲಿ ಸೂಟ್‌ಕೇಸ್‌ನಲ್ಲಿ ಒತ್ತಿ ಇರಿಸಿದಾಗ ಅಥವಾ ತೊಳೆದ ನಂತರ ಸರಿಯಾಗಿ ಒಣಗಿಸದಿದ್ದಾಗ ಸುಕ್ಕುಗಳು ಉಂಟಾಗುತ್ತವೆ. ಬಟ್ಟೆಯಲ್ಲಿನ ನಾರುಗಳು ಒರಟಾಗುವುದು ಅಥವಾ ಮಡಚಿಕೊಳ್ಳುವುದು ಇದಕ್ಕೆ ಕಾರಣ. ಸ್ವಲ್ಪ ಶಾಖ, ತೇವಾಂಶ ಅಥವಾ ಸರಿಯಾದ ರೀತಿಯಲ್ಲಿ ಅದನ್ನು ಎಳೆಯುವ ಮೂಲಕ ಈ ನಾರುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತಂದು ಸುಕ್ಕನ್ನು ಹೋಗಲಾಡಿಸಬಹುದು.

Related Articles

Related image1
ಒರೆಸೋದು, ಕ್ಲೀನ್ ಮಾಡೋದು ಬೇಡ.. ವಾಸನೆ ನಿವಾರಿಸಲು ಇದನ್ನ ಫ್ರಿಡ್ಜ್‌ನಲ್ಲಿಡಿ
Related image2
ಚಪಾತಿ ತವಾಗೆ ಅಂಟಿಕೊಂಡು ಒಂದೇ ಬದಿ ಸೀದುಹೋಗುತ್ತಿದ್ರೆ ಈ ಟ್ರಿಕ್ ಬಳಸಿ, ಹೇಗೆ ಉಬ್ಬಿ ಬರುತ್ತೆ ನೋಡಿ
36
ಐರನ್ ಬಾಕ್ಸ್ ಇಲ್ಲದೆ ಸುಕ್ಕು ತೆಗೆಯಲು 3 ಸುಲಭ ಮಾರ್ಗಗಳು
Image Credit : Asianet News

ಐರನ್ ಬಾಕ್ಸ್ ಇಲ್ಲದೆ ಸುಕ್ಕು ತೆಗೆಯಲು 3 ಸುಲಭ ಮಾರ್ಗಗಳು

ಐರನ್ ಬಾಕ್ಸ್ ಇಲ್ಲದೆ ಸುಕ್ಕು ತೆಗೆಯಲು 3 ಸುಲಭ ಮಾರ್ಗಗಳು
1. ಬಿಸಿ ನೀರಿನ ಹಬೆಯ ಪ್ರಯೋಗ
ಬಿಸಿ ನೀರಿನಿಂದ ಸ್ನಾನ ಮಾಡುವಾಗ ಈ ವಿಧಾನವನ್ನು ಸುಲಭವಾಗಿ ಬಳಸಬಹುದು. ಸುಕ್ಕಾಗಿರುವ ಬಟ್ಟೆಯನ್ನು ಹ್ಯಾಂಗರ್‌ಗೆ ಹಾಕಿ ಬಾತ್‌ರೂಮ್ ಒಳಗೆ ಸ್ವಲ್ಪ ದೂರದಲ್ಲಿ ನೇತುಹಾಕಿ. ನೀವು ಬಿಸಿ ನೀರಿನಿಂದ ಸ್ನಾನ ಮಾಡುವಾಗ ಉತ್ಪತ್ತಿಯಾಗುವ ಹಬೆಯು ಬಟ್ಟೆಯ ಒರಟಾದ ನಾರುಗಳನ್ನು ಮೃದುಗೊಳಿಸುತ್ತದೆ. ಹತ್ತು ನಿಮಿಷಗಳ ನಂತರ ಬಟ್ಟೆಯನ್ನು ಹೊರಗೆ ತೆಗೆದು, ಕೈಗಳಿಂದ ಮೆಲ್ಲಗೆ ಕೆಳಕ್ಕೆ ಎಳೆದು ಒಣಗಿಸಿದರೆ ಸುಕ್ಕುಗಳು ಮಾಯವಾಗುತ್ತವೆ.

46
ಹೇರ್ ಡ್ರೈಯರ್ ಮ್ಯಾಜಿಕ್
Image Credit : amazon.in

ಹೇರ್ ಡ್ರೈಯರ್ ಮ್ಯಾಜಿಕ್

2. ಹೇರ್ ಡ್ರೈಯರ್ ಮ್ಯಾಜಿಕ್
ಬಹುತೇಕ ಮನೆಗಳಲ್ಲಿ ಹೇರ್ ಡ್ರೈಯರ್ ಇದ್ದೇ ಇರುತ್ತದೆ. ತುರ್ತು ಸಮಯದಲ್ಲಿ ಇದು ಐರನ್ ಬಾಕ್ಸ್‌ನಂತೆಯೇ ಕೆಲಸ ಮಾಡುತ್ತದೆ. ಮೊದಲು ಸುಕ್ಕಾಗಿರುವ ಬಟ್ಟೆಯ ಮೇಲೆ ಸ್ವಲ್ಪ ನೀರು ಸಿಂಪಡಿಸಿ ತೇವಗೊಳಿಸಿ. ನಂತರ ಹೇರ್ ಡ್ರೈಯರ್ ಆನ್ ಮಾಡಿ, ಅದರ ಬಿಸಿ ಗಾಳಿಯನ್ನು ಸುಕ್ಕಾಗಿರುವ ಜಾಗಕ್ಕೆ ತೋರಿಸುತ್ತಾ ಕೈಗಳಿಂದ ಬಟ್ಟೆಯನ್ನು ಸಮನಾಗಿ ಮಾಡಿ. ಗಮನಿಸಿ, ಡ್ರೈಯರ್ ಅನ್ನು ಬಟ್ಟೆಗೆ ಅತಿಯಾಗಿ ಹತ್ತಿರ ಹಿಡಿಯಬೇಡಿ, ಬಟ್ಟೆ ಸುಡುವ ಅಪಾಯವಿರುತ್ತದೆ.

56
ತೇವಾಂಶವಿರುವ ಟವಲ್ ವಿಧಾನ
Image Credit : chatgpt

ತೇವಾಂಶವಿರುವ ಟವಲ್ ವಿಧಾನ

3. ತೇವಾಂಶವಿರುವ ಟವಲ್ ವಿಧಾನ
ಬಟ್ಟೆಯ ಮೇಲಿರುವ ಸಣ್ಣಪುಟ್ಟ ಸುಕ್ಕುಗಳನ್ನು ಹೋಗಲಾಡಿಸಲು ಈ ವಿಧಾನ ಉತ್ತಮ. ಸುಕ್ಕಾಗಿರುವ ಶರ್ಟ್ ಅಥವಾ ಬಟ್ಟೆಯನ್ನು ಸಮತಟ್ಟಾದ ಮೇಜಿನ ಮೇಲೆ ಹರಡಿ. ನಂತರ ಒಂದು ಸ್ವಚ್ಛವಾದ ಕಾಟನ್ ಟವಲ್ ಅನ್ನು ನೀರಿನಲ್ಲಿ ನೆನೆಸಿ, ನೀರನ್ನು ಪೂರ್ತಿಯಾಗಿ ಹಿಂಡಿ ತೆಗೆಯಿರಿ. ಈ ತೇವಾಂಶವಿರುವ ಟವಲ್ ಅನ್ನು ಬಟ್ಟೆಯ ಸುಕ್ಕಾಗಿರುವ ಭಾಗದ ಮೇಲೆ ಹಾಕಿ ಕೈಯಿಂದ ಜೋರಾಗಿ ಒತ್ತಿ. ನಂತರ ಬಟ್ಟೆಯನ್ನು ಹ್ಯಾಂಗರ್‌ಗೆ ಹಾಕಿ ಫ್ಯಾನ್ ಕೆಳಗೆ ಒಣಗಿಸಿ. ಇದು ಕಾಟನ್ ಬಟ್ಟೆಗಳಿಗೆ ಹೆಚ್ಚು ಸೂಕ್ತ.

66
ಬಟ್ಟೆ ಒಣಗಿಸುವಾಗ ವಹಿಸಬೇಕಾದ ಜಾಗ್ರತೆ
Image Credit : Getty

ಬಟ್ಟೆ ಒಣಗಿಸುವಾಗ ವಹಿಸಬೇಕಾದ ಜಾಗ್ರತೆ

ಬಟ್ಟೆ ಒಣಗಿಸುವಾಗ ವಹಿಸಬೇಕಾದ ಜಾಗ್ರತೆ
ಬಟ್ಟೆಗಳನ್ನು ತೊಳೆದ ತಕ್ಷಣ ಹಾಗೆಯೇ ಒಣಗಿಸುವ ಬದಲು, ಎರಡು-ಮೂರು ಬಾರಿ ಜೋರಾಗಿ ಕೊಡವಿ (Shake) ನಂತರ ಒಣಗಿಸಿದರೆ ಅರ್ಧದಷ್ಟು ಸುಕ್ಕುಗಳು ಅಲ್ಲಿಯೇ ಮಾಯವಾಗುತ್ತವೆ. ಬಟ್ಟೆಗಳನ್ನು ಹ್ಯಾಂಗರ್ ಬಳಸಿ ಒಣಗಿಸುವುದು ಇನ್ನೂ ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Why Ships Float: ಲಕ್ಷಾಂತರ ಟನ್ ತೂಕದ ಹಡಗುಗಳು ಸಮುದ್ರದಲ್ಲಿ ಹೇಗೆ ತೇಲುತ್ತವೆ? ಇಲ್ಲಿದೆ ಅಚ್ಚರಿಯ ರಹಸ್ಯ!
Recommended image2
Beard Hygiene: ಪುರುಷರೇ, ಗಡ್ಡ ಬಿಡೋದು ಅಶುದ್ಧ ಎಂದುಕೊಂಡಿದ್ದೀರಾ? ವಿಜ್ಞಾನ ಹೇಳಿದ್ದು ಕೇಳಿದ್ರೆ ಅಚ್ಚರಿಪಡ್ತೀರಾ!
Recommended image3
ಪಾತ್ರೆಗಳಿಗೂ ಇದೆ ಎಕ್ಸ್‌ಪೈರಿ ಡೇಟ್ … ಒಂದು ಪಾತ್ರೆನಾ ಎಷ್ಟು ಸಮಯ ಬಳಕೆ ಮಾಡಬಹುದು?
Related Stories
Recommended image1
ಒರೆಸೋದು, ಕ್ಲೀನ್ ಮಾಡೋದು ಬೇಡ.. ವಾಸನೆ ನಿವಾರಿಸಲು ಇದನ್ನ ಫ್ರಿಡ್ಜ್‌ನಲ್ಲಿಡಿ
Recommended image2
ಚಪಾತಿ ತವಾಗೆ ಅಂಟಿಕೊಂಡು ಒಂದೇ ಬದಿ ಸೀದುಹೋಗುತ್ತಿದ್ರೆ ಈ ಟ್ರಿಕ್ ಬಳಸಿ, ಹೇಗೆ ಉಬ್ಬಿ ಬರುತ್ತೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved