Kannada

ಫ್ರಿಡ್ಜ್ ಫ್ರೆಶ್ ಆಗಿರ್ಬೇಕಾ?

ಫ್ರಿಡ್ಜ್ ತೆರೆದಾಗ ಕೆಟ್ಟ ವಾಸನೆ ಬರುತ್ತಿದೆಯೇ? ಈ ಸುಲಭ ಹಾಗೂ ನೈಸರ್ಗಿಕ ವಿಧಾನ ಅನುಸರಿಸಿ ನಿಮ್ಮ ಫ್ರಿಡ್ಜ್ ಅನ್ನು ಮತ್ತೆ ಫ್ರೆಶ್ ಆಗಿ ಮಾಡಿ.

Kannada

ಬೇಕಿಂಗ್ ಸೋಡಾ

ಒಂದು ಸಣ್ಣ ಬಟ್ಟಲಿನಲ್ಲಿ 2-3 ಚಮಚ ಬೇಕಿಂಗ್ ಸೋಡಾ ಹಾಕಿ ಫ್ರಿಡ್ಜ್‌ನ ಮೂಲೆಯಲ್ಲಿ ಇಡಿ. ಇದು ಫ್ರಿಡ್ಜ್‌ನಲ್ಲಿರುವ ಎಲ್ಲಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ. ತಿಂಗಳಿಗೊಮ್ಮೆ ಸೋಡಾವನ್ನು ಬದಲಿಸಲು ಮರೆಯಬೇಡಿ.

Image credits: Freepik
Kannada

ಚಾರ್ಕೋಲ್

ಇದು ವಾಸನೆಯನ್ನು ಹೀರಿಕೊಳ್ಳಲು ಪರಿಣಾಮಕಾರಿ. ಆಕ್ಟಿವೇಟೆಡ್ ಚಾರ್ಕೋಲ್‌ನ ಕೆಲವು ತುಂಡುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಬಿಡಿ. ಕೆಲವೇ ಗಂಟೆಗಳಲ್ಲಿ ಇದು ತನ್ನ ಪ್ರಭಾವ ತೋರಲು ಆರಂಭಿಸುತ್ತದೆ.

Image credits: AI Image
Kannada

ವಿನೆಗರ್

ವಿನೆಗರ್ ಬ್ಯಾಕ್ಟೀರಿಯಾ ಮತ್ತು ಬೂಸ್ಟನ್ನ ನಾಶಪಡಿಸುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಬಿಳಿ ವಿನೆಗರ್ ಹಾಕಿ ಫ್ರಿಡ್ಜ್‌ನಲ್ಲಿಡಿ. ಅಥವಾ ಫ್ರಿಡ್ಜ್ ಸ್ವಚ್ಛಗೊಳಿಸುವಾಗ ನೀರಿನಲ್ಲಿ ವಿನೆಗರ್ ಬೆರೆಸಿ ಶೆಲ್ಫ್‌ ಒರೆಸಿ.

Image credits: social media
Kannada

ನಿಂಬೆಹಣ್ಣು

ನಿಂಬೆಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ, ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಫ್ರಿಡ್ಜ್‌ನ ಶೆಲ್ಫ್‌ನಲ್ಲಿ ಇಡಿ. ಇದು ಫ್ರಿಡ್ಜ್‌ನಲ್ಲಿರುವ ದುರ್ವಾಸನೆ ಹೋಗಲಾಡಿಸಿ ಇಡೀ ಫ್ರಿಡ್ಜ್ ಘಮಘಮಿಸುವಂತೆ ಮಾಡುತ್ತದೆ.

Image credits: AI Meta
Kannada

ಕಾಫಿ ಪುಡಿ

ನಿಮಗೆ ಕಾಫಿಯ ವಾಸನೆ ಇಷ್ಟವಾದರೆ, ಉಪಯೋಗಿಸಿದ ಅಥವಾ ಫ್ರೆಶ್ ಕಾಫಿ ಪುಡಿಯನ್ನು ಒಂದು ಪ್ಲೇಟ್‌ನಲ್ಲಿ ಹರಡಿ 24 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಡಿ. ಇದು ಕಡುವಾದ ಕೆಟ್ಟ ವಾಸನೆಯನ್ನೂ ತಕ್ಷಣ ಹೋಗಲಾಡಿಸುತ್ತದೆ.

Image credits: Getty

ರಾಯಲ್ ಎಥ್ನಿಕ್ ಲುಕ್‌ಗಾಗಿ ಧರಿಸಿ ಕೋಲ್ಹಾಪುರಿ ಕಾಲ್ಗೆಜ್ಜೆಗಳು

Gen Z ಯುವಜನರ ಹೊಸ ಕ್ರೇಝ್: ಕೃಷ್ಣನಿಂದ ಸ್ಫೂರ್ತಿ ಪಡೆದ 7 ಸಿಲ್ವರ್ ಜ್ಯುವೆಲ್ಲರಿ ಡಿಸೈನ್ಸ್ ನೋಡಿ

Apple Earring: ಆ್ಯಪಲ್ ಶೇಪ್‌ನ 7 ಫಂಕಿ ಸ್ಟಡ್ ಇಯರಿಂಗ್ಸ್ ಡಿಸೈನ್ಸ್ ಇಲ್ಲಿವೆ ನೋಡಿ

Hair Care: ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಬಲಪಡಿಸುವ 6 ಸೂಪರ್‌ಫುಡ್‌ಗಳು!