Rental Rules: ಬಾಡಿಗೆ ಮನೆಯಲ್ಲಿ ಏನಾದ್ರೂ ಹಾಳಾದ್ರೆ ದುಡ್ಡು ಕೊಡೋರು ಯಾರು? ಮಾಲೀಕನಾ-ಬಾಡಿಗೆದಾರನಾ?
Landlord vs tenant repairs: ಬಾಡಿಗೆ ಮನೆಯಲ್ಲಿ ನಲ್ಲಿ ಹಾಳಾಗೋದು, ಕರೆಂಟ್ ಸಮಸ್ಯೆ, ಗೋಡೆಗಳಲ್ಲಿ ಬಿರುಕು, ಪೈಪ್ ಲೀಕ್ ಆಗೋದು ಸಾಮಾನ್ಯ. ಇಂಥಾ ಟೈಮ್‌ನಲ್ಲಿ ರಿಪೇರಿ ಖರ್ಚನ್ನು ಯಾರು ಕೊಡಬೇಕು? ಮನೆ ಮಾಲೀಕನಾ ಅಥವಾ ಬಾಡಿಗೆದಾರನಾ ಅನ್ನೋ ಗೊಂದಲ ಎಲ್ಲರಿಗೂ ಬರುತ್ತೆ.

ಬಾಡಿಗೆ ಮನೆಗಳಿಗೆ ಸಂಬಂಧಿಸಿದ ಕಾನೂನು ಏನು ಹೇಳುತ್ತದೆ?
ಮಾದರಿ ಬಾಡಿಗೆ ಕಾಯ್ದೆ-2021ರ (Model Tenancy Act-2021) ಪ್ರಕಾರ, ಮನೆಯನ್ನು ವಾಸಯೋಗ್ಯವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಮಾಲೀಕ ಮತ್ತು ಬಾಡಿಗೆದಾರ ಇಬ್ಬರದ್ದೂ ಆಗಿರುತ್ತದೆ. ಸಾಮಾನ್ಯ ಬಳಕೆಯಿಂದ ಉಂಟಾಗುವ ಸಣ್ಣಪುಟ್ಟ ಸವೆತ ಅಥವಾ ನೈಸರ್ಗಿಕ ಬದಲಾವಣೆಗಳನ್ನು ಹಾನಿ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಈ ಬಗ್ಗೆ ವಿವಾದ ಬೇಡ ಎಂದು ಕಾನೂನು ಹೇಳುತ್ತದೆ.
ದೊಡ್ಡ ರಿಪೇರಿಗಳ ಜವಾಬ್ದಾರಿ ಮನೆ ಮಾಲೀಕರದ್ದೇ
ಸಣ್ಣಪುಟ್ಟ ನಿರ್ವಹಣೆ ಕೆಲಸಗಳನ್ನು ಯಾರು ಮಾಡಬೇಕು?
ಮಾಲೀಕರು ರಿಪೇರಿ ಮಾಡಿಸದಿದ್ದರೆ ಏನು ಮಾಡಬೇಕು?
ಕೆಲವೊಮ್ಮೆ ಬಾಡಿಗೆದಾರರು ಹಲವು ಬಾರಿ ಹೇಳಿದರೂ ಮನೆ ಮಾಲೀಕರು ರಿಪೇರಿ ಮಾಡಿಸಲು ನಿರಾಕರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಮಾದರಿ ಬಾಡಿಗೆ ಕಾಯ್ದೆಯು ಬಾಡಿಗೆದಾರರಿಗೆ ವಿಶೇಷ ಹಕ್ಕನ್ನು ನೀಡುತ್ತದೆ. ಮನೆಗೆ ತುರ್ತು ದುರಸ್ತಿ ಅಗತ್ಯವಿದ್ದು, ಮಾಲೀಕರು ಸ್ಪಂದಿಸದಿದ್ದರೆ, ಬಾಡಿಗೆದಾರರು ಸ್ವತಃ ಆ ಕೆಲಸಗಳನ್ನು ಮಾಡಿಸಬಹುದು. ಆ ಖರ್ಚನ್ನು ಬಾಡಿಗೆಯಿಂದ ಕಡಿತಗೊಳಿಸಿಕೊಳ್ಳುವ ಹಕ್ಕನ್ನೂ ಕಾನೂನು ನೀಡುತ್ತದೆ.
ಬಾಡಿಗೆಯಿಂದ ಹಣ ಕಡಿತಗೊಳಿಸಲು ಪಾಲಿಸಬೇಕಾದ ನಿಯಮಗಳು
ಬಾಡಿಗೆದಾರರು ದುರಸ್ತಿ ವೆಚ್ಚವನ್ನು ಬಾಡಿಗೆಯಿಂದ ಕಡಿತಗೊಳಿಸುವ ಮೊದಲು ಕೆಲವು ನಿಯಮಗಳನ್ನು ಪಾಲಿಸಬೇಕು.
*ದುರಸ್ತಿ ಮಾಡಿಸುವ ಮೊದಲು, ಮಾಲೀಕರಿಗೆ ಲಿಖಿತವಾಗಿ ಅಥವಾ ಸ್ಪಷ್ಟವಾಗಿ ತಿಳಿಸಬೇಕು. ಸಮಸ್ಯೆಯನ್ನು ಬಗೆಹರಿಸಲು ಅವರಿಗೆ ಅವಕಾಶ ನೀಡಬೇಕು.
*ಕಾನೂನಿನ ಪ್ರಕಾರ, ಒಂದು ತಿಂಗಳ ಬಾಡಿಗೆಯಲ್ಲಿ ದುರಸ್ತಿ ಹೆಸರಲ್ಲಿ ಕಡಿತಗೊಳಿಸುವ ಮೊತ್ತವು ಆ ತಿಂಗಳ ಬಾಡಿಗೆಯ 50% ಮೀರಬಾರದು. ಉದಾಹರಣೆಗೆ, ಮಾಸಿಕ ಬಾಡಿಗೆ ₹10,000 ಆಗಿದ್ದರೆ, ಒಂದು ತಿಂಗಳಲ್ಲಿ ಗರಿಷ್ಠ ₹5,000 ಮಾತ್ರ ಕಡಿತಗೊಳಿಸಬಹುದು. ಉಳಿದ ಮೊತ್ತವನ್ನು ಮುಂದಿನ ತಿಂಗಳುಗಳಲ್ಲಿ ಸರಿಹೊಂದಿಸಬೇಕಾಗುತ್ತದೆ.
ಒಟ್ಟಿನಲ್ಲಿ, ಮಾದರಿ ಬಾಡಿಗೆ ಕಾಯ್ದೆ-2021 ಈ ಎಲ್ಲಾ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.