Kitchen tips: ಹಸಿಮೆಣಸಿನಕಾಯಿ ಕೊಳೆಯದೆ ತಿಂಗಳುಗಟ್ಟಲೆ ಫ್ರೆಶ್ ಆಗಿರಬೇಕೆ? ತಂದ ತಕ್ಷಣ ಈ ಕೆಲಸ ಮಾಡಿ
How to store green chillies: ತರಕಾರಿ ತಂದ ತಕ್ಷಣ ಪ್ಲಾಸ್ಟಿಕ್ ಕವರ್ನಲ್ಲಿ ಹಾಗೇ ಇಟ್ಟರೆ ವಿಶೇಷವಾಗಿ ಮೆಣಸಿನಕಾಯಿ ಬೇಗ ಹಾಳಾಗುತ್ತದೆ. ಆದರೆ ಈ ಒಂದು ಸಣ್ಣ ಟಿಪ್ಸ್ ಪಾಲಿಸಿದರೆ ವಾರಗಳ ಕಾಲ ಕೆಡದೆ ತಾಜಾವಾಗಿರುತ್ತದೆ. ಅದ್ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

ಹಲವು ದಿನಗಳ ಕಾಲ ಫ್ರೆಶ್ ಆಗಿರುತ್ತೆ
ಹಲವು ದಿನಗಳ ಕಾಲ ಫ್ರೆಶ್ ಆಗಿರುತ್ತೆ
ಮಾರುಕಟ್ಟೆಯಿಂದ ತಂದ ಹಸಿಮೆಣಸಿನಕಾಯಿಯನ್ನು ತಂದ ಹಾಗೆಯೇ ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟರೆ ಕೇವಲ ಎರಡೇ ದಿನಗಳಲ್ಲಿ ಅದು ಕೊಳೆತು ಹಾಳಾಗಿಬಿಡುತ್ತದೆ. ಇದು ಬಹುತೇಕ ಗೃಹಿಣಿಯರಿಗೆ ಎದುರಾಗುವ ಸಾಮಾನ್ಯ ಸಮಸ್ಯೆ. ಆದರೆ, ಕೆಲವೇ ಕೆಲವು ಸರಳ ಹಂತಗಳನ್ನು ಪಾಲಿಸಿದರೆ ಮೆಣಸಿನಕಾಯಿ ಹಲವು ದಿನಗಳ ಕಾಲ ಹೊಚ್ಚ ಹೊಸದರಂತೆ ತಾಜಾವಾಗಿರುವಂತೆ ನೋಡಿಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ಟಿಪ್ಸ್ ಪಾಲಿಸಿ..
ಮೆಣಸಿನಕಾಯಿ ಹೆಚ್ಚು ದಿನ ಬಾಳಿಕೆ ಬರಲು ಹೀಗೆ ಮಾಡಿ...
ಮೊದಲು ಸ್ವಚ್ಛವಾಗಿ ತೊಳೆಯಿರಿ
ಮೊದಲು ಸ್ವಚ್ಛವಾಗಿ ತೊಳೆಯಿರಿ
ಅಂಗಡಿಯಿಂದ ಮೆಣಸಿನಕಾಯಿ ತಂದ ತಕ್ಷಣ, ಮೊದಲು ಅದನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಅದರ ಮೇಲಿರುವ ಧೂಳು ಮತ್ತು ರಾಸಾಯನಿಕಗಳು ನಿವಾರಣೆಯಾಗುತ್ತವೆ.
ತೊಟ್ಟು ತೆಗೆಯುವುದು ಅತೀ ಮುಖ್ಯ
ತೊಟ್ಟು ತೆಗೆಯುವುದು ಅತೀ ಮುಖ್ಯ
ತೊಳೆದ ನಂತರ ಮೆಣಸಿನಕಾಯಿಯ ಹಿಂಬದಿಯ ತೊಟ್ಟನ್ನು ತಪ್ಪದೇ ತೆಗೆದುಹಾಕಬೇಕು. ತೊಟ್ಟು ಹಾಗೇ ಇದ್ದರೆ ಅದರಿಂದಲೇ ತೇವಾಂಶ ಉತ್ಪತ್ತಿಯಾಗಿ ಮೆಣಸಿನಕಾಯಿ ಬೇಗನೆ ಕೊಳೆಯಲು ಆರಂಭವಾಗುತ್ತದೆ.
ತೇವಾಂಶ ಇಲ್ಲದಂತೆ ಒಣಗಿಸಿ
ತೇವಾಂಶ ಇಲ್ಲದಂತೆ ಒಣಗಿಸಿ
ತೊಟ್ಟು ತೆಗೆದ ಮೆಣಸಿನಕಾಯಿಗಳನ್ನು ಒಂದು ಸ್ವಚ್ಛವಾದ ಒಣ ಬಟ್ಟೆಯ ಮೇಲೆ ಹರಡಿ. ನೀರಿನಂಶ ಸಂಪೂರ್ಣವಾಗಿ ಆರುವವರೆಗೂ ಬಿಡಿ ಅಥವಾ ಬಟ್ಟೆಯಿಂದ ತೇವಾಂಶವಿಲ್ಲದಂತೆ ಒರೆಸಿ ಒಣಗಿಸಿಕೊಳ್ಳಿ.
ಡಬ್ಬಿಯಲ್ಲಿ ಹೀಗೆ ಸಂಗ್ರಹಿಸಿ (Storage Trick)
ಡಬ್ಬಿಯಲ್ಲಿ ಹೀಗೆ ಸಂಗ್ರಹಿಸಿ (Storage Trick)
ತೇವಾಂಶ ಆರಿದ ಬಳಿಕ, ಒಂದು ಏರ್ಟೈಟ್ (ಪ್ಲಾಸ್ಟಿಕ್ ಅಥವಾ ಗಾಜಿನ) ಡಬ್ಬಿಯನ್ನು ತೆಗೆದುಕೊಳ್ಳಿ. ಆ ಡಬ್ಬಿಯ ತಳಭಾಗದಲ್ಲಿ ಒಂದು ಪೇಪರ್ (ನ್ಯೂಸ್ಪೇಪರ್/ಟಿಶ್ಯೂ) ಅಥವಾ ಮೃದುವಾದ ಕಾಟನ್ ಬಟ್ಟೆಯನ್ನು ಹಾಕಿ. ನಂತರ ಅದರ ಮೇಲೆ ಮೆಣಸಿನಕಾಯಿಗಳನ್ನು ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ನಲ್ಲಿಡಿ.
ಪ್ರಯೋಜನ
ಪ್ರಯೋಜನ
ಪೇಪರ್ ಅಥವಾ ಕಾಟನ್ ಬಟ್ಟೆಯು ಡಬ್ಬಿಯೊಳಗಿನ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುವುದರಿಂದ, ಮೆಣಸಿನಕಾಯಿ ಕೊಳೆಯದೆ ಹಲವು ದಿನಗಳ ಕಾಲ ಗರಿಗರಿಯಾಗಿ ಹಾಗೂ ಫ್ರೆಶ್ ಆಗಿ ಉಳಿಯುತ್ತದೆ. ಇನ್ಮುಂದೆ ಮೆಣಸಿನಕಾಯಿ ಹಾಳಾಗಿ ಕಸದ ಬುಟ್ಟಿಗೆ ಸೇರದಂತೆ ತಡೆಯಲು ಈ ಸುಲಭ ಉಪಾಯವನ್ನು ಇಂದೇ ಟ್ರೈ ಮಾಡಿ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.