ಸ್ವರ್ಗಕ್ಕಿಂತ ಕಡಿಮೆಯಿಲ್ಲ ಸುಂದರ್ ಪಿಚೈ ಲಕ್ಸುರಿಯಸ್ ಬಂಗಲೆ; ಅಬ್ಬಬ್ಬಾ ಇಷ್ಟೊಂದು ಕೋಟಿ ಬೆಲೆ ಬಾಳುತ್ತಾ?
ಗೂಗಲ್‌ನ ಸಿಇಒ ಸುಂದರ್ ಪಿಚೈ ತಮ್ಮ ಸಾಧನೆಯಿಂದ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಅವರ ನಿವಾಸ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಅಲ್ಟ್ರಾ ಲಕ್ಸುರಿಯಸ್ ಬಂಗಲೆ ಎಷ್ಟೊಂದು ಬೆಲೆ ಬಾಳುತ್ತೆ ಗೊತ್ತಾ?
ಆಲ್ಫಾಬೆಟ್ ಮತ್ತು ಅದರ ಅಂಗಸಂಸ್ಥೆ ಗೂಗಲ್‌ನ ಸಿಇಒ ಸುಂದರ್ ಪಿಚೈ ತಮ್ಮ ಸಾಧನೆಯಿಂದ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಪಿಚೈ ಭಾರತದ ತಮಿಳುನಾಡು ಮೂಲದವವರು.
ಭಾರತದ ಉನ್ನತ ಇಂಜಿನಿಯರಿಂಗ್ ಕಾಲೇಜ್ ಐಐಟಿಯಿಂದ ಪದವಿ ಪಡೆದರು. ಪಿಚೈ ಪ್ರಸ್ತುತ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ.
ಕ್ಯಾಲಿಫೋರ್ನಿಯಾದ ಅವರ ನಿವಾಸ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಸುಂದರ ಪಿಚೈ ನಿವಾಸ ಅಡೋಬ್, ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬಂಗಲೆಯಾಗಿದೆ. ಬೆಟ್ಟದ ತುದಿಯಲ್ಲಿ 31.17 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ.
ವರದಿಗಳ ಪ್ರಕಾರ ಮನೆಯ ಒಳಭಾಗವನ್ನು ಗೂಗಲ್ ಮುಖ್ಯಸ್ಥರ ಪತ್ನಿ ಅಂಜಲಿ ಪಿಚೈ ಅವರು ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ್ದಾರೆ, ಅವರು ಅದರ ಕಸ್ಟಮೈಸೇಶನ್‌ಗಾಗಿ 49 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.
ಲಾಸ್ ಆಲ್ಟೋಸ್ ಎಂದು ಕರೆಯಲ್ಪಡುವ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿರುವ ಈ ಮನೆಯನ್ನು ಸುಂದರ್ ಪಿಚೈ 40 ಮಿಲಿಯನ್‌ಗೆ ಖರೀದಿಸಿದ್ದಾರೆ. ಇಂಡಿಯನ್ ರುಪಿಯಲ್ಲಿ ಬರೋಬ್ಬರಿ 332 ಕೋಟಿ ರೂ. ಆಗಿದೆ. ಆದರೆ ಇದರ ಮೌಲ್ಯ 2022ರಲ್ಲಿ 10,215 ಕೋಟಿ ರೂ.ಗೆ ಏರಿದೆ.
ಐಷಾರಾಮಿ ಮನೆಯು ಕೊಳ, ಇನ್ಫಿನಿಟಿ ಪೂಲ್, ಜಿಮ್, ಸ್ಪಾ ಮತ್ತು ವೈನ್ ಸೆಲ್ಲಾರ್ ಸೇರಿದಂತೆ ಹಲವಾರು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಮನೆಯಲ್ಲಿ ಸೌರ ಫಲಕಗಳು, ಎಲಿವೇಟರ್‌ಗಳು ಸಹ ಇವೆ.
ಸುಂದರ್ ಪಿಚೈ ಮತ್ತು ಅವರ ಪತ್ನಿ ಅಂಜಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಸುಂದರ್ ಪಿಚೈ ಐಐಟಿಯಲ್ಲಿ ಒಟ್ಟಿಗೆ ಓದುತ್ತಿದ್ದ ದಿನಗಳಲ್ಲಿ ಅಂಜಲಿಯನ್ನು ಭೇಟಿಯಾದರು.
ಪಿಚೈ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸುಂದರ್ ಪಿಚೈ ಅವರು ಅಂದಾಜು $1310 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಮತ್ತು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.