ಎಸಿ ಯಾವ ತಾಪಮಾನದಲ್ಲಿರಬೇಕು? ಕೊನೆಗೂ ಸಿಕ್ತು ಉತ್ತರ; ತಜ್ಞರು ಶಿಫಾರಸು ಮಾಡೊ 'ಐಡಿಯಲ್ ಡಿಗ್ರಿ' ಇಲ್ಲಿದೆ!
Best AC temperature: ಬೇಸಿಗೆಯ ಧಗೆಯಿಂದ ಪಾರಾಗಲು ಎಸಿ ಬಳಸುತ್ತಿದ್ದೀರಾ? ಆದರೆ ಎಸಿಯನ್ನು ಯಾವ ತಾಪಮಾನದಲ್ಲಿ ಇಡುವುದು ಆರೋಗ್ಯಕ್ಕೆ ಮತ್ತು ಜೇಬಿಗೆ ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ? ಎಸಿ ಬಳಕೆಯ ಸರಿಯಾದ ಕ್ರಮ ಮತ್ತು ತಜ್ಞರ ಸಲಹೆ ಇಲ್ಲಿದೆ.

ತಜ್ಞರು ನೀಡಿದ ಉತ್ತರ
ಬೇಸಿಗೆ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರ ಮನೆಯಲ್ಲೂ ಒಂದು ದೊಡ್ಡ ಮಹಾಯುದ್ಧ ಶುರುವಾಗುತ್ತದೆ. ಅದುವೇ ಎಸಿಯನ್ನು 16 ಡಿಗ್ರಿಯಲ್ಲಿ ಇಡಬೇಕೋ ಅಥವಾ 26 ಡಿಗ್ರಿಯಲ್ಲೋ ಎಂಬ ಚರ್ಚೆ! ಕೆಲವರಿಗೆ ಕೋಣೆ ಅತಿಯಾಗಿ ತಂಪಾಗಿರಬೇಕು ಎನಿಸಿದರೆ, ಇನ್ನು ಕೆಲವರಿಗೆ ಸಾಧಾರಣ ತಂಪು ಸಾಕು ಎನಿಸುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಎಸಿಯ ಸರಿಯಾದ ತಾಪಮಾನ ಎಷ್ಟು ಎಂಬ ಗೊಂದಲಕ್ಕೆ ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ಸಮೀರ್ ಭಾಟಿ ಅವರು ಇಲ್ಲಿ ಉತ್ತರ ನೀಡಿದ್ದಾರೆ.
ಎಸಿಯ ಸರಿಯಾದ ತಾಪಮಾನ ಎಷ್ಟಿರಬೇಕು?
22 ರಿಂದ 25 ಡಿಗ್ರಿ ಸೆಲ್ಸಿಯಸ್ ನಡುವೆ ಅತ್ಯಂತ ಸೂಕ್ತ
ಡಾ. ಸಮೀರ್ ಭಾಟಿ ಅವರ ಪ್ರಕಾರ, ಎಸಿ ತಾಪಮಾನದ ಆಯ್ಕೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹೇಗೆ ಕೆಲವರಿಗೆ ಅತಿಯಾದ ತಣ್ಣನೆಯ ನೀರು ಕುಡಿದರೆ ಮಾತ್ರ ತೃಪ್ತಿ ಸಿಗುತ್ತದೆಯೋ ಮತ್ತು ಇನ್ನು ಕೆಲವರು ಸಾಮಾನ್ಯ ನೀರನ್ನು ಇಷ್ಟಪಡುತ್ತಾರೋ, ಹಾಗೆಯೇ ಎಸಿಯ ವಿಷಯದಲ್ಲೂ ಜನರ ಆಯ್ಕೆ ಬೇರೆ ಬೇರೆಯಾಗಿರುತ್ತದೆ. ಆದರೆ, ವೈಜ್ಞಾನಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಕೋಣೆಯ ತಾಪಮಾನವನ್ನು 22 ರಿಂದ 25 ಡಿಗ್ರಿ ಸೆಲ್ಸಿಯಸ್ ನಡುವೆ ಇಡುವುದು ಅತ್ಯಂತ ಸೂಕ್ತ.
ಈ ತಾಪಮಾನದಲ್ಲೇ ಏಕೆ ಇಡಬೇಕು?
ಗಾಢ ನಿದ್ರೆ
22 ರಿಂದ 25 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು 'ಐಡಿಯಲ್ ಟೆಂಪರೇಚರ್' ಎಂದು ಕರೆಯಲಾಗುತ್ತದೆ. ಇದು ಮನುಷ್ಯನ ದೇಹಕ್ಕೆ ಆರಾಮದಾಯಕವಾಗಿದ್ದು, ರಾತ್ರಿ ನೆಮ್ಮದಿಯ ಮತ್ತು ಗಾಢವಾದ ನಿದ್ರೆ ಬರಲು ಸಹಾಯ ಮಾಡುತ್ತದೆ.
ಆರೋಗ್ಯದ ಮೇಲೆ ಪರಿಣಾಮ
ಎಸಿಯನ್ನು ಅತಿಯಾದ ಕಡಿಮೆ ತಾಪಮಾನದಲ್ಲಿ (ಉದಾಹರಣೆಗೆ 16 ಡಿಗ್ರಿ) ಇಡುವುದರಿಂದ ದೇಹವು ಬೇಗನೆ ನಿರ್ಜಲೀಕರಣಕ್ಕೆ (Dehydration) ಒಳಗಾಗಬಹುದು.
ಸಮಯಕ್ಕೆ ತಕ್ಕಂತೆ ಬದಲಾವಣೆ
ರಾತ್ರಿಯ ಸಮಯದಲ್ಲಿ ಹೊರಗಿನ ತಾಪಮಾನವು ಸ್ವಲ್ಪ ಕುಸಿಯುವುದರಿಂದ, ಮಧ್ಯರಾತ್ರಿಯಲ್ಲಿ ಚಳಿ ಎನಿಸಬಹುದು. ಅಂತಹ ಸಮಯದಲ್ಲಿ ಎಸಿಯನ್ನು ಆಫ್ ಮಾಡುವುದು ಅಥವಾ ತಾಪಮಾನವನ್ನು ಸ್ವಲ್ಪ ಹೆಚ್ಚಿಸುವುದು ಉತ್ತಮ. ಇದು ದೇಹದ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
