Cloth Washing Tips: ಬಟ್ಟೆ ವಾಶ್ ಆದ್ಮೇಲೂ ಬೆವರು ವಾಸನೆಯೇ? ಈ ಪದಾರ್ಥ ಹಾಕಿದ್ರೆ ಹೋಗುತ್ತಪ್ಪಾ..!
Why do the armpits of my shirts smell after washing: ಕೆಲವೊಮ್ಮೆ ಡ್ರೆಸ್‌ನಿಂದ ಕೆಟ್ಟ ವಾಸನೆ ಬರೋದುಂಟು, ವಾಶ್ ಮಾಡಿದರೂ ಕೂಡ ವಾಸನೆ ಬರುತ್ತದೆ. ಆಗ ಏನು ಮಾಡೋದು ಎಂದು ಅನೇಕರು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಏನು ಮಾಡೋದು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಅಡುಗೆ ಸೋಡಾ
ಬೆವರಿನ ವಾಸನೆ ಹೆಚ್ಚು ಬರುತ್ತಿರುವಾಗ ಬಟ್ಟೆಯ ಬಗಲು (underarms), ಕೊರಳ ಪಟ್ಟಿ, ಅಥವಾ ಎಲ್ಲಿ ವಾಸನೆ ಹೆಚ್ಚಿದೆಯೋ ಅಲ್ಲಿ ನೇರವಾಗಿ ಅಡಿಗೆ ಸೋಡಾ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಹಾಗೆ ಇಡಿ. ಆಮೇಲೆ ಬಟ್ಟೆ ವಾಶ್ ಮಾಡಿ. ಅಡಿಗೆ ಸೋಡಾಕ್ಕೆ ಸ್ವಲ್ಪ ನೀರು ಹಾಕಿ, ಗಟ್ಟಿ ಪೇಸ್ಟ್ ಮಾಡಿ ಹಚ್ಚಿ ವಾಶ್ ಮಾಡಿದರೂ ಓಕೆ
ಬಿಳಿ ವಿನೆಗರ್ (White Vinegar)
ಬಿಳಿ ವಿನೆಗರ್ ಆಮ್ಲೀಯವಾಗಿದ್ದು, ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಿ ಹಿಂಡುವ ಟೈಮ್‌ನಲ್ಲಿ ವಿನೆಗಾರ್ ಹಾಕಿ. ಬಟ್ಟೆ ಒಗೆಯುವ ಮುನ್ನ, ಒಂದು ಭಾಗ ವಿನೆಗರ್‌ಗೆ ನಾಲ್ಕು ಭಾಗ ನೀರು ಹಾಕಿ ಅದಕ್ಕೆ ಬಟ್ಟೆ ಹಾಕಿ ನೆನೆಸಿಡಿ. ಆಮೇಲೆ ವಾಶ್ ಮಾಡಿ
ಮುನ್ನಚ್ಚೆರಿಕೆ ಕ್ರಮಗಳು
ಬೆವರಿನ ಬಟ್ಟೆಗಳನ್ನು ಆದಷ್ಟು ಬೇಗ ವಾಶ್ ಮಾಡಿ
ಬಟ್ಟೆ ಒಗೆಯಲು ಆಗಿಲ್ಲ ಅಂದಾಗ ಗಾಳಿಗೆ ಹಾಕಿ
ವ್ಯಾಯಾಮ ಮಾಡುವಾಗ ಬೆವರನ್ನು ಹೀರಿಕೊಳ್ಳುವ ಬಟ್ಟೆಗಳನ್ನು ಹಾಕಿಕೊಳ್ಳಿ
ಬೆವರನ್ನು ನಿಯಂತ್ರಿಸಲು ಆಂಟಿಪೆರ್ಸ್ಪಿರೆಂಟ್ ಡಿಯೋಡರೆಂಟ್ ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
