- Home
- Life
- ಪ್ರತಿದಿನ ಕೂದಲಿಗೆ ಶಾಂಪೂ ಹಾಕಿಯೇ ಸ್ನಾನ ಮಾಡಬೇಕಾ? ಉದ್ದ ಕೂದಲಿಗೆ ಅಚ್ಚರಿಯ ಸಿಕ್ರೇಟ್ ಬಿಚ್ಚಿಟ್ಟ ಖ್ಯಾತ ತಜ್ಞ
ಪ್ರತಿದಿನ ಕೂದಲಿಗೆ ಶಾಂಪೂ ಹಾಕಿಯೇ ಸ್ನಾನ ಮಾಡಬೇಕಾ? ಉದ್ದ ಕೂದಲಿಗೆ ಅಚ್ಚರಿಯ ಸಿಕ್ರೇಟ್ ಬಿಚ್ಚಿಟ್ಟ ಖ್ಯಾತ ತಜ್ಞ
ಉತ್ತಮ ಆರೋಗ್ಯಕ್ಕೆ ನಿತ್ಯ ಸ್ನಾನ ಅಗತ್ಯ. ಅನೇಕರು ದಿನ ನಿತ್ಯ ತಲೆಗೆ ಸ್ನಾನ ಮಾಡ್ತಾರೆ. ಇದು ಒಳ್ಳೆಯ ಬೆಳವಣಿಗೆ, ಆದರೆ ಪ್ರತಿ ಬಾರಿಯೂ ಕೂದಲಿಗೆ ಶಾಂಪೂ ಬಳಸಬಹುದಾ? ಇದರಿಂದ ಕೂದಲು ಉದುರಲ್ವಾ ಎಂಬ ಅನುಮಾನ ಇದೆ. ಅದಕ್ಕೆ ಉತ್ತರ ಇಲ್ಲಿದೆ.

ಖ್ಯಾತ ಕೂದಲು ತಜ್ಞ ಜಾವೇದ್ ಹಬಿಬ್ ಸಲಹೆ
ನಿತ್ಯ ತಲೆಗೆ ಶಾಂಪೂ ಬಳಸಿ ಸ್ನಾನ ಮಾಡೋದ್ರಿಂದ ಕೂದಲು ಉದುರುತ್ತೆ ಎಂಬ ನಂಬಿಕೆ ನಮ್ಮಲ್ಲಿ ಇದೆ. ಅದೇ ಕಾರಣಕ್ಕೆ ಕೆಲವೊಬ್ಬರು ವಾರಗಳು ಕಳೆದರೂ ತಲೆಗೆ ಸ್ನಾನ ಮಾಡೋದಿಲ್ಲ. ನಿಮ್ಮೆಲ್ಲ ಸಂಶಯಗಳಿಗೆ ಖ್ಯಾತ ಕೂದಲು ತಜ್ಞ ಜಾವೇದ್ ಹಬಿಬ್ ನೀಡುವ ಉತ್ತರ ಬೇರೆಯೇ ಇದೆ. ಅವರು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಏನು ಅಗತ್ಯ ಅನ್ನೋದನ್ನು ತಿಳಿಸಿದ್ದಾರೆ.
ಶಾಂಪೂ ಬಳಸಿದ್ರೆ ಕೂದಲು ಉದುರುತ್ತಾ?
ಜಾವೇದ್ ಹೇಳುವ ಪ್ರಕಾರ.. ಆರೋಗ್ಯಕರ ಕೂದಲಿಗೆ ಬಲವಾದ ಕೂದಲಿಗೆ ಕಾರಣವಾಗುವುದು ತಲೆಯ ಮೇಲಿನ ಶುಚಿತ್ವ. ಧೂಳು, ಬೆವರು, ಎಣ್ಣೆ ಮತ್ತು ಮಾಲಿನ್ಯವು ನೆತ್ತಿಯ ಮೇಲೆ ನಿರಂತರವಾಗಿ ಸಂಗ್ರಹ ಆಗುತ್ತಲೇ ಇರುತ್ತದೆ. ಇದರಿಂದ ಅದನ್ನು ತುಂಬಾ ದಿನಗಳ ಕಾಲ ತೊಳೆಯದೇ ಬಿಟ್ಟರೆ.. ಅದು ಕೂದಲು ಬೆಳವಣಿಗೆ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಶಾಂಪೂ ಬಳಕೆ ಮಾಡೋದ್ರಿಂದ ಕೂದಲು ಉದುರುತ್ತದೆ ಎಂದು ಅದನ್ನು ತೊಳೆಯದೇ ಇರೋದು ಒಳ್ಳೆಯ ವಿಧಾನವಲ್ಲ. ಕೂದಲಿನ ಅಗತ್ಯತೆ ಮತ್ತು ಶುಚಿತ್ವವನ್ನು ಗಮನಿಸಿ ನಿಯಮಿತವಾಗಿ ಅದನ್ನು ತೊಳೆಯಬೇಕು ಎನ್ನುತ್ತಾರೆ.
ಹಲ್ಲು ತಿಕ್ಕಿದಂತೆಯೇ ಇರಬೇಕು
ನಿತ್ಯ ಶಾಂಪೂ ಹಾಕೋದ್ರಿಂದ ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು.. ಕೂದಲು ಹಾಗೂ ನೆತ್ತಿ ಯಾವಾಗಲೂ ಸ್ವಚ್ಛವಾಗಿರಬೇಕು. ನಾವು ಬೆಳಗ್ಗೆ ಎದ್ದಾಗ ಹಲ್ಲು ಉಜ್ಜಿ ಮುಖ ತೊಳೆದಂತೆ.. ಅದೇ ರೀತಿ ನಾವು ಕೂದಲನ್ನ ಆರೈಕೆ ಮಾಡಬೇಕು ಎನ್ನುತ್ತಾರೆ.
ಜಾವೇದ್ ಹಬಿಬ್ ಸಲಹೆ ಏನು?
- ಧೂಳು, ಶಾಖ, ಮಾಲಿನ್ಯದಿಂದ ಬೆವರು, ದೇಹದ ಎಣ್ಣೆಗಳು ಕೂದಲಿಗೆ ಅಂಟಿಕೊಳ್ಳುತ್ತದೆ
- ಕೊಳಕು ಸಂಗ್ರಹವಾದ್ರೆ ಅದು ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ
- ಅಗತ್ಯಗಳಿಗೆ ಅನುಗುಣವಾಗಿ ಕೂದಲನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮುಖ್ಯ
- ಸ್ವಲ್ಪ ಸೋಪ್ ಬಳಸಿ, ಸ್ವಲ್ಪ ಶಾಂಪೂ ಬಳಸಿ, ಸೋಪ್‌ನಟ್ ಎಣ್ಣೆಯನ್ನು ಬಳಸಿ
- ಶಾಂಪೂ ಬಳಸುವ ಪ್ರಮಾಣವನ್ನು ಗಮನದಲ್ಲಿಟ್ಟುಕೊಳ್ಳುವುದು ನಮಗೆ ಮುಖ್ಯ
- ನಿಮ್ಮ ಕೂದಲನ್ನು ಚೆನ್ನಾಗಿ ಒದ್ದೆ ಮಾಡಿ, ನಿಮ್ಮ ಆಯ್ಕೆಯ ಎಣ್ಣೆಯನ್ನು ಹಚ್ಚಿ
- ಕೂದಲಿಗೆ ಎಣ್ಣೆ ಹಚ್ಚಲು ಯಾವುದೇ ವಿಶೇಷ, ದುಬಾರಿ ಎಣ್ಣೆಯ ಅಗತ್ಯವಿಲ್ಲ
- ಕೂದಲಿನ ಆರೋಗ್ಯಕ್ಕೆ ಸಾಸಿವೆ ಎಣ್ಣೆ ಅಗತ್ಯ ಎಂದು ಸಲಹೆ ನೀಡಿದ್ದಾರೆ
ಎಷ್ಟು ಸಮಯ ಎಣ್ಣೆ ಬಿಡಬೇಕು?
ಜಾವೇದ್ ಹಬಿಬ್ ಪ್ರಕಾರ.. ಕೂದಲನ್ನು ಒದ್ದೆ ಮಾಡಿದ ನಂತರ ಎಣ್ಣೆ ಹಚ್ಚಬೇಕು. ನಿಮ್ಮ ಕೂದಲು ತುಂಬಾ ಉದ್ದವಾಗಿದ್ದರೆ ಅದನ್ನು ನಿಧಾನವಾಗಿ ಬಾಚಿಕೊಳ್ಳಬೇಕು. ಎಣ್ಣೆಯನ್ನು ಸುಮಾರು ಐದು ನಿಮಿಷಗಳ ಕಾಲ ಬಿಟ್ಟು ನಂತರ ಕೂದಲನ್ನು ಚೆನ್ನಾಗಿ ತೊಳೆಯಬೇಕು. ಕೂದಲು ತೊಳೆಯಲು ದುಬಾರಿ ಶಾಂಪು ಅಗತ್ಯ ಇಲ್ಲ. ನಿತ್ಯ ಬಳಸುವ ಶಾಂಪು ಬಳಸಿದ್ರೆ ಸಾಕು. ಆದರೆ ಕೂದಲಿನ ಸ್ವಚ್ಛತೆ ತುಂಬಾನೇ ಮುಖ್ಯ ಎನ್ನುತ್ತಾರೆ ಜಾವೇದ್ ಹಬಿಬ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

