ಮನೆಯ ತೋಟ, ಬಾಲ್ಕನಿ, ಟರೇಸ್ ಮೇಲೆ ಬೆಳೆದ ಗುಲಾಬಿ ಗಿಡ ದಷ್ಟಪುಷ್ಟವಾಗಿ ಬೆಳೆದರೂ ಹೂವು ಬರುತ್ತಿಲ್ಲ ಅನ್ನೋದು ಕೆಲವರ ಚಿಂತೆ. 6 ತಪ್ಪುಗಳಿಂದ ಗುಲಾಬಿ ಗಿಡ ಹೂವು ಬಿಡದೇ ಇರುವ ಸಾಧ್ಯತೆ ಇದೆ. ಈ ಟಿಪ್ಸ್ ಫಾಲೋ ಮಾಡಿ.

ಮನೆಯಲ್ಲಿ ಹೂವಿನ ಗಾರ್ಡನ್ ಹೆಚ್ಚು ಮುದನೀಡುತ್ತದೆ. ಹಲವರು ಹೂವಿನ ಗಾರ್ಡನ್‌ಗಾಗಿ ಅತೀ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಹಲವು ಬಾರಿ ನರ್ಸರಿಯಿಂದ, ಬೇರೆಡೆಯಿಂದ ಹೂವಿನ ಗಿಡ ತಂಡು ನೆಟ್ಟು ಆರೈಕೆ ಮಾಡುತ್ತಾರೆ. ಆದರೆ ಹೂವು ಮಾತ್ರ ಬಿಡುವುದಿಲ್ಲ. ಈ ಪೈಕಿ ಗುಲಾಬಿ ಹೂವಿನ ಗಿಡಗಳಲ್ಲಿ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ನರ್ಸರಿಯಲ್ಲಿ ಅಥವಾ ಇತರರ ಮನೆಯಲ್ಲಿ ಸುಂದರ ಗುಲಾಬಿ ಹೂವುಗಳಿರುತ್ತೆ. ಆದೆ ಗಿಡ ತಂದು ಮನೆಯಲ್ಲಿ ನೆಟ್ಟು ಆರೈಕೆ ಮಾಡಿದರೆ ಹೂವು ಮಾತ್ರ ಬಿಡುವುದೇ ಇಲ್ಲ. ಇದಕ್ಕೆ 6 ತಪ್ಪುಗಳೇ ಕಾರಣ.

ಗುಲಾಬಿ ಗಿಡದಲ್ಲಿ ಹೂವು ಬರುತ್ತಿಲ್ಲವೇ?

ಮನೆಯಲ್ಲಿ ಬೆಳೆಸಿದ ಗುಲಾಬಿ ಗಿಡದಲ್ಲಿ ಹೂವು ಬರುತ್ತಿಲ್ಲ ಎಂದರೆ ಕೆಲ ಸಮಸ್ಯೆಗಳಿವೆ ಎಂದರ್ಥ. ಪ್ರಮುಖವಾಗಿ ಸರಿಯಾದ ಬಿಸಿಲು, ನೀರು, ಗಿಡಗಳನ್ನು ಕತ್ತರಿಸುವ ವಿಧಾನ, ಸರಿಯಾದ ಪ್ರಮಾಣದಲ್ಲಿ ಗೊಬ್ಬರ. ಇವುಗಳ ತಪ್ಪನಿಂದ ಗುಲಾಬಿ ಗಿಡ ದಷ್ಟಪುಷ್ಟವಾಗಿ ಬೆಳೆದರೂ ಹೂವು ಬಿಡುವುದಿಲ್ಲ.

ಗುಲಾಬಿ ಗಿಡಕ್ಕೆ ಪ್ರತಿ ದಿನ 5 ರಿಂದ 6 ಗಂಟೆ ಸರಿಯಾದ ಬಿಸಿಲಿನ ಅಗತ್ಯವಿದೆ. ಬಿಸಿಲು ಕಡಿಮೆಯಾದರೆ ಗುಲಾಬಿ ಗಿಡ ನೈಸರ್ಗಿಕವಾಗಿ ಕಾಂಡ ಹಾಗೂ ಎಲೆಗಳ ಹೆಚ್ಚು ಬೆಳೆಯುತ್ತದೆ. ಬಿಸಿಲಿನ ಕೊರತೆ ನೇರವಾಗಿ ಗುಲಾಬಿ ಗಿಡದ ವ್ಯವಸ್ಥೆಯನ್ನೇ ಬದಲಿಸುತ್ತದೆ. ಗುಲಾಬಿ ಗಿಡ ತನ್ನ ಕಾಂಡ ಹಾಗೂ ಎಲೆಗಳಿಗೆ ಹೆಚ್ಚಿನ ಲವಣಾಂಶಗಳನ್ನು ಪೂರೈಸುತ್ತದೆ. ಇದರಿಂದ ಹೂವು ಬಿಡದೆ ಗಿಡ ಮಾತ್ರ ಆರೋಗ್ಯವಾಗಿ ಬೆಳೆಯುತ್ತದೆ. ಅತೀಯಾದ ನೀರು ಕೂಡ ಉತ್ತಮವಲ್ಲ. ಅತೀಯಾದ ನೀರಿನಿಂದಲೂ ಗಿಡ ಉತ್ತಮವಾಗಿ ಬೆಳೆದರೂ ಹೂವು ಕಾಣಿಸುವುದಿಲ್ಲ.

ಅತಿಯಾದ ಸಾರಜನಕ ಗೊಬ್ಬರಗಳು ಕೂಡ ಗುಲಾಬಿ ಗಿಡ ಬೆಳೆಯಲು ನೆರವು ನೀಡುತ್ತದೆ ಹೊರತು ಹೂವಿಗಲ್ಲ. ಇನ್ನು ಅಲ್ಲೊಂದು ಇಲ್ಲೊಂದು ಹೂವು ಬಿಟ್ಟರೆ ಅದು ಬಾಡಿ, ಒಣಗಿದರೂ ಅದನ್ನು ತೆಗೆಯದೇ ಇದ್ದರೂ ಮತ್ತೊಂದು ಹೂವು ಬಿಡುವ ಸಾಧ್ಯತೆ ಕಡಿಮೆ. ಬಾಡಿದ, ಒಣಗಿದ ಹೂವುಗಳನ್ನು ತೆಗೆಯುವ ಮೂಲಕ ಮತ್ತೆ ಮೊಗ್ಗು ಹುಟ್ಟಿಕೊಳ್ಳಲು ನೆರವು ಸಿಗುತ್ತದೆ. ಒಣಗಿದ ಕಾಂಡಗಳು, ಒಣಗಿದ ಎಲೆ, ಕೀಟಗಳ ಬಾಧೆಗಳಿಂದ ಹಾಳಾದ ಎಲೆ, ಕಾಂಡಗಳನ್ನು ಕತ್ತರಿಸಬೇಕು. ಹೊಸ ಚಿಗುರುವ ಬರುವಂತೆ ನೋಡಿಕೊಳ್ಳಬೇಕು.

ಸರಿಯಾದ ಆರೈಕೆಯಿಂದ ಗುಲಾಬಿ ಗಿಡ ಹಾಗೂ ಹೂವು ಉತ್ತಮವಾಗಿ ಬರಲಿದೆ. ಹೀಗಾಗಿ ಮನೆಯಲ್ಲಿ ಬೆಳೆಸಿದ ಗುಲಾಬಿ ಗಿಡ ಹೂ ಬಿಡುತ್ತಿಲ್ಲ ಎಂದಾದರೆ 6 ತಪ್ಪುಗಳಲ್ಲಿ ಇದೆಯಾ ಎಂದು ಪರಿಶೀಲಿಸಿ. ಸಣ್ಣ ಬದಲಾವಣೆಯಿಂದ ಮನೆಯ ಗಾರ್ಡನ್ ಹೂವುಗಳಿಂದ ನಳನಳಿಸಲಿದೆ.