MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಚುನಾವಣೆ ಮುಗಿದ ಮೇಲೆ EVM ಗಳನ್ನು ಸುಟ್ಟು ಹಾಕ್ತಾರಾ? ಹಾಗಿದ್ರೆ ಆ ಯಂತ್ರಗಳನ್ನು ಏನ್ ಮಾಡ್ತಾರೆ?

ಚುನಾವಣೆ ಮುಗಿದ ಮೇಲೆ EVM ಗಳನ್ನು ಸುಟ್ಟು ಹಾಕ್ತಾರಾ? ಹಾಗಿದ್ರೆ ಆ ಯಂತ್ರಗಳನ್ನು ಏನ್ ಮಾಡ್ತಾರೆ?

What happens to EVM after election: ಚುನಾವಣೆ ಮುಗಿದ ಮೇಲೆ ಇವಿಎಂ ಯಂತ್ರಗಳನ್ನು ಸುಟ್ಟು ಹಾಕಲಾಗುತ್ತಾ? ಮಮತಾ ಬ್ಯಾನರ್ಜಿ ಅವರ ಗಂಭೀರ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗದ ಇವಿಎಂ ನಿಯಮಗಳು ಮತ್ತೆ ಮುನ್ನೆಲೆಗೆ ಬಂದಿವೆ.

2 Min read
Author : Ashwini HR
| Updated : Oct 02 2026, 08:05 PM IST
Share this Photo Gallery
  • FB
  • TW
  • Linkdin
  • Whatsapp
16
ಕಟ್ಟುನಿಟ್ಟಾದ ಕಾನೂನು ಚೌಕಟ್ಟು
Image Credit : our own

ಕಟ್ಟುನಿಟ್ಟಾದ ಕಾನೂನು ಚೌಕಟ್ಟು

ಕಟ್ಟುನಿಟ್ಟಾದ ಕಾನೂನು ಚೌಕಟ್ಟು
ಚುನಾವಣೆ ಮುಗಿದ ಬಳಿಕ ಇವಿಎಂ ಯಂತ್ರಗಳನ್ನು ಸುಟ್ಟು ಹಾಕಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ವಾಸ್ತವದಲ್ಲಿ ಚುನಾವಣೆ ಮುಗಿದ ನಂತರ ಇವಿಎಂ ಯಂತ್ರಗಳನ್ನು ಏನು ಮಾಡಲಾಗುತ್ತದೆ? ಫಲಿತಾಂಶದ ಬಳಿಕ ಅವುಗಳನ್ನು ಎಲ್ಲಿ ಇಡಲಾಗುತ್ತದೆ? 15 ವರ್ಷ ಹಳೆಯ ಯಂತ್ರಗಳನ್ನು ನಾಶಪಡಿಸುವ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿವರ.

ಚುನಾವಣೆಗಳು ಮುಗಿದ ನಂತರ ಇವಿಎಂ ಯಂತ್ರಗಳ ರಕ್ಷಣೆ, ಮರುಬಳಕೆ ಮತ್ತು ನಾಶಪಡಿಸುವ ಪ್ರಕ್ರಿಯೆಯು ಅತ್ಯಂತ ಕಟ್ಟುನಿಟ್ಟಾದ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮತದಾನ ಮುಗಿದ ತಕ್ಷಣ ಸ್ಟ್ರಾಂಗ್ ರೂಮ್ ಭದ್ರತೆ
Image Credit : X

ಮತದಾನ ಮುಗಿದ ತಕ್ಷಣ ಸ್ಟ್ರಾಂಗ್ ರೂಮ್ ಭದ್ರತೆ

ಮತದಾನ ಮುಗಿದ ತಕ್ಷಣ ಸ್ಟ್ರಾಂಗ್ ರೂಮ್ ಭದ್ರತೆ
ಮತದಾನ ಮುಗಿದ ತಕ್ಷಣವೇ ಎಲ್ಲಾ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನ ಸೀಲ್ ಮಾಡಿ ನೇರವಾಗಿ 'ಸ್ಟ್ರಾಂಗ್ ರೂಮ್'ಗೆ ಸಾಗಿಸಲಾಗುತ್ತದೆ. ಈ ಕೊಠಡಿಗಳಿಗೆ ಯಾವುದೇ ಮೊಬೈಲ್ ಅಥವಾ ವೈರ್‌ಲೆಸ್ ಸಾಧನಗಳನ್ನು ಕೊಂಡೊಯ್ಯುವಂತಿಲ್ಲ. ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆಗಳು 24 ಗಂಟೆಯೂ ಸಿಬ್ಬಂದಿಯೊಂದಿಗೆ ಹದ್ದಿನ ಕಣ್ಣಿಟ್ಟಿರುತ್ತವೆ.

Related Articles

Related image1
EVM Tampering: ಮಧ್ಯರಾತ್ರಿ ಸ್ಟ್ರಾಂಗ್‌ ರೂಂಗೆ ಮಮತಾ ಬ್ಯಾನರ್ಜಿ ಭೇಟಿ, EVM ತಿರುಚುವ ಆರೋಪ, ಬಂಗಾಳದಲ್ಲಿ ಬಿರುಗಾಳಿ!
Related image2
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಕೊನೆಗೂ ರಾಜ್ಯಪಾಲರ ಅಸ್ತು
36
ಫಲಿತಾಂಶದ ನಂತರ 45 ದಿನಗಳ ಕಡ್ಡಾಯ ಭದ್ರತೆ
Image Credit : X

ಫಲಿತಾಂಶದ ನಂತರ 45 ದಿನಗಳ ಕಡ್ಡಾಯ ಭದ್ರತೆ

ಫಲಿತಾಂಶದ ನಂತರ 45 ದಿನಗಳ ಕಡ್ಡಾಯ ಭದ್ರತೆ
ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾದ ಮೇಲೂ ಇವಿಎಂ ಕೆಲಸ ಮುಗಿಯುವುದಿಲ್ಲ! ನಿಯಮಾವಳಿಗಳ ಪ್ರಕಾರ, ಫಲಿತಾಂಶದ ವಿರುದ್ಧ ಯಾವುದೇ ಅಭ್ಯರ್ಥಿ ನ್ಯಾಯಾಲಯದಲ್ಲಿ ಅರ್ಜಿ (Election Petition) ಸಲ್ಲಿಸಲು 45 ದಿನಗಳ ಕಾಲಾವಕಾಶವಿರುತ್ತದೆ. ಹೀಗಾಗಿ, ಇಡೀ ಒಂದೂವರೆ ತಿಂಗಳು ಎಲ್ಲಾ ಇವಿಎಂಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಯಥಾಸ್ಥಿತಿಯಲ್ಲಿ ಸೀಲ್ ಮಾಡಿ ರಕ್ಷಿಸಲಾಗುತ್ತದೆ.

46
45 ದಿನಗಳ ನಂತರ ಇಂಜಿನಿಯರ್‌ಗಳಿಂದ ತಪಾಸಣೆ
Image Credit : X

45 ದಿನಗಳ ನಂತರ ಇಂಜಿನಿಯರ್‌ಗಳಿಂದ ತಪಾಸಣೆ

45 ದಿನಗಳ ನಂತರ ಇಂಜಿನಿಯರ್‌ಗಳಿಂದ ತಪಾಸಣೆ 
ಯಾವುದೇ ಕೋರ್ಟ್ ಕೇಸ್ ಇಲ್ಲದಿದ್ದರೆ, ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ತಜ್ಞ ಇಂಜಿನಿಯರ್‌ಗಳು ಇವಿಎಂಗಳನ್ನು ತಾಂತ್ರಿಕವಾಗಿ ತಪಾಸಣೆ ಮಾಡುತ್ತಾರೆ. ಸರಿಯಾಗಿದ್ದ ಯಂತ್ರಗಳನ್ನು ಮುಂದಿನ ಚುನಾವಣೆಗಳ ಬಳಕೆಗಾಗಿ ಕೇಂದ್ರ ಶೇಖರಣಾ ಕೊಠಡಿಗಳಿಗೆ ಸ್ಥಳಾಂತರಿಸಲಾಗುತ್ತದೆ.

56
ಹೊಸ ಚುನಾವಣೆಗೆ ಮುನ್ನ ‘ಮಾಕ್ ಪೋಲ್’ (ಅಣಕು ಮತದಾನ)
Image Credit : X

ಹೊಸ ಚುನಾವಣೆಗೆ ಮುನ್ನ ‘ಮಾಕ್ ಪೋಲ್’ (ಅಣಕು ಮತದಾನ)

ಹೊಸ ಚುನಾವಣೆಗೆ ಮುನ್ನ ‘ಮಾಕ್ ಪೋಲ್’ (ಅಣಕು ಮತದಾನ)
ಮುಂದಿನ ಚುನಾವಣೆಯಲ್ಲಿ ಬಳಸುವ ಮುನ್ನ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ನಕಲಿ ಮತದಾನ (Mock Poll) ನಡೆಸಿ ಯಂತ್ರಗಳನ್ನು ಪರೀಕ್ಷಿಸಲಾಗುತ್ತದೆ. ಎಲ್ಲರೂ ಸಹಿ ಹಾಕಿದ ನಂತರವೇ ಅವುಗಳನ್ನು ಮತಗಟ್ಟೆಗೆ ಕಳುಹಿಸಲಾಗುತ್ತದೆ. ತುರ್ತು ಸಂದರ್ಭಕ್ಕಾಗಿ ಶೇ. 20 ರಷ್ಟು ಹೆಚ್ಚುವರಿ ಯಂತ್ರಗಳನ್ನು ಮೀಸಲಿಡಲಾಗುತ್ತದೆ.

66
ಹಳೆಯ ಅಥವಾ ಹಾಳಾದ ಇವಿಎಂಗಳನ್ನು ಸುಡಲಾಗುತ್ತಾ?:
Image Credit : X@amitmalviya

ಹಳೆಯ ಅಥವಾ ಹಾಳಾದ ಇವಿಎಂಗಳನ್ನು ಸುಡಲಾಗುತ್ತಾ?:

ಹಳೆಯ ಅಥವಾ ಹಾಳಾದ ಇವಿಎಂಗಳನ್ನು ಸುಡಲಾಗುತ್ತಾ?
ಖಂಡಿತವಾಗಿಯೂ ಇಲ್ಲ! ಯಾವುದೇ ಕಾರಣಕ್ಕೂ ಇವಿಎಂಗಳನ್ನು ಸುಟ್ಟುಹಾಕುವ ನಿಯಮವಿಲ್ಲ.

ಇವಿಎಂ ಯಂತ್ರಗಳ ಜೀವಿತಾವಧಿ ಸುಮಾರು 15 ವರ್ಷ.

15 ವರ್ಷ ಪೂರ್ಣಗೊಂಡ ಅಥವಾ ತೀರಾ ಹಾಳಾದ ಯಂತ್ರಗಳನ್ನು ನೇರವಾಗಿ ಬಿಇಎಲ್ (BEL) ಅಥವಾ ಇಸಿಐಎಲ್ (ECIL) ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಅಲ್ಲಿ ಕಟ್ಟುನಿಟ್ಟಾದ ಇ-ತ್ಯಾಜ್ಯ (E-Waste) ನಿಯಮಗಳ ಅಡಿಯಲ್ಲಿ ಅವುಗಳ ಪ್ಲಾಸ್ಟಿಕ್ ಮತ್ತು ಸರ್ಕ್ಯೂಟ್ ಬೋರ್ಡ್‌ಗಳನ್ನು ಯಂತ್ರಗಳ ಮೂಲಕ ಪುಡಿಪುಡಿ (Crush/Recycle) ಮಾಡಲಾಗುತ್ತದೆ.

ಈ ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋಗ್ರಫಿ ಮಾಡಲಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
ಫ್ಲೈ ದುಬೈ ಕಂಟ್ರೋಲ್​ ಮಾಡಲು ಆ ಪ್ರಯಾಣಿಕನಿಗೆ ನೆರವಾಗಿದ್ದು ಈ ಡಾಕ್ಯುಮೆಂಟರಿ ಸಿರೀಸ್! ಶಾಕಿಂಗ್ ಸುದ್ದಿ ಬಹಿರಂಗ!
Recommended image2
"ಯಾರೂ ಬೇಡ ಅಮ್ಮಾ... ನೀನಷ್ಟೇ ಬೇಕು!": ಪಂಚಾಯತಿ ಕಾರ್ಯದರ್ಶಿ ಜೊತೆ ಹೊರಟ ತಾಯಿಗಾಗಿ ಮಕ್ಕಳ ರೋದನ!
Recommended image3
ಈ ಪುಟ್ಟ ಬಾಲಕಿ ಮಣ್ಣಲ್ಲಿ ಚಾಕೊಲೇಟ್ ಯಾಕೆ ನೆಟ್ಟಿದ್ದಾಳೆ? ಕಾರಣ ಕೇಳಿದ್ರೆ ಕ್ಯೂಟ್ ಅನಿಸುತ್ತೆ!
Related Stories
Recommended image1
EVM Tampering: ಮಧ್ಯರಾತ್ರಿ ಸ್ಟ್ರಾಂಗ್‌ ರೂಂಗೆ ಮಮತಾ ಬ್ಯಾನರ್ಜಿ ಭೇಟಿ, EVM ತಿರುಚುವ ಆರೋಪ, ಬಂಗಾಳದಲ್ಲಿ ಬಿರುಗಾಳಿ!
Recommended image2
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಕೊನೆಗೂ ರಾಜ್ಯಪಾಲರ ಅಸ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved