MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಗ್ಯಾಸ್ ಸ್ಟೌವ್ ನಾಬ್ ಕ್ಲೀನ್ ಮಾಡಲು ಕಷ್ಟಪಡ್ತಿದ್ದೀರಾ? ಈ ಟ್ರಿಕ್ ಬಳಸಿ ಸುಲಭವಾಗಿ ಗಲೀಜನ್ನು ಹೊರೆತೆಗೆಯಿರಿ

ಗ್ಯಾಸ್ ಸ್ಟೌವ್ ನಾಬ್ ಕ್ಲೀನ್ ಮಾಡಲು ಕಷ್ಟಪಡ್ತಿದ್ದೀರಾ? ಈ ಟ್ರಿಕ್ ಬಳಸಿ ಸುಲಭವಾಗಿ ಗಲೀಜನ್ನು ಹೊರೆತೆಗೆಯಿರಿ

Gas Stove Cleaning Hacks: ಗ್ಯಾಸ್ ಸ್ಟೌವ್ ನಾಬ್‌ ಸಂದುಗಳಲ್ಲಿ ಕುಳಿತಿರುವ ಕಠಿಣವಾದ ಜಿಡ್ಡನ್ನು ತೆಗೆಯಲು ನೀವು ಹರಸಾಹಸ ಪಡುತ್ತಿದ್ದೀರಾ? ನಾಬ್‌ಗಳನ್ನು ಕಿತ್ತು ತೆಗೆಯುವ ಅಪಾಯಕ್ಕೆ ಕೈ ಹಾಕುವ ಬದಲು, ಎರಡೇ ನಿಮಿಷದಲ್ಲಿ ಸಲೀಸಾಗಿ ಮತ್ತು ಸುರಕ್ಷಿತವಾಗಿ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ.

2 Min read
Author : Ashwini HR
Published : Aug 01 2026, 05:21 PM IST
Share this Photo Gallery
  • FB
  • TW
  • Linkdin
  • Whatsapp
14
ಜಿಡ್ಡು ಮತ್ತು ಧೂಳಿನಿಂದ ಕೊಳೆಯಾಗಿರುತ್ತೆ
Image Credit : Instagram

ಜಿಡ್ಡು ಮತ್ತು ಧೂಳಿನಿಂದ ಕೊಳೆಯಾಗಿರುತ್ತೆ

ಜಿಡ್ಡು ಮತ್ತು ಧೂಳಿನಿಂದ ಕೊಳೆಯಾಗಿರುತ್ತೆ
ಅಡುಗೆ ಮನೆ ಸ್ವಚ್ಛತೆ ಎನ್ನುವುದು ಕೇವಲ ಪಾತ್ರೆ ಅಥವಾ ಕಟ್ಟೆಗೆ ಸೀಮಿತವಲ್ಲ. ನಾವು ಅಡುಗೆ ಮಾಡುವಾಗ ಎಣ್ಣೆಯ ಜಿಡ್ಡು ಮತ್ತು ಧೂಳು ಗ್ಯಾಸ್ ಸ್ಟೌವ್ ನಾಬ್‌ಗಳ ಸಣ್ಣ ಸಣ್ಣ ಸಂದುಗಳಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಇದು ಕಾಲಾನಂತರದಲ್ಲಿ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ಇದನ್ನು ಸಾಮಾನ್ಯ ಬಟ್ಟೆಯಿಂದ ಒರೆಸಿ ತೆಗೆಯುವುದು ಅಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ ಕೆಲವರು ನಾಬ್‌ಗಳನ್ನು ಬಲವಂತವಾಗಿ ಕಿತ್ತು ತೆಗೆದು ಕ್ಲೀನ್ ಮಾಡುವ ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ, ಹೀಗೆ ಮಾಡುವುದು ಅಪಾಯಕಾರಿ. ಕಿತ್ತು ತೆಗೆಯುವಾಗ ನಾಬ್‌ನ ಒಳಗಿರುವ ಸ್ಪ್ರಿಂಗ್ ಅಥವಾ ಗ್ಯಾಸ್ ಲೀಕ್ ಆಗದಂತೆ ತಡೆಯುವ ಸಿಸ್ಟಂ ಹಾಳಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಕ್ಲೀನ್ ಮಾಡುವುದಕ್ಕೆ ಬೇಕಾಗಿರುವುದೇನು?
Image Credit : Instagram

ಕ್ಲೀನ್ ಮಾಡುವುದಕ್ಕೆ ಬೇಕಾಗಿರುವುದೇನು?

ಕ್ಲೀನ್ ಮಾಡುವುದಕ್ಕೆ ಬೇಕಾಗಿರುವುದೇನು?
ಹಾಗಾದರೆ, ನಾಬ್ ಕಿತ್ತು ಹಾಕದೆಯೇ ಇದನ್ನು ಕ್ಲೀನ್ ಮಾಡುವುದು ಹೇಗೆ? ಇದಕ್ಕೆ ಸುಲಭವಾದ ಪರಿಹಾರ ನಿಮ್ಮ ಮನೆಯಲ್ಲೇ ಇರುವ 'ಕಾಟನ್ ಇಯರ್ ಬಡ್ಸ್' (Earbuds) ಮತ್ತು 'ಲಿಕ್ವಿಡ್ ಸೋಪ್'.

Related Articles

Related image1
ಹೆಚ್ಚು ಸಮಯ ಬೇಡ, ಹತ್ತು ನಿಮಿಷ ಸಾಕು.. ಟಾಯ್ಲೆಟ್ ಬ್ರಷ್‌ನ ಕೊಳೆ, ಬ್ಯಾಕ್ಟೀರಿಯಾ ಎರಡೂ ಇರಲ್ಲ
Related image2
ಒಂದೇ ಒಂದು ಕುಂಡದಲ್ಲಿ ಹತ್ತಾರು ಬೆಂಡೆಕಾಯಿ ಪಡೆಯುವುದು ಹೇಗೆ? ಇಂದೇ ಈ ಟಿಪ್ಸ್ ಟ್ರೈ ಮಾಡಿ
34
ಕ್ಲೀನ್ ಮಾಡುವ ವಿಧಾನ
Image Credit : Instagram

ಕ್ಲೀನ್ ಮಾಡುವ ವಿಧಾನ

ಕ್ಲೀನ್ ಮಾಡುವ ವಿಧಾನ
*ಮೊದಲಿಗೆ ಒಂದು ಇಯರ್ ಬಡ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಸೋಪ್ ಅಥವಾ ಸೋಪಿನ ನೀರನ್ನು ಹಚ್ಚಿಕೊಳ್ಳಿ.ಈಗ ನಾಬ್‌ನ ಬುಡದಲ್ಲಿರುವ ಸಣ್ಣ ಸಂದುಗಳಿಗೆ ಈ ಇಯರ್ ಬಡ್ ಅನ್ನು ತೂರಿಸಿ, ಸುತ್ತಲೂ ನಿಧಾನವಾಗಿ ತಿರುಗಿಸಿ. ಇಯರ್ ಬಡ್‌ನ ಹತ್ತಿಯು ಸಣ್ಣ ಜಾಗಗಳಿಗೂ ತಲುಪುವುದರಿಂದ ಅಲ್ಲಿರುವ ಕಠಿಣವಾದ ಜಿಡ್ಡು ಮತ್ತು ಕೊಳೆಯನ್ನು ಸುಲಭವಾಗಿ ಹೊರತೆಗೆಯುತ್ತದೆ.
*ಈ ಪ್ರಕ್ರಿಯೆಯನ್ನು ಎರಡು-ಮೂರು ಬಾರಿ ಹೊಸ ಇಯರ್ ಬಡ್ ಬಳಸಿ ಮಾಡಿದರೆ ಎಲ್ಲಾ ಕೊಳೆ ಸಂಪೂರ್ಣವಾಗಿ ಹೊರಬರುತ್ತದೆ.
*ನಂತರ ಒಂದು ಮೃದುವಾದ ಒದ್ದೆ ಬಟ್ಟೆ ಅಥವಾ ಕಿಚನ್ ಟವೆಲ್ ತೆಗೆದುಕೊಂಡು ಆ ಜಾಗವನ್ನು ಚೆನ್ನಾಗಿ ಒರೆಸಿ. ಅಂತಿಮವಾಗಿ ಶುದ್ಧವಾದ ನೀರಿನಿಂದ ಒರೆಸಿ ಒಣಗಿಸಿದರೆ ನಿಮ್ಮ ಗ್ಯಾಸ್ ಸ್ಟೌವ್ ನಾಬ್ ಈಗಷ್ಟೇ ತಂದ ಹೊಸ ಸ್ಟೌವ್‌ನಂತೆ ಹೊಳೆಯುತ್ತದೆ.

44
ಎಲ್ಲ ಗ್ಯಾಸ್ ಸ್ಟೌವ್‌ಗಳ ವಿನ್ಯಾಸ ಒಂದೇ ರೀತಿ ಇರಲ್ಲ
Image Credit : Instagram

ಎಲ್ಲ ಗ್ಯಾಸ್ ಸ್ಟೌವ್‌ಗಳ ವಿನ್ಯಾಸ ಒಂದೇ ರೀತಿ ಇರಲ್ಲ

ಎಲ್ಲ ಗ್ಯಾಸ್ ಸ್ಟೌವ್‌ಗಳ ವಿನ್ಯಾಸ ಒಂದೇ ರೀತಿ ಇರಲ್ಲ
ನೆನಪಿಡಿ, ಎಲ್ಲ ಗ್ಯಾಸ್ ಸ್ಟೌವ್‌ಗಳ ವಿನ್ಯಾಸ ಒಂದೇ ರೀತಿ ಇರುವುದಿಲ್ಲ. ಕೆಲವು ನಾಬ್‌ಗಳ ಸಂದುಗಳು ತೀರಾ ಚಿಕ್ಕದಾಗಿರುತ್ತವೆ, ಅಂತಹ ಕಡೆ ನೀವು ಈ ಇಯರ್ ಬಡ್ ವಿಧಾನವನ್ನು ನಿಮ್ಮ ಸ್ಟೌವ್‌ನ ವಿನ್ಯಾಸಕ್ಕೆ ಅನುಗುಣವಾಗಿ ಬಳಸಬಹುದು. ಈ ಸರಳ ತಂತ್ರದಿಂದ ಯಾವುದೇ ಹಾನಿಯ ಭಯವಿಲ್ಲದೆ ಸಲೀಸಾಗಿ ಕೆಲಸ ಮುಗಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ
Latest Videos
Recommended Stories
Recommended image1
Pepper Chicken Recipe: ಯಾವ ರೆಸ್ಟೋರೆಂಟ್‌ಗೂ ಹೋಗೋದು ಬೇಡ.. ಈಸಿಯಾಗಿ ಮನೆಯಲ್ಲೇ ಮಾಡಿ ಪೆಪ್ಪರ್ ಚಿಕನ್
Recommended image2
ಅಡುಗೆ ಮಾಡುವಾಗ ಬಿಸಿ ನೀರು ಬಳಸೋದ್ಯಾಕೆ? ತಲೆಮಾರುಗಳಿಂದ ನಡೆದು ಬಂದಿರುವ ಈ ಪದ್ಧತಿ ಹಿಂದಿನ ಸೀಕ್ರೆಟ್ ಇದೇ
Recommended image3
ಮನೆಯ ನೆಲ ಒರೆಸುವಾಗ ನೀರಲ್ಲಿ ಈ ಮೂರು ವಸ್ತು ಬೆರೆಸಿ, ಮೂಲೆ ಮೂಲೆಯೂ ಮಿಂಚಿನಂತೆ ಹೊಳೆಯುತ್ತೆ!
Related Stories
Recommended image1
ಹೆಚ್ಚು ಸಮಯ ಬೇಡ, ಹತ್ತು ನಿಮಿಷ ಸಾಕು.. ಟಾಯ್ಲೆಟ್ ಬ್ರಷ್‌ನ ಕೊಳೆ, ಬ್ಯಾಕ್ಟೀರಿಯಾ ಎರಡೂ ಇರಲ್ಲ
Recommended image2
ಒಂದೇ ಒಂದು ಕುಂಡದಲ್ಲಿ ಹತ್ತಾರು ಬೆಂಡೆಕಾಯಿ ಪಡೆಯುವುದು ಹೇಗೆ? ಇಂದೇ ಈ ಟಿಪ್ಸ್ ಟ್ರೈ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved