ಸನಾತನ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀದೇವಿಯ ಸ್ವರೂಪವೆನ್ನಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದಲ್ಲಿ ಈ ಬದಲಾವಣೆಗಳು ಕಂಡರೆ ಎಚ್ಚರ! ಇದು ಮುಂಬರುವ ಸಂಕಷ್ಟಗಳ ಮುನ್ಸೂಚನೆಯಾಗಿರಬಹುದು.
vaastu Jul 29 2026
Author: Ashwini HR Image Credits:instagram
Kannada
ಮೊದಲೇ ಗ್ರಹಿಸುತ್ತೆ
ವಾಸ್ತು ಪ್ರಕಾರ, ಮನೆಗೆ ಎದುರಾಗುವ ಯಾವುದೇ ಕೆಟ್ಟ ಶಕ್ತಿಗಳನ್ನು ತುಳಸಿ ಗಿಡವು ಮೊದಲೇ ಗ್ರಹಿಸುತ್ತದೆ ಎಂದು ನಂಬಲಾಗಿದೆ.
Image credits: instagram
Kannada
ಗಿಡ ಒಣಗಿದರೆ ಅಶುಭವೇ?
ಗಿಡ ದಿಢೀರನೆ ಒಣಗಿದರೆ ಅದು ಭವಿಷ್ಯದ ಆರ್ಥಿಕ ಮುಗ್ಗಟ್ಟು ಅಥವಾ ಕುಟುಂಬದ ದೊಡ್ಡ ಸಮಸ್ಯೆಯ ಸಂಕೇತವಿರಬಹುದು. ಮನೆಯ ಸದಸ್ಯರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದೂ ವಾಸ್ತು ತಜ್ಞರು ಹೇಳುತ್ತಾರೆ.
Image credits: instagram
Kannada
ಹಳದಿ ಎಲೆಗಳ ಸಂಕೇತ
ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತಿದೆ ಎಂದರ್ಥ. ಅಕಾಲಿಕವಾಗಿ ಎಲೆಗಳು ಉದುರುವುದು ಕುಟುಂಬದ ಸದಸ್ಯರ ನಡುವೆ ಮನಸ್ತಾಪದ ಮುನ್ಸೂಚನೆಯಾಗಿರಬಹುದು.
Image credits: instagram
Kannada
ಅನಿರೀಕ್ಷಿತ ಕೀಟಗಳ ಬಾಧೆ
ತುಳಸಿಗೆ ಸಾಮಾನ್ಯವಾಗಿ ಕೀಟಗಳು ಹತ್ತುವುದಿಲ್ಲ. ಆದರೆ ಬೂಸ್ಟು ಅಥವಾ ಕೀಟಗಳ ದಾಳಿ ಕಂಡುಬಂದರೆ, ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.
Image credits: instagram
Kannada
ವ್ಯಾಪಾರದಲ್ಲಿ ನಷ್ಟದ ಭೀತಿ
ತುಳಸಿಯ ಮೇಲೆ ಕೀಟಗಳ ಪ್ರಭಾವ ಹೆಚ್ಚಾದರೆ, ಅದು ಗ್ರಹದೋಷದ ಸಂಕೇತವಿರಬಹುದು. ಇದರಿಂದ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಡೆತಡೆಗಳು ಉಂಟಾಗಬಹುದು.
Image credits: instagram
Kannada
ಏನು ಮಾಡಬೇಕು?
ಒಣಗಿದ ತುಳಸಿ ಗಿಡವನ್ನು ತೆಗೆದು ಹೊಸ ಗಿಡ ನಡಿ. ಪ್ರತಿದಿನ ಸಂಜೆ ದೀಪ ಹಚ್ಚಿ ಪೂಜಿಸುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.