Sofa cleaning at home: ಸೋಫಾ ಕ್ಲೀನ್ ಮಾಡೋದು ಭಾಳ ಸುಲಭ ರೀ, ಜಸ್ಟ್ ಈ ಲಿಕ್ವಿಡ್ ಬಳಸ್ರಿ
Sofa cleaning at home: ನಿಮ್ಮ ಸೋಫಾದ ಮೇಲಿರುವ ಜಿಡ್ಡು ಮತ್ತು ಕಲೆಗಳನ್ನು ಕಂಡು ಬೇಸತ್ತಿದ್ದೀರಾ? ಮಾರುಕಟ್ಟೆಯ ದುಬಾರಿ ಕ್ಲೀನರ್‌ಗಳ ಬದಲಿಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸೋಫಾವನ್ನು ಹೊಸದರಂತೆ ಹೊಳೆಯುವಂತೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸ್ಮಾರ್ಟ್ ಕ್ಲೀನಿಂಗ್ ಟಿಪ್ಸ್.
ದುಬಾರಿ ಕೆಮಿಕಲ್ ಕ್ಲೀನರ್ ಬೇಡ
ದುಬಾರಿ ಕೆಮಿಕಲ್ ಕ್ಲೀನರ್ ಬೇಡ
ಸೋಫಾ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಪೀಠೋಪಕರಣ. ನಿರಂತರ ಬಳಕೆಯಿಂದಾಗಿ ಅದರ ಮೇಲೆ ಧೂಳು, ಕಾಫಿ, ಟೀ ಅಥವಾ ಎಣ್ಣೆಯ ಜಿಡ್ಡುಗಳು ಬೀಳುವುದು ಸಹಜ. ಇಂತಹ ಕಲೆಗಳನ್ನು ತೆಗೆಯಲು ಪ್ರತಿ ಬಾರಿ ಮಾರುಕಟ್ಟೆಯ ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನೇ ಖರೀದಿಸಬೇಕಿಲ್ಲ. ಮನೆಯಲ್ಲಿರುವ ಪದಾರ್ಥ ಬಳಸಿ ಸುಲಭವಾಗಿ ಕ್ಲೀನಿಂಗ್ ಸಲ್ಯೂಷನ್ ತಯಾರಿಸಬಹುದು.
ಕ್ಲೀನಿಂಗ್ ಸಲ್ಯೂಷನ್ ತಯಾರಿಸುವ ವಿಧಾನ
ಕ್ಲೀನಿಂಗ್ ಸಲ್ಯೂಷನ್ ತಯಾರಿಸುವ ವಿಧಾನ
ಒಂದು ಕಪ್ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಸಣ್ಣ ಚಮಚ ಮೈಲ್ಡ್ ಡಿಶ್‌ವಾಶ್ ಲಿಕ್ವಿಡ್ ಮತ್ತು ಒಂದು ಚಮಚ ಬೇಕಿಂಗ್ ಸೋಡಾ ಸೇರಿಸಿ. ನಂತರ ಸ್ವಲ್ಪ ಪ್ರಮಾಣದ ಬಿಳಿ ವಿನೆಗರ್ (White Vinegar) ಬೆರೆಸಿ. ವಿನೆಗರ್ ಹಾಕಿದಾಗ ನೊರೆ ಬರಬಹುದು, ಹಾಗಾಗಿ ನಿಧಾನವಾಗಿ ಮಿಶ್ರಣ ಮಾಡಿ. ಹೆಚ್ಚು ಡಿಶ್‌ವಾಶ್ ಲಿಕ್ವಿಡ್ ಬಳಸಬೇಡಿ, ಇದು ಸೋಫಾ ಮೇಲೆ ಅಂಟಂಟಾದ ಅಂಶವನ್ನು ಬಿಡಬಹುದು.
ಸ್ವಚ್ಛಗೊಳಿಸುವ ಹಂತ
ಧೂಳು ತೆಗೆಯಿರಿ
ಯಾವುದೇ ಲಿಕ್ವಿಡ್ ಬಳಸುವ ಮೊದಲು ಸೋಫಾವನ್ನು ವ್ಯಾಕ್ಯೂಮ್ ಕ್ಲೀನರ್ ಅಥವಾ ಮೃದುವಾದ ಬ್ರಷ್‌ನಿಂದ ಒರೆಸಿ ಧೂಳು ಮತ್ತು ಕೂದಲಿನ ಕಣಗಳನ್ನು ತೆಗೆಯಿರಿ.
ಬಳಸುವ ವಿಧಾನ
ಬಳಸುವ ವಿಧಾನ
ತಯಾರಿಸಿದ ಮಿಶ್ರಣವನ್ನು ನೇರವಾಗಿ ಸೋಫಾ ಮೇಲೆ ಸುರಿಯಬೇಡಿ. ಬದಲಿಗೆ ಒಂದು ಮೈಕ್ರೋಫೈಬರ್ ಬಟ್ಟೆಯನ್ನು ಅದರಲ್ಲಿ ಅದ್ದಿ, ಚೆನ್ನಾಗಿ ಹಿಂಡಿ. ನಂತರ ಕಲೆ ಇರುವ ಜಾಗದಲ್ಲಿ ಹಗುರವಾಗಿ ಒತ್ತಿ ಒರೆಸಿ. ಬಟ್ಟೆಯನ್ನು ಜೋರಾಗಿ ಉಜ್ಜಬೇಡಿ, ಇದು ಸೋಫಾ ಬಟ್ಟೆಯ ನೂಲನ್ನು ಹಾಳುಮಾಡಬಹುದು.
ಶುದ್ಧ ನೀರಿನಲ್ಲಿ ಕ್ಲೀನ್ ಮಾಡಿ
ಶುದ್ಧ ನೀರಿನಲ್ಲಿ ಕ್ಲೀನ್ ಮಾಡಿ
ಕಲೆ ಹೋದ ನಂತರ, ಶುದ್ಧ ನೀರಿನಲ್ಲಿ ಅದ್ದಿ ಹಿಂಡಿದ ಮತ್ತೊಂದು ಬಟ್ಟೆಯಿಂದ ಆ ಜಾಗವನ್ನು ಒರೆಸಿ ಸಾಬೂನಿನ ಅಂಶವನ್ನು ತೆಗೆಯಿರಿ.
ಒಣಗಿಸಿ
ಒಣಗಿಸಿ
ಸೋಫಾವನ್ನು ಚೆನ್ನಾಗಿ ಗಾಳಿಯಾಡುವಂತೆ ಬಿಡಿ. ಅದು ಸಂಪೂರ್ಣವಾಗಿ ಒಣಗಿದ ನಂತರವೇ ಬಳಸಿ.
ಗಮನಿಸಿ
ಗಮನಿಸಿ
ಈ ಮನೆಮದ್ದು ಎಲ್ಲ ರೀತಿಯ ಸೋಫಾಗಳಿಗೆ ಸೂಕ್ತವಲ್ಲ. ವಿಶೇಷವಾಗಿ ಚರ್ಮ (Leather), ವೆಲ್ವೆಟ್ (Velvet) ಅಥವಾ ಸೂಯೆಡ್ (Suede) ಸೋಫಾಗಳ ಮೇಲೆ ಇದನ್ನು ಬಳಸಬೇಡಿ. ಯಾವುದೇ ಕ್ಲೀನರ್ ಬಳಸುವ ಮೊದಲು ಸೋಫಾದ ಯಾವುದಾದರೂ ಮೂಲೆಯಲ್ಲಿ 'ಪ್ಯಾಚ್ ಟೆಸ್ಟ್' (Patch Test) ಮಾಡಿ ನೋಡಿ. ಬಣ್ಣ ಬದಲಾಗದಿದ್ದರೆ ಮಾತ್ರ ಪೂರ್ತಿ ಸೋಫಾ ಸ್ವಚ್ಛಗೊಳಿಸಲು ಮುಂದಾಗಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.