MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಕಿಚನ್ ಸಿಂಕ್ ಬ್ಲಾಕ್ ಆಗಿದೆಯೇ? 1 ಪ್ಲಾಸ್ಟಿಕ್ ಬಾಟಲಿಯಿಂದ ಕೆಲವೇ ಸೆಕೆಂಡುಗಳಲ್ಲಿ ಕ್ಲಿಯರ್ ಮಾಡಿ

ಕಿಚನ್ ಸಿಂಕ್ ಬ್ಲಾಕ್ ಆಗಿದೆಯೇ? 1 ಪ್ಲಾಸ್ಟಿಕ್ ಬಾಟಲಿಯಿಂದ ಕೆಲವೇ ಸೆಕೆಂಡುಗಳಲ್ಲಿ ಕ್ಲಿಯರ್ ಮಾಡಿ

Clear clogged sink with plastic bottle: ಸಿಂಕ್ ಬ್ಲಾಕ್ ಆದರೆ ಇನ್ಮುಂದೆ ಪೈಪ್ ಹಾಳುಮಾಡುವ ಕೆಮಿಕಲ್‌ಗಳನ್ನು ಬಳಸಬೇಡಿ. ಕೇವಲ ಒಂದು ಪ್ಲಾಸ್ಟಿಕ್ ವಾಟರ್ ಬಾಟಲಿಯ ನೀರಿನ ರಭಸದಿಂದ, ನಯಾಪೈಸೆ ಖರ್ಚಿಲ್ಲದೆ ಎರಡೇ ಸೆಕೆಂಡಿನಲ್ಲಿ ಸಿಂಕ್ ಕ್ಲೀನ್ ಮಾಡುವ ಸೂಪರ್ ಹ್ಯಾಕ್ ಇಲ್ಲಿದೆ!

2 Min read
Author : Ashwini HR
Published : Oct 07 2026, 02:07 PM IST
Share this Photo Gallery
  • FB
  • TW
  • Linkdin
  • Whatsapp
16
ಬ್ಲಾಕೇಜ್ ತೆರೆಯುವ ಸುಲಭ ವಿಧಾನವಿದು
Image Credit : Clever Hacks YT

ಬ್ಲಾಕೇಜ್ ತೆರೆಯುವ ಸುಲಭ ವಿಧಾನವಿದು

ಅಡುಗೆ ಮನೆಯ ಸಿಂಕ್‌ನಲ್ಲಿ ನೀರು ಸರಾಗವಾಗಿ ಹರಿಯದೆ ನಿಧಾನವಾಗಿ ಇಳಿಯುತ್ತಿದ್ದರೆ ಇನ್ಮುಂದೆ ಪೈಪ್ ಒಡೆಯುವ ಕೆಮಿಕಲ್‌ಗಳಾಗಲಿ, ಪ್ಲಂಬರ್ ಕರೆಯುವ ಅಗತ್ಯವಾಗಲಿ ಇರುವುದಿಲ್ಲ. ಮನೆಯಲ್ಲಿರುವ ಒಂದು ಸಾಮಾನ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸಿ ಕೆಲವೇ ಸೆಕೆಂಡುಗಳಲ್ಲಿ ನೀರಿನ ರಭಸದ ಒತ್ತಡದಿಂದ ಬ್ಲಾಕೇಜ್ ತೆರೆಯುವ ಸುಲಭ ವಿಧಾನ ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊಳೆ ಮತ್ತು ಜಿಡ್ಡನ್ನು ತಕ್ಷಣವೇ ಮುಂದೆ ತಳ್ಳಿಬಿಡುತ್ತೆ
Image Credit : Clever Hacks YT

ಕೊಳೆ ಮತ್ತು ಜಿಡ್ಡನ್ನು ತಕ್ಷಣವೇ ಮುಂದೆ ತಳ್ಳಿಬಿಡುತ್ತೆ

ಸಿಂಕ್ ಪೈಪ್‌ಗಳಲ್ಲಿ ಆಹಾರದ ಚೂರುಗಳು ಅಥವಾ ಜಿಡ್ಡು ಸಿಲುಕಿಕೊಂಡಾಗ ನೀರು ನಿಧಾನವಾಗಿ ಹರಿಯಲು ಶುರುವಾಗುತ್ತದೆ. ನೀರು ಕುಗ್ಗುವುದಿಲ್ಲ (Water does not compress) ಎಂಬ ನಿಯಮವನ್ನು ಈ ಟ್ರಿಕ್‌ನಲ್ಲಿ ಬಳಸಲಾಗುತ್ತದೆ. ನೀರು ತುಂಬಿದ ಬಾಟಲಿಯನ್ನು ಸಿಂಕ್ ರಂಧ್ರಕ್ಕೆ ಅದುಮಿದಾಗ, ಉಂಟಾಗುವ ತೀವ್ರವಾದ ನೀರಿನ ಒತ್ತಡವು (Hydraulic Force) ಪೈಪ್‌ನ ತಿರುವುಗಳಲ್ಲಿ ಸಿಲುಕಿರುವ ಕೊಳೆ ಮತ್ತು ಜಿಡ್ಡನ್ನು ತಕ್ಷಣವೇ ಮುಂದೆ ತಳ್ಳಿಬಿಡುತ್ತದೆ.

Related Articles

Related image1
ನೀರು, ಸೋಪು ಬಳಸದೆ ಎರಡೇ ನಿಮಿಷದಲ್ಲಿ ಎಣ್ಣೆ ಕ್ಯಾನ್ ಜಿಡ್ಡು ಹೀಗೆ ಕ್ಲೀನ್ ಮಾಡಿ!
Related image2
ಸ್ಟೀಲ್ ಸ್ಕ್ರಬ್ಬರ್ ಬೇಡವೇ ಬೇಡ.. ಸೀದ ಪಾತ್ರೆ, ಬಾಣಲೆ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಟಿಶ್ಯೂ ಪೇಪರ್ ಟ್ರಿಕ್
36
ಹಂತ-ಹಂತದ ವಿಧಾನ (Step-by-Step Guide)
Image Credit : Clever Hacks YT

ಹಂತ-ಹಂತದ ವಿಧಾನ (Step-by-Step Guide)

ಬಾಟಲ್ ಆಯ್ಕೆ
ಸುಲಭವಾಗಿ ಕೈಯಿಂದ ಅದುಮಲು ಬರುವಂತಹ 500 ml ನಿಂದ 1.5 ಲೀಟರ್‌ನ ಸಾಧಾರಣ ಪ್ಲಾಸ್ಟಿಕ್ ಬಾಟಲ್ ತೆಗೆದುಕೊಳ್ಳಿ.

ನೀರು ತುಂಬಿ
ಬಾಟಲಿಯ ಪೂರ್ತಿ ಮೇಲ್ಭಾಗದವರೆಗೆ ಶುದ್ಧ ನೀರನ್ನು ತುಂಬಿಕೊಳ್ಳಿ.

ಸಿಂಕ್ ರಂಧ್ರಕ್ಕೆ ಮುಚ್ಚಿ
ಬಾಟಲಿಯ ಮುಚ್ಚಳ ತೆಗೆದು, ತಕ್ಷಣವೇ ಅದನ್ನು ತಲೆಕೆಳಗು ಮಾಡಿ ಸಿಂಕ್‌ನ ರಂಧ್ರದ (Drain hole) ಮೇಲೆ ಗಟ್ಟಿಯಾಗಿ ಒತ್ತಿ ಹಿಡಿಯಿರಿ. (ಸುತ್ತಲೂ ನೀರು ಆಚೆ ಹೋಗದಂತೆ ಬಿಗಿಯಾಗಿ ಹಿಡಿಯುವುದು ಮುಖ್ಯ).

ಜೋರಾಗಿ ಅದುಮಿ (Squeeze)
ಈಗ ನಿಮ್ಮ ಕೈಯಿಂದ ಬಾಟಲಿಯನ್ನು ಪೂರ್ತಿ ಬಲಪ್ರಯೋಗ ಮಾಡಿ ಜೋರಾಗಿ ಅದುಮಿ. ಇದರಿಂದ ಬಾಟಲಿಯೊಳಗಿನ ನೀರು ಜೆಟ್ ವೇಗದಲ್ಲಿ ಪೈಪ್ ಒಳಗೆ ನುಗ್ಗುತ್ತದೆ.

46
ಟ್ಯಾಪ್ ಆನ್ ಮಾಡಿ ನೋಡಿ
Image Credit : Clever Hacks YT

ಟ್ಯಾಪ್ ಆನ್ ಮಾಡಿ ನೋಡಿ

ಬಾಟಲಿ ತೆಗೆದು ಟ್ಯಾಪ್ ನೀರನ್ನು ಬಿಟ್ಟು ನೋಡಿ. ನೀರು ಎಂದಿನಂತೆ ವೇಗವಾಗಿ ಹರಿಯುತ್ತಿದ್ದರೆ ಬ್ಲಾಕ್ ತೆರವಾಗಿದೆ ಎಂದರ್ಥ. ನೀರು ಇನ್ನೂ ನಿಧಾನವಾಗಿದ್ದರೆ ಈ ಪ್ರಕ್ರಿಯೆಯನ್ನು ಇನ್ನೆರಡು ಬಾರಿ ಪುನರಾವರ್ತಿಸಿ.

56
ಕೆಮಿಕಲ್ ಕ್ಲೀನರ್‌ಗಿಂತ ಇದು ಹೇಗೆ ಉತ್ತಮ?
Image Credit : Clever Hacks YT

ಕೆಮಿಕಲ್ ಕ್ಲೀನರ್‌ಗಿಂತ ಇದು ಹೇಗೆ ಉತ್ತಮ?

ಮಾರುಕಟ್ಟೆಯಲ್ಲಿ ಸಿಗುವ ಆ್ಯಸಿಡ್ ಅಥವಾ ಡ್ರೈನ್ ಕ್ಲೀನಿಂಗ್ ಕೆಮಿಕಲ್‌ಗಳು ಪೈಪ್‌ಗಳ ಜಾಯಿಂಟ್‌ಗಳನ್ನು ತಿಂದು ಹಾಳುಮಾಡುತ್ತವೆ ಮತ್ತು ಕಾಲಕ್ರಮೇಣ ಪೈಪ್‌ಗಳು ಸೋರಲು (Leakage) ಕಾರಣವಾಗುತ್ತವೆ. ಆದರೆ ಈ ನೀರಿನ ಒತ್ತಡದ ವಿಧಾನದಲ್ಲಿ ಯಾವುದೇ ರಾಸಾಯನಿಕಗಳಿಲ್ಲ, ಕೇವಲ ಭೌತಿಕ ನೀರಿನ ರಭಸದಿಂದ ಕೊಳೆ ಕ್ಲಿಯರ್ ಆಗುವುದರಿಂದ ಪೈಪ್‌ಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ನಯಾಪೈಸೆ ಖರ್ಚೂ ಇರುವುದಿಲ್ಲ.

66
ಗಮನಿಸಿ..
Image Credit : Clever Hacks YT

ಗಮನಿಸಿ..

ಪೈಪ್ ಸಂಪೂರ್ಣವಾಗಿ ಕಲ್ಲು/ಪ್ಲಾಸ್ಟಿಕ್‌ನಂತಹ ಗಟ್ಟಿ ವಸ್ತುಗಳಿಂದ ಬಂದ್ ಆಗಿದ್ದರೆ ಇದು ಕೆಲಸ ಮಾಡುವುದಿಲ್ಲ. ನೀರು ನಿಧಾನವಾಗಿ ಇಳಿಯುವ ಸಣ್ಣಪುಟ್ಟ ಜಿಡ್ಡಿನ ಬ್ಲಾಕ್‌ಗಳಿಗೆ ಇದು 100% ಪರಿಣಾಮಕಾರಿ).

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
 

Latest Videos
Recommended Stories
Recommended image1
ಮಳೆ-ಚಳಿ ವಾತಾವರಣದಲ್ಲಿ ದೇಹಕ್ಕೆ ಶಕ್ತಿ ನೀಡಲು ಎನರ್ಜಿ ಡ್ರಿಂಕ್ ಬಿಟ್ಟು ಈ ಸಾಬುದಾನ ಸೂಪ್ ಟ್ರೈ ಮಾಡಿ
Recommended image2
Temple Jhumkas ರೇಷ್ಮೆ ಸೀರೆಗೆ ಕಳೆ ತರುವ ಟೆಂಪಲ್ ಜ್ಯುವೆಲರಿ ಜುಮುಕಿ ಡಿಸೈನ್ಸ್
Recommended image3
Underarms Tapping: ಪ್ರತಿದಿನ ಕೆಲವು ನಿಮಿಷಗಳ ಕಾಲ ನಿಮ್ಮ ಅಂಡರ್‌ ಆರ್ಮ್ಸ್‌ ಟ್ಯಾಪ್‌ ಮಾಡಿದ್ರೆ ಏನಾಗುತ್ತದೆ?
Related Stories
Recommended image1
ನೀರು, ಸೋಪು ಬಳಸದೆ ಎರಡೇ ನಿಮಿಷದಲ್ಲಿ ಎಣ್ಣೆ ಕ್ಯಾನ್ ಜಿಡ್ಡು ಹೀಗೆ ಕ್ಲೀನ್ ಮಾಡಿ!
Recommended image2
ಸ್ಟೀಲ್ ಸ್ಕ್ರಬ್ಬರ್ ಬೇಡವೇ ಬೇಡ.. ಸೀದ ಪಾತ್ರೆ, ಬಾಣಲೆ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಟಿಶ್ಯೂ ಪೇಪರ್ ಟ್ರಿಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved