Kannada

ಸದಾ ಕಾಡುವ ಎಣ್ಣೆ ಜಿಡ್ಡು

ಅಡುಗೆ ಮನೆಯಲ್ಲಿ ಎಣ್ಣೆ ಕ್ಯಾನ್ ಅಥವಾ ಕರಿದ ಬಾಣಲೆಗಳನ್ನು ಸೋಪು ಅಥವಾ ಲಿಕ್ವಿಡ್‌ನಿಂದ ಎಷ್ಟೇ ತೊಳೆದರೂ ಜಿಡ್ಡಿನ ಜಿಗುಟುತನ ಬೇಗ ಹೋಗುವುದಿಲ್ಲ.

Kannada

ಕೊಬ್ಬರಿ ಎಣ್ಣೆ ಹಚ್ಚಿ

ಜಿಡ್ಡಾಗಿರುವ ಕ್ಯಾನ್ ಮೇಲೆ ಮೊದಲು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕೈಯಿಂದ ಎಲ್ಲಾ ಕಡೆ ಹರಡುವಂತೆ ಸವರಿ. ಕುಕಿಂಗ್ ಆಯಿಲ್‌ಗೆ ಹೋಲಿಸಿದರೆ ಕೊಬ್ಬರಿ ಎಣ್ಣೆ ಜಿಡ್ಡನ್ನು ಬೇಗ ಸಡಿಲಗೊಳಿಸುತ್ತದೆ.

Image credits: Getty
Kannada

ಹಿಟ್ಟು ಉದುರಿಸಿ ಉಜ್ಜಿ

ಈಗ ಅದರ ಮೇಲೆ ಗೋಧಿ ಹಿಟ್ಟು, ಮೈದಾ ಅಥವಾ ಅಡುಗೆಗೆ ಬಳಸಲಾಗದ ಎಕ್ಸ್‌ಪೈರ್ ಆದ ಯಾವುದೇ ಹಿಟ್ಟನ್ನು ಹಾಕಿ ಹಗುರವಾಗಿ ಉಜ್ಜಿ.

Image credits: Getty
Kannada

ಹಿಟ್ಟಿಗೆ ಅಂಟಿಕೊಳ್ಳುವ ಜಿಡ್ಡು

ಒಣ ಹಿಟ್ಟು ಕ್ಯಾನ್ ಮೇಲಿರುವ ಹಳೆಯ ಎಣ್ಣೆಯ ಕಲೆ ಮತ್ತು ಜಿಡ್ಡನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಕಷ್ಟಪಟ್ಟು ಉಜ್ಜುವ ಅಗತ್ಯವೇ ಇರುವುದಿಲ್ಲ.

Image credits: Pixabay
Kannada

ಟಿಶ್ಯೂನಿಂದ ಒರೆಸಿದರೆ ಸಾಕು!

ನಂತರ ಒಂದು ಒಣ ಟಿಶ್ಯೂ ಪೇಪರ್ ಅಥವಾ ಹಳೆಯ ಕಾಟನ್ ಬಟ್ಟೆಯಿಂದ ಒರೆಸಿ ತೆಗೆದರೆ, ಜಿಡ್ಡು ಮತ್ತು ಮುರಿಕೆಯೆಲ್ಲಾ ಹಿಟ್ಟಿನ ಸಮೇತ ಹೊರಬರುತ್ತದೆ.

Image credits: chat gpt
Kannada

ಹೊಸದರಂತೆ ಕ್ಲೀನ್!

ನೀರು ಮತ್ತು ಸೋಪು ಬಳಸದೇ ಕೇವಲ 2 ನಿಮಿಷದಲ್ಲಿ ಎಣ್ಣೆ ಕ್ಯಾನ್ ಹೊಸದರಂತೆ ಹೊಳೆಯುತ್ತದೆ! ಇದೇ ವಿಧಾನವನ್ನು ತಿಂಡಿ ಕರಿದ ದೊಡ್ಡ ಬಾಣಲೆಗಳಿಗೂ ಬಳಸಬಹುದು.

Image credits: AI Image

Kitchen Cleaning Tips: ಎಚ್ಚರ, ಅಡುಗೆಮನೆಯಲ್ಲಿ ನೀವು ಮರೆಯದೆ ಸ್ವಚ್ಛಗೊಳಿಸಬೇಕಾದ 3 ವಸ್ತುಗಳಿವು!

Cooking Hacks: ಐದು ತಪ್ಪುಗಳನ್ನು ಮಾಡಿದ್ರೆ ಅಡುಗೆ ಎಂದಿಗೂ ಪರ್ಫೆಕ್ಟ್ ಆಗಲ್ಲ

ಅಡುಗೆ ಕೆಲಸ ಸುಲಭ ಮಾಡಿಕೊಳ್ಳಲು ಅಮ್ಮ ಹೇಳಿದ 7 ಸಿಂಪಲ್ ಕಿಚನ್ ಟಿಪ್ಸ್

ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದಲೇ ನಿಮ್ಮ ಲಿವರ್ ಕೊಬ್ಬು ಕರಗಿಸಬಹುದು!