MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಪುಡಿ ಮಾಡಿದ ಮೊಟ್ಟೆಯ ಸಿಪ್ಪೆಯನ್ನ ಗಿಡಗಳಿಗೆ ಹಾಕಿದ್ರೆ ಯಾವ ರೋಗನೂ ಬರಲ್ಲ, ವೇಗವಾಗಿ ಬೆಳೆಯುತ್ತೆ

ಪುಡಿ ಮಾಡಿದ ಮೊಟ್ಟೆಯ ಸಿಪ್ಪೆಯನ್ನ ಗಿಡಗಳಿಗೆ ಹಾಕಿದ್ರೆ ಯಾವ ರೋಗನೂ ಬರಲ್ಲ, ವೇಗವಾಗಿ ಬೆಳೆಯುತ್ತೆ

Eggshells for garden Kannada: ನಾವು ಕಸ ಎಂದು ನಿರ್ಲಕ್ಷಿಸುವ ಈ ಮೊಟ್ಟೆ ಸಿಪ್ಪೆ ನಮ್ಮ ಗಿಡಗಳಿಗೆ ಅದ್ಭುತವಾದ ಪೋಷಕಾಂಶಗಳನ್ನು ಒದಗಿಸಬಲ್ಲವು. ಮಣ್ಣಿನ ಸಾರವನ್ನು ಹೆಚ್ಚಿಸುವುದರಿಂದ ಹಿಡಿದು ಕೀಟಗಳನ್ನು ಓಡಿಸುವವರೆಗೆ ಹೇಗೆ ಸ್ಮಾರ್ಟ್ ಆಗಿ ಬಳಸಬಹುದು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ. 

2 Min read
Author : Ashwini HR
Published : Feb 19 2026, 03:11 PM IST
Share this Photo Gallery
  • FB
  • TW
  • Linkdin
  • Whatsapp
15
ಅಧಿಕ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ
Image Credit : Getty

ಅಧಿಕ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ

ಮೊಟ್ಟೆ ಸಿಪ್ಪೆಯನ್ನ ಕಸದ ಬುಟ್ಟಿಗೆ ಎಸೆಯುವ ಮುನ್ನ ಈ ಲೇಖನ ಓದಿ. ಏಕೆಂದರೆ ಸಿಪ್ಪೆಗಳು ನಿಮ್ಮ ಗಿಡಗಳಿಗೆ ಅಮೂಲ್ಯವಾದ ಪೋಷಕಾಂಶಗಳನ್ನು ನೀಡಬಲ್ಲವು. ಹೇಗಿದ್ದರೂ ಮೊಟ್ಟೆಯ ಬೆಲೆ ಹೆಚ್ಚಿರುವುದರಿಂದ ಅದರ ಪ್ರತಿಯೊಂದು ಭಾಗವನ್ನೂ ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಇನ್ನು ಮೊಟ್ಟೆಯ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ಮಣ್ಣಿನ ಸಾರವನ್ನು ಹೆಚ್ಚಿಸುವುದಲ್ಲದೆ, ವಿನ್ಯಾಸವನ್ನು ಸುಧಾರಿಸುತ್ತದೆ.

25
ಪ್ರಯೋಜನಗಳೇನು?
Image Credit : Getty

ಪ್ರಯೋಜನಗಳೇನು?

ಗಿಡದ ಜೀವಕೋಶಗಳ ಗೋಡೆ ಬಲವಾಗುತ್ತೆ
ಮೊಟ್ಟೆಯ ಸಿಪ್ಪೆ ಬಹುತೇಕ ಕ್ಯಾಲ್ಸಿಯಂ ಕಾರ್ಬೋನೇಟ್‌ನಿಂದ ಮಾಡಲ್ಪಟ್ಟಿದೆ. ಇದನ್ನು ಗಿಡದ ಮಣ್ಣಿಗೆ ಸೇರಿಸುವುದರಿಂದ ಜೀವಕೋಶಗಳ ಗೋಡೆ ಬಲಪಡಿಸಲು ಅಗತ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ.

ಮಣ್ಣಿನ ವಿನ್ಯಾಸ ಸುಧಾರಣೆ
ಪುಡಿ ಮಾಡಿದ ಮೊಟ್ಟೆ ಸಿಪ್ಪೆ ಮಣ್ಣಿಗೆ ಗಾಳಿಯಾಡುವಂತೆ (Aeration) ಮಾಡುತ್ತೆ ಮತ್ತು ಮಣ್ಣಿನ ವಿನ್ಯಾಸವನ್ನು ಹಗುರಗೊಳಿಸುತ್ತವೆ. ಇದು ಕಾಂಪೋಸ್ಟ್ ಗೊಬ್ಬರಕ್ಕೆ ಉತ್ತಮ 'ಒರಟುತನ' ನೀಡುತ್ತದೆ.

ಕೀಟಗಳ ನಿಯಂತ್ರಣ
ನುಣ್ಣಗೆ ಪುಡಿ ಮಾಡದ, ಸ್ವಲ್ಪ ಒರಟಾದ ಮೊಟ್ಟೆ ಪುಡಿಯನ್ನ ಗಿಡದ ಸುತ್ತ ಹರಡುವುದರಿಂದ ಬಸವನ ಹುಳುಗಳಂತಹ (Slugs and Snails) ಮೃದುದೇಹಿ ಕೀಟಗಳು ಗಿಡದ ಹತ್ತಿರ ಬರದಂತೆ ತಡೆಯಬಹುದು.

ಮಣ್ಣಿನ ಆಮ್ಲೀಯತೆ ಕಡಿಮೆ ಮಾಡುತ್ತೆ
ನಿಮ್ಮ ತೋಟದ ಮಣ್ಣು ಅತಿಯಾದ ಆಮ್ಲೀಯತೆಯಿಂದ ಕೂಡಿದ್ದರೆ, ಮೊಟ್ಟೆಯ ಸಿಪ್ಪೆ ಅದನ್ನು ಸಮತೋಲನಗೊಳಿಸಿ ತಟಸ್ಥ (Neutral pH) ಮಟ್ಟಕ್ಕೆ ತರಲು ಸಹಾಯ ಮಾಡುತ್ತವೆ.

Related Articles

Related image1
ಈ 7 ಗಿಡಕ್ಕೆ ಅಕ್ಕಿ ತೊಳೆದ ನೀರು ಹಾಕಿದ್ರೆ ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ
Related image2
ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ
35
ಈ ಗಿಡಗಳಿಗೆ ಹೆಚ್ಚು ಪ್ರಯೋಜನವಾಗುತ್ತೆ
Image Credit : Getty

ಈ ಗಿಡಗಳಿಗೆ ಹೆಚ್ಚು ಪ್ರಯೋಜನವಾಗುತ್ತೆ

ಟೊಮೆಟೊ, ಆಲೂಗಡ್ಡೆ, ಬಟಾಣಿ, ಕೋಸುಗಡ್ಡೆ , ಸ್ಟ್ರಾಬೆರಿ, ತುಳಸಿ (Basil), ಗುಲಾಬಿ, ಹೈಡ್ರೇಂಜ ಮತ್ತು ಜೀಬ್ರಾದಂತಹ ಅಲಂಕಾರಿಕ ಗಿಡಗಳಿಗೆ ಇದು ಹೆಚ್ಚು ಉಪಯುಕ್ತ.

45
ಬಳಸುವ ವಿಧಾನ
Image Credit : Getty

ಬಳಸುವ ವಿಧಾನ

ಸಸಿಗಳನ್ನು ಬೆಳೆಸಲು ಬಳಕೆ
ಫೋಟೋದಲ್ಲಿ ತೋರಿಸಿರುವಂತೆ ಪ್ಲಾಸ್ಟಿಕ್ ಪಾಟ್‌ಗಳ ಬದಲಿಗೆ, ತೊಳೆದ ಮೊಟ್ಟೆ ಸಿಪ್ಪೆಯ ಅರ್ಧಭಾಗ ಬಳಸಿ ಸಸಿಗಳನ್ನು ಬೆಳೆಸಬಹುದು. ಸಸಿ ಸ್ವಲ್ಪ ದೊಡ್ಡದಾದ ನಂತರ, ಸಿಪ್ಪೆಯ ಸಮೇತ ಮಣ್ಣಿನಲ್ಲಿ ನೆಡಬಹುದು.

ಕಾಂಪೋಸ್ಟ್ ಗೊಬ್ಬರಕ್ಕೆ ಸೇರಿಸಿ
ಮೊಟ್ಟೆ ಸಿಪ್ಪೆ ಚೆನ್ನಾಗಿ ತೊಳೆದು, ಒಣಗಿಸಿ, ಪುಡಿ ಮಾಡಿ ಕಾಂಪೋಸ್ಟ್ ಗೆ ಸೇರಿಸುವುದರಿಂದ ಗೊಬ್ಬರದ ಸಾರ ಹೆಚ್ಚುತ್ತದೆ.

ಮಣ್ಣಿನ ಪೂರಕವಾಗಿ ಬಳಸಿ
ನಿಮ್ಮ ಬಳಿ ಕಾಂಪೋಸ್ಟ್ ಇಲ್ಲದಿದ್ದರೆ, ನೇರವಾಗಿ ಮೊಟ್ಟೆ ಸಿಪ್ಪೆ ಪುಡಿ ಮಾಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಬಹುದು.

ಕಳೆ ನಿಯಂತ್ರಣ
ಇದನ್ನು ಮಣ್ಣಿನ ಮೇಲೆ ಹೊದಿಕೆಯಂತೆ (Mulch) ಬಳಸುವುದರಿಂದ ಅನಗತ್ಯ ಕಳೆ ಗಿಡಗಳು ಬೆಳೆಯುವುದನ್ನು ತಡೆಯಬಹುದು.

55
ಕೆಲವು ಮುಖ್ಯ ಸಲಹೆಗಳು
Image Credit : Getty

ಕೆಲವು ಮುಖ್ಯ ಸಲಹೆಗಳು

ಸೊಳ್ಳೆಗಳ ಬಗ್ಗೆ ಎಚ್ಚರ: ಸಿಪ್ಪೆಯನ್ನು ಪುಡಿ ಮಾಡದೆ ಹಾಗೆಯೇ ಹಾಕಬೇಡಿ. ಕಪ್ ಆಕಾರದ ಸಿಪ್ಪೆಗಳಲ್ಲಿ ನೀರು ನಿಂತರೆ ಅದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಯಾವಾಗಲೂ ಪುಡಿ ಮಾಡಿಯೇ ಬಳಸಿ.
ಮಣ್ಣಿನ ಪರೀಕ್ಷೆ ಮಾಡಿ: ಮಣ್ಣಿನಲ್ಲಿ ಈಗಾಗಲೇ ಕ್ಯಾಲ್ಸಿಯಂ ಅಧಿಕವಾಗಿದ್ದರೆ ಸಿಪ್ಪೆ ಸೇರಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಮೊದಲು ಮಣ್ಣಿನ ಪರೀಕ್ಷೆ ಮಾಡುವುದು ಉತ್ತಮ.
ನುಣ್ಣಗೆ ಪುಡಿ ಮಾಡಿ: ಮೊಟ್ಟೆಯ ಸಿಪ್ಪೆ ಮಣ್ಣಿನಲ್ಲಿ ಕರಗಲು ದೀರ್ಘಕಾಲ ತೆಗೆದುಕೊಳ್ಳುತ್ತವೆ. ಆದ್ದರಿಂದ ಇವುಗಳನ್ನು ಸಾಧ್ಯವಾದಷ್ಟು ನುಣ್ಣಗೆ ಪುಡಿ ಮಾಡಿದರೆ ಗಿಡಗಳಿಗೆ ಬೇಗನೆ ಪೋಷಕಾಂಶಗಳು ದೊರೆಯುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
ಮೊಟ್ಟೆ

Latest Videos
Recommended Stories
Recommended image1
Vijay-Rashmika Wedding: ರಶ್ಮಿಕಾ ಜೊತೆ ಮದುವೆ ನಂತರ ವಿಜಯ್ ದೇವರಕೊಂಡ ಹಣೆಬರಹ ಬದಲಾಗಲಿದೆಯೇ? ಜ್ಯೋತಿಷಿ ಹೇಳಿದ್ದೇನು?
Recommended image2
Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​
Recommended image3
ಅಪ್ಪನ ಮೇಲೆ ಕೋಪಗೊಂಡು 2 ವರ್ಷ ಮನೆ ಬಿಟ್ಟಿದ್ದ ಅಂಬರೀಷ್ ಉಳಿದುಕೊಂಡಿದ್ದು ಎಲ್ಲಿ ಗೊತ್ತಾ?
Related Stories
Recommended image1
ಈ 7 ಗಿಡಕ್ಕೆ ಅಕ್ಕಿ ತೊಳೆದ ನೀರು ಹಾಕಿದ್ರೆ ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ
Recommended image2
ಹುದುಗಿಸಿದ ಅಕ್ಕಿ ನೀರು ಬಳಸಿದ್ರೆ ಸೊರಗಿದ ಗಿಡಗಳಿಗೂ ಬರುತ್ತೆ ಮರುಜೀವ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved