ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಹಾಕುವುದು ಹಳೆಯ ಪದ್ಧತಿಯಾದರೂ ಅದನ್ನು ಹುದುಗಿಸಿ (Ferment) ಬಳಸುವುದರಿಂದ ಹೆಚ್ಚು ಆರೋಗ್ಯವಾಗಿ ಬೆಳೆಯುತ್ತವೆ.
ಗಿಡಗಳಿಗೆ ಸಾಮಾನ್ಯ ಅಕ್ಕಿ ನೀರಿಗಿಂತ ಹುದುಗಿಸಿದ ಅಕ್ಕಿ ನೀರು ಹೆಚ್ಚು ಲಾಭದಾಯಕ. ಇದರಲ್ಲಿ ಸಾಮಾನ್ಯ ನೀರಿಗಿಂತ ಶೇ. 56 ರಷ್ಟು ಹೆಚ್ಚು ಪೋಷಕಾಂಶಗಳಿರುತ್ತವೆ.
ಈ ನೀರು ಗಿಡಗಳಿಗೆ ಬೇಕಾದ ಸಾರಜನಕ (Nitrogen), ರಂಜಕ (Phosphorus) ಮತ್ತು ಪೊಟ್ಯಾಶಿಯಂ (Potassium) ಅನ್ನು ಸಮೃದ್ಧವಾಗಿ ನೀಡುತ್ತದೆ.
ಅಕ್ಕಿ ತೊಳೆದ ನೀರನ್ನು ಒಂದು ಪಾತ್ರೆಗೆ (ಮಣ್ಣಿನ ಮಡಿಕೆ ಆದರೆ ಇನ್ನೂ ಒಳ್ಳೆಯದು) ಸೋಸಿಕೊಳ್ಳಿ.
ಈ ನೀರನ್ನು ಮುಚ್ಚಿಟ್ಟು 3 ರಿಂದ 5 ದಿನಗಳ ಕಾಲ ಹಾಗೆಯೇ ಬಿಡಿ. ಅದು ಸ್ವಲ್ಪ ಹುಳಿ ವಾಸನೆ ಬರಲು ಶುರುವಾಗುತ್ತದೆ.
ಈ ದ್ರಾವಣ ನೇರವಾಗಿ ಬಳಸಬೇಡಿ. 1 ಮಗ್ ಹುದುಗಿಸಿದ ನೀರಿಗೆ 10 ಮಗ್ ಸಾಮಾನ್ಯ ನೀರನ್ನು ಬೆರೆಸಿ ಗಿಡಗಳ ಬುಡಕ್ಕೆ ಹಾಕಿ ಅಥವಾ ಎಲೆಗಳ ಮೇಲೆ ಸಿಂಪಡಿಸಿ.
*ತರಕಾರಿ ಗಿಡಗಳು ವೇಗವಾಗಿ ಬೆಳೆಯುತ್ತವೆ.*ಎಲೆಗಳು ದೊಡ್ಡದಾಗಿ ಮತ್ತು ದಟ್ಟ ಹಸಿರಾಗಿ ಮೂಡಿಬರುತ್ತವೆ.*ಇದು ಸಂಪೂರ್ಣ ನೈಸರ್ಗಿಕ ಮತ್ತು ಉಚಿತ ಗೊಬ್ಬರವಾಗಿದೆ.
ಇದನ್ನು ಪ್ರತಿ 15 ದಿನಕ್ಕೊಮ್ಮೆ ಬಳಸಿದರೆ ಸಾಕು. ತಯಾರಾದ ತಕ್ಷಣ ಬಳಸಿ, ಸಂಗ್ರಹಿಸಿಡಬೇಡಿ.
ನೀವು ಗಾರ್ಡನಿಂಗ್ ಮಾಡಬೇಕಾ? ಹಾಗಿದ್ರೆ ಇಲ್ಲಿದೆ ಸಿಂಪಲ್ ಟಿಪ್ಸ್
Beetroot: ತಕ್ಷಣವೇ ಗ್ಲೋ ಬೇಕಾ? ಮದುಮಗಳಿಗಾಗಿ ಇಲ್ಲಿವೆ 5 ಬ್ಯೂಟಿ ಹ್ಯಾಕ್ಸ್
ಡೈಲಿ ಯೂಸ್‌ಗೆ ಹಗುರವಾದ ಬೆಳ್ಳಿ ಕಾಲ್ಗೆಜ್ಜೆ ಬೇಕಾ?, ಇಲ್ಲಿದೆ 6 ಗ್ರಾಂ ತೂಕದ ಡಿಸೈನ್ಸ್
ಈ ಸಿಂಪಲ್ ಟಿಪ್ಸ್ ಫಾಲೋ ಮಾಡ್ರಿ.. ಮನೇಲಿ ಮೆಹೆಂದಿ ಗಿಡ ಸೊಂಪಾಗಿ ಬೆಳೆಯುತ್ತೆ!