ತಿಂಗ್ಳಿಗೆ ಐದು ಸಾವಿರ ಸಂಪಾದನೆ ಮಾಡ್ತಿದ್ದ ಯುವಕನಿಗೆ ಅದೇ ಕಂಪನಿಲಿ 46 ಲಕ್ಷ ರೂ.ಕೆಲಸ ಸಿಕ್ತು!
ಈ ಯುವಕ ಮುಂದೊಂದು ದಿನ ಅದೇ ಕಂಪೆನಿಯಲ್ಲಿ ವರ್ಷಕ್ಕೆ 46 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ.

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಕಥೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದಲ್ಲದೆ, ಜನರ ಹೃದಯ ತಟ್ಟಿದೆ. ಅಂದಹಾಗೆ ಯುವಕನು ರೆಡ್ಡಿಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಆತನಿಗೆ ಈಗ 35 ವರ್ಷ. ತಿಂಗಳಿಗೆ 5,000 ರೂ.ಸಂಬಳ ಪಡೆಯುತ್ತಿದ್ದ ಈ ಯುವಕ ಮುಂದೊಂದು ದಿನ ಅದೇ ಕಂಪೆನಿಯಲ್ಲಿ ವರ್ಷಕ್ಕೆ 46 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಆ ಯುವಕ ಈ ಸ್ಥಾನಕ್ಕೆ ಹೇಗೆ ತಲುಪಿದೆ ಎಂಬುದನ್ನು ಸಹ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ ಓದಿ...
ರೆಡ್ಡಿಟ್ ಪೋಸ್ಟ್‌ನಲ್ಲಿ ತಮ್ಮ ಬಡತನ, ಡೆಡಿಕೇಶನ್ ಮತ್ತು ಯಶಸ್ಸಿನ ಕಥೆಯನ್ನು ವಿವರಿಸಿರುವ ಯುವಕ ಇಂದು ತಾವು ಎಂಜಿನಿಯರಿಂಗ್ ಮ್ಯಾನೇಜರ್ (Engineering Manager) ಎಂದು ಬರೆದುಕೊಂಡಿದ್ದಾರೆ.
ಯುವಕನು ತಾನು ಬಡ ಕುಟುಂಬದಲ್ಲಿ ಜನಿಸಿದೆ ಎಂದು ಹೇಳಿದ್ದು, ಅವರ ಪೋಷಕರು ಕೂಲಿ ಕೆಲಸ ಮಾಡುವ ಮೂಲಕ ಮನೆಯ ವೆಚ್ಚವನ್ನು ನಿಭಾಯಿಸುತ್ತಿದ್ದರಂತೆ. ಯುವಕ ಬಾಲ್ಯವನ್ನೆಲ್ಲಾ ಕಳೆದದ್ದು ಹಳ್ಳಿಯಲ್ಲಿಯೇ. ಸ್ವಲ್ಪ ಸಮಯದ ನಂತರ ಅವರ ಪೋಷಕರು ಬೆಂಗಳೂರು ನಗರಕ್ಕೆ ಕೆಲಸಕ್ಕೆ ಬಂದರು.
"ನನ್ನ ತಾಯಿ ಹಗಲಿನಲ್ಲಿ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಾತ್ರಿ ಬಟ್ಟೆ ಹೊಲಿಯುತ್ತಿದ್ದರು. ಅವರ ಕೈಗಳು ಯಾವಾಗಲೂ ನಮ್ಮ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸುತ್ತಿದ್ದವು" ಎಂದು ತನ್ನ ತಾಯಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾನೆ ಯುವಕ. ಅಷ್ಟೇ ಅಲ್ಲ, ಪೋಷಕರು ಜೊತೆಗಿಲ್ಲದ ಸಮಯದಲ್ಲಿ ಅಕ್ಕ ಯುವಕನನ್ನು ಬೆಳೆಸಿದಳಂತೆ. ಈ ಸಮಯದಲ್ಲಿ ಆತ ಸರ್ಕಾರಿ ಶಾಲೆಯಲ್ಲಿ ಓದಿದನು. ನಂತರ ಉಚಿತ ಹಾಸ್ಟೆಲ್ ಮತ್ತು ಆಹಾರ ಸೌಲಭ್ಯ ಪಡೆಯಲು ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆದನು.
ಯುವಕನ ಸಹೋದರನಿಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕ ನಂತರ ಸ್ವಲ್ಪ ಆರ್ಥಿಕ ಸಹಾಯ ಸಿಕ್ಕಿತಂತೆ. ಕೊನೆಗೆ ಹೇಗೋ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿ, ಐಟಿಯಲ್ಲಿ ಮೊದಲ ಕೆಲಸ ಪಡೆದಾಗ ಯುವಕನಿಗೆ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಸಿಕ್ಕಿತು.
ಆಗ ಯುವಕ ಕಂಪನಿಯನ್ನು ಬದಲಾಯಿಸುವ ಮತ್ತು ಹೆಚ್ಚು ಸಂಬಳ ಕೊಡುವ ಕಂಪೆನಿಯನ್ನು ಹುಡುಕುವ ಬದಲು ತಮ್ಮ ಕೌಶಲ್ಯಗಳನ್ನು ಸುಧಾರಿಸುವತ್ತ ಗಮನಹರಿಸಿದರು. ಕಂಪನಿಯನ್ನು ಬದಲಾಯಿಸದೆ ಕ್ರಮೇಣ ಬಡ್ತಿ ಪಡೆದು, ಇಂದು ಅವರ ಪ್ಯಾಕೇಜ್ ವಾರ್ಷಿಕ 46 ಲಕ್ಷ ರೂ. ಆಗಿದೆ. ಯುವಕನು ಇಂದು ಕೆಲಸಕ್ಕಾಗಿ ಕೆನಡಾ, ಅಮೆರಿಕ ಮತ್ತು ಯುಕೆಗೆ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲ, ಸೈಟ್ ಖರೀದಿಸಿ, ಮನೆ ನಿರ್ಮಿಸಿ ಮತ್ತು ತಮ್ಮ ಕುಟುಂಬಕ್ಕಾಗಿ ಕಾರು ಖರೀದಿಸುವಲ್ಲಿಯೂ ಯಶಸ್ವಿಯಾಗಿದ್ದರೆ ಯುವಕ.