MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಇದೊಂದು ಹುಳಿ ಪೌಡರ್‌ ಸಾಕು.. ಟಾಯ್ಲೆಟ್ ಕಮೋಡ್‌ನ ಕಲೆ, ತುಕ್ಕು ಮಾತ್ರವಲ್ಲ ಮನೆಯ ಮೂಲೆ ಮೂಲೆಯೂ ಕ್ಲೀನ್ ಆಗುತ್ತೆ

ಇದೊಂದು ಹುಳಿ ಪೌಡರ್‌ ಸಾಕು.. ಟಾಯ್ಲೆಟ್ ಕಮೋಡ್‌ನ ಕಲೆ, ತುಕ್ಕು ಮಾತ್ರವಲ್ಲ ಮನೆಯ ಮೂಲೆ ಮೂಲೆಯೂ ಕ್ಲೀನ್ ಆಗುತ್ತೆ

Citric acid cleaning hacks: ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಬಳಸಿ ಬೇಸತ್ತಿದ್ದೀರಾ? ಅವುಗಳಿಂದ ಕೈ ಚರ್ಮ ಹಾಳಾಗುವ ಮತ್ತು ಪರಿಸರಕ್ಕೆ ಹಾನಿಯಾಗುವ ಭಯವೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಬೆಸ್ಟ್ ಹಾಗೂ ಪರಿಸರ ಸ್ನೇಹಿ ಆಯ್ಕೆ!

2 Min read
Author : Ashwini HR
Published : Jun 20 2026, 11:36 AM IST
Share this Photo Gallery
  • FB
  • TW
  • Linkdin
  • Whatsapp
17
ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ
Image Credit : AI Image

ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ

ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ
ಮನೆಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕೆಮಿಕಲ್ ಕ್ಲೀನರ್‌ಗಳು ಲಭ್ಯವಿವೆ. ಆದರೆ ನೀವು ಯಾವುದೇ ನೈಸರ್ಗಿಕ ಅಥವಾ ಕಡಿಮೆ ವೆಚ್ಚದ ಪ್ರೊಡಕ್ಟ್ ಹುಡುಕುತ್ತಿದ್ದರೆ, ಸಿಟ್ರಿಕ್ ಆಸಿಡ್ ನಿಮಗೆ ತುಂಬಾ ಉಪಯುಕ್ತವಾಗಬಹುದು. ಇಲ್ಲಿ ಆಸಿಡ್ ಪದ ಕೇಳಿ ಮತ್ತೆ ಭಯಪಡಬೇಡಿ. ಯಾಕೆಂದರೆ ಸಿಟ್ರಿಕ್ ಆಸಿಡ್ ನೀವು ದಿನ ನಿತ್ಯ ಬಳಸುವ ನಿಂಬೆಹಣ್ಣು, ಕಿತ್ತಳೆ ಮತ್ತು ಇತರ ಹುಳಿ ಹಣ್ಣುಗಳಲ್ಲಿ ಕಂಡುಬರುವ ಒಂದು ನೈಸರ್ಗಿಕ ಅಂಶವಷ್ಟೇ. ಅಂದಹಾಗೆ ಇದನ್ನು ಸ್ವಚ್ಛತೆಗೆ ಒಂದು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಇದರ ವಿಶೇಷತೆ ಏನು?
Image Credit : Getty

ಇದರ ವಿಶೇಷತೆ ಏನು?

ಇದರ ವಿಶೇಷತೆ ಏನು?
ಸಿಟ್ರಿಕ್ ಆಸಿಡ್‌ನ ವಿಶೇಷತೆಯೆಂದರೆ ಇದು ಹಠಮಾರಿ ಕಲೆಗಳು, ಸುಣ್ಣದ ಪದರ, ತುಕ್ಕು ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದರ ಬಳಕೆಯಿಂದ ಮನೆಯಲ್ಲಿ ತಾಜಾತನದಿಂದ ಕೂಡಿದ ಸುಗಂಧವೂ ಉಳಿಯುತ್ತದೆ. ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೆಮಿಕಲ್ ಕ್ಲೀನರ್‌ಗಳ ಬದಲಿಗೆ ಇದನ್ನು ಬಳಸಲು ಇಷ್ಟಪಡುತ್ತಿದ್ದಾರೆ.

Related Articles

Related image1
ಹೋಟೆಲ್ ರೂಂಗೆ ಹೋದ್ಮೇಲೆ ಬೆಡ್ ಕೆಳಗೆ ವಾಟರ್ ಬಾಟಲ್ ಎಸೆಯಿರಿ! ಶೇ.99 ರಷ್ಟು ಜನ್ರು ಈ ಸುರಕ್ಷತಾ ಟ್ರಿಕ್ ಮರಿತಾರೆ
Related image2
ಕಪ್ಪು ಪೊರೆ ತನ್ನಷ್ಟಕ್ಕೆ ತಾನೇ ಎದ್ದು ಬರುತ್ತೆ.. ಈ ಮ್ಯಾಜಿಕ್ ಟ್ರಿಕ್‌ನಿಂದ ಹಾಳಾದ ತವಾವನ್ನು ಹೊಸದರಂತೆ ಮಾಡ್ಬೋದು
37
ಸಿಟ್ರಿಕ್ ಆಸಿಡ್ ಎಲ್ಲಿ ಸಿಗುತ್ತದೆ?
Image Credit : Getty

ಸಿಟ್ರಿಕ್ ಆಸಿಡ್ ಎಲ್ಲಿ ಸಿಗುತ್ತದೆ?

ಸಿಟ್ರಿಕ್ ಆಸಿಡ್ ಎಲ್ಲಿ ಸಿಗುತ್ತದೆ?
ಇದು ಬಿಳಿ ಬಣ್ಣದ ಸಣ್ಣ ಸಕ್ಕರೆ ತರಹದ ಹರಳುಗಳ ರೂಪದಲ್ಲಿರುತ್ತದೆ. ಇದನ್ನು Lemon Salt ಎಂದು ಕರೆಯುತ್ತಾರೆ. ಇದು ಯಾವುದೇ ದಿನಸಿ ಅಂಗಡಿ (Grocery store), ಸೂಪರ್ ಮಾರ್ಕೆಟ್ ಅಥವಾ ಬೇಕರಿ ಐಟಂ ಸಿಗುವ ಅಂಗಡಿಗಳಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ.

47
ಬಾತ್‌ರೂಂ ಸ್ವಚ್ಛತೆಗೆ ರಾಮಬಾಣ
Image Credit : AI Image

ಬಾತ್‌ರೂಂ ಸ್ವಚ್ಛತೆಗೆ ರಾಮಬಾಣ

ಬಾತ್‌ರೂಂ ಸ್ವಚ್ಛತೆಗೆ ರಾಮಬಾಣ
ಹೌದು. ಬಾತ್‌ರೂಂ ಸ್ವಚ್ಛತೆಯಲ್ಲೂ ಇದು ಸಾಕಷ್ಟು ಉಪಯುಕ್ತ ಎಂದು ಪ್ರೂವ್ ಆಗಿದೆ. ಟಾಯ್ಲೆಟ್ ಬೌಲ್ ಒಳಗೆ ಎರಡರಿಂದ ಮೂರು ಚಮಚ ಸಿಟ್ರಿಕ್ ಆಸಿಡ್ ಹಾಕಿ ಒಂದು ಗಂಟೆ ಕಾಲ ಹಾಗೆಯೇ ಬಿಡಿ. ಕಲೆಗಳು ತುಂಬಾ ಹಳೆಯದಾಗಿದ್ದರೆ ಇದನ್ನು ರಾತ್ರಿ ಪೂರ್ತಿಯೂ ಬಿಡಬಹುದು. ಆ ಬಳಿಕ ಬ್ರಷ್‌ನಿಂದ ಉಜ್ಜಿ ಫ್ಲಶ್ ಮಾಡಿ. ಇದರಿಂದ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ.

57
ಕೆಟಲ್ (Kettle)ಕ್ಲೀನ್ ಮಾಡಲು
Image Credit : deodap.in

ಕೆಟಲ್ (Kettle)ಕ್ಲೀನ್ ಮಾಡಲು

ಕೆಟಲ್ (Kettle)ಕ್ಲೀನ್ ಮಾಡಲು
ನಿಮ್ಮ ಕೆಟಲ್‌ನ ಒಳಭಾಗದಲ್ಲಿ ಬಿಳಿ ಪದರ (Limescale) ಜಮೆಯಾಗಿದ್ದರೆ, ಸಿಟ್ರಿಕ್ ಆಸಿಡ್ ಅದನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಕೆಟಲ್‌ಗೆ ಅರ್ಧದಷ್ಟು ನೀರು ತುಂಬಿಸಿ. ಅದಕ್ಕೆ 2 ಚಮಚ ಸಿಟ್ರಿಕ್ ಆಸಿಡ್ ಪುಡಿಯನ್ನು ಹಾಕಿ. ಈಗ ಕೆಟಲ್ ಆನ್ ಮಾಡಿ ಆ ನೀರನ್ನು ಚೆನ್ನಾಗಿ ಕುದಿಸಿ (ಉಕ್ಕಿ ಬರದಂತೆ ನೋಡಿಕೊಳ್ಳಿ). ನೀರು ಕುದಿ ಬಂದ ತಕ್ಷಣ ಕೆಟಲ್ ಆಫ್ ಮಾಡಿ. ಆ ಬಿಸಿ ನೀರನ್ನು ಕೆಟಲ್‌ನಿಂದ ತಕ್ಷಣ ಚೆಲ್ಲಬೇಡಿ. ಹಾಗೇ 15 ರಿಂದ 20 ನಿಮಿಷ ಬಿಟ್ಟುಬಿಡಿ. ಆ ಬಿಸಿ ನೀರು ಮತ್ತು ಆಸಿಡ್ ಸೇರಿ ತಳದಲ್ಲಿ ಗಟ್ಟಿಯಾಗಿ ಕೂತಿರುವ ಬಿಳಿ ಉಪ್ಪಿನ ಕರೆಯನ್ನು ಸಂಪೂರ್ಣವಾಗಿ ಕರಗಿಸಿಬಿಡುತ್ತದೆ. 20 ನಿಮಿಷದ ನಂತರ ಆ ನೀರನ್ನು ಚೆಲ್ಲಿ, ಮಾಮೂಲಿ ತಣ್ಣೀರಿನಿಂದ ಕೆಟಲ್ ಅನ್ನು ಒಂದೆರಡು ಬಾರಿ ತೊಳೆದರೆ ಸಾಕು. ಒಳಗಡೆ ಉಜ್ಜುವ ಅಗತ್ಯವೇ ಇರಲ್ಲ, ಹೊಸದರಂತೆ ಮಿರಮಿರ ಮಿಂಚುತ್ತದೆ.

67
ಈ ವಸ್ತುಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದು
Image Credit : Getty

ಈ ವಸ್ತುಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದು

ಈ ವಸ್ತುಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದು
ವಾಷಿಂಗ್ ಮಷಿನ್, ಡಿಶ್‌ವಾಶರ್ ಮತ್ತು ಕಾಫಿ ಮಷಿನ್‌ಗಳಲ್ಲಿ ಸಮಯ ಕಳೆದಂತೆ ಗಡಸು ನೀರಿನ ಕಾರಣದಿಂದಾಗಿ ಪದರ ಜಮೆಯಾಗಲು ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಿಟ್ರಿಕ್ ಆಸಿಡ್ ಒಂದು ನೈಸರ್ಗಿಕ ಡಿಸ್ಕೇಲರ್ (Descaler) ನಂತೆ ಕೆಲಸ ಮಾಡುತ್ತದೆ. ಮಷಿನ್‌ನ ಡಿಟರ್ಜೆಂಟ್ ಕಂಪಾರ್ಟ್‌ಮೆಂಟ್‌ಗೆ ನಾಲ್ಕರಿಂದ ಐದು ಚಮಚ ಸಿಟ್ರಿಕ್ ಆಸಿಡ್ ಹಾಕಿ. ಖಾಲಿ 'ಹಾಟ್ ಸೈಕಲ್' (Hot Cycle) ಅನ್ನು ಮೂವ್ ಮಾಡಬಹುದು. ಇದರಿಂದ ಮಷಿನ್‌ನ ಒಳಗಿರುವ ಕೊಳಕು ಮತ್ತು ಜಮೆಯಾಗಿರುವ ಪದರ ಸ್ವಚ್ಛಗೊಳ್ಳಲು ಸಹಾಯವಾಗುತ್ತದೆ.

77
ತುಕ್ಕು ಹಿಡಿದ ವಸ್ತುಗಳನ್ನೂ ಸ್ವಚ್ಛಗೊಳಿಸಬಹುದು
Image Credit : AI Image

ತುಕ್ಕು ಹಿಡಿದ ವಸ್ತುಗಳನ್ನೂ ಸ್ವಚ್ಛಗೊಳಿಸಬಹುದು

ತುಕ್ಕು ಹಿಡಿದ ವಸ್ತುಗಳನ್ನೂ ಸ್ವಚ್ಛಗೊಳಿಸಬಹುದು
ಮನೆಯಲ್ಲಿ ಕಬ್ಬಿಣದ ಉಪಕರಣಗಳು, ಸಿಂಕ್ ಅಥವಾ ಯಾವುದೇ ಲೋಹದ ವಸ್ತುಗಳು ತುಕ್ಕು ಹಿಡಿದಿದ್ದರೆ, ಸಿಟ್ರಿಕ್ ಆಸಿಡ್ ಇಲ್ಲೂ ಕೆಲಸಕ್ಕೆ ಬರುತ್ತದೆ. ಬಿಸಿ ನೀರಿನಲ್ಲಿ ಎರಡರಿಂದ ಮೂರು ಚಮಚ ಸಿಟ್ರಿಕ್ ಆಸಿಡ್ ಬೆರೆಸಿ ತುಕ್ಕು ಹಿಡಿದ ವಸ್ತುವನ್ನು ಕೆಲವು ಗಂಟೆಗಳ ಕಾಲ ನೆನೆಸಿಡಿ. ಆ ಬಳಿಕ ಬ್ರಷ್‌ನಿಂದ ಸ್ವಚ್ಛಗೊಳಿಸಿ ನೀರಿನಿಂದ ತೊಳೆಯಿರಿ.

ಇದಲ್ಲದೆ ನಲ್ಲಿ (Tap) ಮತ್ತು ಶವರ್‌ಹೆಡ್‌ಗಳ ಮೇಲೆ ಜಮೆಯಾಗಿರುವ ಮಿನರಲ್ಸ್ ಪದರವನ್ನು ತೆಗೆದುಹಾಕಲು ಸಹ ಸಿಟ್ರಿಕ್ ಆಸಿಡ್ ಅನ್ನು ಬಳಸಬಹುದು. ಬಿಸಿ ನೀರಿನಲ್ಲಿ ಇದನ್ನು ಮಿಶ್ರಣ ಮಾಡಿ ಬಟ್ಟೆಯನ್ನು ನೆನೆಸಿ, ಆ ಬಟ್ಟೆಯನ್ನು ನಲ್ಲಿ ಅಥವಾ ಶವರ್‌ಹೆಡ್‌ನ ಸುತ್ತಲೂ ಸುತ್ತಿಡಿ. ಸುಮಾರು ಒಂದು ಗಂಟೆಯ ನಂತರ ಸ್ವಚ್ಛಗೊಳಿಸಿದಾಗ ಅವುಗಳ ಹೊಳಪು ಮರಳಿ ಬರಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Home Investment: 1 ಕೋಟಿ ರೂಪಾಯಿ ಕೊಟ್ಟು ಸಿಟಿಯಲ್ಲಿ ಮನೆ ಕಟ್ಟೋ ಬದಲು ಹೀಗೆ ಮಾಡಿ, ಜೀವನಪೂರ್ತಿ ಆದಾಯ ಪಕ್ಕಾ!
Recommended image2
Bengaluru Balcony Commode: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ಕಮೋಡ್‌ ಇಟ್ಟ ಕಿಲಾಡಿ; ಆ ಹುಡುಗಿ ಕಂಗಾಲು!
Recommended image3
Silver Jhumka: 916 ಗೋಲ್ಡ್ ಅಲ್ಲ, ಈಗ 925 ಸಿಲ್ವರ್ ಟ್ರೆಂಡ್: 5 ಸಾವಿರಕ್ಕೆ ಸಿಗುತ್ತೆ ಸಖತ್ ಜುಮ್ಕಾ!
Related Stories
Recommended image1
ಹೋಟೆಲ್ ರೂಂಗೆ ಹೋದ್ಮೇಲೆ ಬೆಡ್ ಕೆಳಗೆ ವಾಟರ್ ಬಾಟಲ್ ಎಸೆಯಿರಿ! ಶೇ.99 ರಷ್ಟು ಜನ್ರು ಈ ಸುರಕ್ಷತಾ ಟ್ರಿಕ್ ಮರಿತಾರೆ
Recommended image2
ಕಪ್ಪು ಪೊರೆ ತನ್ನಷ್ಟಕ್ಕೆ ತಾನೇ ಎದ್ದು ಬರುತ್ತೆ.. ಈ ಮ್ಯಾಜಿಕ್ ಟ್ರಿಕ್‌ನಿಂದ ಹಾಳಾದ ತವಾವನ್ನು ಹೊಸದರಂತೆ ಮಾಡ್ಬೋದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved