ಶಾಪಿಂಗ್‌ಗೆ 20 ಸೆಕ್ಯುರಿಟಿ, 25 ಕೋಟಿ ರೋಲ್ಸ್ ರಾಯ್ಸ್ ಕಾರಲ್ಲಿ ಫಿಯಾನ್ಸಿ ಜೊತೆ ಹೋದ ಅನಂತ್ ಅಂಬಾನಿ!
ಬಿಲಿಯನೇರ್ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿ. ಐಷಾರಾಮಿ ಕಾರು, ವಾಚ್‌ನ ಬೃಹತ್ ಸಂಗ್ರಹವನ್ನು ಇವರು ಹೊಂದಿದ್ದಾರೆ. ಸದ್ಯ ಬಿಲಿಯನೇರ್ ಅನಂತ್ ಅಂಬಾನಿ ತಮ್ಮ ಭಾವೀ ಪತ್ನಿ ಜೊತೆ ದುಬೈನಲ್ಲಿ ಓಡಾಡಿರುವ ವೀಡಿಯೋ ವೈರಲ್ ಆಗುತ್ತಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.
ಅನಂತ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿಯ ಕಿರಿಯ ಪುತ್ರ. ಇವರ ಬಳಿ ಸದ್ಯಕ್ಕೆ 971685 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಇತ್ತೀಚಿಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ನಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ವಿಶ್ವದ ಟಾಪ್ ಸಿರಿವಂತರು ಹಾಗೂ ಬಾಲಿವುಡ್ ಸ್ಟಾರ್ಸ್ ಈ ಕಾರ್ಯಕ್ರಮಕ್ಕೆ ಹೋಗಿದ್ದರು.
ಪ್ರೀ ವೆಡ್ಡಿಂಗ್ ಈವೆಂಟ್‌ನಲ್ಲಿ ಅನಂತ್ ಅಂಬಾನಿ ಕಟ್ಟಿದ ದುಬಾರಿ ವಾಚಿಗೆ ಮೆಟಾ ಮಾಲಿಕ ಝುಕರ್‌ಬರ್ಗ್ ಮಡದಿಯೂ ಫಿದಾ ಆಗಿದ್ದಳು.
ದುಬೈನ ರಿಮೋವಾ ಸ್ಟೋರ್‌ನಿಂದ ಅನಂತ್ ಅಂಬಾನಿ ಶಾಂಪಿಂಗ್ ಮಾಡುತ್ತಿರುವ ವೀಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ನಂತ್ ಅಂಬಾನಿ ಸುಮಾರು 25 ಕೋಟಿ ರೂ. ಕಾರಿನಲ್ಲಿ 20 ಬೆಂಗಾವಲು ಪಡೆಯೊಂದಿಗೆ ಶಾಪಿಂಗ್‌ಗೆ ಹೋಗಿದ್ದು, ಇದಪ್ಪಾ ಪವರ್ ಅಂದ್ರೆ ಹೇಳುತ್ತಿದ್ದಾರೆ ನೆಟ್ಟಿಗರು.
ಅನಂತ್ ಅಂಬಾನಿ ಸ್ವತಃ ರೋಲ್ಸ್ ರಾಯ್ಸ್ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು. ಇದರ ಬೆಲೆ ಭಾರತದಲ್ಲಿ 10 ಕೋಟಿ ರೂ.
ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಎಸ್‌ಯುವಿ ಭಾರತದಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ಎಸ್‌ಯುವಿ.. ಅನಂತ್ ಅಂಬಾನಿ ಮನೆಯಲ್ಲಿ ಇಂಥ ಐಷಾರಾಮಿಯ ಹಲವು ಕಾರುಗಳನ್ನು ಹೊಂದಿದ್ದಾರೆ.
ಈ ಬೃಹತ್ ಎಸ್‌ಯುವಿ ಹೊರತಾಗಿ, ಆಂಬ್ಯುಲೆನ್ಸ್ ಕೂಡ ಬೆಂಗಾವಲಿನ ಭಾಗವಾಗಿ ಕಂಡುಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಟೋಮೊಬಿಲಿಯಾರ್ಡೆಂಟ್ ಹಂಚಿಕೊಂಡ ವೀಡಿಯೊ ಅನಂತ್ ಅಂಬಾನಿಯವರ ಬೃಹತ್ ಬೆಂಗಾವಲು ಪಡೆಯನ್ನು ತೋರಿಸುತ್ತದೆ,
ಭಾರತದ ಶ್ರೀಮಂತ ಕುಟುಂಬದವರಾದರೂ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ವಿನಮ್ರ ನಡವಳಿಕೆಗೆ ಹೆಸರುವಾಸಿ. ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಓದಿದವರು. ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್‌ನ್ನು ನಿರ್ವಹಿಸುತ್ತಿದ್ದಾರೆ.
ಅನಂತ್ ಅಂಬಾನಿ, ಅಂಬಾನಿ ಗ್ರೂಪ್‌ನಲ್ಲಿ ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ವರದಿಗಳ ಪ್ರಕಾರ ಅನಂತ್ ಅಂಬಾನಿ ನಿವ್ವಳ ಮೌಲ್ಯವು 40 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು.