ಈ ಸಿಂಪಲ್ ಹ್ಯಾಬಿಟ್ಸ್‌ಗೆ ನಿಮ್ಮ ಲೈಫ್ ಅಲ್ಲಿ ದೊಡ್ಡ ಚೇಂಜಸ್ ತರೋ ಪವರ್ ಇದೆ
ಲೈಫ್ ಚೇಂಜ್ ಅಂದ್ರೆ ಮೊದಲು ಹೆಲ್ತ್ & ಮೈಂಡ್ ಇಂದ ಶುರು ಮಾಡ್ಬೇಕು. ಹೆಲ್ತಿಗಾಗಿ ನಾವು ಮಾಡೋ ಸ್ವಲ್ಪ ಚೇಂಜಸ್ ಲೈಫ್ ಅಲ್ಲಿ ದೊಡ್ಡ ದೊಡ್ಡ ವಿಷ್ಯ ಸಾಧಿಸೋಕೆ ಹೆಲ್ಪ್ ಮಾಡುತ್ತೆ.

ಎದ್ದ ತಕ್ಷಣ ಒಂದ್ ಗ್ಲಾಸ್ ನೀರು ಕುಡಿಯಿರಿ
ಇದು ತುಂಬಾ ಸಿಂಪಲ್ ಹ್ಯಾಬಿಟ್, ಆದ್ರೆ ಇದರ ಲಾಭಗಳು ತುಂಬಾನೇ ಇವೆ. ನೀವು ನಿದ್ದೆಯಿಂದ ಎದ್ದಾಗ, ಸುಮಾರು 7-8 ಗಂಟೆಗಳ ಕಾಲ ನಿಮ್ಮ ದೇಹಕ್ಕೆ ನೀರಿನ ಅಂಶ ಸಿಕ್ಕಿರೋದಿಲ್ಲ. ಬೆಳಗ್ಗೆ ಒಂದು ಅಥವಾ ಎರಡು ಗ್ಲಾಸ್ ನೀರು ಕುಡಿಯುವುದರಿಂದ ನಿಮ್ಮ ದೇಹ ಫ್ರೆಶ್ ಆಗುತ್ತೆ, ಜೊತೆಗೆ ರಾತ್ರಿಯಿಡೀ ನಿಮ್ಮ ದೇಹದಲ್ಲಿ ಉತ್ಪತ್ತಿಯಾದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದಿನವಿಡೀ ನೀವು ಆಕ್ಟಿವ್ ಆಗಿ ಮತ್ತು ಫ್ರೆಶ್ ಆಗಿ ಇರಲು ಸಹಾಯ ಮಾಡುತ್ತದೆ. ನೀರು ಮಾತ್ರವಲ್ಲ, ನಿಂಬೆ ರಸ ಬೆರೆಸಿದ ನೀರು ಅಥವಾ ಜೀರಿಗೆ ನೀರು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ.
ದಿನಾ 5 ನಿಮಿಷ ಧ್ಯಾನ ಮಾಡಿ
ಧ್ಯಾನ ಅಂದ್ರೆ ಮನಸ್ಸನ್ನ ಶಾಂತವಾಗಿ ಇಡೋ ಒಂದು ಪ್ರಾಕ್ಟೀಸ್. ಇವತ್ತಿನ ಬ್ಯುಸಿ ಲೈಫ್ ಅಲ್ಲಿ ಮನಸ್ಸು ಶಾಂತವಾಗಿರೋದು ತುಂಬಾ ಇಂಪಾರ್ಟೆಂಟ್. ದಿನಾ 5 ನಿಮಿಷ ಧ್ಯಾನ ಮಾಡೋದ್ರಿಂದ ನಿಮ್ಮ ಸ್ಟ್ರೆಸ್ ಕಡಿಮೆ ಆಗುತ್ತೆ, ಕಾನ್ಸಂಟ್ರೇಷನ್ ಜಾಸ್ತಿ ಆಗುತ್ತೆ. ಶುರು ಶುರುವಿನಲ್ಲಿ ಮನಸ್ಸು ಅತ್ತಿತ್ತ ಓಡಾಡಬಹುದು, ಆದ್ರೆ ಪ್ರಾಕ್ಟೀಸ್ ಮಾಡ್ತಾ ಹೋದ್ರೆ ಮನಸ್ಸು ಶಾಂತ ಆಗುತ್ತೆ. ಇದು ನಿಮ್ಮ ಮನಸ್ಸಿಗೆ ಒಳ್ಳೆ ವ್ಯಾಯಾಮ ಆಗುತ್ತೆ, ಜೊತೆಗೆ ನೀವು ಕ್ಲಿಯರ್ ಆಗಿ ಯೋಚನೆ ಮಾಡಿ, ಶಾಂತವಾಗಿ ಕೆಲಸ ಮಾಡೋಕೆ ಹೆಲ್ಪ್ ಆಗುತ್ತೆ. ಮೊಬೈಲ್ ಆಪ್ಸ್ ಅಥವಾ ಯೂಟ್ಯೂಬ್ ವಿಡಿಯೋಸ್ ನಿಮಗೆ ಶುರುವಿನಲ್ಲಿ ಹೆಲ್ಪ್ ಮಾಡುತ್ತೆ.
ಸ್ವಲ್ಪ ವ್ಯಾಯಾಮ ಮಾಡಿ
ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ವ್ಯಾಯಾಮ ಅಥವಾ ಸ್ಟ್ರೆಚಿಂಗ್ ಮಾಡೋದ್ರಿಂದ ನಿಮ್ಮ ದೇಹ ಫ್ರೆಶ್ ಆಗುತ್ತೆ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ಸ್ನಾಯುಗಳನ್ನು ಹಿಗ್ಗಿಸುತ್ತದೆ ಮತ್ತು ದೇಹವನ್ನು ಸಕ್ರಿಯಗೊಳಿಸುತ್ತದೆ. ನೀವು ಹೆವಿ ವ್ಯಾಯಾಮ ಮಾಡಬೇಕಾಗಿಲ್ಲ. ಸ್ವಲ್ಪ ಸ್ಟ್ರೆಚಿಂಗ್, ಕುಳಿತುಕೊಳ್ಳುವುದು ಮತ್ತು ಎದ್ದು ನಿಲ್ಲುವುದು ಅಥವಾ ಸ್ವಲ್ಪ ಜಂಪಿಂಗ್ ಮಾಡಿದ್ರೆ ಸಾಕು. ಇದು ದಿನವಿಡೀ ನಿಮಗೆ ಒಳ್ಳೆಯ ಎನರ್ಜಿ ಕೊಡುತ್ತೆ ಮತ್ತು ದೇಹದ ನೋವು, ಆಯಾಸವನ್ನು ಕಡಿಮೆ ಮಾಡುತ್ತದೆ.
ದಿನಾ ಒಂದು ಹೊಸ ವಿಷ್ಯ ಕಲಿರಿ
ಕಲಿಕೆ ಅನ್ನೋದು ಲೈಫ್ ಲಾಂಗ್ ಪ್ರಾಸೆಸ್. ದಿನಾ ನಿಮ್ಮ ನಾಲೆಡ್ಜ್ ಜಾಸ್ತಿ ಮಾಡ್ಕೊಳೋಕೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ. ಇದು ಪುಸ್ತಕ ಓದೋದು, ಹೊಸ ಪದದ ಅರ್ಥ ತಿಳ್ಕೊಳೋದು, ಡಾಕ್ಯುಮೆಂಟರಿ ನೋಡೋದು ಅಥವಾ ನಿಮ್ಮ ಫೀಲ್ಡ್ ಗೆ ಸಂಬಂಧಿಸಿದ ಹೊಸ ಇನ್ಫಾರ್ಮೇಷನ್ ತಿಳ್ಕೊಳೋದು ಆಗಿರಬಹುದು. ಇದು ನಿಮ್ಮ ಮೆದುಳನ್ನು ಆಕ್ಟಿವ್ ಆಗಿ ಇಡುತ್ತೆ ಮತ್ತು ಹೊಸ ವಿಷಯಗಳನ್ನು ಕಲಿಯೋ ಆಸಕ್ತಿ ಹೆಚ್ಚಿಸುತ್ತದೆ. ನೀವು ದಿನಾ ಕಲಿಯೋ ಸಣ್ಣ ಸಣ್ಣ ವಿಷಯಗಳು ದೊಡ್ಡ ನಾಲೆಡ್ಜ್ ಆಗಿ ಬದಲಾಗುತ್ತೆ.
ನಿಮ್ಮ ಗುರಿಗಳನ್ನು ಒಮ್ಮೆ ಚೆಕ್ ಮಾಡಿ
ನಿಮ್ಮ ಲೈಫ್ ಗೋಲ್ಸ್ ನ ದಿನಾ ಒಮ್ಮೆ ನೋಡ್ಕೊಳೋದ್ರಿಂದ ನೀವು ಸರಿಯಾದ ದಾರಿಯಲ್ಲಿ ಹೋಗ್ತಿದ್ದೀರಾ ಅಂತ ಗೊತ್ತಾಗುತ್ತೆ. ನೀವು ಏನು ಸಾಧಿಸಬೇಕು ಅಂತ ಅಂದುಕೊಂಡಿದ್ದೀರಾ ಅಂತ ನೆನಪಿಟ್ಟುಕೊಳ್ಳೋಕೆ ಇದು ಒಳ್ಳೆ ಮಾರ್ಗ. ಇದು ನಿಮಗೆ ಮೋಟಿವೇಷನ್ ಕೊಡುತ್ತೆ ಮತ್ತು ನಿಮ್ಮ ಗುರಿಗಳ ಕಡೆಗೆ ಕೆಲಸ ಮಾಡೋಕೆ ಪ್ರೇರೇಪಿಸುತ್ತದೆ. ನೀವು ನಿಮ್ಮ ಗುರಿಗಳನ್ನು ಡೈರಿಯಲ್ಲಿ ಬರೆದು ಇಟ್ಕೊಳ್ಳಬಹುದು ಅಥವಾ ಫೋನ್ ಅಲ್ಲಿ ರಿಮೈಂಡರ್ ಸೆಟ್ ಮಾಡಬಹುದು. ಇದು ನಿಮ್ಮ ಪ್ಲಾನಿಂಗ್ ಇಂಪ್ರೂವ್ ಮಾಡುತ್ತೆ ಮತ್ತು ಟೈಮ್ ವೇಸ್ಟ್ ಆಗೋದನ್ನ ತಪ್ಪಿಸುತ್ತದೆ.
ಯಾರಿಗಾದರೂ ಥ್ಯಾಂಕ್ಸ್ ಹೇಳಿ
ಕೃತಜ್ಞತೆ ಅನ್ನೋದು ಪವರ್ ಫುಲ್ ಪಾಸಿಟಿವ್ ಫೀಲಿಂಗ್. ದಿನಾ ಒಬ್ಬರಿಗಾದರೂ ಥ್ಯಾಂಕ್ಸ್ ಹೇಳೋದ್ರಿಂದ ನಿಮ್ಮ ಮನಸ್ಸು ಪಾಸಿಟಿವ್ ಆಗಿ ಇರುತ್ತೆ. ಇದು ಫ್ಯಾಮಿಲಿ ಮೆಂಬರ್, ಫ್ರೆಂಡ್, ನಿಮಗೆ ಹೆಲ್ಪ್ ಮಾಡಿದ ಕಲೀಗ್ ಅಥವಾ ನಿಮಗೆ ಸರ್ವಿಸ್ ಕೊಟ್ಟ ಯಾರಾದ್ರೂ ಆಗಿರಬಹುದು. ಕೃತಜ್ಞತೆ ನಿಮ್ಮ ಮನಸ್ಸನ್ನು ಶಾಂತವಾಗಿ ಇಡುತ್ತೆ ಮತ್ತು ರಿಲೇಷನ್ ಶಿಪ್ ಸ್ಟ್ರಾಂಗ್ ಮಾಡುತ್ತೆ. ನೀವು ಡೈರೆಕ್ಟ್ ಆಗಿ ಥ್ಯಾಂಕ್ಸ್ ಹೇಳಬಹುದು ಅಥವಾ ಮನಸ್ಸಲ್ಲೇ ಥ್ಯಾಂಕ್ಸ್ ಹೇಳಬಹುದು. ಇದು ನಿಮ್ಮ ಮೆಂಟಲ್ ಹೆಲ್ತ್ ಗೆ ತುಂಬಾ ಒಳ್ಳೆಯದು.
ಮಲಗೋ ಮುಂಚೆ ಕೆಲಸ ಪ್ಲಾನ್ ಮಾಡಿ
ರಾತ್ರಿ ಮಲಗೋ ಮುಂಚೆ, ಮಾರನೇ ದಿನದ ಒಂದು ಇಂಪಾರ್ಟೆಂಟ್ ಕೆಲಸ ಪ್ಲಾನ್ ಮಾಡಿ. ಇದು ಆಫೀಸ್ ವರ್ಕ್, ಪರ್ಸನಲ್ ವರ್ಕ್ ಅಥವಾ ಬಿಲ್ ಪೇಮೆಂಟ್ ಆಗಿರಬಹುದು. ಇದು ನಿಮಗೆ ಕ್ಲಿಯರ್ ಡೈರೆಕ್ಷನ್ ಕೊಡುತ್ತೆ ಮತ್ತು ಬೆಳಗ್ಗೆ ಟೆನ್ಷನ್ ತಪ್ಪಿಸುತ್ತದೆ. ನೀವು ಡೈರಿಯಲ್ಲಿ ಬರೆದಿಟ್ಟುಕೊಳ್ಳಬಹುದು ಅಥವಾ ಫೋನ್ ಅಲ್ಲಿ ರಿಮೈಂಡರ್ ಸೆಟ್ ಮಾಡಬಹುದು. ಇದು ನಿಮ್ಮ ದಿನವನ್ನು ಹೆಚ್ಚು ಎಫೆಕ್ಟಿವ್ ಮಾಡುತ್ತೆ ಮತ್ತು ಪ್ರೊಡಕ್ಟಿವಿಟಿ ಹೆಚ್ಚಿಸುತ್ತದೆ.
ಒಂದು ಸಣ್ಣ ಹೆಲ್ಪ್ ಮಾಡಿ
ಬೇರೆಯವರಿಗೆ ಹೆಲ್ಪ್ ಮಾಡೋದ್ರಿಂದ ನಮಗೆ ಖುಷಿ ಸಿಗುತ್ತೆ. ಇದು ಸಿಂಪಲ್ ಕೆಲಸ. ಯಾರಿಗಾದ್ರೂ ಡೋರ್ ಓಪನ್ ಮಾಡಿಕೊಡೋದು, ಸ್ಮೈಲ್ ಮಾಡೋದು, ಸ್ವಲ್ಪ ಹೊತ್ತು ಮಾತು ಕೇಳೋದು ಅಥವಾ ದಾರಿ ತೋರಿಸೋದು ಆಗಿರಬಹುದು. ಸಣ್ಣ ಸಣ್ಣ ಹೆಲ್ಪ್ ಸಮಾಜದಲ್ಲಿ ಪಾಸಿಟಿವ್ ಚೇಂಜಸ್ ತರುತ್ತೆ. ಇದು ನಿಮಗೆ ಖುಷಿ ಕೊಡೋ ಜೊತೆಗೆ ಬೇರೆಯವರಿಗೂ ಒಳ್ಳೆ ಫೀಲಿಂಗ್ ಕೊಡುತ್ತೆ. ಈ ಸಣ್ಣ ಕೆಲಸಗಳು ನಿಮ್ಮ ಸೋಶಿಯಲ್ ಬಾಂಡಿಂಗ್ ಸ್ಟ್ರಾಂಗ್ ಮಾಡುತ್ತೆ ಮತ್ತು ನಿಮಗೆ ಸ್ಯಾಟಿಸ್ಫ್ಯಾಕ್ಷನ್ ಕೊಡುತ್ತೆ.
ಈ ಸಿಂಪಲ್ ಹ್ಯಾಬಿಟ್ಸ್ ನಿಮ್ಮ ಲೈಫ್ ಅಲ್ಲಿ ದೊಡ್ಡ ಚೇಂಜಸ್ ತರೋ ಪವರ್ ಇದೆ. ಇವತ್ತಿಂದಲೇ ಈ ಹ್ಯಾಬಿಟ್ಸ್ ಫಾಲೋ ಮಾಡಿ ಮತ್ತು ಅದರ ಲಾಭ ಪಡೆಯಿರಿ.