ಊಹಿಸೋದು ಕಷ್ಟವಾದ್ರೂ ನಿಮ್ಮ ಮನೆ ಹತ್ತಿರ ಈ 6 ಚಿಹ್ನೆ ಕಂಡುಬಂದ್ರೆ ಪಕ್ಕಾ ಹಾವಿದೆ ಎಂದರ್ಥ
Signs of snakes at home: ಮಳೆಗಾಲದಲ್ಲಿ ಸುರಕ್ಷಿತ ಜಾಗ ಅರಸಿ ಬರುವ ಹಾವುಗಳು ನಿಮ್ಮ ಮನೆ ಅಥವಾ ತೋಟದ ಸುತ್ತಮುತ್ತ ಅಡಗಿವೆಯೇ ಎಂಬುದನ್ನು ಗುರುತಿಸಲು ನೆರವಾಗುವ 6 ಮುಖ್ಯ ಲಕ್ಷಣಗಳು ಇಲ್ಲಿವೆ.
ಸಮಯಕ್ಕೆ ಸರಿಯಾಗಿ ಗುರುತಿಸಲು ನೆರವಾಗುವ 6 ಪ್ರಮುಖ ಲಕ್ಷಣ
ಮಾನ್ಸೂನ್ (ಮಳೆಗಾಲ) ಸಮಯದಲ್ಲಿ ಮಳೆಯಿಂದಾಗಿ ಹಾವುಗಳು ಹೆಚ್ಚಾಗಿ ಮನೆಗಳು ಮತ್ತು ತೋಟಗಳ ಸುತ್ತಮುತ್ತ ಬರಬಹುದು. ಆದರೆ ಅವು ಅಡಗಿಕೊಂಡಿರುವ ಹಲವು ಸಂಕೇತಗಳು ಕಾಣಸಿಗುತ್ತವೆ, ಇವುಗಳನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ನಿಮ್ಮ ಮನೆಯ ಸುತ್ತಮುತ್ತ ಹಾವು ಇರುವುದನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ನೆರವಾಗುವ 6 ಪ್ರಮುಖ ಲಕ್ಷಣಗಳು ಇಲ್ಲಿವೆ.
ಯಾತಕ್ಕಾಗಿ ಬರುತ್ತವೆ?
ಮಳೆಗಾಲದಲ್ಲಿ ಹಾವುಗಳು ಸಾಮಾನ್ಯವಾಗಿ ಕಾಡಿನಲ್ಲಿರುವ ತಮ್ಮ ಹುತ್ತ/ಗಿಡ-ಗಂಟೆಗಳನ್ನು ಬಿಟ್ಟು ನಗರ ಪ್ರದೇಶಗಳತ್ತ ಮುಖ ಮಾಡುತ್ತವೆ. ಮಳೆ ನೀರು ಅವುಗಳ ಹುತ್ತಗಳಿಗೆ ತುಂಬಿಕೊಳ್ಳುವುದರಿಂದ, ಅವು ಅಡಗಿಕೊಳ್ಳಲು ಸುರಕ್ಷಿತ ಜಾಗವನ್ನು ಹುಡುಕುತ್ತವೆ. ಜೊತೆಗೆ ಆಹಾರದ ಹುಡುಕಾಟವೂ ಅವುಗಳು ಜನನಿಬಿಡ ಪ್ರದೇಶಗಳಿಗೆ ಬರಲು ಕಾರಣವಾಗುತ್ತದೆ. ಆದ್ದರಿಂದ ಅವು ನಿಮ್ಮ ಮನೆ, ಗಾರ್ಡನ್, ಸ್ಟೋರ್ ರೂಮ್ ಮತ್ತು ಚರಂಡಿಗಳ ಸುತ್ತಮುತ್ತ ಬಂದು ಅಡಗಿ ಕುಳಿತುಕೊಳ್ಳಬಹುದು.
ದೊಡ್ಡ ಅನಾಹುತ ತಡೆಯಿರಿ
ಇಂತಹ ಸಮಯದಲ್ಲಿ ನಿಮ್ಮ ಮನೆ ಅಥವಾ ಗಾರ್ಡನ್ ಕೂಡ ಹಾವಿನ ಅಡಗುತಾಣವಾಗಬಹುದು. ನೀವು ಊಹಿಸಲೂ ಸಾಧ್ಯವಾಗದ ಜಾಗಗಳಲ್ಲಿ ಹಾವುಗಳು ಅಡಗಿರಬಹುದು. ಆದರೆ ಮನೆಯಲ್ಲಿ ಹಾವು ಇರುವುದನ್ನು ಪತ್ತೆ ಹಚ್ಚುವುದು ಅಸಾಧ್ಯವೇನಲ್ಲ. ವಿಷಕಾರಿ ಹಾವುಗಳು ಅಡಗಿರುವ ಬಗ್ಗೆ ಸೂಚಿಸುವ ಸಣ್ಣ ಸಂಕೇತಗಳನ್ನು ಜನರು ಅರಿಯದೆ ನಿರ್ಲಕ್ಷಿಸುತ್ತಾರೆ. ಈ ಸಣ್ಣ ಸಂಕೇತಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ದೊಡ್ಡ ಅನಾಹುತವನ್ನು ತಡೆಯಬಹುದು.
ಹಾವಿನ ಪೊರೆ
ಹಾವಿನ ಪೊರೆ
ನಿಮಗೆ ಮನೆ, ಗಾರ್ಡನ್, ಸೌದೆ ರಾಶಿ, ಹಳೆಯ ವಸ್ತುಗಳ ಹಿಂಭಾಗ ಅಥವಾ ಯಾವುದಾದರೂ ಮೂಲೆಯಲ್ಲಿ ಹಾವಿನ ಪೊರೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಪಾರದರ್ಶಕವಾಗಿದ್ದು (Transparent), ಹಾವಿನ ಚರ್ಮದ ಮಾದರಿಯ ಗುರುತುಗಳನ್ನು ಹೊಂದಿರುತ್ತದೆ. ಹಳೆಯ ಪೊರೆ ಎಂದರೆ ಹಾವು ಅಲ್ಲಿಂದ ಹಾದು ಹೋಗಿದೆ ಎಂದರ್ಥವಾಗಿದ್ದರೂ, ಬೇರೆ ಬೇರೆ ಜಾಗಗಳಲ್ಲಿ ಪದೇ ಪದೇ ಪೊರೆ ಸಿಗುತ್ತಿದ್ದರೆ ಅದು ಸುತ್ತಮುತ್ತ ಹಾವು ಇರುವುದರ ಸ್ಪಷ್ಟ ಸಂಕೇತವಾಗಿದೆ.
ಮೂಲೆಗಳಲ್ಲಿ ವಿಚಿತ್ರ ರೀತಿಯ ಮಲ
ಮೂಲೆಗಳಲ್ಲಿ ವಿಚಿತ್ರ ರೀತಿಯ ಮಲ
ಹಾವಿನ ಹಿಕ್ಕಿ ನೋಡಲು ಇಲಿ ಅಥವಾ ಹಕ್ಕಿಗಳ ಹಿಕ್ಕಿಯಂತೆ ಕಾಣಬಹುದು, ಆದರೆ ಇದರಲ್ಲಿ ಹೆಚ್ಚಾಗಿ ಬಿಳಿ ಬಣ್ಣದ ಭಾಗವಿರುತ್ತದೆ ಮತ್ತು ಕೆಲವೊಮ್ಮೆ ಇದರೊಳಗೆ ಪ್ರಾಣಿಗಳ ರೋಮ ಅಥವಾ ಸಣ್ಣ ಮೂಳೆ ಚೂರುಗಳು ಕಾಣಿಸಬಹುದು. ಇಂತಹ ಹಿಕ್ಕಿ ಸ್ಟೋರ್ ರೂಮ್, ಸೌದೆ ಹತ್ತಿರ ಅಥವಾ ಗೋಡೆಯ ಮೂಲೆಗಳಲ್ಲಿ ಪದೇ ಪದೇ ಕಾಣಿಸುತ್ತಿದ್ದರೆ ಜಾಗರೂಕರಾಗಿರಿ.
ಧೂಳು ಅಥವಾ ಒದ್ದೆ ಮಣ್ಣಿನ ಮೇಲೆ ಅಲೆಅಲೆಯಾದ (S-ಆಕಾರದ) ಗುರುತುಗಳು
ಧೂಳು ಅಥವಾ ಒದ್ದೆ ಮಣ್ಣಿನ ಮೇಲೆ ಅಲೆಅಲೆಯಾದ (S-ಆಕಾರದ) ಗುರುತುಗಳು
ಹಾವುಗಳಿಗೆ ಕಾಲುಗಳಿಲ್ಲದ ಕಾರಣ, ಅವು ಚಲಿಸುವಾಗ ಧೂಳು, ಮರಳು ಅಥವಾ ಒದ್ದೆ ಮಣ್ಣಿನ ಮೇಲೆ ಅಲೆಅಲೆಯಾದ ಗುರುತುಗಳನ್ನು ಬಿಡುತ್ತವೆ. ಇಂತಹ ಗುರುತುಗಳು ಬಾಗಿಲ ಕೆಳಗೆ, ಚರಂಡಿ, ಗೋಡೆಯ ಬಿರುಕು ಅಥವಾ ಸ್ಟೋರ್ ರೂಮ್ ಸುತ್ತಮುತ್ತ ಪದೇ ಪದೇ ಕಾಣಿಸಿದರೆ, ಹಾವು ಅದೇ ಹಾದಿಯಲ್ಲಿ ಮನೆಗೆ ಬಂದು ಹೋಗುತ್ತಿರಬಹುದು.
ಇದ್ದಕ್ಕಿದ್ದಂತೆ ಇಲಿಗಳು ಮಾಯವಾಗುವುದು
ಇದ್ದಕ್ಕಿದ್ದಂತೆ ಇಲಿಗಳು ಮಾಯವಾಗುವುದು
ನಿಮ್ಮ ಮನೆಯಲ್ಲಿ ಹಿಂದೆ ಇಲಿಗಳು ಹೆಚ್ಚಾಗಿ ಕಾಣಿಸುತ್ತಿದ್ದರೆ ಅಥವಾ ಅವುಗಳ ಶಬ್ದ ಕೇಳಿಸುತ್ತಿದ್ದು, ಇದ್ದಕ್ಕಿದ್ದಂತೆ ಎಲ್ಲವೂ ಬಂದ್ ಆಗಿದ್ದರೆ, ಅದು ಹಾವು ಇರುವುದರ ಲಕ್ಷಣವಾಗಿರಬಹುದು. ಏಕೆಂದರೆ ಹಾವುಗಳು ಇಲಿಗಳನ್ನು ಬೇಟೆಯಾಡುತ್ತವೆ. ಇದು ಒಂದೇ ಲಕ್ಷಣ ಸಾಕಾಗುವುದಿಲ್ಲವಾದರೂ, ಇದರ ಜೊತೆಗೆ ಇತರ ಸಂಕೇತಗಳೂ ಕಾಣಿಸಿದರೆ ಎಚ್ಚರದಿಂದಿರಬೇಕು.
ಬುಸುಗುಟ್ಟುವ ಶಬ್ದ ಅಥವಾ ಹೊಸದಾಗಿ ರೂಪುಗೊಂಡ ಬಿಲ
ಬುಸುಗುಟ್ಟುವ ಶಬ್ದ ಅಥವಾ ಹೊಸದಾಗಿ ರೂಪುಗೊಂಡ ಬಿಲ
ಮನೆಯ ಸುತ್ತಮುತ್ತ, ವರಾಂಡ, ಸೌದೆ ರಾಶಿ, ಚರಂಡಿ ಅಥವಾ ಅಡಿಪಾಯದ ಹತ್ತಿರ ಬುಸುಗುಟ್ಟುವ ಶಬ್ದ ಕೇಳಿಸಿದರೆ ಅಥವಾ ಮಣ್ಣಿನಲ್ಲಿ ಹೊಸ ಬಿಲ ಅಥವಾ ಅಗೆದಿರುವ ಗುರುತುಗಳು ಕಂಡರೆ, ಅವುಗಳನ್ನು ಯಾವುದೇ ಕಾರಣಕ್ಕೂ ಹಗುರವಾಗಿ ತಗೋಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
