ಮಲುಗುವ ಮುನ್ನ ನೀವು ಈ 5 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ..! ಯಾಕಂದ್ರೆ..?
ಬೆಳಗ್ಗೆ ಎದ್ದಾಗ ಫ್ರೆಶ್ ಆಗಿ, ಶಕ್ತಿಯುತವಾಗಿ ಇರಬೇಕೆಂದರೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು. ಆದರೆ ಮಲಗುವ ಮುನ್ನ ನಾವು ಮಾಡುವ ಕೆಲವು ತಪ್ಪುಗಳು ಒಳ್ಳೆಯ ನಿದ್ದೆಗೆ ಅಡ್ಡಿಯಾಗುತ್ತವೆ. ಅವುಗಳನ್ನು ಅವಾಯ್ಡ್ ಮಾಡುವುದು ಉತ್ತಮ.

ವ್ಯಾಯಾಮ ಮಾಡುವುದು
ರಾತ್ರಿ ಹೊತ್ತು ಕಠಿಣವಾದ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ನಿದ್ದೆಗೆ ಅಡ್ಡಿಯಾಗಬಹುದು. ಹಾಗಾಗಿ ಮಲಗುವ ಮುನ್ನ ಇಂತಹ ಅಭ್ಯಾಸಗಳನ್ನು ಬಿಟ್ಟುಬಿಡಿ. ಆದಷ್ಟು ದೇಹ ಮಲಗುವ ಮುನ್ನ ರಿಲ್ಯಾಕ್ಸ್ ಆಗಿರುವಂತೆ ನೋಡಿಕೊಳ್ಳಿ. ಇದರಿಂದ ಕಣ್ತುಂಬ ನಿದ್ರೆ ಬರುತ್ತೆ.
ಫೋನ್ ಬಳಕೆ
ರಾತ್ರಿ ಮಲಗುವಾಗ ಮೊಬೈಲ್ ಫೋನ್ ಬಳಸಿದರೆ, ಅದು ಸರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಬೆಡ್‌ಗೆ ಜಾರುವ ಸುಮಾರು ಅರ್ಧ ಗಂಟೆ ಮುಂಚಿತವಾಗಿಯೇ ಮೊಬೈಲ್‌ನಿಂದ ದೂರವಿರಿ. ಮಲಗುವ ಮುನ್ನ ಮೊಬೈಲ್ ನೋಡುತ್ತಿದ್ದರೇ ಸರಿಯಾಗಿ ನಿದ್ರೆ ಸರಿಯಾಗುವುದಿಲ್ಲ.
ಮದ್ಯಪಾನ ಮಾಡುವುದು
ರಾತ್ರಿ ಮದ್ಯಪಾನ ಮಾಡಿದರೆ ನಿದ್ದೆಯ ಮಧ್ಯೆ ಪದೇ ಪದೇ ಎಚ್ಚರವಾಗುತ್ತದೆ. ಇದು ನಿಮ್ಮ ಗಾಢ ನಿದ್ದೆಗೆ ಅಡ್ಡಿಪಡಿಸುತ್ತದೆ. ಹೀಗಾಗಿ ಅಪ್ಪಿತಪ್ಪಿಯೂ ಮಲಗುವ ಮುನ್ನ ಮದ್ಯಪಾನ ಮಾಡಬೇಡಿ. ನೆನಪಿಡಿ ಮದ್ಯಪಾನ ಆರೋಗ್ಯಕ್ಕೆ ಹಾನಿಕರ.
ಕೆಫೀನ್ ಬಳಕೆ
ರಾತ್ರಿ ಕೆಫೀನ್ ಅಂಶವಿರುವ ಪಾನೀಯಗಳನ್ನು ಕುಡಿದರೆ ಒಳ್ಳೆಯ ನಿದ್ದೆ ಬರುವುದಿಲ್ಲ. ಕಾಫಿ ಕುಡಿದ ನಂತರ ನಿದ್ದೆ ಮಾಡಲು ಕನಿಷ್ಠ 6 ಗಂಟೆಗಳ ಅಂತರ ಬೇಕಾಗುತ್ತದೆ. ಹೀಗಾಗಿ ಮಲಗುವ ಮುನ್ನ ಕೆಫೀನ್ ಬಳಕೆಯನ್ನು ಕಡಿಮೆ ಮಾಡಿ.
ತಡವಾಗಿ ಊಟ ಮಾಡುವುದು
ರಾತ್ರಿ ತಡವಾಗಿ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ತಿನ್ನುವುದನ್ನು ಇಂದೆ ನಿಲ್ಲಿಸಿ. ಇದು ನಿಮ್ಮ ನಿದ್ದೆಗೆ ಅಡ್ಡಿ ಮಾಡುವುದಲ್ಲದೆ, ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ರಾತ್ರಿ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

