MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನವೆಂಬರ್‌ ತಿಂಗಳ ಪ್ರವಾಸಕ್ಕೆ ಹೇಳಿಮಾಡಿಸಿದ ಕರ್ನಾಟಕದ 5 ಪ್ರವಾಸಿ ತಾಣಗಳಿವು!

ನವೆಂಬರ್‌ ತಿಂಗಳ ಪ್ರವಾಸಕ್ಕೆ ಹೇಳಿಮಾಡಿಸಿದ ಕರ್ನಾಟಕದ 5 ಪ್ರವಾಸಿ ತಾಣಗಳಿವು!

5 Best tourist Places to Visit in Karnataka in November: ಮುಂದಿನ ತಿಂಗಳು ನವೆಂಬರ್ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಅಥವಾ ಸಂಗಾತಿಯೊಂದಿಗೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ನವೆಂಬರ್‌ನಲ್ಲಿ ಭೇಟಿ ನೀಡಬಹುದಾದ ಕರ್ನಾಟಕ ಐದು ಪ್ರವಾಸಿತಾಣಗಳು ಇಲ್ಲಿವೆ ನೋಡಿ.

3 Min read
Author : Ravi Janekal
Published : Oct 31 2026, 09:52 AM IST
Share this Photo Gallery
  • FB
  • TW
  • Linkdin
  • Whatsapp
15
ನವೆಂಬರ್ ತಿಂಗಳಲ್ಲಿ ಪ್ರವಾಸ ಮಾಡಲು 5 ಬೆಸ್ಟ್ ಪ್ರವಾಸಿ ತಾಣಗಳು
Image Credit : AI Generated

ನವೆಂಬರ್ ತಿಂಗಳಲ್ಲಿ ಪ್ರವಾಸ ಮಾಡಲು 5 ಬೆಸ್ಟ್ ಪ್ರವಾಸಿ ತಾಣಗಳು

ಇನ್ನೇನು ಅರ್ಧಕರ್ಧ ಮಳೆಗಾಲ ಮುಗಿದಿದೆ, ಇದೀಗ ತಾನೇ ಕುಳಿರ್ಗಾಳಿ ಬಿಸುತ್ತಾ ಚಳಿಗಾಲ ಶುರುವಾಗಿದೆ. ಮುಂದಿನ ತಿಂಗಳು ನವೆಂಬರ್ ಬರ್ತಿದೆ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಇದೆ. ಇದೇ ನೆಪದಲ್ಲಿ ನವೆಂಬರ್‌ ತಿಂಗಳು ಕುಟುಂಬದ ಜೊತೆಗೆ ಅಥವಾ ಸಂಗಾತಿ ಜೊತೆಗೆ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದೀರಾ? ನವೆಂಬರ್‌ ತಿಂಗಳಲ್ಲಿ ಯಾವ ಸ್ಥಳಗಳಿಗೆ ಭೇಟಿ ನೀಡುವುದು ಉತ್ತಮ ಅಂತಾ ಯೋಚಿಸುತ್ತಿದ್ದೀರಾ? ಹಾಗಾದರೆ ಮುಂದಿನ ನವೆಂಬರ್ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯ.

ನವೆಂಬರ್‌ ತಿಂಗಳಲ್ಲಿ ಪ್ರವಾಸ ಹೋಗುವವರಿಗೆ ಯಾಕೆ ಉತ್ತಮ ಸಮಯ ಎಂದರೆ ಬಹುತೇಕ ಮಳೆಗಾಲ ಮುಗಿದು ಹವಾಮಾನ ತಂಪಾಗಿರುತ್ತದೆ ಜೊತೆಗೆ ಮಂಜು ಮುಸುಕಿದ ಚಳಿ, ಇಂಥ ಸಮಯದಲ್ಲಿ ಮಲೆನಾಡಿನ ಹಸಿರು ತುಂಬಿದ ಬೆಟ್ಟಗಳು, ಧರೆಗಿಳಿದಂತ ಮೋಡಗಳು, ಕಾಫಿ ತೋಟಗಳು, ಐತಿಹಾಸಿಕ ಸ್ಮಾರಕಗಳು, ವನ್ಯಜೀವಿಗಳ ತಾಣಗಳು, ಶಾಂತವಾದ ಕಡತೀರಗಳಿಗೆ ಭೇಟಿ ನೀಡಲು ಉತ್ತಮವಾದ ಸಮಯ ಎಂದರೆ ನವೆಂಬರ್ ತಿಂಗಳೇ ಆಗಿದೆ.

ಪ್ರವಾಸ ಎಂದರೆ ಅನ್ಯರಾಜ್ಯಗಳೇ ಆಗಬೇಕಿಲ್ಲ. ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಹಲವು ಸುಂದರ ತಾಣಗಳಿವೆ. ಅವುಗಳನ್ನ ನೋಡಲು ಅನ್ಯರಾಜ್ಯದ ಪ್ರವಾಸಿಗರ ದಂಡೇ ರಾಜ್ಯಕ್ಕೆ ಬರುತ್ತದೆ. ನೀವು ಹಿಂದೆ ಈ ತಾಣಗಳನ್ನು ನೋಡಿದ್ದರೂ ಪರವಾಗಿಲ್ಲ, ಈ ನವೆಂಬರ್ ತಿಂಗಳದಲ್ಲಿ ಒಮ್ಮೆ ಭೇಟಿ ನೀಡಿ, ಪ್ರವಾಸಿತಾಣಗಳ ವಿಶೇಷತೆ, ಹಿನ್ನೆಲೆ ಕುರಿತು ಮಾಹಿತಿ ಇಲ್ಲಿದೆ.

ಗೋಕರ್ಣ:

ನವೆಂಬರ್ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವೆಂದರೆ ಗೋಕರ್ಣ. ಇಲ್ಲಿನ ಓಂ ಬೀಚ್, ಕುಡ್ಲೆ ಬೀಚ್, ಮಹಾಬಲೇಶ್ವರ್ ದೇವಸ್ಥಾನ, ಅರಬ್ಬಿ ಸಮುದ್ರದ ಸೌಂದರ್ಯ ನೋಡಲು ಎರಡು ಕಣ್ಣೂ ಸಾಲದು. ಕಡಲತೀರದಲ್ಲಿ ಸಮಯ ಕಳೆಯಲು ಇಷ್ಟಪಡೋರಿಗೆ ಗೋಕರ್ಣ ಬೆಸ್ಟ್ ಆಯ್ಕೆ. ಯಾಕೆಂದರೆ ನವೆಂಬರ್‌ನಿಂದ ಕರಾವಳಿ ಭಾಗದಲ್ಲಿನ ಹವಾಮಾನ ಪ್ರವಾಸಕ್ಕೆ ತುಂಬಾ ಅನುಕೂಲವಾಗಿರುತ್ತದೆ. ಮಳೆಗಾಲದ ನಂತರ ಅಲ್ಲಿನ ಕಡಲತೀರಗಳು, ಸುತ್ತಮುತ್ತಲಿನ ಪ್ರಕೃತಿಗೆ ಹೊಸ ಕಳೆ ಪಡೆದಿರುತ್ತದೆ..

ಗೋಕರ್ಣ ಪ್ರವಾಸ ಏಕೆ ಹೋಗಬೇಕು?

ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಮತ್ತು ಮಹಾಬಲೇಶ್ವರ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಗಳು. ಕುಟುಂಬದೊಂದಿಗೆ, ಸ್ನೆಹಿತರೊಂದಿಗೆ ಹೋಗಲು ಉತ್ತಮ ಪ್ರವಾಸಿ ಸ್ಥಳ. ಆದರೆ ಸಮುದ್ರದಲ್ಲಿ ಈಜುವ ಸಾಹಸ ಮಾಡಬೇಡಿ, ಸಮುದ್ರದಲ್ಲಿ ಇಳಿಯುವ ಮುನ್ನ ಸ್ಥಳೀಯ ಸುರಕ್ಷತಾ ಸೂಚನೆಗಳನ್ನು ತಪ್ಪದೇ ಪಾಲಿಸಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕಬಿನಿ: ವನ್ಯಜೀವಿಗಳ ನಡುವೆ ಪ್ರವಾಸ
Image Credit : AI Generated

ಕಬಿನಿ: ವನ್ಯಜೀವಿಗಳ ನಡುವೆ ಪ್ರವಾಸ

ಮೈಸೂರಿನ ಕಬಿನಿ ಜಲಾಶಯ ಚಳಿಗಾಲದಲ್ಲಿ ಪ್ರವಾಸ ಮಾಡಲು ಉತ್ತಮ ಪ್ರವಾಸಿ ತಾಣ. ನೀವು ಕೂರ್ಗ್ ಪ್ರವಾಸಕ್ಕೆ ಹೋಗಿ ಬರುವಾಗ ಅಥವಾ ಹೋಗುವ ಮುನ್ನವೇ ಈ ಈ ಪ್ರವಾಸಿ ತಾಣವನ್ನು ನೋಡಬಹುದು. ಇಲ್ಲಿನ ವಿಶೇಷತೆ ಎಂದರೆ ವನ್ಯಜೀವಿ ಸಫಾರಿ, ಆನೆಗಳು, ಹುಲಿಗಳು, ಪಕ್ಷಿಗಳು ಇತರೆ ವನ್ಯಜೀವಿಗಳನ್ನ ಕಾಣಬಹುದು. ಅಲ್ಲದೆ ಕಬಿನಿ ಹಿನ್ನೀರು ನೋಡಲು ಸುಂದರ.

ವನ್ಯಜೀವಿಗಳನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬಹುದು. ಪ್ರಕೃತಿ ಪ್ರಿಯರಾಗಿದ್ದರೆ ನಿಮಗೆ ಇದು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಅರಣ್ಯ ಸಫಾರಿ, ಆನೆ, ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿಗಳನ್ನು ವೀಕ್ಷಿಸಬಹುದು. ಹುಲಿಯ ದರ್ಶನವೂ ಆಗಬಹುದು. ಪ್ರಕೃತಿಯ ನಡುವೆ ನೆಮ್ಮದಿಯ ವೀಕೆಂಡ್ ಅನುಭವಿಸಲು ಇದಕ್ಕಿಂತ ಉತ್ತಮ ತಾಣ ಮತ್ತೊಂದಿಲ್ಲ.ವನ್ಯಜೀವಿಗಳ ವೀಕ್ಷಣೆ ಖಚಿತವಿಲ್ಲ. ಸಫಾರಿ ಸಮಯ ಮತ್ತು ಅನುಮತಿ ಮುಂಚಿತವಾಗಿ ತಿಳಿದುಕೊಂಡರೆ ಒಳ್ಳೆಯದು.

Related Articles

Related image1
ಮಳೆಗಾಲದಲ್ಲಿ ಸಂಗಾತಿ ಜೊತೆ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳು
Related image2
ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಕೇರಳದ 5 ಅದ್ಭುತ ಪ್ರವಾಸಿ ತಾಣಗಳು ಇಲ್ಲಿವೆ
35
ಮುಳ್ಳಯ್ಯನಗಿರಿ ಚಿಕ್ಕಮಗಳೂರು
Image Credit : AI Generated

ಮುಳ್ಳಯ್ಯನಗಿರಿ ಚಿಕ್ಕಮಗಳೂರು

ನವೆಂಬರ್ ತಿಂಗಳಲ್ಲಿ ಪ್ರವಾಸ ಹೋಗಲು ಮತ್ತೊಂದು ಮಲೆನಾಡಿನ ಉತ್ತಮ ಪ್ರವಾಸಿ ಸ್ಥಳವೆಂದರೆ ಚಿಕ್ಕಮಗಳೂರು ಹಚ್ಚಹಸುರಿನಿಂದ ಕೂಡಿದ ಇಲ್ಲಿನ ಮುಳ್ಳಯ್ಯನ ಗಿರಿ, ಬಾಬಾಬುಡನಗಿರಿ, ಕಾಫಿ ತೋಟಗಳು ಸುಂದರ. ನೀವು ಚಾರಣ ಪ್ರಿಯರಾಗಿದ್ದರೆ ಖಂಡಿತ ನವೆಂಬರ್‌ ತಿಂಗಳಲ್ಲಿ ಚಿಕ್ಕಮಗಳೂರು ಪ್ರವಾಸ ಮಾಡಿ. ಏಕೆಂದರೆ ನವೆಂಬರ್‌ನಲ್ಲಿ ಮಳೆ ಕಡಿಮೆಯಾಗಿ ವಾತಾವರಣ ತಂಪಾಗಿರುವುದರಿಂದ ಇಲ್ಲಿ, ಕಾಫಿತೋಟಗಳಲ್ಲಿ ಸುತ್ತಾಡಲು ಅನುಕೂಲ ಮತ್ತು ವಾತಾವರಣ ತಂಪಾಗಿರುತ್ತದೆ. ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಏನೇನು ನೋಡಬಹುದು?

ಮುಳ್ಳಯ್ಯನಗಿರಿ ಬೆಟ್ಟ, ಬಾಬಾಬುಡನ್‌ಗಿರಿ, ಜರಿ ಜಲಪಾತ, ಕಾಫಿ ತೋಟಗಳ ಸೌಂದರ್ಯ, ನೀವು ಚಾರಣಿಗರು, ಫೋಟೋಗ್ರಾಫಿ ಅಥವಾ ನೇಚರ್ ಫೋಟೋಗ್ರಾಫಿ ಆಸಕ್ತಿ ಉಳ್ಳವರಾಗಿದ್ದರೆ ಇದು ಸೂಕ್ತ ಸ್ಥಳ.

45
ಕರ್ನಾಟಕದ ಸ್ಕಾಟ್ಲೆಂಡ್ ಕೊಡಗು ಪ್ರವಾಸ
Image Credit : AI Generated

ಕರ್ನಾಟಕದ ಸ್ಕಾಟ್ಲೆಂಡ್ ಕೊಡಗು ಪ್ರವಾಸ

ಕರ್ನಾಟಕ ಕಾಶ್ಮೀರ ಎಂದೇ ಪ್ರಸಿದ್ಧವಾಗಿರುವ ಕೊಡಗು(ಕೂರ್ಗ್) ನವೆಂಬರ್ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಮುಂಜಾವು ಅನುಭವಿಸಲೇಬೇಕು. ಮಂಜು, ಎಳೆ ಬಿಸಿಲು ತಣ್ಣ ಚಳಿ ಎತ್ತ ನೋಡಿದರೂ ಹಸಿರು ಹಾಸಿ ಹೊದ್ದ ಬೆಟ್ಟಗಳು, ಹಕ್ಕಿಗಳ ಕಲರವ, ಜುಳುಜುಳು ಹರಿಯುವ ಝರಿ, ಜಲಪಾತಗಳು.. ಇಲ್ಲಿನ ತಂಪಾದ ವಾತಾವರಣಕ್ಕೆ ವಾಪಸ್ ಬರುವ ಮನಸೇ ಆಗುವುದಿಲ್ಲ.

ಇದಕ್ಕಾಗಿಯೇ ಕೊಡಗು ಕರ್ನಾಟಕದ ಸ್ಕಾಟ್ಲೆಂಡ್ ಎಂದೇ ಹೆಸರುವಾಸಿಯಾಗಿದೆ. ಪ್ರವಾಸ ಮಾಡುವುದಾದರೆ ಮುಂದಿನ ತಿಂಗಳು ಕೊಡಗು ಪ್ರವಾಸ ಮಾಡಿ. ಕಾಫಿ ತೋಟಗಳ ನಡುವೆ ಸಂಗಾತಿಯೊಂದಿಗೆ ಹೆಜ್ಜೆ ಹಾಕುವುದು ಹೊಸ ಅನುಭವ ನೀಡಬಹುದು. ಕೊಡಗು ಪ್ರವಾಸ ಏನೇನು ನೋಡಬಹುದು?

ಅಬ್ಬೆ ಜಲಪಾತ, ರಾಜಾಸೀಟ್, ದುಬಾರೆ ಆನೆ ಶಿಬಿರ, ತಲಕಾವೇರಿ ಮತ್ತು ಕಾಫಿ ತೋಟಗಳು, ಅಲ್ಲಿನ ವಿಶಿಷ್ಟ ತಿಂಡಿ, ತಿನಿಸುಗಳು, ರಸ್ತೆ ತಿರುವಿನ ಪ್ರಯಾಣ, ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಳು.. ಇಲ್ಲಿಗೆ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಪ್ರವಾಸ ಹೋಗುವುದು ಉತ್ತಮ.

55
ನವೆಂಬರ್ ತಿಂಗಳ ಹಂಪಿ ಪ್ರವಾಸ
Image Credit : AI Generated

ನವೆಂಬರ್ ತಿಂಗಳ ಹಂಪಿ ಪ್ರವಾಸ

ಹಂಪಿ ಪ್ರವಾಸ ಮಾಡಿ

ಚಳಿಗಾಲದಲ್ಲಿ ಹಂಪಿ ಪ್ರವಾಸ ಮಾಡುವುದು ಒಂದು ವಿಶೇಷ ಅನುಭವ. ಡಿಸೆಂಬರ್ ಜನೆವರಿಯಲ್ಲಿ ಪ್ರವಾಸಿಗರಿಂದ ಹೆಚ್ಚು ಜನಜಂಗುಳಿ ಇರುವುದರಿಂದ ಕುಟುಂಬದೊಂದಿಗೆ ಪ್ರವಾಸ ಮಾಡಲು ನವೆಂಬರ್ ತಿಂಗಳು ಬೆಸ್ಟ್ ಸಮಯ. ಹಂಪಿ ಪ್ರವಾಸ ನಿಮ್ಮನ್ನು ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವದ ಯುಗಕ್ಕೆ ಕರೆದೊಯ್ಯುತ್ತದೆ. ಅಲ್ಲಿನ ಕಲ್ಲಿನ ರಥ, ಐತಿಹಾಸಿಕ ಸ್ಮಾರಕಗಳು, ವಿರೂಪಾಕ್ಷ, ವಿಜಯ ವಿಠ್ಟಲ ದೇವಾಲಯಗಳು, ಪಕ್ಕದಲ್ಲೇ ಹರಿಯುವ ತುಂಗಾಭದ್ರಾ ನದಿ ಇವೆಲ್ಲವನ್ನು ಕಣ್ತುಂಬಿಕೊಳ್ಳಬಹುದು.

ನವೆಂಬರ್ ತಿಂಗಳಲ್ಲಿ ಚಳಿಗಾಲ ಶುರುವಾಗುವುದರಿಂದ ಬಿಸಿಲು ಅಷ್ಟಾಗಿ ಇರದು. ಹಗಲಿನಲ್ಲಿ ಹಂಪಿ ಸುತ್ತಾಡಬಹುದು. ಇಲ್ಲಿನ ಪುರಾತನ ಸ್ಮಾರಕಗಳು, ದೇವಾಲಯಗಳನ್ನ ಕಾಲ್ನಡಿಗೆಯಲ್ಲೇ ಸುತ್ತಾಡಿ ನೋಡಬಹುದು. ಇತ್ತೀಚೆಗೆ ಹಂಪಿಗೆ ಯುನೆಸ್ಕೋ ತಂಡ ಭೇಟಿ ನೀಡಿತ್ತು. ಹಂಪಿ ಇದು ವಿಶ್ವ ಪರಂಪರೆಯ ತಾಣವಾಗಿದೆ. ನೀವು ಇತಿಹಾಸ ಪ್ರಿಯರಾಗಿದ್ದರೆ, ಛಾಯಾಗ್ರಹಣದಲ್ಲಿ ಆಸಕ್ತಿವುಳ್ಳರಾಗಿದ್ದರೆ ನವೆಂಬರ್ ತಿಂಗಳಲ್ಲಿ ಹಂಪಿ ಪ್ರವಾಸ ಮಾಡಿ. ವಿಶೇಷ ಅನುಭವ ನೀಡುತ್ತದೆ.

ಹಂಪಿಯಲ್ಲಿ ಏನೇನು ನೋಡಬಹುದು?

ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ವಿಜಯ ವಿಠಲ ದೇಗುಲ, ಮಾತಂಗ ಬೆಟ್ಟದ ಸೂರ್ಯಾಸ್ತ, ತುಂಗಭದ್ರಾ ನದಿಯ ಸೌಂದರ್ಯ ಕಣ್ತುಂಬಿಕೊಳ್ಳಬಹುದು. ಹಾಗೆಯೇ ಪಕ್ಕದಲ್ಲೇ ಇರುವ ಅಂಜನಾದ್ರಿ ಬೆಟ್ಟಕ್ಕೂ ಹೋಗಬಹುದು. ಅಲ್ಲಿಂದ ಹಂಪಿ ನೋಡುವುದೇ ಅದ್ಭುತ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕರ್ನಾಟಕ ಸುದ್ದಿ
ಪ್ರವಾಸೋದ್ಯಮ
ಕೊಡಗು
ಹಂಪಿ
ಚಿಕ್ಕಮಗಳೂರು
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಶ್ರೀರಾಮ ಶ್ರೀಲಂಕಾದಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಬಂದನೇ? ದಸರಾ-ದೀಪಾವಳಿ ನಡುವೆ 21 ದಿನಗಳ ಅಂತರವೇಕೆ?
Recommended image2
ದುಬಾರಿ ಪಾಲಿಶ್​ ಬದಿಗಿಡಿ: ಮರದ ಬಾಗಿಲು, ಕಿಟಕಿ, ಪೀಠೋಪಕರಣಗಳಿಗೆ ಸುಲಭದಲ್ಲೆ ಹೀಗೆ ಹೊಳಪು ನೀಡಿ
Recommended image3
ವಿಶ್ವದ ಅತಿ ಉದ್ದದ ಬಸ್ ಸರ್ವಿಸ್: ಲಂಡನ್‌ನಿಂದ ಭಾರತಕ್ಕೆ 11 ದೇಶಗಳ ದಾಟಲು ಬಸ್ಸಿನಲ್ಲೇ ಪ್ರಯಾಣ!
Related Stories
Recommended image1
ಮಳೆಗಾಲದಲ್ಲಿ ಸಂಗಾತಿ ಜೊತೆ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳು
Recommended image2
ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಕೇರಳದ 5 ಅದ್ಭುತ ಪ್ರವಾಸಿ ತಾಣಗಳು ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved