ಈರುಳ್ಳಿ ಬೇಗನೆ ಹಾಳಾಗ್ತಿದ್ದರೆ ಖರೀದಿಸುವಾಗ ಈ 4 ತಂತ್ರ ಅನುಸರಿಸಿ
Onion Buying Tips: ಮಾರುಕಟ್ಟೆಯಿಂದ ತಂದ ಈರುಳ್ಳಿ ಎರಡು ದಿನಗಳಲ್ಲಿ ಕೊಳೆಯುತ್ತಿದ್ದರೆ ತುಂಬಾ ಬೇಸರವಾಗುತ್ತದೆ. ಇದರಿಂದ ಅಡುಗೆಗೆ ಅಡ್ಡಿಯಾಗುವುದಲ್ಲದೆ, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುವಾಗ ಕೆಲವು ಸಣ್ಣ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.

ಕೆಲವು ಸಣ್ಣ ಮುನ್ನೆಚ್ಚರಿಕೆ
ಅಡುಗೆಮನೆಯಲ್ಲಿ ಈರುಳ್ಳಿ ಇಲ್ಲದೆ ಯಾವುದೇ ಖಾದ್ಯ ಪೂರ್ಣಗೊಳ್ಳುವುದಿಲ್ಲ. ಅದು ಕರಿಯಾಗಿರಬಹುದು ಅಥವಾ ಫ್ರೈ ಮಾಡಿದ ಆಹಾರಗಳಾಗಿರಬಹುದು ಈರುಳ್ಳಿ ಅತ್ಯಗತ್ಯ. ಆದರೆ ಮಾರುಕಟ್ಟೆಯಿಂದ ತಂದ ಈರುಳ್ಳಿ ಎರಡು ದಿನಗಳಲ್ಲಿ ಕೊಳೆಯುತ್ತಿದ್ದರೆ ತುಂಬಾ ಬೇಸರವಾಗುತ್ತದೆ. ಇದರಿಂದ ಅಡುಗೆಗೆ ಅಡ್ಡಿಯಾಗುವುದಲ್ಲದೆ, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುವಾಗ ನೀವು ಕೆಲವು ಸಣ್ಣ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.
ಸರಿಯಾಗಿ ಆರಿಸದಿದ್ದರೆ ಬೇಗನೆ ಹಾಳಾಗುತ್ತವೆ
ಈರುಳ್ಳಿಯ ಬೆಲೆ ಯಾವಾಗ ಏರುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಅನೇಕ ಜನರು ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ ನೀವು ಅವುಗಳನ್ನು ಸರಿಯಾಗಿ ಆಯ್ಕೆ ಮಾಡದಿದ್ದರೆ ಅವು ಬೇಗನೆ ಹಾಳಾಗುತ್ತವೆ ಮತ್ತು ಹಣ ವೇಸ್ಟ್ ಆಗುತ್ತದೆ.
ಶಾಪಿಂಗ್ ಮಾಡುವಾಗ ಗಮನದಲ್ಲಿರಲಿ
ಆದರೆ ಈರುಳ್ಳಿ ಕೊಳ್ಳುವಾಗ ಗಟ್ಟಿಯಾಗಿದೆಯೇ ಅಥವಾ ಇಲ್ಲವೇ?, ಅದರ ವಾಸನೆ ಹೇಗೆ ಬರುತ್ತದೆ?, ಸಿಪ್ಪೆ ಹೇಗಿದೆ? ಇಂತಹ ವಿಷಯಗಳನ್ನು ಗಮನಿಸುವುದು ಬಹಳ ಮುಖ್ಯ. ನಿಮ್ಮ ಅಡುಗೆಮನೆಯಲ್ಲಿ ಈರುಳ್ಳಿಯನ್ನು ಫ್ರೆಶ್ ಆಗಿಡಲು, ಶಾಪಿಂಗ್ ಮಾಡುವಾಗ ನೀವು ಅನುಸರಿಸಬೇಕಾದ ಕೆಲವು ಸರಳ ನಿಯಮಗಳು ಇಲ್ಲಿವೆ ನೋಡಿ..
ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಿ
ಉತ್ತಮ ಈರುಳ್ಳಿಯನ್ನು ಆಯ್ಕೆ ಮಾಡಲು ಮೊದಲ ನಿಯಮವೆಂದರೆ ಅದರ ಗಟ್ಟಿತನ. ನೀವು ಅದನ್ನು ನಿಮ್ಮ ಕೈಯಲ್ಲಿ ಹಿಡಿದಾಗ ಈರುಳ್ಳಿ ಗಟ್ಟಿಯಾಗಿರಬೇಕು. ನೀವು ಅದನ್ನು ಒತ್ತಿದಾಗ ಅದು ಮೃದುವಾಗಿ ಅಥವಾ ಮೆತ್ತಗಾಗಿದ್ದರೆ ಅದು ಒಳಗೆ ಕೊಳೆತಿದೆ ಎಂದರ್ಥ. ಅಲ್ಲದೆ, ಈರುಳ್ಳಿಯ ಸಿಪ್ಪೆ ಒಣಗಿ ತೆಳ್ಳಗಿರಬೇಕು. ಸಿಪ್ಪೆ ತೇವವಾಗಿದ್ದರೆ ಅದು ಬೇಗನೆ ಬೂಸ್ಟ್ ಹಿಡಿಯುವ ಸಾಧ್ಯತೆಯಿದೆ.
ಹಸಿರು ಕಾಂಡಗಳನ್ನು ಹೊಂದಿರುವ ಈರುಳ್ಳಿ
ಮುರಿದ, ಹಸಿರು ಕಾಂಡಗಳನ್ನು ಹೊಂದಿರುವ ಈರುಳ್ಳಿಯನ್ನು ಖರೀದಿಸದಿರುವುದು ಉತ್ತಮ. ಏಕೆಂದರೆ ಅವುಗಳು ಕಳಪೆ ಶೇಖರಣಾ ಸಾಮರ್ಥ್ಯವನ್ನು ಹೊಂದಿರುತ್ತವೆ.
ವಾಸನೆಯ ಮೇಲೆ ನಿಗಾ ಇರಲಿ
ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಅಥವಾ ಬೂಸ್ಟು ಪದರವಿದ್ದರೆ ಅದು ಕೆಟ್ಟುಹೋಗಿದೆ ಎಂಬುದರ ಸಂಕೇತ. ನೀವು ಅಂತಹವನ್ನು ಇತರ ಈರುಳ್ಳಿಗಳೊಂದಿಗೆ ಇಟ್ಟರೆ ಉಳಿದವು ಕೂಡ ಬೇಗನೆ ಕೆಟ್ಟುಹೋಗುತ್ತದೆ. ಅಲ್ಲದೆ ಈರುಳ್ಳಿ ಬಲವಾದ ಅಥವಾ ವಿಚಿತ್ರವಾದ ವಾಸನೆಯನ್ನು ಹೊಂದಿದ್ದರೆ ಅದು ಒಳಗಿನಿಂದ ಕೊಳೆಯಲು ಪ್ರಾರಂಭಿಸಿದೆ ಎಂಬುದರ ಸಂಕೇತವಾಗಿದೆ. ತಾಜಾ ಈರುಳ್ಳಿಗೆ ಅಂತಹ ಕೆಟ್ಟ ವಾಸನೆ ಇರುವುದಿಲ್ಲ.
ಸರಿಯಾದ ಆಯ್ಕೆಯಿಂದ ಆರ್ಥಿಕ ಲಾಭ
ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಆರಿಸುವುದರಿಂದ ಅವು ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುತ್ತದೆ. ಇದು ಪ್ರತಿ ವಾರ ಮಾರುಕಟ್ಟೆಗೆ ಹೋಗುವ ತೊಂದರೆಯನ್ನು ತಪ್ಪಿಸುತ್ತದೆ ಮತ್ತು ಕೊಳೆತ ಈರುಳ್ಳಿಯನ್ನು ಎಸೆಯುವ ಅಗತ್ಯವಿರುವುದಿಲ್ಲ. ಇದು ಗೃಹಿಣಿಯರ ಸಮಯ ಮತ್ತು ಹಣವನ್ನು ಉಳಿಸುತ್ತದೆ.
ಗಾಳಿಯಾಡುವ ಸ್ಥಳದಲ್ಲಿಡಿ
ಖರೀದಿಸಿದ ನಂತರ ಒಣ, ಗಾಳಿಯಾಡುವ ಸ್ಥಳದಲ್ಲಿ ಇಡುವ ಮೂಲಕ ನೀವು ಈರುಳ್ಳಿಯ ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

