Cooking tips: ಈ ವಿಷ್ಯ ಗೊತ್ತಾದ್ರೆ ಆಲೂಗಡ್ಡೆ, ಈರುಳ್ಳಿಯನ್ನ ಎಂದಿಗೂ ಒಟ್ಟಿಗೆ ಇಡಲ್ಲ!
ಬಹುಶಃ ಈ ಲೇಖನವನ್ನು ಓದುವ ಜನರು ಈ ಎರಡನ್ನು ಒಟ್ಟಿಗೆ ಇಟ್ಟರೆ ಏನಾಗುತ್ತದೆ ಎಂದು ಆಶ್ಚರ್ಯಪಡುತ್ತಿರಬಹುದು?. ಆದರೆ ಒಂದು ವೇಳೆ ಗೊತ್ತಾದ್ರೆ ಮುಂದೆ ಇದನ್ನ ಎಂದಿಗೂ ಒಟ್ಟಿಗೆ ಇಡಲ್ಲ.
- FB
- TW
- Linkdin
Follow Us
)
ಭಾರತೀಯ ಅಡುಗೆಮನೆಯಲ್ಲಿ ನಿಮಗೆ ಕೆಲವೊಂದು ಪದಾರ್ಥಗಳು ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ ನೀವು ಖಂಡಿತವಾಗಿಯೂ ಈ ಎರಡು ರೀತಿಯ ತರಕಾರಿಗಳನ್ನು ಕಾಣುವಿರಿ. ಅದೇ ಆಲೂಗಡ್ಡೆ ಮತ್ತು ಈರುಳ್ಳಿ. ಈ ಎರಡು ರೀತಿಯ ತರಕಾರಿಗಳು ಪ್ರತಿಯೊಂದು ಅಡುಗೆಮನೆಯ ಜೀವಾಳ.
ಅಡುಗೆಮನೆಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಇಲ್ಲವೆಂದ್ರೆ ಅಡುಗೆ ಮಾಡೋದು ತುಂಬಾ ಕಷ್ಟ. ಆದರೆ ಅನೇಕರ ಮನೆಗಳಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಲಾಗುತ್ತದೆ. ಹಾಗೆಯೇ ಮನೆಯಲ್ಲಿ ಬೇಯಿಸಲು ಏನೂ ಇಲ್ಲದಿದ್ದರೆ, ಈ ಎರಡನ್ನು ಮಿಶ್ರಣ ಮಾಡುವ ಮೂಲಕ ಏನಾದರೂ ಮಾಡಬಹುದು ಎಂಬ ಕಾರಣದಿಂದಾಗಿಯೂ ಹೀಗೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ನೀವು ಹಳ್ಳಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಎರಡು ದೊಡ್ಡ ಬುಟ್ಟಿಗಳಲ್ಲಿ ಇಡುವುದನ್ನು ನೋಡಿರಬೇಕು. ಆದರೆ ಈ ತರಕಾರಿಗಳನ್ನು ಒಟ್ಟಿಗೆ ಇಡುವುದರಿಂದ ಅನೇಕ ರೀತಿಯ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅದು ಹೇಗೆ ಎಂದು ನೀವು ಯೋಚಿಸುತ್ತಿರಬೇಕು ಅಲ್ಲವೇ?.
ಅದೇನೆಂದರೆ ಈ ಎರಡನ್ನು ಒಟ್ಟಿಗೆ ಇಡುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಈರುಳ್ಳಿ ಎಥಿಲೀನ್ ಎಂಬ ಅನಿಲವನ್ನು ಹೊರಸೂಸುತ್ತದೆ. ಆದ್ದರಿಂದ ಎರಡನ್ನೂ ಒಟ್ಟಿಗೆ ಇಡಬಾರದು. ಈರುಳ್ಳಿ ಹೊರಸೂಸುವ ವಾಸನೆಯು ಆಲೂಗಡ್ಡೆಯನ್ನು ಬೇಗನೆ ಹಾಳು ಮಾಡುತ್ತದೆ. ಕೆಲವೊಮ್ಮೆ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡುವಾಗ ಮೊಳಕೆಯೊಡೆಯುವುದನ್ನು ನೀವು ನೋಡಿರಬೇಕು. ಈರುಳ್ಳಿ ಆಲೂಗಡ್ಡೆಗಿಂತ ಹೆಚ್ಚಿನ ತೇವಾಂಶವನ್ನು ಹೊಂದಿರುವುದರಿಂದ ಹೀಗೆ ಆಗುತ್ತದೆ.
ಈರುಳ್ಳಿಯೊಂದಿಗೆ ಇಟ್ಟ ಆಲೂಗಡ್ಡೆ ಬೇಗನೆ ಮೊಳಕೆಯೊಡೆಯುತ್ತದೆ. ಸೋಲನೈನ್ ನೈಸರ್ಗಿಕ ವಿಷವಾಗಿದ್ದು, ಇದು ಈಗಾಗಲೇ ಆಲೂಗಡ್ಡೆಯಲ್ಲಿರುತ್ತದೆ. ಆದರೆ ಮೊಳಕೆಯೊಡೆದ ನಂತರ, ಸೋಲನೈನ್ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿ ಉಂಟಾಗುತ್ತದೆ.
ಇಲ್ಲಿ ಇನ್ನೂ ಒಂದು ವಿಷಯವಿದೆ. ಅದೇನಪ್ಪಾ ಅಂದ್ರೆ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಇಡುವುದರಿಂದ ಆಲೂಗಡ್ಡೆ ಹಾಳಾಗುತ್ತದೆ. ಅದಕ್ಕಾಗಿಯೇ ಎರಡನ್ನೂ ಯಾವಾಗಲೂ ಪ್ರತ್ಯೇಕ ಪಾತ್ರೆಗಳಲ್ಲಿ ಇಡಲು ಸಲಹೆ ನೀಡಲಾಗುತ್ತದೆ.