MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಬೆಳಗ್ಗೆ ಅಥವಾ ರಾತ್ರಿ: ಮನೆಯ ನೆಲ ಒರೆಸುವ ಸರಿಯಾದ ಸಮಯ ಯಾವುದು? ಈ ವಿಷಯ ತಿಳಿದರೆ ಮನೆಯಲ್ಲಿ ಅನಾಹುತ ತಪ್ಪಿಸಬಹುದು!

ಬೆಳಗ್ಗೆ ಅಥವಾ ರಾತ್ರಿ: ಮನೆಯ ನೆಲ ಒರೆಸುವ ಸರಿಯಾದ ಸಮಯ ಯಾವುದು? ಈ ವಿಷಯ ತಿಳಿದರೆ ಮನೆಯಲ್ಲಿ ಅನಾಹುತ ತಪ್ಪಿಸಬಹುದು!

ಕೆಲವರು ಬೆಳಗಿನ ಜಾವ, ಇನ್ನು ಕೆಲವರು ರಾತ್ರಿಯ ಸಮಯ ಮನೆಯ ನೆಲ ಒರೆಸುತ್ತಾರೆ. ಆದರೆ ನಿಜವಾಗಿಯೂ ನೆಲ ಒರೆಸಲು ಯಾವ ಸಮಯ ಬೆಸ್ಟ್? ರಾತ್ರಿ ವೇಳೆ ಮಾಡಬಾರದ ಕೆಲಸಗಳೇನು? ಗೃಹಿಣಿಯರಿಗೆ ಈ ವಿಷಯ ತಿಳಿದರೆ ಅನಾಹುತ ತಡೆಯಬಹುದು!

2 Min read
Author : Ravi Janekal
Published : Aug 02 2026, 02:41 PM IST
Share this Photo Gallery
  • FB
  • TW
  • Linkdin
  • Whatsapp
16
ನೆಲ ಒರೆಸುವ ಸರಿಯಾದ ಸಮಯ
Image Credit : Asianet News

ನೆಲ ಒರೆಸುವ ಸರಿಯಾದ ಸಮಯ

ಭಾರತೀಯ ಮಹಿಳೆಯರು ಮನೆಯ ಸ್ವಚ್ಛವಾಗಿಡಲು ಮೊದಲ ಆದ್ಯತೆ ನೀಡ್ತಾರೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಮಾಡುವ ಕೆಲಸವೆಂದರೆ ಮನೆಯ ನೆಲ ಒರೆಸುವುದು, ಕಸಗೂಡಿಸುವುದು, ಇದು ಮಾಡದೆ ಬೇರೆ ಯಾವುದೇ ಕೆಲಸ ಶುರುವಾಗುವುದಿಲ್ಲ. ಗೃಹಿಣಿಯರು ಸಾಮಾನ್ಯವಾಗಿ ಬೆಳಗಿನ ಜಾವವೇ ಮನೆಯ ನೆಲ ಒರೆಸುವುದು. ಆದರೆ ಕೆಲವರು ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲಸ ಮಾಡುವವರು ಬೆಳಗ್ಗೆ ಮನೆ ಸ್ವಚ್ಛಗೊಳಿಸಲು ಸಮಯವೇ ಸಿಗುವುದಿಲ್ಲ. ಹೀಗಾಗಿ ನಗರದಲ್ಲಿನ ಮಹಿಳೆಯರು ರಾತ್ರಿಯೇ ನೆಲ ಒರೆಸುವುದು ಹೆಚ್ಚು. ಹಾಗಾದರೆ ನೆಲ ಒರೆಸುವುದಕ್ಕೆ ಯಾವ ಸಮಯ ಬೆಸ್ಟ್? ರಾತ್ರಿಯೋ? ಬೆಳಗಿನ ಜಾವ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನೆಲ ಒರೆಸುವ ಸರಿಯಾದ ಸಮಯ ಯಾವುದು? ಬೆಳಗ್ಗೆಯೋ? ರಾತ್ರಿಯೋ?
Image Credit : Asianet News

ನೆಲ ಒರೆಸುವ ಸರಿಯಾದ ಸಮಯ ಯಾವುದು? ಬೆಳಗ್ಗೆಯೋ? ರಾತ್ರಿಯೋ?

ಬೆಳಗ್ಗೆಯೋ ಸಂಜೆಯೋ ಆದರೆ ಮನೆಯಲ್ಲಿ ಅತ್ತಿಂದಿತ್ತ ಓಡಾಡುವುದು ಕಡಿಮೆ ಇದ್ದಾಗ ನೆಲ ಒರೆಸುವುದು ಸೂಕ್ತ, ಇದು ಹೆಚ್ಚಾಗಿ ಕೆಲವರಿಗೆ ರಾತ್ರಿ ಅಥವಾ ಇನ್ನು ಕೆಲವರಿಗೆ ಬೆಳಗಿನ ಜಾವ ಉತ್ತಮ. ನೆಲ ಒರೆಸಿದಾಗ ನೆಲವು ಒದ್ದೆಯಾಗಿರುತ್ತದೆ. ಇದೆ ವೇಳೆ ಒದ್ದೆಯಾದ ನೆಲದ ಮೇಲೆ ನಡೆಯುವುದರಿಂದ ಹೆಜ್ಜೆಯ ಗುರುತು ಮೂಡಿ ತೊಳೆದಂತೆ ಕಾಣುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ಸಮಯ ಹಿರಿಯರು ಓಡಾಡುವುದರಿಂದ ಕಾಲು ಜಾರುವ ಸಾಧ್ಯತೆ ಇರುತ್ತೆ. ಹೀಗಾಗಿ ನೆಲ ಒರೆಸಲಿಕ್ಕೆ ಮೇಲೆ ಹೇಳಿದಹಾಗೆ ಅತ್ತಿಂದಿತ್ತ ಓಡಾಡದ ಸಮಯ ನೋಡಿ ಒರೆಸುವುದು ಸೂಕ್ತ.

Related Articles

Related image1
ಮನೆಯ ನೆಲ ಒರೆಸುವಾಗ ನೀರಲ್ಲಿ ಈ ಮೂರು ವಸ್ತು ಬೆರೆಸಿ, ಮೂಲೆ ಮೂಲೆಯೂ ಮಿಂಚಿನಂತೆ ಹೊಳೆಯುತ್ತೆ!
Related image2
Slippers at home: ಮನೆಯೊಳಗೂ ಚಪ್ಪಲಿ ಧರಿಸಿ ಓಡಾಡ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ!
36
ನೆಲ ಒರೆಸಿದ ಮೇಲೆ ರಾತ್ರಿಯಿಡೀ ಮಾಪ್ ಬಿಡುವುದು ತಪ್ಪು
Image Credit : Asianet News

ನೆಲ ಒರೆಸಿದ ಮೇಲೆ ರಾತ್ರಿಯಿಡೀ ಮಾಪ್ ಬಿಡುವುದು ತಪ್ಪು

ಮನೆಯ ನೆಲ ಒರೆಸಿದ ಮೇಲೆ ಕೆಲವರು ಬಾತ್‌ರೂಮ ಮೂಲೆಯಲ್ಲೋ, ಬಾಲ್ಕನಿಯಲ್ಲೋ ಇಡುತ್ತಾರೆ. ಒದ್ದೆಯಾದ ಮಾಪ್ ಹೀಗೆ ಇಡುವುದು ಸರಿಯಲ್ಲ. ಏಕೆಂದರೆ. ಅದು ತೇವಾಂಶವನ್ನು ಹಾಗೆ ಉಳಿಸಿಕೊಳ್ಳಬಹುದು. ಆಗ ಬಾತ್‌ರೂಂನಂತಹ ಮುಚ್ಚಿದ ರೂಮಿನಲ್ಲಿ ಅದನ್ನು ಇಟ್ಟಾಗ ಕೆಟ್ಟಗಾಳಿ, ವಾಸನೆ ಬರುವಂತಾಗುತ್ತೆ. ಹೀಗಾಗಿ ನೆಲ ಒರೆಸಿದ ನಂತರ ಬಿಸಿಲಿನಲ್ಲಿ ಅಥವಾ ಚೆನ್ನಾಗಿ ಗಾಳಿ ಬರುವಲ್ಲಿ ಇಡುವುದು ಬೆಸ್ಟ್.

46
ರಾತ್ರಿಯಲ್ಲಿ ನೆಲ ಒರೆಸುವುದು ಈ ಕಾರಣಗಳಿಗೆ ಸರಿಯಲ್ಲ
Image Credit : Asianet News

ರಾತ್ರಿಯಲ್ಲಿ ನೆಲ ಒರೆಸುವುದು ಈ ಕಾರಣಗಳಿಗೆ ಸರಿಯಲ್ಲ

ರಾತ್ರಿಯಲ್ಲಿ ನೀವು ಇಡೀ ಮನೆಯನ್ನು ಒರೆಸಿದರೆ, ಒದ್ದೆಯಾದ ನೆಲವು ಸ್ವತಃ ತೊಂದರೆಯಾಗಬಹುದು. ಕುಟುಂಬದ ಸದಸ್ಯರು ರಾತ್ರಿಯಲ್ಲಿ ನೀರು ಕುಡಿಯಲು, ಸ್ನಾನಗೃಹಕ್ಕೆ ಹೋಗಲು ಅಥವಾ ಇನ್ನೇನಾದರೂ ಮಾಡಲು ಎದ್ದರೆ, ಒದ್ದೆಯಾದ ನೆಲದ ಮೇಲೆ ಕಾಲಿಟ್ಟು ಜಾರಿಬೀಳುವ ಅಪಾಯವಿರುತ್ತದೆ. ಹಗಲಿನಲ್ಲಿ ನೆಲ ಒರೆಸುವುದರಿಂದ ಸೂರ್ಯನ ಬೆಳಕಿನಿಂದ ನೆಲ ಒರೆಸಿರುವುದು ಓಡಾಡುವವರಿಗೆ ಕಾಣಿಸುತ್ತದೆ ಆಗ ಜಾಗರೂಕವಾಗಿ ಓಡಾಡುತ್ತಾರೆ. ಅದೇ ರಾತ್ರಿಯಲ್ಲಿ ನೆಲ ಒದ್ದೆಯಾಗಿರುವುದು ಕಾಣುವುದಿಲ್ಲ. ರಾತ್ರಿಯಲ್ಲಿ ಹಾಲು, ಚಹ, ಅನ್ನ, ಇನ್ನೇನಾದರೂ ಚೆಲ್ಲಿದ್ದರೆ ಅದಕ್ಕಾಗಿ ಇಡೀ ಮನೆಯ ನೆಲ ಒರೆಸುವ ಬದಲು ಆ ಸ್ಥಳವನ್ನಷ್ಟೇ ಒರೆಸುವುದು ಬೆಟರ್. ಒರೆಸಿದ ನಂತರ ಬೇಗ ಒಣಗಲು ಫ್ಯಾನ್ ಹಾಕಬಹುದು. ಮಕ್ಕಳಿದ್ದರೆ ಅಲ್ಲಿ ಓಡಾಡದಂತೆ ಎಚ್ಚರಿಸಬೇಕು.

56
ರಾತ್ರಿ ವೇಳೆ ಈ ಕೆಲಸ ಮಾಡಬೇಡಿ!
Image Credit : Asianet News

ರಾತ್ರಿ ವೇಳೆ ಈ ಕೆಲಸ ಮಾಡಬೇಡಿ!

ರಾತ್ರಿ ವೇಳೆ ಇಡೀ ಮನೆ ನೆಲ ಒರೆಸುವುದು ಒಳ್ಳೆದಲ್ಲ. ನೆಲ ಒರೆಸುವಾಗ ಬಳಸುವ ರಾಸಾಯನಿಕ ಕ್ಲೀನರ್‌ ಬಳಸುವಾಗ ಮನೆಯಲ್ಲಿ ಸಾಕಾಷ್ಟು ಗಾಳಿಯಾಡುವಂತಿರಬೇಕು. ಇಲ್ಲದಿದ್ರೆ ರಾತ್ರಿಯಿಡೀ ಮನೆಯಲ್ಲಿ ಆ ವಾಸನೆಗೆ ತಲೆ ಚಿಟ್ಟುಹಿಡಿಬಹುದು. ಕೆಲವರಿಗೆ ವಾಸನೆಯಿಂದ ಅಲರ್ಜಿ ಆಗಬಹುದು. ಹಗಲಿನಲ್ಲಾದರೆ ಕಿಟಕಿ ಬಾಗಿಲು ತೆರೆದು ಒರೆಸುವುದರಿಂದ ಗಾಳಿಯಾಡುತ್ತದೆ. ಹಾಗಾಂತ ರಾತ್ರಿಯೂ ನೆಲ ಒರೆಸುವಾಗ ಕಿಟಕಿ ಬಾಗಿಲು ತೆರೆದು ಒರೆಸಿ ಮಲಗುವುದು ಸುರಕ್ಷತೆ ದೃಷ್ಟಿಯಿಂದ ಸರಿಯಲ್ಲ.

66
ರಾತ್ರಿ ವ್ಯಾಕ್ಯೂಮ್ ಕ್ಲೀನರ್ ಬಳಸುವುದು ಬೇಡ
Image Credit : Asianet News

ರಾತ್ರಿ ವ್ಯಾಕ್ಯೂಮ್ ಕ್ಲೀನರ್ ಬಳಸುವುದು ಬೇಡ

ರಾತ್ರಿಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸುವುದು ಒಳ್ಳೆಯದಲ್ಲ. ವಿಶೇಷವಾಗಿ ಕುಟುಂಬಸ್ಥರು ಮಲಗಿರುವಾಗ. ಅಪಾರ್ಟ್‌ಮೆಂಟ್‌ಗಳು ಅಥವಾ ಪಕ್ಕದ ಮನೆಗಳಲ್ಲಿ, ಶಬ್ದವು ನೆರೆಹೊರೆಯವರಿಗೆ ತೊಂದರೆ ಉಂಟುಮಾಡಬಹುದು. ರಾತ್ರಿಯಲ್ಲಿ ಸಣ್ಣಪುಟ್ಟ ಶುಚಿಗೊಳಿಸುವ ಕೆಲಸಗಳಿಗೆ, ಪೊರಕೆ ಅಥವಾ ಇತರ ನಿಶ್ಯಬ್ದ ಪರ್ಯಾಯಗಳನ್ನು ಬಳಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮನೆ
ಮನೆಗೆಲಸದವಳು
ಜೀವನಶೈಲಿ
Latest Videos
Recommended Stories
Recommended image1
Kitchen Safety: ಅಡುಗೆಮನೆಯಲ್ಲಿ ಈ 6 ವಸ್ತುಗಳಿದ್ರೆ ದೊಡ್ಡ ಅಪಾಯ; ಇಂದೇ ಚೆಕ್ ಮಾಡಿ
Recommended image2
ಫ್ರಿಡ್ಜ್‌ಗೆ ಕವರ್ ಹಾಕುತ್ತಿದ್ದೀರಾ? ಕರೆಂಟ್ ಬಿಲ್ ಜಾಸ್ತಿ ಬರೋದು ಮಾತ್ರವಲ್ಲ, ಬೆಂಕಿ ಹೊತ್ತಿಕೊಳ್ಳಬಹುದು.. ಎಚ್ಚರ!
Recommended image3
ಬಿಸಿಯಾದ ಆಹಾರ ಫ್ರಿಡ್ಜ್‌ನಲ್ಲಿ ಇಡುತ್ತೀರಾ? ಹಾಗಿದ್ರೆ ನೀವು ಭಾರೀ ಗಂಡಾಂತರಕ್ಕೆ ಸಿಕ್ಕಿಹಾಕಿಕೊಳ್ತೀರಾ, ಎಚ್ಚರ!
Related Stories
Recommended image1
ಮನೆಯ ನೆಲ ಒರೆಸುವಾಗ ನೀರಲ್ಲಿ ಈ ಮೂರು ವಸ್ತು ಬೆರೆಸಿ, ಮೂಲೆ ಮೂಲೆಯೂ ಮಿಂಚಿನಂತೆ ಹೊಳೆಯುತ್ತೆ!
Recommended image2
Slippers at home: ಮನೆಯೊಳಗೂ ಚಪ್ಪಲಿ ಧರಿಸಿ ಓಡಾಡ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved