ಮನೆಯ ನೆಲ ಒರೆಸುವಾಗ ನೀರಲ್ಲಿ ಈ ಮೂರು ವಸ್ತು ಬೆರೆಸಿ, ಮೂಲೆ ಮೂಲೆಯೂ ಮಿಂಚಿನಂತೆ ಹೊಳೆಯುತ್ತೆ!
ಗೃಹಿಣಿಯರೇ, ಪ್ರತಿದಿನ ನೆಲ ಒರೆಸಿ ಬೇಸತ್ತಿದ್ದೀರಾ? ಎಷ್ಟು ತೊಳೆದರೆ ಕೊಳೆ, ಕಲೆ ಹೋಗುತ್ತಿಲ್ಲವೇ, ಮನೆಯಲ್ಲಿ ಕೆಟ್ಟ ವಾಸನೆಯೇ. ಇಲ್ಲಿದೆ ಸಿಂಪಲ್ ಟಿಪ್ಸ್, ನೆಲ ಒರೆಸುವಾಗ ನೀರಿನಲ್ಲಿ ಈ ಮೂರು ವಸ್ತುಗಳು ಸೇರಿಸಿಬಿಡಿ ಸಾಕು, ನೆಲವೂ ಸ್ವಚ್ಛ, ಮನೆಯಲ್ಲೂ ಪರಿಮಳ!

Simple and effective tips for cleaning house floors
ಭಾರತೀಯ ಹೆಣ್ಣುಮಕ್ಕಳಿಗೆ ಪ್ರತಿದಿನ ಮನೆಯೊಳಗಿನ ನೆಲ ಒರೆಸುವುದು ನಿತ್ಯ ಕಾಯಕ. ನೆಲ ಒರೆಸುವ ಪೌಡರ್ ಹಾಕಿ ತೊಳೆದರೂ ಮನೆಯ ಮೂಲೆಯ ಕೊಳಕು ಹೋಗುವುದೇ ಇಲ್ಲ. ಇಡೀ ಮನೆಯ ನೆಲ ಒರೆಸಿದ ನಂತರವೂ ಒಣಗಿದ ಮೇಲೆ ಇಷ್ಟೊತ್ತು ನೆಲ ಒರೆಸಿದ್ದೇ ವ್ಯರ್ಥ ಎಂಬಂತೆ ನೀರಿನ ಕಲೆಗಳಿಂದಲೂ ಮಸುಕಾಗಿ ಕಾಣಿಸಿ ನಿಮ್ಮನ್ನು ಅಣಕಿಸುವಂತೆ ಇರುತ್ತೆ.
Simple and effective tips for cleaning house floors
ಚಿಂತಿಸಬೇಡಿ, ಸರಿಯಾದ ರೀತಿಯಲ್ಲಿ ನೆಲ ಒರೆಸುವ ಕ್ರಮ ತಿಳಿದುಕೊಂಡರೆ ಸಾಕು ನಿಮ್ಮ ಮನೆಯ ಮೂಲೆಮೂಲೆಯ ನೆಲ ಸ್ವಚ್ಛವಾಗಿರುತ್ತದೆ, ಹೊಸ ಟೈಲ್ಸ್ ಹಾಕಿಸಿದಂತೆ ಹೊಳೆಯುತ್ತೆ, ಅಷ್ಟೇ ಅಲ್ಲ, ನೆಲ ಒರೆಸಿದ ಬಳಿಕ ಮನೆಯಲ್ಲಿ ಒಂದು ಸುವಾಸನೆ ತುಂಬಿ ಪರಿಮಳದಿಂದ ಮನೆ ಯಾವಾಗಲೂ ಫ್ರೆಶ್ ಆಗಿರುತ್ತದೆ.
ನಿಮ್ಮ ಮನೆಯಲ್ಲಿ ಯಾವಾಗಲೂ ನೊಣಗಳು ತುಂಬಿದ್ದರೆ ನೆಲ ಸ್ವಚ್ಛವಾಗಿಲ್ಲವೆಂದೇ ಅರ್ಥ. ನೀವು ಪ್ರತಿದಿನ ಕೇವಲ ನೀರಲ್ಲಿ ತೊಳೆದರೆ ಪ್ರಯೋಜನವಿಲ್ಲ. ನೀರಿನಲ್ಲಿ ಸರಿಯಾದ ಪ್ರಮಾಣದಲ್ಲಿ ಈ ಮೂರು ಗೃಹೋಪಯೋಗಿ ವಸ್ತುಗಳನ್ನು ಬರೆಸಿದರೆ ಸಾಕು ನೆಲವೂ ಪಟಾಪಟ್ ಕ್ಲೀನ್, ಸಮಯ, ಹಣ ಹೆಚ್ಚು ಖರ್ಚಾಗುವುದಿಲ್ಲ.
ನೆಲ ಒರೆಸುವ ಮುನ್ನ ನೀರಲ್ಲಿ ಬಿಳಿ ವಿನೆಗರ್ ಸೇರಿಸಿ
ನೆಲ ಒರೆಸಲು ಬಕೆಟ್‌ಗೆ ನೀರು ತುಂಬಿದ ಬಳಿಕ ಅಥವಾ ಮಾಪ್ ನೀರಿಗೆ ಬಿಳಿ ವಿನೆಗರ್ ಸೇರಿಸಿದರೆ ನಿಮ್ಮ ಮನೆಯ ನೆಲ ಸ್ವಚ್ಚ ಪಳಪಳ ಹೊಳೆಯುವಂತೆ ಮಾಡುವಂತೆ. ಇದು ಆರಂಭದಲ್ಲಿ ಸ್ವಲ್ಪ ವಾಸನೆಯಂತೆ ಕಂಡರು, ಗಾಳಿಯಾಡಿ ಒಣಗಿದ ಮೇಲೆ ಯಾವುದೇ ಚಾಪೆ ಹಾಸಿಗೆಯಿಲ್ಲದೆ ಮಲಗಬಹುದಷ್ಟೇ ಫ್ರೆಶ್ ಆಗಿರುತ್ತೆ.
ನೆಲ ಒರೆಸುವ ನೀರಿಗೆ ಅಡುಗೆ ಸೋಡ ಸೇರಿಸಿ
ಕಾಲಿನ ದೂಳು, ನೀರು ಚೆಲ್ಲಿ, ಮಕ್ಕಳ ತಿಂಡಿ ತಿನಿಸುವ ಚೆಲ್ಲಿ ಇಡೀ ಮನೆಯೇ ಒಂದು ರೀತಿ ಕೆಟ್ಟ ವಾಸನೆ ಜೊತೆಗೆ ನೋಣಗಳ ಕಾಟದಿಂದ ಮನೆಯೊಳಗೆ ಕೂಡಲು ಆಗದಂತ ಕಿರಿಕಿರಿ ಆಗುತ್ತದೆ. ಇಂಥ ಇಂಥ ಸಮಯದಲ್ಲಿ ಕೇವಲ ನೀರಿನಿಂದ ಸ್ವಚ್ಚಗೊಳಿಸಿದರೆ ಸಾಕಾಗದು, ನೀರಿನಲ್ಲಿ ಸ್ವಲ್ಪ ಅಡುಗೆ ಸೋಡ ಬೆರೆಸಿ ನೋಡಿ, ಅಡುಗೆ ಸೋಡ ಒಂದು ಸ್ಕ್ರಬ್ ಆಗಿ ಕೆಲಸ ಮಾಡುತ್ತೆ. ಇದರಿಂದ ಮನೆಯ ನೆಲದ ಮೇಲೆ ಅಂಟಿದ ಕಲೆಗಳು, ಕೊಳೆಯನ್ನ ತೊಳೆದು ಇಡೀ ಮನೆಯ ನೆಲವೇ ಸ್ವಚ್ಛವಾಗಿ ಕಂಗೊಳಿಸುವಂತೆ ಮಾಡುತ್ತೆ. ಬೇಕಾದರೆ ನೀವು ಇವತ್ತೇ ಟ್ರೈ ಮಾಡಬಹಉದು!
ಇನ್ನೊಂದಿದೆ, ಅದು ನಿಂಬೆ ರಸ!
ನಿಂಬೆ ರಸವನ್ನು ನೆಲವನ್ನು ಸ್ವಚ್ಛಗೊಳಿಸಲು ಉತ್ತಮ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಇದರ ನೈಸರ್ಗಿಕ ಪದಾರ್ಥಗಳು ಕಲೆಗಳನ್ನು ತೆಗೆದುಹಾಕಲು ಮತ್ತು ನೆಲವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ಮನೆಯಾದ್ಯಂತ ಉಲ್ಲಾಸಕರ ಸಿಟ್ರಸ್ ಪರಿಮಳವನ್ನು ಬಿಡುತ್ತದೆ. ಮಾಪ್ ನೀರಿಗೆ ಎರಡರಿಂದ ಮೂರು ಟೀ ಚಮಚ ನಿಂಬೆ ರಸವನ್ನು ಸೇರಿಸಬಹುದು.
ಮನೆಯ ನೆಲ ಸ್ವಚ್ಛಗೊಳಿಸಿದ ನಂತರ ಇಡೀ ದಿನ ಫ್ರೆಶ್ ಆಗಿ ಒಂದು ರೀತಿ ಪರಿಮಳಯುಕ್ತ ಸುವಾಸನೆ ಇರಬೇಕು ಎಂದರೆ ಮಾಪ್ ನೀರಿಗೆ ಕೆಲವು ಹನಿ ಲ್ಯಾವೆಂಡರ್, ಪುದೀನಾ, ಯೂಕಲಿಪ್ಟಸ್ ಅಥವಾ ನಿಂಬೆ ರಸ ಬೆರಸಿ. ಇದು ಮನೆಯ ತುಂಬಾ ಪರಿಮಳ ಹರಡುತ್ತದೆ
ಉಪ್ಪು: ರುಚಿಗಷ್ಟೇ ಅಲ್ಲ, ನೆಲ ಸ್ವಚ್ಛಗೊಳಿಸಲು ಸೈ!
ರುಚಿ ಹೆಚ್ಚಿಸುವುದಲ್ಲದೆ, ಶುಚಿಗೊಳಿಸುವುದಕ್ಕೂ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಒರೆಸುವ ನೀರಿಗೆ ಒಂದು ಟೀಚಮಚ ಉಪ್ಪನ್ನು ಸೇರಿಸುವುದರಿಂದ ನೆಲದ ಶುಚಿಗೊಳಿಸುವಿಕೆ ಸುಧಾರಿಸುತ್ತದೆ. ಇದು ಸೂಕ್ಷ್ಮಜೀವಿಗಳನ್ನು ಕಡಿಮೆ ಮಾಡಲು ಮತ್ತು ಇರುವೆಗಳಂತಹ ಸಣ್ಣ ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ನೀವು ಪ್ರತಿದಿನ ನಿಮ್ಮ ನೆಲವನ್ನು ಒರೆಸುವಾಗ ಈ ಸರಳ ಮನೆಯ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ, ನಿಮ್ಮ ನೆಲವು ಸ್ವಚ್ಛವಾಗಿ, ಹೊಳೆಯುವ ಮತ್ತು ತಾಜಾವಾಗಿ ಕಾಣುತ್ತದೆ. ಮಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

