ಚಪಾತಿ ಬೆಣ್ಣೆಯಂತೆ ಮೃದುವಾಗಿ ಬರಬೇಕೆಂದರೆ ಹಿಟ್ಟನ್ನ ಜಸ್ಟ್ ಈ ರೀತಿ ಮಿಕ್ಸ್ ಮಾಡಿ ಸಾಕು
How to make soft chapati: ಯಾವುದೇ ವೆಚ್ಚ ಅಥವಾ ಶ್ರಮವಿಲ್ಲದೆ ಕೇವಲ ಒಂದು ಪದಾರ್ಥ ಸೇರಿಸುವ ಮೂಲಕ ನಿಮ್ಮ ಹಿಟ್ಟನ್ನು ಬೆರೆಸುವ ಪ್ರಕ್ರಿಯೆಯನ್ನು ಇದು ಸರಳಗೊಳಿಸುತ್ತದೆ. ಆ ಅದ್ಭುತ ಟ್ರಿಕ್ ಏನು?, ನಯವಾದ ಚಪಾತಿ ತಯಾರಿಸುವುದು ಹೇಗೆ ಎಂದು ತಿಳಿಯಲು ಕೊನೆಯವರೆಗೆ ಪೂರ್ತಿಯಾಗಿ ಓದಿ...

ನಯವಾದ ಚಪಾತಿ ತಯಾರಿಸುವುದು ಹೇಗೆ?
ಚಪಾತಿ ಮೃದುವಾಗಿ ಬರಬೇಕೆಂದರೆ ನಾವು ಮಾಡಬೇಕಾದ ಮೊದಲ ಕೆಲಸ ಹಿಟ್ಟನ್ನು ಸರಿಯಾಗಿ ಬೆರೆಸುವುದು. ಆದರೆ ಅನೇಕ ಜನರು ಈ ಪ್ರಕ್ರಿಯೆ ಬಗ್ಗೆ ತಪ್ಪಾಗಿ ತಿಳಿದು, ಸುಮ್ಮನೆ ತಮ್ಮ ಕೈಗಳಿಗೆ ಆಯಾಸ ಅಂದುಕೊಳ್ಳುತ್ತಾರೆ. ಇಷ್ಟು ದಿನ ಬಿಡಿ, ಇನ್ಮೇಲೆ ಚಪಾತಿ ಬೆಣ್ಣೆಯಂತೆ ಮೃದುವಾಗಿ ಬರಬೇಕೆಂದರೆ ಸಿಂಪಲ್ ಕಿಚನ್ ಹ್ಯಾಕ್ ಇದೆ. ಯಾವುದೇ ವೆಚ್ಚ ಅಥವಾ ಶ್ರಮವಿಲ್ಲದೆ ಕೇವಲ ಒಂದು ಪದಾರ್ಥ ಸೇರಿಸುವ ಮೂಲಕ ನಿಮ್ಮ ಹಿಟ್ಟನ್ನು ಬೆರೆಸುವ ಪ್ರಕ್ರಿಯೆಯನ್ನು ಇದು ಸರಳಗೊಳಿಸುತ್ತದೆ. ಆ ಅದ್ಭುತ ಟ್ರಿಕ್ ಏನು?, ನಯವಾದ ಚಪಾತಿ ತಯಾರಿಸುವುದು ಹೇಗೆ ಎಂದು ತಿಳಿಯಲು ಕೊನೆಯವರೆಗೆ ಪೂರ್ತಿಯಾಗಿ ಓದಿ...
ಚಪಾತಿಗೆ ಬೇಕಾಗಿರುವ ಪದಾರ್ಥಗಳು
ಗೋಧಿ ಹಿಟ್ಟು:2 ಕಪ್
ಬಿಸಿ ನೀರು:1 ಕಪ್
ಉಪ್ಪು: ರುಚಿಗೆ ಬೇಕಾಗುವಷ್ಟು
ಎಣ್ಣೆ: 2 ಚಮಚ
ತಯಾರಿಸುವ ವಿಧಾನ
*ಮೊದಲಿಗೆ ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು ಇದನ್ನು ಉಪ್ಪಿನೊಂದಿಗೆ ಮಿಶ್ರಣ ಮಾಡಿ.
*ನಂತರ ಬಿಸಿ ನೀರನ್ನು ಹಿಟ್ಟಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಹೋಗಿ.
*ಈ ಸಮಯದಲ್ಲಿ ಹಿಟ್ಟು ಬಿಸಿಯಾಗಿರುವುದರಿಂದ ಕೈಯಿಂದ ಬೆರೆಸುವ ಬದಲು ಚಮಚ ಬಳಸಿ ಬೆರೆಸಬೇಕು. ಹಿಟ್ಟು ಸರಿಯಾದ ಹದಕ್ಕೆ ಬಂದಾಗ ಬೆರೆಸುವುದನ್ನು ನಿಲ್ಲಿಸಿ ಮತ್ತು ತಣ್ಣಗಾಗಲು ಬಿಡಿ.
*ಹಿಟ್ಟು ಸ್ವಲ್ಪ ತಣ್ಣಗಾದ ನಂತರ ಎಣ್ಣೆ ಸೇರಿಸಿ. ಒಮ್ಮೆ ಲಘುವಾಗಿ ಒತ್ತಿ. ದೊಡ್ಡ ಉಂಡೆಯ ರೀತಿಯಾದ ನಾದಿಟ್ಟುಕೊಂಡು, ಅದರ ಮೇಲೆ ಮುಚ್ಚಳವನ್ನು ಮುಚ್ಚಿ.
ಎಂದಿನಂತೆ ಎರಡೂ ಬದಿ ಬೇಯಿಸಿ
ನಾದಿಟ್ಟುಕೊಂಡ ಹಿಟ್ಟನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಣ್ಣ ಉಂಡೆಗಳ ರೀತಿ ಮಾಡಿಟ್ಟುಕೊಳ್ಳಿ. ಚಪಾತಿ ಮಣೆ ಮೇಲೆ ವೃತ್ತಾಕಾರವಾಗಿ ಲಟ್ಟಿಸಿ. ಚಪಾತಿಯನ್ನು ಎಂದಿನಂತೆ ಹಂಚಿನ ಮೇಲೆ ಇರಿಸಿ ಎರಡೂ ಬದಿ ಬೇಯಿಸಿ.
ಇದೇ ನೋಡಿ ಸೀಕ್ರೆಟ್ ಟಿಪ್ಸ್
ಈ ವಿಧಾನದಲ್ಲಿ ಪ್ರಮುಖ ಸಲಹೆಯೆಂದರೆ ಬಿಸಿನೀರನ್ನು ಬಳಸುವುದು. ಬಿಸಿನೀರು ಹಿಟ್ಟಿನಲ್ಲಿರುವ ಪಿಷ್ಟವನ್ನು ಒಡೆಯುತ್ತದೆ. ಇದು ಬೆರೆಸಲು ಹೆಚ್ಚು ಸುಲಭವಾಗುತ್ತದೆ. ಈ ತಂತ್ರವು ನಯವಾದ, ಗರಿಗರಿಯಾದ ಚಪಾತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ.