ಅತ್ತೆ ಮನೆಯಲ್ಲಿ ಫಸ್ಟ್ ಟೈಂ ಅಡುಗೆ ಮಾಡ್ತಿರೋ ಸೊಸೆ ತಿಳಿದುಕೊಂಡಿರಬೇಕಾದ ಕಿಚನ್ ಟಿಪ್ಸ್
ಮೊದಲ ಬಾರಿಗೆ ಅಡುಗೆ ಮಾಡುವವರು ಮತ್ತು ಬ್ಯಾಚುಲರ್‌ಗಳಿಗಾಗಿ ಈ ಲೇಖನದಲ್ಲಿ ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ. ಸಾಂಬಾರ್, ಅನ್ನ, ಚಪಾತಿ ತಯಾರಿಯಿಂದ ಹಿಡಿದು, ಒಗ್ಗರಣೆ ಮತ್ತು ಇತರ ಕಿಚನ್ ಹ್ಯಾಕ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಅಡುಗೆಮನೆ ಸೀಕ್ರೆಟ್
ನೀವು ಮೊದಲ ಬಾರಿಗೆ ಅಥವಾ ಬ್ಯಾಚುಲರ್ ಆಗಿದ್ದು, ಅಡುಗೆ ಮಾಡಿಕೊಳ್ಳುತ್ತಿದ್ರೆ ಕೆಲವೊಂದು ವಿಷಯಗಳನ್ನು ತಿಳಿದಿಕೊಂಡಿರಬೇಕಾಗುತ್ತದೆ. ಮದುವೆಯಾಗಿ ಬಂದ ವಧುವಂತೂ ಈ ಟಿಪ್ಸ್ ಖಂಡಿತವಾಗಿ ತಿಳಿದಿಕೊಂಡಿರಬೇಕು. ಈ ಟಿಪ್ಸ್ ಗೊತ್ತಿದ್ರೆ ರುಚಿಯಾಗಿ ಅಡುಗೆ ಮಾಡಿ ಕುಟುಂಬಸ್ಥರ ಮನಗೆಲ್ಲಬಹುದು.

ಸಾಂಬಾರ್ ಸಲಹೆಗಳು
ಸಾಂಬಾರ್ ಮಾಡುವಾಗ ಹೆಚ್ಚು ನೀರು ಅಥವಾ ಉಪ್ಪು ಆದ್ರೆ ಅದಕ್ಕೆ ಆಲೂಗಡ್ಡೆ ಬೇಯಿಸಿಕೊಂಡು ಸೇರಿಸಿಕೊಳ್ಳಬೇಕು. ಹೀಗೆ ಮಾಡೋದರಿಂದ ಸಾಂಬಾರ್ ಗಾಢವಾಗಿ ಹೆಚ್ಚಾಗಿರುವ ಉಪ್ಪಿನಂಶ ಕಡಿಮೆಯಾಗೋದರ ಜೊತೆ ಅಡುಗೆ ರುಚಿಯೂ ಸಹ ಹೆಚ್ಚಾಗುತ್ತದೆ. ಒಗ್ಗರಣೆಯಲ್ಲಿ ಇಂಗು ಸೇರಿಸಿದ್ರೆ ಸಾಂಬಾರ್ ಪರಿಮಳ ಇಡೀ ಮನೆ ತುಂಬೆಲ್ಲಾ ಹರಡುತ್ತದೆ. ಸಾಂಬಾರ್ ಹೆಚ್ಚು ಹುಳಿಯಾದ್ರೆ ಸಣ್ಣ ಬೆಣ್ಣೆ ತುಂಡನ್ನು ಸೇರಿಸಿಕೊಳ್ಳಿ.
ರೈಸ್ ಮಾಡುವ ಸಲಹೆ
ಊಟಕ್ಕೆ ರೈಸ್ ಬೇಕೇ ಬೇಕು. ಅನ್ನಕ್ಕೆ ಹೆಚ್ಚು ನೀರು ಆದ್ರೆ ಕೂಡಲೇ ಬಸಿದುಕೊಳ್ಳಿ. ಅನ್ನಕ್ಕೆ ಒಂದೆರಡು ಹನಿಯಷ್ಟು ನಿಂಬೆಹಣ್ಣಿನ ರಸ ಮತ್ತು ಒಂದು ಟೀ ಸ್ಪೂನ್ ಒಳ್ಳೆಣ್ಣೆ ಅಥವಾ ತುಪ್ಪ ಸೇರಿಸಿಕೊಳ್ಳಿ. ಇದರಿಂದ ಅನ್ನ ಉದುರಾಗುತ್ತದೆ. ಒಂದು ಕಪ್ ಅಕ್ಕಿಗೆ, ಎರಡು ಕಪ್ ನೀರು ಇಟ್ಟುಕೊಳ್ಳಬೇಕು. ಈ ಅಳತೆಯಲ್ಲಿ ಅನ್ನ ಮಾಡಿದ್ರೆ ಚೆನ್ನಾಗಿ ಬೇಯುತ್ತದೆ.
ಹಿಟ್ಟು ಕಲಿಸುವಿಕೆ
ಚಪಾತಿ, ಪೂರಿ ಮಾಡಲು ಹಿಟ್ಟು ಕಲಿಸಿಕೊಳ್ಳುವಾಗ ಹಂತ ಹಂತವಾಗಿ ನೀರು ಸೇರಿಸಿಕೊಳ್ಳಬೇಕು. ಹಾಗೆಯೇ ಚಿಟಿಕೆಯಷ್ಟು ಉಪ್ಪು, ಒಂದೆರಡು ಟೀ ಸ್ಪೂನ್ ಎಣ್ಣೆ ಅಥವಾ ತುಪ್ಪನ್ನು ಸೇರಿಸಿಕೊಂಡು ಹಿಟ್ಟು ಕಲಿಸಿಕೊಳ್ಳೋದರಿಂದ ಚಪಾತಿ ಮೃದುವಾಗುತ್ತದೆ. ನಂತರ ಹಿಟ್ಟು ಕಲಿಸಿದ ನಂತ್ರ ಅದನ್ನು ಕನಿಷ್ಠ 20 ರಿಂದ 30 ನಿಮಿಷವರೆಗೆ ನೆನೆಸಿಕೊಳ್ಳಬೇಕು.
ಒಗ್ಗರಣೆ
ಸಾಂಬರ್ ಮತ್ತು ಪಲ್ಯಕ್ಕೆ ಹೋಟೆಲ್ ಶೈಲಿಯ ರುಚಿ ನೀಡಲು ಹೆಚ್ಚುವರಿಯಾಗಿ ಒಗ್ಗರಣೆ ಹಾಕಿಕೊಳ್ಳಬೇಕು. ಜೀರಿಗೆ, ಸಾಸವೆ ಮತ್ತು ಕರೀಬೇವಿನ ಒಗ್ಗರಣೆ ಮಾಡಿಕೊಂಡು ಸಾಂಬರ್ ಮತ್ತು ಪಲ್ಯಕ್ಕೆ ಹಾಕಿಕೊಳ್ಳಿ. ಇನ್ನು ಸಲಾಡ್ ಮಾಡಿಕೊಂಡ್ರೆ ಅದಕ್ಕೆ ನಿಂಬೆಹಣ್ಣಿನ ರಸ ಸೇರಿಸಿದ್ರೆ ರುಚಿ ಹೆಚ್ಚಾಗುತ್ತದೆ. ಹೆಚ್ಚುವರಿ ಒಗ್ಗರಣೆ ಅಡುಗೆಯಲ್ಲಿ ಖಾರದ ಅಂಶವನ್ನು ಸಹ ಕಡಿಮೆ ಮಾಡುತ್ತದೆ.
ಇತರೆ ಸಲಹೆಗಳು
ಕಾವಲಿ ಮೇಲೆ ಹಾಕಿದ ರೊಟ್ಟಿ/ಚಪಾತಿ/ದೋಸೆ ಕಪ್ಪಾಗುತ್ತಿದೆಯಾ? ಹಾಗಿದ್ರೆ ಕಾವಲಿಯನ್ನು ಬಿಸಿ ಮಾಡಿಕೊಂಡು ಅದರ ಮೇಲೆ ಉಪ್ಪು ಹಾಕಿ ಚೆನ್ನಾಗಿ ಒರೆಸಿಕೊಳ್ಳಿ. ಇದರಿಂದ ಕಾವಲಿಗೆ ಚಪಾತಿ/ದೋಸೆ ಅಂಟಿಕೊಳ್ಳಲ್ಲ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತಿದ್ದಂತೆ ಚಾಕುವನ್ನು ನೀರಿನಿಂದ ಹಸಿ ಮಾಡಿಕೊಳ್ಳಿ ಅಥವಾ ಕತ್ತರಿಸುವ ಮುನ್ನ ಸಿಪ್ಪೆ ತೆಗೆದು ಈರುಳ್ಳಿಯನ್ನು ನೀರಿನಲ್ಲಿ ಅದ್ದಿಕೊಳ್ಳಿ.
ಇದನ್ನೂ ಓದಿ: ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಮಾಡಲು ಪಾಲಿಸಬೇಕಾದ ಸರಳ ಟಿಪ್ಸ್; ಆರೋಗ್ಯಕರ ಸಲಹೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

