ಪಾಲಕ್ ಸೊಪ್ಪು 10 ದಿನದವರೆಗೆ ಹಾಳಾಗಲ್ಲ, ಎಲೆ ಹಳದಿಯಾಗಲ್ಲ.. ತಂದ ತಕ್ಷಣ ಈ ಟ್ರಿಕ್ ಬಳಸಿ
Keep palak fresh for 10 days: ಪಾಲಕ್ ಸೊಪ್ಪು ಫ್ರಿಡ್ಜ್‌ನಲ್ಲಿಟ್ಟ ಎರಡೇ ದಿನಕ್ಕೆ ಕೊಳೆತು ಹೋಗುತ್ತಿದೆಯೇ? ಅಡುಗೆ ಮಾಡುವ ಮೊದಲೇ ಹಳದಿಯಾಗುತ್ತಿದೆಯೇ? 10 ದಿನಗಳವರೆಗೆ ಮಾರುಕಟ್ಟೆಯಿಂದ ತಂದಂತೆಯೇ ತಾಜಾವಾಗಿ ಮತ್ತು ಹಸಿರಾಗಿಡಲು ಇಲ್ಲಿದೆ ಅದ್ಭುತ ಟಿಪ್ಸ್.

ಸ್ಮಾರ್ಟ್ ಕಿಚನ್ ಟ್ರಿಕ್ಸ್
ಸ್ಮಾರ್ಟ್ ಕಿಚನ್ ಟ್ರಿಕ್ಸ್
ಪಾಲಕ್ ಸೊಪ್ಪು ಕಬ್ಬಿಣದಂಶ, ಫೈಬರ್ ಮತ್ತು ವಿಟಮಿನ್ ಎ, ಸಿ ಸಮೃದ್ಧವಾಗಿರುವ ಆರೋಗ್ಯಕರ ಸೊಪ್ಪು. ಆದರೆ ಇದನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸದಿದ್ದರೆ (Store) ಬೇಗನೆ ಬಾಡಿಹೋಗುತ್ತದೆ ಅಥವಾ ಹಳದಿಯಾಗಿ ಕೊಳೆತು ಹೋಗುತ್ತದೆ. ಪಾಲಕ್ ಸೊಪ್ಪನ್ನು 7-10 ದಿನಗಳವರೆಗೆ ತಾಜಾವಾಗಿಡಲು ಇಲ್ಲಿವೆ ಕೆಲವು ಸ್ಮಾರ್ಟ್ ಕಿಚನ್ ಟ್ರಿಕ್ಸ್.
1. ಖರೀದಿಸುವಾಗ ಎಚ್ಚರ ಇರಲಿ
1. ಖರೀದಿಸುವಾಗ ಎಚ್ಚರ ಇರಲಿ
ಪಾಲಕ್ ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಖರೀದಿಸುವಾಗಲೇ ಅದು ತಾಜಾ ಆಗಿರಬೇಕು. ಗಾಢ ಹಸಿರು ಬಣ್ಣದ, ಕಲೆಗಳಿಲ್ಲದ ಎಲೆಗಳನ್ನು ಆರಿಸಿಕೊಳ್ಳಿ. ಎಲೆಗಳು ಮೊದಲೇ ಹಳದಿಯಾಗಿದ್ದರೆ ಅಥವಾ ಅತಿಯಾಗಿ ಒದ್ದೆಯಾಗಿದ್ದರೆ ಅವುಗಳನ್ನು ತರಬೇಡಿ.
2. ತೊಳೆಯುವ ತಪ್ಪು ಮಾಡಬೇಡಿ
2. ತೊಳೆಯುವ ತಪ್ಪು ಮಾಡಬೇಡಿ
ಬಹಳಷ್ಟು ಜನರು ಸೊಪ್ಪನ್ನು ತಂದ ತಕ್ಷಣ ತೊಳೆದು ಫ್ರಿಡ್ಜ್‌ನಲ್ಲಿಡುತ್ತಾರೆ. ಇದು ದೊಡ್ಡ ತಪ್ಪು. ಎಲೆಗಳ ಮೇಲೆ ತೇವಾಂಶವಿದ್ದರೆ ಅದು ಶೀಘ್ರವಾಗಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗಿ ಸೊಪ್ಪು ಕೊಳೆಯುತ್ತದೆ. ಆದ್ದರಿಂದ ಸೊಪ್ಪನ್ನು ತೊಳೆಯದೆಯೇ ಸ್ಟೋರ್ ಮಾಡಿ ಮತ್ತು ಅಡುಗೆ ಮಾಡುವ ಮುನ್ನವಷ್ಟೇ ಚೆನ್ನಾಗಿ ತೊಳೆಯಿರಿ.
3. ಪೇಪರ್ ಟವಲ್ ಅಥವಾ ಕಾಟನ್ ಬಟ್ಟೆಯ ಬಳಕೆ
3. ಪೇಪರ್ ಟವಲ್ ಅಥವಾ ಕಾಟನ್ ಬಟ್ಟೆಯ ಬಳಕೆ
ಪಾಲಕ್ ಸೊಪ್ಪನ್ನು ದೀರ್ಘಕಾಲ ಫ್ರೆಶ್ ಆಗಿಡಲು ಇದನ್ನು ಪೇಪರ್ ಟವಲ್ ಅಥವಾ ಒಣ ಕಾಟನ್ ಬಟ್ಟೆಯಲ್ಲಿ ಹಗುರವಾಗಿ ಸುತ್ತಿಡಿ. ಇದು ಸೊಪ್ಪಿನಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ನಂತರ ಇದನ್ನು ಏರ್-ಟೈಟ್ ಡಬ್ಬಿಯಲ್ಲಿ ಅಥವಾ ಜಿಪ್-ಲಾಕ್ ಬ್ಯಾಗ್‌ನಲ್ಲಿ ಇರಿಸಿ ಫ್ರಿಡ್ಜ್‌ನ ವೆಜಿಟೇಬಲ್ ಡ್ರಾಯರ್‌ನಲ್ಲಿ ಇಡಿ.
4. ಹಾಳಾದ ಎಲೆಗಳನ್ನು ಮೊದಲೇ ಬೇರ್ಪಡಿಸಿ
4. ಹಾಳಾದ ಎಲೆಗಳನ್ನು ಮೊದಲೇ ಬೇರ್ಪಡಿಸಿ
ಸಂಗ್ರಹಿಸುವ ಮೊದಲು ಪಾಲಕ್ ಕಟ್ಟಿನಲ್ಲಿರುವ ಕೊಳೆತ ಅಥವಾ ಹಳದಿಯಾದ ಎಲೆಗಳನ್ನು ಆರಿಸಿ ಬಿಸಾಡಿ. ಒಂದು ಹಾಳಾದ ಎಲೆಯು ಇಡೀ ಕಟ್ಟನ್ನು ಬೇಗನೆ ಹಾಳುಮಾಡಬಹುದು.
5. ಹಣ್ಣುಗಳಿಂದ ದೂರವಿಡಿ
5. ಹಣ್ಣುಗಳಿಂದ ದೂರವಿಡಿ
ಪಾಲಕ್ ಸೊಪ್ಪನ್ನು ಸೇಬು, ಬಾಳೆಹಣ್ಣು ಅಥವಾ ಪಿಯರ್ಸ್ ಹಣ್ಣುಗಳ ಹತ್ತಿರ ಇಡಬೇಡಿ. ಈ ಹಣ್ಣುಗಳಿಂದ ಬಿಡುಗಡೆಯಾಗುವ 'ಎಥಿಲೀನ್' ಅನಿಲವು ಹಸಿರು ಎಲೆಗಳು ಬೇಗನೆ ಬಾಡಿಹೋಗುವಂತೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

