ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಗ್ಯಾಸ್ ವೇಸ್ಟ್ ಆಗಲ್ಲ, ಆಹಾರವೂ ಬೇಗನೆ ಬೇಯುತ್ತೆ!
How to Save Gas: ಕೆಲವು ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಸ್ವಲ್ಪವೂ ವ್ಯರ್ಥವಾಗದಂತೆ ಗ್ಯಾಸ್ ಉಳಿಸಬಹುದು. ಜೊತೆಗೆ ನಿಮ್ಮ ಸಮಯ ಮತ್ತು ಹಣವನ್ನು ಉಳಿಸಬಹುದು. ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಸಿಂಪಲ್ ಅಡುಗೆ ಟಿಪ್ಸ್
ಅಗತ್ಯ ವಸ್ತುಗಳು ಮತ್ತು ಇಂಧನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ. ವಿಶೇಷವಾಗಿ ಅಡುಗೆ ಅನಿಲದ ಬೆಲೆ ಗಗನಕ್ಕೇರುತ್ತಿದೆ. ಆದ್ದರಿಂದ ಮನೆಯಲ್ಲಿ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನೀವು ಹಣ ಮತ್ತು ಸಮಯವನ್ನು ಉಳಿಸಬಹುದು. ಗ್ಯಾಸ್ ವೇಸ್ಟ್ ಆಗುವುದನ್ನು ತಡೆಯಲು ಮತ್ತು ನಿಮ್ಮ ಮಾಸಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಈ ಸರಳ ಅಡುಗೆ ಟಿಪ್ಸ್ ಅನುಸರಿಸಿ. ಅಡುಗೆಯನ್ನು ಇನ್ನು ಚೆನ್ನಾಗಿ ಮಾಡಿ.
ಸ್ವಲ್ಪವೂ ವ್ಯರ್ಥವಾಗಲ್ಲ
ಈಗಿನ ಪ್ರತಿಯೊಂದು ಪದಾರ್ಥ, ವಸ್ತುಗಳ ಬೆಲೆ ನೋಡಿದರೆ ಏನು ಖರೀದಿಸಬೇಕು, ಏನು ತಿನ್ನಬೇಕು ಅನಿಸುತ್ತದೆ. ಇದು ಸಾಮಾನ್ಯ ಜನರ ಪರಿಸ್ಥಿತಿ. ಜನರ ದಿನನಿತ್ಯದ ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಎಲ್ಲದರ ದರವು ಸಾಮಾನ್ಯ ಜನರಿಗೆ ನುಂಗಲಾರದ ತುತ್ತಾಗಿದೆ. ನಿನ್ನೆಯವರೆಗೂ ಸ್ಥಿರವಾಗಿದ್ದ ಬೆಲೆಗಳು ಇಂದು ತೀವ್ರವಾಗಿ ಹೆಚ್ಚುತ್ತಿವೆ. ಅದಕ್ಕಾಗಿಯೇ ಉಳಿತಾಯ ಮಾಡುವುದರಿಂದ ಹಿಡಿದು ಎಲ್ಲದರಲ್ಲೂ ಜಾಗರೂಕರಾಗಿರಬೇಕಾಗಿದೆ. ಅಂದಹಾಗೆ ಪ್ರತಿ ಅಡುಗೆಮನೆಯಲ್ಲೂ ಸಾಧ್ಯವಾದಷ್ಟು ಗ್ಯಾಸ್ ಸೀಮಿತವಾಗಿ ಬಳಸುವುದು ಉತ್ತಮ. ಕೆಲವು ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಸ್ವಲ್ಪವೂ ವ್ಯರ್ಥವಾಗದಂತೆ ಗ್ಯಾಸ್ ಉಳಿಸಬಹುದು. ಜೊತೆಗೆ ನಿಮ್ಮ ಸಮಯ ಮತ್ತು ಹಣವನ್ನು ಉಳಿಸಬಹುದು. ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಬರ್ನರ್‌ಗೆ ತಕ್ಕ ಹಾಗೆ ಪಾತ್ರೆ
ಅಡುಗೆ ಮಾಡುವಾಗ ಮೊದಲು ಅಡುಗೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ. ಆ ನಂತರವೇ ಗ್ಯಾಸ್ ಸ್ಟೌವ್ ಹಚ್ಚಿ. ಅಡುಗೆ ಪಾತ್ರೆಯ ಮೇಲೆ ಮುಚ್ಚಳವನ್ನು ಸರಿಯಾಗಿ ಇಡಬೇಕು. ಇದರಿಂದ ಉರಿ ಸರಿಯಾಗಿ ಎಲ್ಲ ಕಡೆ ತಗಲುತ್ತದೆ. ಆಹಾರವೂ ಬೇಗನೆ ಬೇಯುತ್ತದೆ. ಬರ್ನರ್‌ಗೆ ಸೂಕ್ತವಾದ ಪಾತ್ರೆಯನ್ನು ಆಯ್ಕೆ ಮಾಡಬೇಕು. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆಯನ್ನು ಇಡುವುದು ಸೂಕ್ತವಲ್ಲ. ಇದು ಗ್ಯಾಸ್ ವೇಸ್ಟ್ ಮಾಡುತ್ತದೆ.
ನೆನೆಸಿ ಬಳಸುವುದು ಉತ್ತಮ
ಅಡುಗೆ ಮಾಡುವ ಮೊದಲು ಕೆಲವು ಕಾಳುಗಳು, ಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ನೆನೆಸುವುದು ಉತ್ತಮ. ಇದು ಅವುಗಳನ್ನು ವೇಗವಾಗಿ ಬೇಯಿಸಲು ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಇವುಗಳನ್ನು ಬೇಯಿಸಲು ಸಾಕಷ್ಟು ನೀರನ್ನು ಬಳಸಬೇಕು. ನೀವು ಅವುಗಳನ್ನು ಹೆಚ್ಚು ನೀರಿನಿಂದ ಬೇಯಿಸಿದರೆ ಪೋಷಕಾಂಶಗಳು ವ್ಯರ್ಥವಾಗುವುದಲ್ಲದೆ, ಗ್ಯಾಸ್ ಮತ್ತು ಸಮಯವೂ ವ್ಯರ್ಥವಾಗುತ್ತದೆ. ಪರಿಣಾಮವಾಗಿ ಆಹಾರದ ರುಚಿಯೂ ಹಾಳಾಗುತ್ತದೆ. ಯಾವಾಗಲೂ ಕಡಿಮೆ ಉರಿಯಲ್ಲಿ ಆಹಾರವನ್ನು ಬೇಯಿಸಿ. ಇದರಿಂದ ಅನಿಲ ವ್ಯರ್ಥವಾಗುವುದಿಲ್ಲ. ಆಹಾರವೂ ಚೆನ್ನಾಗಿ ಬೇಯುತ್ತದೆ.
ಬರ್ನರ್ ಕ್ಲೀನ್ ಮಾಡಿ
ಇಲ್ಲವಾದಲ್ಲಿ ಯಾವುದೇ ಅಡುಗೆಗೆ ಗುಣಮಟ್ಟದ ಪ್ರೆಶರ್ ಕುಕ್ಕರ್ ಬಳಸುವುದು ತುಂಬಾ ಒಳ್ಳೆಯದು. ಅಲ್ಲದೆ, ಬರ್ನರ್‌ಗಳ ಮೇಲೆ ಕೊಳಕು ಸಂಗ್ರಹವಾದರೆ ಅದು ಗ್ಯಾಸ್ ಹರಿಯುವುದನ್ನು ತಡೆಯುತ್ತದೆ. ಅಡುಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬರ್ನರ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು.
ಇದನ್ನ ತಕ್ಷಣ ಒಲೆಯ ಮೇಲೆ ಇಡಬೇಡಿ
ಫ್ರಿಜ್‌ನಿಂದ ತೆಗೆದ ಪದಾರ್ಥಗಳನ್ನು ಬಿಸಿ ಮಾಡಲು ತಕ್ಷಣ ಒಲೆಯ ಮೇಲೆ ಇಡಬೇಡಿ. ಮೊದಲು ಅವುಗಳನ್ನು ಸ್ವಲ್ಪ ಸಮಯದವರೆಗೆ ಕೋಣೆಯ ಉಷ್ಣಾಂಶದಲ್ಲಿಡಿ. ನಂತರ ಅವುಗಳನ್ನು ಬಿಸಿ ಮಾಡಲು ಒಲೆಯ ಮೇಲೆ ಇರಿಸಿ. ಆಗ ಅವು ಬೇಗನೆ ಬಿಸಿಯಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

