MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಬಳಸಲು ಸುಲಭವಲ್ಲ, ಹಣವೂ ವ್ಯರ್ಥ.. ಅಡುಗೆ ಮನೆಯ ಈ ವಸ್ತುಗಳನ್ನ ಖರೀದಿಸ್ಬೇಡಿ ಅಂತಾರೆ ತಜ್ಞರು

ಬಳಸಲು ಸುಲಭವಲ್ಲ, ಹಣವೂ ವ್ಯರ್ಥ.. ಅಡುಗೆ ಮನೆಯ ಈ ವಸ್ತುಗಳನ್ನ ಖರೀದಿಸ್ಬೇಡಿ ಅಂತಾರೆ ತಜ್ಞರು

Kitchen appliances to avoid: ಅಡುಗೆ ಕೆಲಸ ಸುಲಭವಾಗಲಿ ಎಂದು ಸಾವಿರಾರು ರೂಪಾಯಿ ಕೊಟ್ಟು ಮಾರುಕಟ್ಟೆಯಲ್ಲಿ ಸಿಗುವ ಆಕರ್ಷಕ ಮಷಿನ್‌ಗಳನ್ನು ಮನೆಗೆ ತರುತ್ತೇವೆ. ಆದರೆ ವಾಸ್ತವದಲ್ಲಿ ಇವುಗಳಲ್ಲಿ ಹೆಚ್ಚಿನವು ಅಡುಗೆ ಮನೆಯ ಮೂಲೆಯಲ್ಲಿ ಧೂಳು ತಿನ್ನುತ್ತವೆಯೇ ಹೊರತು ಕೆಲಸವನ್ನೇನೂ ಕಡಿಮೆ ಮಾಡುವುದಿಲ್ಲ.

2 Min read
Author : Ashwini HR
Published : Apr 01 2026, 03:02 PM IST
Share this Photo Gallery
  • FB
  • TW
  • Linkdin
  • Whatsapp
18
ಆ 7 ಕಿಚನ್ ಉಪಕರಣಗಳು ಯಾವುವು?
Image Credit : Getty

ಆ 7 ಕಿಚನ್ ಉಪಕರಣಗಳು ಯಾವುವು?

ಅಡುಗೆ ಕೆಲಸ ಸುಲಭವಾಗುತ್ತದೆ ಎಂದು ನಾವು ಅನೇಕ ಹೊಸ ಮಷಿನ್‌ಗಳನ್ನು ಸಾವಿರಾರು ರೂಪಾಯಿ ಕೊಟ್ಟು ಮನೆಗೆ ತರುತ್ತೇವೆ. ಆದರೆ ಅವುಗಳಲ್ಲಿ ಹೆಚ್ಚಿನವು ಅಡುಗೆ ಮನೆಯ ಮೂಲೆಯಲ್ಲಿ ಧೂಳು ತಿನ್ನುತ್ತವೆಯೇ ಹೊರತು ಕೆಲಸವನ್ನೇನೂ ಕಡಿಮೆ ಮಾಡುವುದಿಲ್ಲ. ವೃತ್ತಿಪರ ಶೆಫ್‌ಗಳ ಪ್ರಕಾರ, ಹಣ ವ್ಯರ್ಥ ಮಾಡುವ ಇಂತಹ ಅತಿಯಾದ ಗ್ಯಾಜೆಟ್‌ಗಳಿಗಿಂತ ನಮ್ಮ ಹಳೆಯ ಕಾಲದ ಪಾತ್ರೆಗಳೇ ಸಾಕು. ಹಾಗಿದ್ದರೆ, ಶೆಫ್‌ಗಳು ಬೇಡವೆಂದು ಹೇಳುವ ಆ 7 ಕಿಚನ್ ಉಪಕರಣಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ..

28
ಬ್ರೆಡ್ ಮೇಕರ್ (Bread Machines)
Image Credit : meta ai

ಬ್ರೆಡ್ ಮೇಕರ್ (Bread Machines)

ಬ್ರೆಡ್ ಮೇಕರ್‌ನಲ್ಲಿ ಮಾಡುವ ಬ್ರೆಡ್ ಅಷ್ಟೊಂದು ರುಚಿಯಾಗಿರುವುದಿಲ್ಲ. ಕೇವಲ ಹಿಟ್ಟು, ನೀರು ಮತ್ತು ಉಪ್ಪು ಬಳಸಿ ಮನೆಯ ಓವನ್ ಅಥವಾ ಪ್ಯಾನ್‌ನಲ್ಲಿ ತಯಾರಿಸುವ ಬ್ರೆಡ್ ಹೆಚ್ಚು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.

Related Articles

Related image1
ಸಮಯ ಉಳಿಸಲು ಪ್ರತಿಯೊಬ್ಬ ಗೃಹಿಣಿಯೂ ತಿಳಿಯಲೇಬೇಕಾದ Smart Kitchen Tips
Related image2
Kitchen Tips: ಉಪ್ಪಿದ್ರೆ ಸಾಕು, ಒಂದು ಹನಿ ಎಣ್ಣೆ ಬಳಸದೆಯೂ ಹಪ್ಪಳ, ಸಂಡಿಗೆ, ಶೇಂಗಾ ಗರಿಗರಿಯಾಗಿ ಬರುತ್ತೆ
38
ಮಲ್ಟಿ-ಕುಕ್ಕರ್‌ಗಳು (ಉದಾ: ಇನ್‌ಸ್ಟಂಟ್ ಪಾಟ್)
Image Credit : Gemini AI

ಮಲ್ಟಿ-ಕುಕ್ಕರ್‌ಗಳು (ಉದಾ: ಇನ್‌ಸ್ಟಂಟ್ ಪಾಟ್)

ಇವುಗಳಲ್ಲಿ ಹತ್ತಾರು ಫಂಕ್ಷನ್‌ಗಳಿರುತ್ತವೆ. ಆದರೆ ಜನರು ಬಳಸುವಾಗ ಕೇವಲ ಒಂದೆರಡು ಆಯ್ಕೆಗಳನ್ನು ಮಾತ್ರ ಬಳಸುತ್ತಾರೆ. ಇದು ನೋಡಲು ದೊಡ್ಡದಾಗಿರುವುದರಿಂದ ಜಾಗವನ್ನೂ ಹೆಚ್ಚು ಆಕ್ರಮಿಸುತ್ತದೆ. ಸಾಮಾನ್ಯ ಪಾತ್ರೆ ಅಥವಾ ಪ್ಯಾನ್ ಬಳಸಿದರೆ ಅಡುಗೆಯ ಮೇಲೆ ಹೆಚ್ಚಿನ ನಿಯಂತ್ರಣ ಇರುತ್ತದೆ.

48
ಏರ್ ಫ್ರೈಯರ್ ಮತ್ತು ಟೋಸ್ಟರ್ ಓವನ್‌ಗಳು
Image Credit : Getty

ಏರ್ ಫ್ರೈಯರ್ ಮತ್ತು ಟೋಸ್ಟರ್ ಓವನ್‌ಗಳು

ನಿಮ್ಮ ಮನೆಯಲ್ಲಿ ಈಗಾಗಲೇ ದೊಡ್ಡ ಓವನ್ (Convection Oven) ಇದ್ದರೆ, ಇವುಗಳ ಅಗತ್ಯವಿಲ್ಲ. ಓವನ್‌ನಲ್ಲಿ ಸಿಗುವ ಫಲಿತಾಂಶವೇ ಇವುಗಳಲ್ಲೂ ಸಿಗುತ್ತದೆ. ಸಣ್ಣ ಉಪಕರಣಗಳಿಗಿಂತ ದೊಡ್ಡ ಓವನ್‌ನಲ್ಲಿ ಹೆಚ್ಚು ಆಹಾರವನ್ನು ಒಟ್ಟಿಗೆ ಬೇಯಿಸಬಹುದು.

58
ರೈಸ್ ಕುಕ್ಕರ್ (Rice Cookers)
Image Credit : Gemini AI

ರೈಸ್ ಕುಕ್ಕರ್ (Rice Cookers)

ಅಕ್ಕಿ ಬೇಯಿಸಲು ಮಾತ್ರ ಸೀಮಿತವಾದ ಈ ಉಪಕರಣದ ಅವಶ್ಯಕತೆ ಇಲ್ಲ. ನಾರ್ಮಲ್ ಪಾತ್ರೆ ಅಥವಾ ಕುಕ್ಕರ್‌ನಲ್ಲಿ ಅನ್ನ ಮಾಡುವುದು ಅಷ್ಟೇ ಸುಲಭ ಮತ್ತು ವಿಶ್ವಾಸಾರ್ಹ. ಇದು ಅಡುಗೆ ಮನೆಯ ಕೌಂಟರ್ ಮೇಲೆ ಅನಗತ್ಯ ಜಾಗವನ್ನು ತಿನ್ನುತ್ತದೆ.

68
ಪಾಪ್‌ಕಾರ್ನ್ ಮೇಕರ್ (Popcorn Poppers)
Image Credit : Freepik

ಪಾಪ್‌ಕಾರ್ನ್ ಮೇಕರ್ (Popcorn Poppers)

ಇದು ಕೇವಲ ಒಂದು ಕೆಲಸಕ್ಕೆ ಮಾತ್ರ ಸೀಮಿತವಾದ ಉಪಕರಣ. ದೊಡ್ಡದಾದ ಮಂದ ತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಪಾಪ್‌ಕಾರ್ನ್ ಮಾಡುವುದು ತುಂಬಾ ಸುಲಭ. ಹೀಗಿರುವಾಗ ಪ್ರತ್ಯೇಕವಾದ ಮೆಷಿನ್ ಖರೀದಿಸುವುದು ಹಣ ವ್ಯರ್ಥ ಮಾಡಿದಂತೆ.

78
ಫುಡ್ ಪ್ರೊಸೆಸರ್‌ಗಳು (Food Processors)
Image Credit : Google

ಫುಡ್ ಪ್ರೊಸೆಸರ್‌ಗಳು (Food Processors)

ಹೆಚ್ಚಿನ ಪ್ರಮಾಣದ ಅಡುಗೆ ಮಾಡುವವರಿಗೆ ಇದು ಸರಿ. ಆದರೆ ಸಣ್ಣ ಕುಟುಂಬಗಳಿಗೆ ಇದನ್ನು ಹೊರತೆಗೆಯುವುದು ಮತ್ತು ಬಳಸಿದ ನಂತರ ತೊಳೆಯುವುದು ದೊಡ್ಡ ಕೆಲಸ. ಇದಕ್ಕಿಂತ ಒಂದು ಚೂಪಾದ ಚಾಕು ಅಥವಾ ಸಣ್ಣ ಮಿಕ್ಸಿ ಜಾರ್ ಬಳಸುವುದು ಉತ್ತಮ.

88
ಸೂ-ವಿಡ್ ಮಷಿನ್‌ಗಳು (Sous Vide Machines)
Image Credit : Google

ಸೂ-ವಿಡ್ ಮಷಿನ್‌ಗಳು (Sous Vide Machines)

ಇದು ಆಹಾರವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಇಟ್ಟು ಬಿಸಿ ನೀರಿನಲ್ಲಿ ಬೇಯಿಸುವ ತಂತ್ರಜ್ಞಾನ. ಆದರೆ, ಶೆಫ್‌ಗಳ ಪ್ರಕಾರ ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದರ ಬದಲಿಗೆ ಒಂದು ಪ್ರೆಶರ್ ಕುಕ್ಕರ್ ಅಥವಾ ಸ್ಲೋ ಕುಕ್ಕರ್ ಬಳಸಿದರೆ ಅಡುಗೆ ಬೇಗ ಮುಗಿಯುತ್ತದೆ.

ಶೆಫ್‌ಗಳ ಕಿವಿಮಾತು
ಯಾವುದೇ ಉಪಕರಣವನ್ನು ಖರೀದಿಸುವ ಮೊದಲು ಅದು ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತದೆಯೇ ಮತ್ತು ಅದನ್ನು ಸ್ವಚ್ಛಗೊಳಿಸುವುದು ಸುಲಭವೇ ಎಂದು ಯೋಚಿಸಿ. ಅಡುಗೆ ಮಾಡುವುದು ಒಂದು ಕಲೆ, ಅದಕ್ಕೆ ಹತ್ತಾರು ಯಂತ್ರಗಳಿಗಿಂತ ಸರಿಯಾದ ತಂತ್ರ ಮತ್ತು ಚಾಕು-ಪಾತ್ರೆಗಳಿದ್ದರೆ ಸಾಕು!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ

Latest Videos
Recommended Stories
Recommended image1
ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆ ತುಂಬಿಸೋ ರೆಸಿಪಿ; ಹಳ್ಳಿ ಶೈಲಿಯ ಅಡುಗೆ
Recommended image2
ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್
Recommended image3
ಈ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಲೇಬೇಡಿ- ಇದು ವಿಷಕ್ಕೆ ಸಮಾನ!
Related Stories
Recommended image1
ಸಮಯ ಉಳಿಸಲು ಪ್ರತಿಯೊಬ್ಬ ಗೃಹಿಣಿಯೂ ತಿಳಿಯಲೇಬೇಕಾದ Smart Kitchen Tips
Recommended image2
Kitchen Tips: ಉಪ್ಪಿದ್ರೆ ಸಾಕು, ಒಂದು ಹನಿ ಎಣ್ಣೆ ಬಳಸದೆಯೂ ಹಪ್ಪಳ, ಸಂಡಿಗೆ, ಶೇಂಗಾ ಗರಿಗರಿಯಾಗಿ ಬರುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved