- Home
- News
- Politics
- ರಾಜ್ಯ ರಾಜಕೀಯದಲ್ಲಿ ಕೊನೆ ಹಂತದ ಸಸ್ಪೆನ್ಸ್: ಡಿಕೆಶಿ ಮುಖದಲ್ಲಿ ನಿನ್ನೆಯಿದ್ದ ನಗು ಇಂದಿಲ್ಲ- ಸಿಎಂ ಖುರ್ಚಿ ಅವರಿಗಾ, ಇವರಿಗಾ
ರಾಜ್ಯ ರಾಜಕೀಯದಲ್ಲಿ ಕೊನೆ ಹಂತದ ಸಸ್ಪೆನ್ಸ್: ಡಿಕೆಶಿ ಮುಖದಲ್ಲಿ ನಿನ್ನೆಯಿದ್ದ ನಗು ಇಂದಿಲ್ಲ- ಸಿಎಂ ಖುರ್ಚಿ ಅವರಿಗಾ, ಇವರಿಗಾ
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿಸಲಾಗಿದ್ದು, ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ನಡುವೆ ಪರಮೇಶ್ವರ್ ಕೂಡ ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ನಿಗೂಢ ರಾಜಕೀಯ
ಕರ್ನಾಟಕದ ರಾಜಕೀಯದಲ್ಲಿ ಸದ್ಯ ಎಲ್ಲವೂ ನಿಗೂಢವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ಸಿದ್ದರಾಮಯ್ಯನವರು ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ, ಪತ್ನಿಯ ಅನಾರೋಗ್ಯದ ನಿಮಿತ್ತ ರಾಜ್ಯಪಾಲರು ಮುಂಬೈಗೆ ಹೋಗಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆಪಿಸಿಸಿಗೆ ರಾಜೀನಾಮೆ?
ಅದೇ ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆನೀಡುತ್ತಾರೆ ಎನ್ನಲಾಗುತ್ತಿದೆ. ಮುಂದಿನ ಮುಖ್ಯಮಂತ್ರಿ ಇವರೇ ಎನ್ನುವ ಕಾರಣದಿಂದ ಸಹಜವಾಗಿ ಆ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಿದೆ.
ನಗು ಮಾಯ
ಇದರ ನಡುವೆಯೇ, ನಿನ್ನೆ ದೆಹಲಿಯಿಂದ ಬಂದಿಳಿದಿದ್ದ ಡಿಕೆಶಿ ಅವರು ಸಹಜವಾಗಿ ಮುಖದಲ್ಲಿ ನಗುವನ್ನು ಹೊತ್ತು ತರಬೇಕಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಕಾಲ ಇದಾಗಿದೆ. ಮುಖ್ಯಮಂತ್ರಿಯ ಖುರ್ಚಿ ಏರುವ ಆ ಮುಖ ಹೇಗಿರಬೇಕೋ ಹಾಗೆ ಇಲ್ಲ. ಮುಖದಲ್ಲಿ ನಗುವಿಲ್ಲ, ಮಾತಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದೇ ಡಿಕೆಶಿ ಹೋಗಿದ್ದು ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದೆ.
ಪರಮೇಶ್ವರ ಹೆಸರು
ಇದರ ನಡುವೆಯೇ ಪರಮೇಶ್ವರ ಅವರು, ತಾವು ಸಿಎಂ ಆಗುವ ಹಂಬಲ ವ್ಯಕ್ತಪಡಿಸಿದ್ದು, ಇದಕ್ಕಾಗಿ ಭಾರಿ ಪೂಜೆ, ಹೋಮ ಹವನವನ್ನು ನಿನ್ನೆ ಮಾಡಿಸಿರುವುದಾಗಿ ವರದಿಯಾಗಿದೆ.
ಸಿಬ್ಬಂದಿ ಕಣ್ಣೀರು
ಈ ಮಧ್ಯೆಯೇ, ಸಿದ್ದರಾಮಯ್ಯನವರು ರಾಜೀನಾಮೆ ನೀಡಬಾರದು ಎಂದು ವಿಧಾನಸೌಧದ ಸಿಬ್ಬಂದಿ ಸೇರಿದಂತೆ ಹಲವರು ಕಣ್ಣೀರು ಹಾಕಿದ್ದಾರೆ. ಮತ್ತೊಂದೆಡೆ ಡಿಕೆಶಿ ಸಿಎಂ ಆಗುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹರ್ಷದಿಂದ ಕುಣಿದಾಡುತ್ತಿದ್ದಾರೆ. ಇದರ ನಡುವೆಯೇ ರಾಜ್ಯ ರಾಜಕೀಯದಲ್ಲಿ ಭಾರಿ ಸಸ್ಪೆನ್ಸ್ ಕ್ರಿಯೇಟ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

